For Quick Alerts
  ALLOW NOTIFICATIONS  
  For Daily Alerts

  ನಾನು ವಿಶ್ವದ ಅತ್ಯಂತ ವಿಶೇಷ ಹುಡುಗಿ; ಭಾವನಾತ್ಮಕ ಸಂದೇಶ ಹಂಚಿಕೊಂಡ ಸಮಂತಾ

  |

  ತೆಲುಗು ಸಿನಿಮಾರಂಗದ ಪ್ರತಿಭಾವಂತ ನಟಿಯರಲ್ಲಿ ಸಮಂತಾ ಅಕ್ಕಿನೇನಿ ಕೂಡ ಒಬ್ಬರು. ತನ್ನ ಅದ್ಭುತ ಸಿನಿಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಬಳಗ ಸಂಪಾದನೆ ಮಾಡಿದ್ದಾರೆ ಸಮಂತಾ. ಇತ್ತೀಚಿಗೆ ಬಿಗುಡಗೆಯಾದ ಫ್ಯಾಮಿಲಿ ಮ್ಯಾನ್ -2 ವೆಬ್ ಸರಣಿ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಸಮಂತಾ ಇದೀಗ ಪೌರಾಣಿಕ ಸಿನಿಮಾ ಮೂಲಕ ಗಮನ ಸೆಳೆಯುತ್ತಿದ್ದಾರೆ.

  ಸಮಂತಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅಕ್ಕಿನೇನಿ ಸೊಸೆ ಬಳಿ ಇರುವ ಸಿನಿಮಾಗಳಲ್ಲಿ ಪೌರಾಣಿಕ 'ಶಕುಂತಲಂ' ಸಿನಿಮಾ ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿದ ಸಿನಿಮಾವಾಗಿದೆ. ಇದೀಗ ಈ ಸಿನಿಮಾದಿಂದ ಹೊಸ ಅಪ್ ಡೇಟ್ ಹೊರಬಿದ್ದಿದೆ. ಸಮಂತಾ ಈ ಬಹುನಿರೀಕ್ಷೆಯ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಮೂಲಕ ಶಕುಂತಲಂ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಕೊರೊನಾ ನಡುವೆಯೂ ಚಿತ್ರತಂಡ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿ ಸಂತಸಪಟ್ಟಿದಿದೆ.

  ಸಾಮಾಜಿಕ ಜಾಲತಾಣದಲ್ಲಿ ಅಕ್ಕಿನೇನಿ ಹೆಸರು ತೆಗೆದು ಹಾಕಿದ ಸಮಂತಾಸಾಮಾಜಿಕ ಜಾಲತಾಣದಲ್ಲಿ ಅಕ್ಕಿನೇನಿ ಹೆಸರು ತೆಗೆದು ಹಾಕಿದ ಸಮಂತಾ

  ಇತ್ತೀಚಿಗಷ್ಟೆ ಚಿತ್ರೀಕರಣ ಸಂಪೂರ್ಣವಾಗಿ ಮುಗಿಸಿದ ಬಗ್ಗೆ ನಟಿ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ಸಮಂತಾ ಭಾವುಕ ಪತ್ರವೊಂದನ್ನು ಬರೆದಿದ್ದಾರೆ. ಇದರಲ್ಲಿ ಸಮಂತಾ ವಿಶ್ವದ ಅತ್ಯಂತ ವಿಶೇಷ ಹುಡುಗಿ ಎಂದು ತನ್ನನ್ನು ತಾನು ಕರೆದುಕೊಂಡಿದ್ದಾರೆ.

  ಶಕುಂತಲಂ ಸಿನಿಮಾದಲ್ಲಿ ಸಮಂತಾ ಶಕುಂತಲಾ ಪಾತ್ರದಲ್ಲಿ ನಟಿಸಿದ್ದಾರೆ. ಮಲಯಾಳಂನ ದೇವ್ ಮೋಹನ್ ರಾಜ್, ದುಷ್ಯಂತ್ ಆಗಿ ಕಾಣಿಸಿಕೊಂಡಿದ್ದಾರೆ. ಬಹುನಿರೀಕ್ಷೆಯ ಸಿನಿಮಾವನ್ನು ಗುಣಶೇಖರ್ ನಿರ್ದೇಶನ ಮಾಡುತ್ತಿದ್ದಾರೆ. ಗುಣಶೇಖರ್ ಹೋಮ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿಬರುತ್ತಿದೆ. ಚಿತ್ರೀಕರಣ ಯಶಸ್ವಿಯಾಗಿ ಮುಗಿಸಿದ ಖುಷಿಯಲ್ಲಿರುವ ಇಡೀ ತಂಡ ಕೇಕ್ ಕತ್ತರಿಸಿ ಸಂಭ್ರಮಿಸಿದೆ.

  ತಂಡಕ್ಕೆ ಧನ್ಯವಾದ ತಿಳಿಸಿ ಕೇಕ್ ಕತ್ತರಿಸುತ್ತಿರುವ ಫೋಟೋವನ್ನು ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ದೀರ್ಘವಾದ ಪತ್ರಬರೆದಿದ್ದಾರೆ. "ಶಕುಂತಲಂ ಚಿತ್ರೀಕರಣ ಸಂಪೂರ್ಣವಾಗಿದೆ. ಈ ಸಿನಿಮಾ ನನ್ನ ಜೀವಿತಾವಧಿಯಲ್ಲಿ ನನ್ನೊಂದಿಗೆ ಶಾಶ್ವತವಾಗಿ ಉಳಿಯುತ್ತದೆ. ಚಿಕ್ಕ ಹುಡುಗಿಯಾಗಿ ನಾನು ಕಾಲ್ಪನಿಕ ಕಥೆಗಳನ್ನು ನಂಬಿದ್ದೆ. ಹೆಚ್ಚು ಬದಲಾಗಿಲ್ಲ. ಗುಣಶೇಖರ್ ಸರ್ ನನ್ನ ಗಾಡ್ ಫಾದರ್ ನನ್ನ ಕನಸನ್ನು ನನಸು ಮಾಡಿದರು . ಅವರು ಈ ಸಿನಿಮಾವನ್ನು ನನಗೆ ಹೇಳಿದಾಗ ನಾನು ತಕ್ಷಣ ಅತ್ಯಂತ ಸುಂದರ ಜಗತ್ತಿಗೆ ಹೊರಟುಹೋದೆ. ಶಕುಂತಲಂ ಜಗತ್ತಿನ ಹಾಗೆ ಯಾವ ಜಗತ್ತಿಲ್ಲ." ಎಂದಿದ್ದಾರೆ.

  "ನಾನು ತುಂಬಾ ಭಯಗೊಂಡಿದ್ದೆ ಮತ್ತು ಹೆದರುತ್ತಿದ್ದೆ. ಆದರೆ ಇಂದು ಗುಡ್ ಬೈ ಹೇಳುವಾಗ ಈ ಅದ್ಭುತ ಮಾನವ ಗುಣಶೇಖರ್ ಸರ್ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಎಲ್ಲಾ ನಿರೀಕ್ಷೆಗಳನ್ನು ಮೀರಿದ ಜಗತ್ತನ್ನು ಸೃಷ್ಟಿಸಿದ್ದಾರೆ. ನನ್ನೊಳಗಿನ ಮಗು ಸಂತೋಷದಿಂದ ನರ್ತಿಸುತ್ತಿದೆ. ಧನ್ಯವಾದಗಳು ಸರ್, ಧನ್ಯವಾದಗಳು ಇಡೀ ತಂಡಕ್ಕೆ. ಇಂದು ವಿಶ್ವದ ಅತ್ಯಂತ ವಿಶೇಷ ಹುಡುಗಿಯಂತೆ ಭಾಸವಾಗುತ್ತಿದೆ." ಎಂದು ದೀರ್ಘವಾಗಿ ಬರೆದುಕೊಂಡು ನಿರ್ದೇಶಕರಿಗೆ ಧನ್ಯವಾದ ತಿಳಿಸಿದ್ದಾರೆ.

  ಅಂದಹಾಗೆ ಪೌರಾಣಿಕ ಪಾತ್ರಗಳಲ್ಲಿ ನಟಿಸುವುದು ಸಮಂತಾ ಅವರ ದೊಡ್ಡ ಕನಸಾಗಿತ್ತು. ಆ ಕನಸು ಈ ಸಿನಿಮಾ ಮೂಲಕ ಈಡೇರಿದೆ. ಸುಮಾರು 10 ವರ್ಷದ ಸಿನಿಮಾ ಪಯಣದಲ್ಲಿ ಸಮಂತಾ ಮೊದಲ ಬಾರಿಗೆ ಇಂಥ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಸಿನಿಮಾದ ಬಗ್ಗೆ ಸಮಂತಾ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

  ಈ ಸಿನಿಮಾ ಜೊತೆಗೆ ಸಮಂತಾ ತಮಿಳಿನ ಎರಡು ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಫ್ಯಾಮಿಲಿ ಮ್ಯಾನ್-2 ಸಕ್ಸಸ್ ಬಳಿಕ ಸಮಂತಾಗೆ ತೆಲುಗು ಮಾತ್ರವಲ್ಲದೇ ಪರಭಾಷೆಯಿಂದ ಬೇಡಿಕೆಯೂ ಹೆಚ್ಚಾಗಿದೆ. ಸಿನಿಮಾಗಳ ಜೊತೆಗೆ ವೆಬ್ ಸೀರಿಸ್ ಗಳಲ್ಲೂ ಸಮಂತಾ ಬ್ಯಾಸಿಯಾಗುವ ಸಾಧ್ಯತೆ ಇದೆ. ಈ ನಡುವೆ ಅಕ್ಕಿನೇನಿ ಸೊಸೆ ಮುಂಬೈನಲ್ಲಿ ಮನೆ ಖರೀದಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹಿಂದಿ ಸಿನಿಮಾರಂದಲ್ಲೇ ಬ್ಯುಸಿಯಾಗ್ತಾರಾ ಎನ್ನುವ ಅನುಮಾನ ಕೂಡ ಅಭಿಮಾನಿಗಳಲ್ಲಿ ಕಾಡುತ್ತಿದೆ. ಈ ಬಗ್ಗೆ ಹಿಂದಿ ಸಿನಿಮಾಗಳ ಬಗ್ಗೆ ಸಮಂತಾ ಇದುವರೆಗೂ ಯಾವುದೇ ಮಾಹಿತಿ ಬಹಿರಂಗ ಬಹಿರಂಗಪಡಿಸಿಲ್ಲ. ಹಾಗಾಗಿ ಸಮಂತಾ ಮುಂದಿನ ಸಿನಿಮಾಗಳ ಮೇಲೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.

  English summary
  Telugu Actress Samantha Akkineni penned gratitude note as she wrapped up the shoot of Shaakuntalam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X