For Quick Alerts
  ALLOW NOTIFICATIONS  
  For Daily Alerts

  ಮತ್ತೆ ಹೃದಯ ಕದ್ದ ಸಾಯಿ ಪಲ್ಲವಿ: ಎರಡೇ ದಿನಕ್ಕೆ ಹಾಡಿನ ವಿಡಿಯೋ ವೈರಲ್

  |

  ನಟಿ ಸಾಯಿ ಪಲ್ಲವಿಗೆ ತಮ್ಮದೇ ಆದ ಬಹುದೊಡ್ಡ ಅಭಿಮಾನಿ ಬಳಗವಿದೆ. ಅವರು ತಮ್ಮ ಅತ್ಯದ್ಭುತ ನಟನೆ, ನೃತ್ಯ, ತಮ್ಮ ಕತೆಯ ಆಯ್ಕೆಯಿಂದ ಬಹುವಾಗಿ ಗಮನ ಸೆಳೆದಿದ್ದಾರೆ.

  ವೈದ್ಯಕೀಯ ಶಿಕ್ಷಣ ಮುಗಿಸಿರುವ ಸಾಯಿ ಪಲ್ಲವಿ ನಟನೆ, ನೃತ್ಯ ಎರಡನ್ನು ಹವ್ಯಾಸವಾಗಿ ಪ್ರಾರಂಭಿಸಿದರು. ನೃತ್ಯದಲ್ಲಂತೂ ಸೂಕ್ತ ಶಿಕ್ಷಣ ಪಡೆದೇ ಇಲ್ಲ ಸಾಯಿ ಪಲ್ಲವಿ. ಆದರೆ ಅದ್ಭುತವಾದ ನೃತ್ಯ ಮಾಡುತ್ತಾರೆ ಈ ನಟಿ. ಈಗ ಸಾಯಿ ಪಲ್ಲವಿಯ ಹೊಸ ಹಾಡೊಂದು ಬಿಡುಗಡೆ ಆಗಿದ್ದು, ಎರಡೇ ದಿನದಲ್ಲಿ ಹಾಡು ಸಖತ್ ವೈರಲ್ ಆಗಿದೆ.

  ಸಾಯಿ ಪಲ್ಲವಿ ನಟಿಸಿರುವ ಶೇಖರ್ ಕಮ್ಮುಲ ನಿರ್ದೇಶನದ 'ಲವ್ ಸ್ಟೋರಿ' ಸಿನಿಮಾದ 'ಸರಂಗ ದರಿಯಾ' ಹಾಡಿನ ಲಿರಿಕಲ್ ವಿಡಿಯೋ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದ್ದು ವಿಡಿಯೋ ಸೂಪರ್-ಡೂಪರ್ ಹಿಟ್ ಆಗಿದೆ.

  ಪ್ರಸ್ತುತ ಬಿಡುಗಡೆ ಆಗಿರುವ ಹಾಡಿನ ವಿಡಿಯೋದಲ್ಲಿ ಸಾಯಿ ಪಲ್ಲವಿ ನರ್ತಿಸುತ್ತಿರುವ ಕೆಲವೇ ದೃಶ್ಯಗಳನ್ನು ಹಾಕಲಾಗಿದೆ. ಉಳಿದಂತೆ ಹೆಚ್ಚಿನ ಪಾಲು ಹಾಡಿನ ಲಿರಿಕ್ಸ್ ಅನ್ನೇ ನೀಡಲಾಗಿದೆ. ಆದರೂ ಸಹ ಸಾಯಿ ಪಲ್ಲವಿ ಅಭಿಮಾನಿಗಳು ಹಾಡನ್ನು ಮತ್ತೆ-ಮತ್ತೆ ನೋಡುತ್ತಿದ್ದಾರೆ.

  'ಸರಂಗ ದರಿಯಾ' ಹಾಡು ಬಿಡುಗಡೆ ಆದ ಕೇವಲ 48 ಗಂಟೆಗಳನ್ನು 1.12 ಕೋಟಿಗೂ ಹೆಚ್ಚು ಬಾರಿ ಹಾಡನ್ನು ಯೂಟ್ಯೂಬ್‌ನಲ್ಲಿ ವೀಕ್ಷಣೆ ಮಾಡಲಾಗಿದೆ.

  ರಶ್ಮಿಕಾ ಕಾಲ್ ಶೀಟ್ ಗಾಗಿ ಕಾಯ್ತಿರೋ ರಾಮಚರಣ್ | RamCharan | Rashmika Mandanna | Filmibeat Kannada

  'ಲವ್ ಸ್ಟೋರಿ' ಸಿನಿಮಾದಲ್ಲಿ ಸಾಯಿ ಪಲ್ಲವಿ ಜೊತೆಗೆ ನಾಗ ಚೈತನ್ಯ ಸಹ ನಟಿಸಿದ್ದಾರೆ. ಈ ಸಿನಿಮಾವನ್ನು ಶೇಖರ್ ಕಮ್ಮುಲ ನಿರ್ದೇಶನ ಮಾಡಿದ್ದಾರೆ. ಇದೇ ನಿರ್ದೇಶಕ ಸಾಯಿ ಪಲ್ಲವಿ ಜೊತೆಗೆ 'ಫಿದಾ' ಹೆಸರಿನ ಸಿನಿಮಾ ಮಾಡಿ ಗೆದ್ದಿದ್ದರು. 'ಲವ್ ಸ್ಟೋರಿ' ಸಿನಿಮಾವು ಏಪ್ರಿಲ್ 16 ರಂದು ಬಿಡುಗಡೆ ಆಗಲಿದೆ.

  English summary
  Sai Pallavi's new movie Love Story's song Saranga Dariya became huge hit on YouTube.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X