Don't Miss!
- News
ಡಿಕೆಶಿ ಯಾರ ಯಾರ ಸಿಡಿ ಮಾಡ್ತಿದ್ದಾರೋ .? ಇನ್ನು ಯಾವ ಸಿಡಿ,ಸಿನಿಮಾ,ಟ್ರೈಲರ್ ಇದೆ ಅವರನೇ ಕೇಳ್ಬೇಕು: ಅಶ್ವತ್ಥ ನಾರಾಯಣ್
- Finance
Infographics: ಬಜೆಟ್ 2023ನಲ್ಲಿ ಕೇಂದ್ರದ ಯೋಜನೆಗಳಿಗೆ ಸಿಕ್ಕ ಅನುದಾನ ಎಷ್ಟು? ವಿವಿರ ಇಲ್ಲಿದೆ
- Automobiles
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಾಯ್‌ಫ್ರೆಂಡ್ ಜೊತೆ ಬ್ರೇಕಪ್? ಶ್ರುತಿ ಹಾಸನ್ ಪರೋಕ್ಷವಾಗಿ ಹೇಳಿದ್ದೇನು?
ಒಂದ್ಕಡೆ ಚಿರಂಜೀವಿ ಮತ್ತೊಂದ್ಕಡೆ ಬಾಲಕೃಷ್ಣ ಇಬ್ಬರು ಸ್ಟಾರ್ ಹೀರೊಗಳಿಗೆ ಶ್ರುತಿ ಹಾಸನ್ ನಾಯಕಿಯಾಗಿ ನಟಿಸ್ತಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಎರಡೂ ಸಿನಿಮಾಗಳು ಒಂದು ದಿನದ ಅಂತರದಲ್ಲಿ ತೆರೆಗೆ ಬರ್ತಿದೆ. ಇದೆಲ್ಲದರ ನಡುವೆ ಶ್ರುತಿ ಲವ್ ಬ್ರೇಕಪ್ ಆಯಿತು ಎನ್ನುವ ಸುದ್ದಿ ಹರಿದಾಡ್ತಿತ್ತು.
ನಟ, ನಟಿಯರು ಮಾಡುವ ಪೋಸ್ಟ್‌ಗಳಿಗೆ ಒಬ್ಬೊಬ್ಬರು ಒಂದೊಂದು ಅರ್ಥ ಕಲ್ಪಿಸಿಕೊಂಡು ಏನೇನೋ ಚರ್ಚೆ ಹುಟ್ಟಾಕುತ್ತಾರೆ. ಇತ್ತೀಚೆಗೆ ಶ್ರುತಿ ಹಾಸನ್ ಮಾಡಿದ್ದ ಅದೊಂದು ಪೋಸ್ಟ್ ವೈರಲ್ ಆಗಿತ್ತು. ಶ್ರುತಿ ಸದ್ಯ ಸಂತನು ಹಜಾರಿಕ ಎಂಬುವವರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರು ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದಾರೆ. ಸಂತನು ಡೂಡಲ್ ಮೇಕರ್ ಆಗಿದ್ದಾರೆ. ಆದರೆ ಇದ್ದಕ್ಕಿದಂತೆ ಇಬ್ಬರ ಲವ್ ಬ್ರೇಕಪ್ ಆಗಿದೆ ಎನ್ನುವ ಸುದ್ದಿ ಹರಿದಾಡೋಕೆ ಶುರುವಾಗಿತ್ತು. ಇತ್ತೀಚೆಗೆ ಕಮಲ್ ಮಗಳು ಮಾಡಿದ ಅದೊಂದು ಪೋಸ್ಟ್ ಇದಕ್ಕೆಲ್ಲಾ ಕಾರಣವಾಗಿತ್ತು.

"ನನ್ನ ಜೊತೆ ನಾನು ಇದ್ದರೆ ಸಂತೋಷ. ನನ್ನ ಅಮೂಲ್ಯವಾದ ಸಮಯವನ್ನು, ಒಂಟಿತನವನ್ನು ಪ್ರೀತಿಸುತ್ತಿದ್ದೇನೆ" ಎಂದು ಇತ್ತೀಚೆಗೆ ಬರೆದುಕೊಂಡಿದ್ದರು. ಅದನ್ನು ನೋಡಿ ಶ್ರುತಿ ಹಾಸನ್ ಲವ್ ಬ್ರೇಕಪ್ ಆಗಿದೆ. ಅದನ್ನು ಈ ರೀತಿ ಪರೋಕ್ಷವಾಗಿ ಹೇಳಿದ್ದಾರೆ ಎನ್ನುವ ಚರ್ಚೆ ನಡೆದಿತ್ತು. ಇದೀಗ ಅದೆಲ್ಲಾ ಸುಳ್ಳು ಎನ್ನುವಂತೆ ಮೊತ್ತೊಂದು ಪೋಸ್ಟ್ ಮಾಡಿದ್ದಾರೆ. ಬಾಯ್‌ಫ್ರೆಂಡ್ ಸಂತನು ಮುತ್ತು ಕೊಡುತ್ತಿರುವ ಫೋಟೊ ಶೇರ್ ಮಾಡಿ "ನಾನು ಯಾವಾಗಲೂ ಬಯಸುವುದು ಇದನ್ನೇ" ಎಂದು ಇನ್‌ಸ್ಟಾ ಸ್ಟೋರಿಯಲ್ಲಿ ಹಾಕಿದ್ದಾರೆ. ಅಲ್ಲಿಗೆ ಎಲ್ಲಾ ವದಂತಿಗೂ ತೆರೆ ಬಿದ್ದಿದೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟಿ ಶ್ರುತಿ ಹಾಸನ್, "ಸಂತನು ನನ್ನ ಬೆಸ್ಟ್ ಫ್ರೆಂಡ್, ಆತ ಬಹಳ ಅದ್ಭುತ ಹಾಗೂ ಪ್ರತಿಭಾನ್ವಿತ ವ್ಯಕ್ತಿ, ಇಂತಹ ವ್ಯಕ್ತಿಗಳು ಸಿಗುವುದು ಅಪರೂಪ" ಎಂದು ಹೇಳಿಕೊಂಡಿದ್ದರು. ಮೆಗಾಸ್ಟಾರ್ ಚಿರಂಜೀವಿ ನಟನೆಯ 'ವಾಲ್ತೇರು ವೀರಯ್ಯ' ಹಾಗೂ ಬಾಲಕೃಷ್ಣ ನಟನೆಯ 'ವೀರಸಿಂಹ ರೆಡ್ಡಿ' ಚಿತ್ರಗಳಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದಾರೆ. 2 ಸಿನಿಮಾಗಳು ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬರ್ತಿದೆ. ಇನ್ನು ಪ್ರಭಾಸ್ ಜೊತೆ 'ಸಲಾರ್' ಚಿತ್ರದಲ್ಲೂ ಮಿಂಚಿದ್ದಾರೆ.
ನಯನತಾರಾ
ಕಾಲೆಳೆದಿದ್ದ
ಜೂ
ಎನ್‌ಟಿಆರ್:
ಘಟನೆ
ನೆನಪಿಸಿಕೊಂಡ
ನಟಿ