For Quick Alerts
  ALLOW NOTIFICATIONS  
  For Daily Alerts

  ಸೀಕ್ರೆಟ್ ಬಿಚ್ಚಿಟ್ಟ ಚಿರಂಜೀವಿ: 'ಗಾಡ್‌ಫಾದರ್' ಚಿತ್ರಕ್ಕೆ ಸಲ್ಲು ಕೇಳಿದ ಸಂಭಾವನೆ ಎಷ್ಟು ಗೊತ್ತಾ?

  |

  ವರ್ಲ್ಡ್‌ವೈಡ್ ಸಲ್ಮಾನ್ ಖಾನ್‌ಗಿರೋ ಕ್ರೇಜ್, ಅವರ ಸಿನಿಮಾಗಳು ಮಾಡುವ ಬ್ಯುಸಿನೆಸ್ ಹೇಗಿರುತ್ತೆ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಚಿತ್ರವೊಂದಕ್ಕೆ ಸಲ್ಲು ಕೋಟಿ ಕೋಟಿ ಸಂಭಾವನೆ ಪಡೀತಾರೆ. ನಿಖರವಾಗಿ ಎಷ್ಟು ಎನ್ನುವುದು ಗೊತ್ತಿಲ್ಲದಿದ್ದರೂ 50 ಕೋಟಿ ರೂ.ಗಿಂತ ಅಧಿಕ ಮೊತ್ತ ಚಾರ್ಜ್‌ ಮಾಡ್ತಾರೆ. ಬರೀ ಹಿಂದಿ ಸಿನಿಮಾಗಳಲ್ಲೇ ನಟಿಸ್ತಿದ್ದ ಸಲ್ಮಾನ್ ಖಾನ್ ಇದೇ ಮೊದಲ ಬಾರಿಗೆ ತೆಲುಗು ಚಿತ್ರವೊಂದರಲ್ಲಿ ನಟಿಸಿದ್ದಾರೆ. 'ಗಾಡ್‌ಫಾದರ್' ಚಿತ್ರದಲ್ಲಿ ಚಿರಂಜೀವಿ ಜೊತೆ ಕೈ ಜೋಡಿಸಿದ್ದಾರೆ.

  ಮಲಯಾಳಂನ 'ಲೂಸಿಫರ್' ರೀಮೆಕ್ ಆಗಿರುವ 'ಗಾಡ್‌ಫಾದರ್' ಈ ಚಿತ್ರದಲ್ಲಿ ಮೋಹನ್ ಲಾಲ್ ಮಾಡಿದ್ದ ಪಾತ್ರದಲ್ಲಿ ಚಿರು ಬಣ್ಣ ಹಚ್ಚಿದ್ದಾರೆ. ಪೃಥ್ವಿರಾಜ್ ಮಾಡಿದ್ದ ರೋಲ್‌ನಲ್ಲಿ ಸಲ್ಮಾನ್ ಖಾನ್ ಮಿಂಚಿದ್ದಾರೆ. ಈಗಾಗಲೇ ಟ್ರೈಲರ್, ಸಾಂಗ್ಸ್‌ನಲ್ಲಿ ಇಬ್ಬರು ಮೆಗಾಸ್ಟಾರ್‌ಗಳನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ದಸರಾ ಸಂಭ್ರಮದಲ್ಲಿ ಅಕ್ಟೋಬರ್ 5ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ಹಿಂದಿಗೂ ಡಬ್ ಮಾಡಿ ಉತ್ತರ ಭಾರತದ ಪ್ರೇಕ್ಷಕರ ಮುಂದಿಡುವ ಪ್ರಯತ್ನ ನಡೀತಿದೆ.

  'ಗಾಡ್ ಫಾದರ್' ಚಿತ್ರದಲ್ಲಿ ಸಲ್ಲು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕಾಗಿ ಅವರು ಎಷ್ಟು ಸಂಭಾವನೆ ಪಡೆದುಕೊಂಡಿರಬಹುದು ಎನ್ನುವ ಕುತೂಹಲ ಸಹಜ. ಈ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ ಮಾತನಾಡಿದ್ದಾರೆ.

  ಒಂದು ರೂಪಾಯಿ ತೆಗೆದುಕೊಂಡಿಲ್ಲ ಸಲ್ಲು

  ಒಂದು ರೂಪಾಯಿ ತೆಗೆದುಕೊಂಡಿಲ್ಲ ಸಲ್ಲು

  ಸಲ್ಮಾನ್ ಖಾನ್ ಅದ್ಭುತ ನಟ ಅಲ್ಲದೇ ಇದ್ದರೂ ಸ್ಟೈಲಿಶ್ ನಟ. ಪ್ರೇಕ್ಷಕರನ್ನು ಸೆಲೆಯುವ ಕಲೆ ಸಿದ್ದಿಸಿದೆ. 'ಗಾಡ್ ಫಾದರ್' ಚಿತ್ರದಲ್ಲಿ ನಟಿಸಲು ಸಲ್ಮಾನ್ ಖಾನ್ ಸಂಭಾವನೆಯಾಗಿ ಒಂದು ರೂಪಾಯಿಯನ್ನೂ ತೆಗೆದುಕೊಂಡಿಲ್ಲವಂತೆ. ಹೌದು, ನೀವು ಓದುತ್ತಿರುವುದು ಅಕ್ಷರಶಃ ಸತ್ಯ. ಬಾಲಿವುಡ್‌ ಪ್ರಮುಖ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ವತಃ ಚಿರಂಜೀವಿ ತಿಳಿಸಿದ್ದಾರೆ.

  ಸಂಭಾವನೆ ಬಗ್ಗೆ ಸಲ್ಲು ಹೇಳಿದ್ದೇನು?

  ಸಂಭಾವನೆ ಬಗ್ಗೆ ಸಲ್ಲು ಹೇಳಿದ್ದೇನು?

  'ಗಾಡ್ ಫಾದರ್' ಸಂಭಾವನೆ ಬಗ್ಗೆ ನಿರ್ಮಾಪಕರು ಸಲ್ಮಾನ್ ಖಾನ್ ಬಳಿ ಮಾತನಾಡಲು ಹೋದಾಗ.. "ಚಿರಂಜೀವಿ ಮತ್ತು ರಾಮ್ ಚರಣ್ ಮೇಲಿನ ನನ್ನ ಪ್ರೀತಿಯನ್ನು ನೀವು ಹಣದಿಂದ ಖರೀದಿಸಲು ಸಾಧ್ಯವಿಲ್ಲ. ಇಲ್ಲಿಂದ ಹೊರಡಿ" ಎಂದು ಹೇಳಿ ಕಳುಹಿಸಿದ್ದರಂತೆ. "ಇದು ನನಗೆ ನಿಜಕ್ಕೂ ಆಶ್ಚರ್ಯ ತಂದಿದೆ" ಎಂದು ಚಿರು ಹೇಳಿದ್ದಾರೆ. ನನ್ನ ಮತ್ತು ಸಲ್ಮಾನ್ ನಡುವಿನ ಆತ್ಮೀಯತೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ, ಇನ್ನು ಸಲ್ಮಾನ್ ಕಥೆಯನ್ನು ಕೇಳದೇ ಈ ಚಿತ್ರವನ್ನು ಮಾಡಲು ಒಪ್ಪಿಕೊಂಡರು. ಇದೊಂದು ಸಣ್ಣ ಪಾತ್ರ, ತುಂಬಾ ಚೆನ್ನಾಗಿದೆ. ಬೇಕಿದ್ದರೆ ನೀವು ಒಮ್ಮೆ ಸಿನಿಮಾ ನೋಡಿ ಎಂದಾಗ ಸಲ್ಲು ಭಾಯ್, "ನನಗೆ ಅದ್ಯಾವುದೂ ಬೇಡ, ಈ ಸಿನಿಮಾ ಮಾಡುತ್ತಿದ್ದೇನೆ ಅಷ್ಟೇ" ಎಂದು ಹೇಳಿದ್ದರಂತೆ.

  ಮಲಯಾಳಂ ಸಿನಿಮಾ ರೀಮೆಕ್

  ಮಲಯಾಳಂ ಸಿನಿಮಾ ರೀಮೆಕ್

  'ಲೂಸಿಫರ್' ಮೂಲ ಕಥೆಯನ್ನು ಹಾಗೆಯೇ ಉಳಿಸಿಕೊಂಡು ತೆಲುಗು ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಕೆಲವು ಬದಲಾವಣೆ ಮಾಡಿಕೊಂಡು ಸಿನಿಮಾ ಕಟ್ಟಿಕೊಡಲಾಗಿದೆ. ಸದ್ಯ ಚಿತ್ರದ ಹಿಂದಿ ಟ್ರೈಲರ್ ಕೂಡ ಬಿಡುಗಡೆಯಾಗಿ ಸದ್ದು ಮಾಡ್ತಿದೆ. ಚಿರಂಜೀವಿ ಮುಂಬೈನಲ್ಲಿ ಬೀಡು ಬಿಟ್ಟಿದ್ದು, ಸಿನಿಮಾ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ.

  ಘಟಾನುಘಟಿ ಕಲಾವಿದರ ಅಭಿನಯ

  ಘಟಾನುಘಟಿ ಕಲಾವಿದರ ಅಭಿನಯ


  ಚಿರು- ಸಲ್ಲು ಹೊರತುಪಡಿಸಿದರೆ ವಿವೇಕ್ ಒಬೆರಾಯ್ ಮಾಡಿದ್ದ ಪಾತ್ರದಲ್ಲಿ ಸತ್ಯದೇವ್, ಮಂಜು ವಾರಿಯರ್ ಪಾತ್ರದಲ್ಲಿ ನಯನತಾರಾ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ಹಾಸ್ಯನಟ ಸುನಿಲ್ ಕೂಡ ಚಿತ್ರದ ತಾರಾಗಣದಲ್ಲಿ ಇದ್ದಾರೆ. ಕೊನೆದೇಲ ಪ್ರೊಡಕ್ಷನ್ಸ್‌ನ ರಾಮ್‌ಚರಣ್ ಹಾಗೂ ಸೂಪರ್ ಗುಡ್ ಫಿಲ್ಮ್ಸ್‌ ಆರ್‌. ಬಿ ಚೌಧರಿ, ಎನ್‌. ವಿ ಪ್ರಸಾದ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.

  English summary
  Salman Khan's Remuneration for a Guest appearance in Godfather will Shock you. know More.
  Saturday, October 1, 2022, 20:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X