twitter
    For Quick Alerts
    ALLOW NOTIFICATIONS  
    For Daily Alerts

    'ಬೆಂಗಳೂರು ನಾಗರತ್ನಮ್ಮ' ಬಯೋಪಿಕ್: ಅನುಷ್ಕಾ ಶೆಟ್ಟಿ ಮತ್ತು ಸಮಂತಾ ನಡುವೆ ಪೈಪೋಟಿ

    |

    ಕರ್ನಾಟಿಕ್ ಸಂಗೀತದ ಮೇರು ಗಾಯಕಿ ಬೆಂಗಳೂರು ನಾಗರತ್ನಮ್ಮ ಅವರ ಜೀವನ ತೆರೆಮೇಲೆ ಬರಲು ಸಿದ್ಧವಾಗುತ್ತಿದೆ. ಕರ್ನಾಟಿಕ್ ಸಂಗೀತಕ್ಕೆ ಅಪಾರ ಕೊಡುಗೆ ನೀಡಿರುವ ನಾಗರತ್ನಮ್ಮ ಅವರ ಜೀವನವನ್ನು ಸಿನಿಮಾಗೆ ರೂಪಕ್ಕೆ ತರುತ್ತಿದ್ದಾರೆ ಖ್ಯಾತ ನಿರ್ದೇಶಕ ಸಂಗೀತಂ ಶ್ರೀನಿವಾಸ್ ರಾವ್.

    ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಸಿನಿಮಾ ನಿರ್ದೇಶನ ಮಾಡಿರುವ ಖ್ಯಾತಿ ಶ್ರೀನಿವಾಸ್ ರಾವ್ ಅವರದ್ದು. ಕನ್ನಡದಲ್ಲಿ ಕೊನೆಯದಾಗಿ ಜಗ್ಗೇಶ್ ಅಭಿನಯದ ಮೇಕಪ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಅನೇಕ ವರ್ಷಗಳ ಬಳಿಕ ಈಗ ೮೮ನೇ ವಯಸ್ಸಿನಲ್ಲಿ ಮತ್ತೆ ನಿರ್ದೇಶಕನಕ್ಕೆ ಇಳಿದಿರುವುದು ಅಚ್ಚರಿ ಮೂಡಿಸಿದೆ.

    ಭಾರಿ ಕುತೂಹಲ ಮೂಡಿಸಿರುವ ನಾಗರತ್ನಮ್ಮ ಬಯೋಪಿಕ್ ನಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಸಿನಿಪ್ರಿಯರಲ್ಲಿ ಮೂಡಿಸಿರುವ ಪ್ರಶ್ನೆ.

    ನಾಗರತ್ನಮ್ಮ ಆಗುತ್ತಾರಾ ನಟಿ ಅನುಷ್ಕಾ?

    ನಾಗರತ್ನಮ್ಮ ಆಗುತ್ತಾರಾ ನಟಿ ಅನುಷ್ಕಾ?

    ನಾಗರತ್ನಮ್ಮ ಪಾತ್ರದಲ್ಲಿ ನಟಿ ಅನುಷ್ಕಾ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೆ ಸಿನಿಮಾತಂಡ ಸ್ವೀಟಿ ಅವರನ್ನು ಸಂಪರ್ಕಿಸಿದೆಯಂತೆ. ಆದರೆ ಅನುಷ್ಕಾ ಕಡೆಯಿಂದ ಇನ್ನು ಗ್ರೀನ್ ಸಿಗ್ನಲ್ ಬಂದಿಲ್ಲವಂತೆ. ಅನುಷ್ಕಾ ಸದ್ಯ ನಿಶಬ್ದಂ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾ ನಂತರ ಯಾವುದೆ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ ಅನುಷ್ಕಾ.

    ಸಮಂತಾ ಪಾಲಾಯ್ತಾ ನಾಗರತ್ನಮ್ಮ ಬಯೋಪಿಕ್?

    ಸಮಂತಾ ಪಾಲಾಯ್ತಾ ನಾಗರತ್ನಮ್ಮ ಬಯೋಪಿಕ್?

    ಕನ್ನಡತಿ ನಾಗರತ್ನಮ್ಮ ಆಗಿ ಅನುಷ್ಕಾ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎಂದು ಹೇಳಲಾಗಿತ್ತು. ಆದರೀಗ ಅನುಷ್ಕಾ ಕಡೆಯಿಂದ ಇನ್ನೂ ಗ್ರೀನ್ ಸಿಗ್ನಲ್ ಸಿಗದ ಕಾರಣ, ಚಿತ್ರತಂಡ ಸಮಂತಾ ಅವರನ್ನು ಸಂಪರ್ಕಿಸಿದೆ ಎಂದು ಹೇಳಲಾಗುತ್ತಿದೆ. ಈ ಬಯೋಪಿಕ್ ನಲ್ಲಿ ನಟಿಸಲು ಸಮಂತಾ ಕೂಡ ಉತ್ಸುಕರಾಗಿದ್ದಾರಂತೆ. ಒಂದು ವೇಳೆ ಅನುಷ್ಕಾ ಕಡಯಿಂದ ಗ್ರೀನ್ ಸಿಗ್ನಲ್ ಸಿಗದಿದ್ದರೆ ಸಮಂತಾ ನಾಗರತ್ನಮ್ಮ ಆಗಿ ಕಾಣಿಸಿಕೊಳ್ಳುವುದು ಪಕ್ಕಾ ಎನ್ನುತ್ತಿವೆ ಮೂಲಗಳು.

    ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ ನಾಗರತ್ನಮ್ಮ

    ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ ನಾಗರತ್ನಮ್ಮ

    ಬೆಂಗಳೂರು ನಾಗರತ್ನಮ್ಮ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ನಿರ್ಮಾಣವಾಗಲಿದೆಯಂತೆ. ದಕ್ಷಿಣ ಭಾರತದ ಭಾಷೆಯ ಜೊತೆಗೆ ಹಿಂದಿಯಲ್ಲೂ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಚಿತ್ರತಂಡದ್ದು. ಅಂದ್ಹಾಗೆ ಪೀಪಲ್ ಮೀಡಿಯಾ ಫ್ಯಾಕ್ಟರಿ ನಾಗರತ್ನಮ್ಮ ಬಯೋಪಿಕ್ ನಿರ್ಮಾಣವಾಲಿದೆಯಂತೆ.

    ನಾಗರತ್ನಮ್ಮ ಬಗ್ಗೆ

    ನಾಗರತ್ನಮ್ಮ ಬಗ್ಗೆ

    ನಾಗರತ್ನಮ್ಮ ಮೂಲತಹ ನಂಜನಗೂಡಿನವರು. 1878 ವರ್ಷದ ನವೆಂಬರ್ 3 ದಿನದಂದು ವಕೀಲ್ ಸುಬ್ಬರಾವ್ ಮತ್ತು ಪುಟ್ಟು ಲಕ್ಷ್ಮಿ ಅವರಿಗೆ ಜನಿಸಿದರು. ಐದನೇ ವರ್ಷದಲ್ಲಿ ದೇವದಾಸಿಯಾದವರು. ತಮ್ಮ ಹದಿನೈದನೆಯ ವಯಸ್ಸಿನಲ್ಲಿ ಪಿಟೀಲುವಾದಕಿಯಾಗಿ ಹಾಗೂ ನರ್ತಕಿಯಾಗಿ ಗುರುತಿಸಿಸಕೊಂಡರು. ಅಮೋಘ ಕಂಠಸಿರಿಯ ಮೂಲಕ ನಾಡಿನಾದ್ಯಂತ ಜನಪ್ರಿಯರಾಗಿದ್ದರು. ತ್ಯಾಗರಾಜ ಆರಾಧನೆ ವೈಭವದಿಂದ ನಡೆಯುವಂತೆ ಮಾಡಿದ ಕೀರ್ತಿ ನಾಗರತ್ನಮ್ಮ ಅವರದ್ದು. ಬಾಳಿನ ಕೊನೆಯ ದಿನಗಳನ್ನ ನಾಗರತ್ನಮ್ಮ ಮದ್ರಾಸಿನಲ್ಲಿ ಕಳೆದರು. 1952ರಲ್ಲಿ 74ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.

    English summary
    Actress Anushka Shetty or Samantha Akkineni who will play Famous singger Nagarathanamma biopic.
    Wednesday, April 1, 2020, 15:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X