For Quick Alerts
  ALLOW NOTIFICATIONS  
  For Daily Alerts

  ಸಾಯಿ ಪಲ್ಲವಿ ಅಭಿಮಾನಿಗಳಿಗೆ ಇಲ್ಲಿದೆ ಸಿಹಿ ಸುದ್ದಿ

  |

  ತಮ್ಮ ನಟನೆ, ವ್ಯಕ್ತಿತ್ವ, ಸರಳತೆ, ನೃತ್ಯ ಪ್ರತಿಭೆಯಿಂದ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಸಾಯಿ ಪಲ್ಲವಿ. ಸ್ಟಾರ್ ನಟರಿಗಿರುವಂತೆಯೇ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗವನ್ನು ಸಾಯಿ ಪಲ್ಲವಿ ಕಡಿಮೆ ಅವಧಿಯಲ್ಲಿಯೇ ಸಂಪಾದಿಸಿದ್ದಾರೆ.

  ಕೆಲ ತಿಂಗಳ ಹಿಂದೆ 'ಶ್ಯಾಮ್ ಸಿಂಘ ರಾಯ್' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಿರ್ದೇಶಕ ಸುಕುಮಾರ್, ಸಾಯಿ ಪಲ್ಲವಿಯನ್ನು ತೆಲುಗಿನ ಸ್ಟಾರ್ ನಟ ಪವನ್‌ ಕಲ್ಯಾಣ್‌ಗೆ ಹೋಲಿಸಿದ್ದರು. ಪವನ್ ಕಲ್ಯಾಣ್‌ಗೆ ಇರುವಂತೆ ದೊಡ್ಡ ಅಭಿಮಾನಿ ವರ್ಗ ಸಾಯಿ ಪಲ್ಲವಿಗೆ ಇದೆ ಎಂಬುದು ಅವರ ಮಾತಿನ ಅರ್ಥವಾಗಿತ್ತು.

  ದೊಡ್ಡ ಯಶಸ್ಸು, ಒಂದರಹಿಂದೊಂದು ಅವಕಾಶಗಳು ಬರುತ್ತಿದ್ದರೂ ಸಹ ಆತುರ ಪಡದೆ, ಪಾತ್ರಕ್ಕೆ ಪ್ರಾಮುಖ್ಯತೆ ಇರುವ ಪಾತ್ರಗಳನ್ನಷ್ಟೆ ಅಳೆದು-ತೂಗಿ ಆಯ್ದುಕೊಳ್ಳುತ್ತಿರುವ ಸಾಯಿ ಪಲ್ಲವಿಯ ಹೊಸ ಸಿನಿಮಾ ಒಂದರ ಬಿಡುಗಡೆ ದಿನಾಂಕ ಇದೀಗ ಘೋಷಣೆ ಆಗಿದೆ.

  ನಟಿ ಸಾಯಿ ಪಲ್ಲವಿ ಬಹಳ ಭಿನ್ನ ಪಾತ್ರದಲ್ಲಿ ನಟಿಸಿರುವ 'ವಿರಾಟ ಪರ್ವಂ' ಸಿನಿಮಾದ ಬಿಡುಗಡೆ ದಿನಾಂಕ ಕೊನೆಗೂ ಘೋಷಣೆ ಆಗಿದೆ. ಕೋವಿಡ್ ಆರಂಭದ ಸಮಯದಲ್ಲಿ ಸಿನಿಮಾದ ಪೋಸ್ಟರ್ ಹಾಗೂ ಹೆಸರು ಬಿಡುಗಡೆ ಮಾಡಲಾಗಿತ್ತು, ಆದರೆ ಕೋವಿಡ್‌ನಿಂದಾಗಿ ಎದುರಾದ ಅಡೆತಡಗಳಿಂದ ಚಿತ್ರೀಕರಣ ತಡವಾದ ಜೊತೆಗೆ, ಕೋವಿಡ್ ಬಳಿಕ ಉಂಟಾದ 'ಸಿನಿಮಾ ರಷ್' ಕಾರಣದಿಂದ ಸಿನಿಮಾದ ಬಿಡುಗಡೆ ತಡವಾಗುತ್ತಲೇ ಬಂದಿತ್ತು.

  ಬಿಡುಗಡೆ ದಿನಾಂಕ ಪ್ರಕಟ

  ಬಿಡುಗಡೆ ದಿನಾಂಕ ಪ್ರಕಟ

  ಇದೀಗ ಕೊನೆಗೂ 'ವಿರಾಟ ಪರ್ವಂ' ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಸಿನಿಮಾವು ಜೂನ್ 17 ರಂದು ವಿಶ್ವದಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಸಾಯಿ ಪಲ್ಲವಿ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿಯೆಂದರೆ ಈ ಸಿನಿಮಾವನ್ನು ಜುಲೈ 1 ರಂದು ಬಿಡುಗಡೆ ಮಾಡಲು ನಿರ್ಣಯಿಸಲಾಗಿತ್ತು. ಆದರೆ ಇನ್ನೂ ಕೆಲವು ದಿನ ಮುಂದಾಗಿಯೇ ಅಂದರೆ ಜೂನ್ 17ರಂದೇ ಸಿನಿಮಾ ತೆರೆ ಕಾಣಲಿದೆ.

  ನಿಜ ಘಟನೆ ಆಧರಿಸಿದ ಸಿನಿಮಾ

  ನಿಜ ಘಟನೆ ಆಧರಿಸಿದ ಸಿನಿಮಾ

  1990ರ ಸಮಯದಲ್ಲಿ ತೆಲಂಗಾಣ ಪ್ರಾಂಥ್ಯದಲ್ಲಿ ನಡೆದ ನಿಜ ಘಟನೆಯನ್ನು ಆಧರಿಸಿದ ಸಿನಿಮಾ 'ವಿರಾಟ ಪರ್ವಂ' ಆಗಿದ್ದು. ನಕ್ಸಲೈಟ್ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ಕಾಮ್ರೆಡ್ ರವನ್ನ ಅಲಿಯಾಸ್ ಡಾ ರವಿ ಶಂಕರ್ ಪಾತ್ರದಲ್ಲಿ ರಾನಾ ದಗ್ಗುಬಾಟಿ ನಟಿಸಿದ್ದಾರೆ. ನಕ್ಸಲೈಟ್‌ ಅನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಹಳ್ಳಿ ಯುವತಿ ವೆನ್ನೆಲ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ಗನ್ನು, ಬಾಂಬು ಹಿಂಸೆಗಳ ನಡುವೆ ಅರಳುವ ಸುಂದರ ಪ್ರೇಮಕತೆ ಸಿನಿಮಾದಲ್ಲಿ ಇರಲಿದೆ.

  ಪ್ರಿಯಾಮಣಿ ಸಹ ಇದ್ದಾರೆ

  ಪ್ರಿಯಾಮಣಿ ಸಹ ಇದ್ದಾರೆ

  'ವಿರಾಟ ಪರ್ವಂ' ಸಿನಿಮಾದಲ್ಲಿ ರಾಣಾ ದಗ್ಗುಬಾಟಿ, ಸಾಯಿ ಪಲ್ಲವಿ ಜೊತೆಗೆ, ಕನ್ನಡತಿ ಪ್ರಿಯಾಮಣಿ ಸಹ ಇದ್ದಾರೆ. ನಂದಿತಾ ದಾಸ್, ಝರಿಯಾ ವಹಾದ್, ನವೀನ್ ಚಂದ್ರ ಅವರುಗಳು ಸಿನಿಮಾದಲ್ಲಿದ್ದಾರೆ. ಸಿನಿಮಾವನ್ನು ವೇಣು ಉದ್ದುಗಲ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಡಿ ಸುರೇಶ್ ಬಾಬು ಮತ್ತು ಸುಧಾಕರ್ ಚೆರುಕುರಿ. ಸಿನಿಮಾಕ್ಕೆ ಸಂಗೀತ ನೀಡಿರುವುದು ಸುರೇಶ್ ಬೊಬ್ಬಿಲಿ. ಸಿನಿಮಾದ ಪೋಸ್ಟರ್‌ ಹಾಗೂ ಟೀಸರ್ ಹಾಗೂ ಹಾಡೊಂದು ಬಿಡುಗಡೆ ಆಗಿದ್ದು, ಬಹುವಾಗಿ ಗಮನ ಸೆಳೆದಿದೆ.

  ಹಲವು ಸಿನಿಮಾಗಳಲ್ಲಿ ಸಾಯಿ ಪಲ್ಲವಿ ಬ್ಯುಸಿ

  ಹಲವು ಸಿನಿಮಾಗಳಲ್ಲಿ ಸಾಯಿ ಪಲ್ಲವಿ ಬ್ಯುಸಿ

  ಸಾಯಿ ಪಲ್ಲವಿ ಸತತ ಹಿಟ್ ನೀಡಿರುವ ಯಶಸ್ವಿ ನಾಯಕಿ ಎಂದು ಹೆಸರು ಗಳಿಸಿದ್ದಾರೆ. ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಮಲ್ ಹಾಸನ್ ನಿರ್ಮಿಸಿ, ಕತೆ ಬರೆದಿರುವ ಹೊಸ ಸಿನಿಮಾದಲ್ಲಿ ಶಿವಕಾರ್ತಿಕೇಯ ಎದುರು ನಾಯಕಿಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. 'ಗಾರ್ಗಿ' ಹೆಸರಿನ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಕನ್ನಡದಲ್ಲಿಯೂ ಏಕಕಾಲಕ್ಕೆ ತೆರೆಗೆ ಬರಲಿದೆ. ಜೊತೆಗೆ ತಮಿಳಿನ ಸ್ಟಾರ್ ನಟರೊಬ್ಬರ ಸಿನಿಮಾದಲ್ಲಿಯೂ ಸಾಯಿ ಪಲ್ಲವಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

  English summary
  Sai Pallavi-Rana Daggubati starrer Virata Parvam to be released on June 17 world wide. Sai Pallavi played diffrent role in this movie.
  Wednesday, June 1, 2022, 10:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X