For Quick Alerts
  ALLOW NOTIFICATIONS  
  For Daily Alerts

  'ಸಲಾರ್' ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯ

  |

  ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ 'ಸಲಾರ್' ಚಿತ್ರದ ಮೊದಲ ಹಂತದ ಶೂಟಿಂಗ್ ಮುಕ್ತಾಯವಾಗಿದೆ. ಸಲಾರ್ ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದು, ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

  ಸಲಾರ್ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ KGF 2 ಕ್ಯಾಮೆರಾಮೆನ್ | Filmibeat Kannada

  ಕಳೆದ ತಿಂಗಳ ಕೊನೆಯಲ್ಲಿ ಸಲಾರ್ ಚಿತ್ರೀಕರಣ ಆರಂಭವಾಗಿತ್ತು. ಗೋದಾವರಿ ಕಣಿವೆಯಲ್ಲಿ ಸಲಾರ್ ಶೂಟಿಂಗ್ ನಡೆದಿದ್ದು, ಒಂಭತ್ತು ದಿನಗಳ ಮೊದಲ ಶೆಡ್ಯೂಲ್ ಫೆಬ್ರವರಿ 8 ರಂದು ಪೂರ್ಣಗೊಂಡಿದೆ. ಮೊದಲ ಹಂತದ ಚಿತ್ರೀಕರಣದಲ್ಲಿ ಪ್ರಭಾಸ್ ಅವರ ಆಕ್ಷನ್ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

  ಪ್ರಶಾಂತ್ ನೀಲ್ 'ಸಲಾರ್'ಗೆ ವಿಲನ್ ಆದ ಕನ್ನಡಿಗ; ಪ್ರಭಾಸ್ ಎದುರು 'ಭಜರಂಗಿ' ನಟನ ಅಬ್ಬರ

  ಮೊದಲ ಹಂತದ ಶೂಟಿಂಗ್‌ನಲ್ಲಿ ಪ್ರಭಾಸ್, ಶ್ರುತಿ ಹಾಸನ್ ಭಾಗಿಯಾಗಿದ್ದರು. ಜನವರಿ 15ನೇ ತಾರೀಖು ಸಲಾರ್ ಚಿತ್ರದ ಮುಹೂರ್ತ ಹೈದರಾಬಾದ್‌ನಲ್ಲಿ ನೆರವೇರಿತ್ತು. ಕೆಜಿಎಫ್ ನಟ ಯಶ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜನವರಿ 29 ರಿಂದ ಚಿತ್ರೀಕರಣ ಆರಂಭವಾಗಿತ್ತು.

  ಜನವರಿ 31ರಂದು ಶ್ರುತಿ ಹಾಸನ್ ಹುಟ್ಟುಹಬ್ಬದ ಪ್ರಯುಕ್ತ ಸಲಾರ್ ಚಿತ್ರದ ನಾಯಕಿ ಎಂದು ಅಧಿಕೃತವಾಗಿ ಪ್ರಕಟಿಸಲಾಗಿತ್ತು. ಚಿತ್ರದ ವಿಶೇಷ ಹಾಡೊಂದರಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಕರೆತರಲು ಮಾತುಕತೆ ನಡೆಸಲಾಗುತ್ತಿದೆಯಂತೆ.

  ಪ್ರಭಾಸ್ 'ಸಲಾರ್' ಸಿನಿಮಾದ ವಿಶೇಷ ಹಾಡಿನಲ್ಲಿ ಬಾಲಿವುಡ್ ಖ್ಯಾತ ನಟಿ

  ಸಲಾರ್ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿದ್ದು, ಕನ್ನಡ ನಟ ಮಧು ಗುರುಸ್ವಾಮಿ ಪ್ರಮುಖ ಪಾತ್ರಕ್ಕಾಗಿ ಆಯ್ಕೆಯಾಗಿದ್ದಾರೆ.

  English summary
  Prashanth neel directing, Prabhas starrer Salaar movie first schedule shooting completed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X