For Quick Alerts
  ALLOW NOTIFICATIONS  
  For Daily Alerts

  Samantha: ಮಣಿರತ್ನಂ 'ರೋಜಾ' ಚಿತ್ರಕ್ಕಾಗಿ ಸಮಂತಾ, ವಿಜಯ್ ದೇವರಕೊಂಡ ಭರ್ಜರಿ ತಯಾರಿ!

  |

  ನಟಿ ಸಮಂತಾ ಸದ್ಯ ತಮಿಳು, ತೆಲುಗು ಮಾತ್ರವಲ್ಲದೆ ಅತ್ತ ಬಾಲಿವುಡ್‌ನಲ್ಲೂ ಕೂಡ ಬ್ಯುಸಿಯಾಗಿದ್ದಾರೆ. ಬಾಲಿವುಡ್‌ ಸಿನಿಮಾಗೂ ಸಮಂತಾ ಈಗಾಗಲೇ ಸೈ ಎಂದಿದ್ದಾರಂತೆ. ಈ ನಡುವೆ ಸಮಂತಾ ಮತ್ತೊಂದು ವಿಚಾರಕ್ಕೆ ಸುದ್ದಿ ಆಗಿದ್ದರು. ಸಮಂತಾ ಹೊಸ ಸಿನಿಮಾ ಪ್ರಕಟ ಆಗಿದ್ದು, ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ನಾಯಕನಾಗಿ ಇರಲಿದ್ದಾರೆ.

  ಈ ಹಿಂದೆ ಸಮಂತಾ ಮತ್ತು ವಿಜಯ್ ಇಬ್ಬರೂ ಮಹಾನಟಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ನಾಯಕ, ನಾಯಕಿ ಆಗಿ ಸಿನಿಮಾದಲ್ಲಿ ಅಭಿನಯಿಲು ಸಜ್ಜಾಗಿದ್ದಾರೆ. ಸದ್ಯ ಟಾಲಿವುಡ್‌ನಲ್ಲಿ ಈ ಚಿತ್ರದ ಬಗ್ಗೆಯೇ ಮಾತುಕತೆ ನಡೆದಿದೆ. ಈ ಚಿತ್ರದ ಕಥೆಯ ಬಗ್ಗೆ ಟಾಲಿವುಡ್‌ನಲ್ಲಿ ಗುಸುಗುಸು ಹಬ್ಬಿದೆ.

  ರಶ್ಮಿಕಾ ಅಲ್ಲ ವಿಜಯ್ ದೇವರಕೊಂಡ ಜೊತೆ ಸಮಂತಾ ರೊಮ್ಯಾನ್ಸ್ರಶ್ಮಿಕಾ ಅಲ್ಲ ವಿಜಯ್ ದೇವರಕೊಂಡ ಜೊತೆ ಸಮಂತಾ ರೊಮ್ಯಾನ್ಸ್

  Recommended Video

  Samantha | ವಿಜಯ್ ದೇವರಕೊಂಡಾ ಜೊತೆ ರೊಮ್ಯಾನ್ಸ್ ಮಾಡಲು ಸಜ್ಜಾದ ಸಮಂತಾ | Vijay Devarakonda

  ಅದಕ್ಕೆ ಕಾರಣ ಸಿನಿಮಾದ ಕಥೆ. ಹೌದು, ಈ ಚಿತ್ರಕ್ಕೆ ಇನ್ನೂ ಟೈಟಲ್ ನಿಗದಿ ಆಗಿಲ್ಲ. ಸಮಂತಾ-ವಿಜಯ್ ಬಿಟ್ಟರೆ ಮತ್ಯಾವ ಕಲಾವಿದರ ಆಯ್ಕೆಯೂ ಆಗಿಲ್ಲ. ಆದರೆ, ಸಿನಿಮಾದ ಕತೆ ಏನು? ಸಿನಿಮಾ ಹೇಗೆ ಮೂಡಿ ಬರಲಿದೆ? ಎನ್ನುವ ಬಗ್ಗೆ ಸುದ್ದಿ ಹಬ್ಬಿದೆ. ಇಷ್ಟೇ ಅಲ್ಲಾ ಈ ಚಿತ್ರಕ್ಕೂ ಮಣಿರತ್ನಂ ಸಾರಥ್ಯದಲ್ಲಿ ಬಂದ 'ರೋಜಾ' ಚಿತ್ರಕ್ಕೂ ಕನೆಕ್ಷನ್ ಇದೆ. ಇದೇನು ಅಂತ ಮುಂದೆ ಓದಿ....

  Samantha: ಹೈದರಾಬಾದ್ ಮನೆ ಬಿಟ್ಟ ಸಮಂತಾ ಕಾರಣ ಕೇಳಿದ್ರೆ ಅಚ್ಚರಿ ಆಗುತ್ತೆ! Samantha: ಹೈದರಾಬಾದ್ ಮನೆ ಬಿಟ್ಟ ಸಮಂತಾ ಕಾರಣ ಕೇಳಿದ್ರೆ ಅಚ್ಚರಿ ಆಗುತ್ತೆ!

  'ರೋಜಾ' ಚಿತ್ರದ ಹೊಸ ಅವತರಣಿಕೆ ಆರಂಭ!

  'ರೋಜಾ' ಚಿತ್ರದ ಹೊಸ ಅವತರಣಿಕೆ ಆರಂಭ!

  ಖ್ಯಾತ ನಿರ್ದೇಶಕ ಮಣಿರತ್ನಂ ಮಾಡಿರುವ 'ರೋಜಾ' ಸಿನಿಮಾ ನೆನಪಿದೆಯಾ? 1992ರಲ್ಲಿ ಬಂದ ಸಿನಿಮಾ ಈಗ ಮತ್ತೆ ಸದ್ದು ಮಾಡುತ್ತಿದೆ. ದಶಕಗಳ ನಂತರ ಈ ಸಿನಿಮಾ ಕಥೆಯನ್ನು ಮತ್ತೆ ತೆರೆಯ ಮೇಲೆ ನೋಡ ಬಹುದಾಗಿದೆ. ಹಾಗಂತ 'ರೋಜಾ' ಸಿನಿಮಾವನ್ನು ಈಗ ಮತ್ತೆ ರಿಮೇಕ್ ಮಾಡುತ್ತಿಲ್ಲ. ಆದರೆ ಅದೇ ಕತೆಯನ್ನು ಈಗಿನ ಜನರೇಷನ್‌ಗೆ ಹೋಲಿಕೆ ಮಾಡಿದರೆ ಹೇಗೆ ಇರುತ್ತದೆ ಎನ್ನುವ ಕಥೆಯನ್ನು ಹೇಳಲು ನಟಿ ಸಮಂತಾ ಮತ್ತು ವಿಜಯ್ ದೇವರಕೊಂಡ ಬರ್ತಿದ್ದಾರೆ.

  ವಿಜಯ್‌ ದೇವರಕೊಂಡಗೆ ಸಮಂತಾ 'ರೋಜಾ'!

  ವಿಜಯ್‌ ದೇವರಕೊಂಡಗೆ ಸಮಂತಾ 'ರೋಜಾ'!

  ನಟಿ ಸಮಂತಾ ಮತ್ತು ವಿಜಯ್ ದೇವರಕೊಂಡ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತಿದೆ. ಈ ಚಿತ್ರಕ್ಕೆ ಈ ಹಿಂದೆ ಸಮಂತಾ ನಾಗಚೈತನ್ಯ ಅಭಿನಯದ 'ಮಜಿಲಿ' ಚಿತ್ರವನ್ನು ನಿರ್ದೇಶನ ಮಾಡಿದ್ದ ಶಿವನಿರ್ವಾಣ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರವನ್ನು 'ರೋಜಾ' ಸಿನಿಮಾ ಮಾದರಿಯಲ್ಲೇ ಹೆಚ್ಚಾಗಿ ಕಾಶ್ಮೀರದ ಹಿನ್ನೆಯಲ್ಲಿ ಚಿತ್ರೀಕರಿಸಲಾಗುತ್ತದೆಯಂತೆ. ಈ ಚಿತ್ರ ಪ್ರೇಮಕಥೆಯನ್ನು ಆಧರಿಸಿದ್ದು, ಹಳೆ ರೋಜಾ ಸಿನಿಮಾವನ್ನು ನೆನಪಿಸಲಿದೆಯಂತೆ.

  ವಿಜಯ್ ದೇವರಕೊಂಡ ಜೊತೆಗೆ ಸಮಂತಾ ರೊಮ್ಯಾನ್ಸ್!

  ವಿಜಯ್ ದೇವರಕೊಂಡ ಜೊತೆಗೆ ಸಮಂತಾ ರೊಮ್ಯಾನ್ಸ್!

  ಇನ್ನು ಚಿತ್ರದಲ್ಲಿ ಹೆಚ್ಚಾಗಿ ಪ್ರೀತಿ, ಪ್ರೇಮ, ಪ್ರಣಯ ಇರಲಿದೆಯಂತೆ. ಈ ಚಿತ್ರದ ಮೂಲಕ ಸಮಂತಾ ವಿಜಯ್ ದೇವರಕೊಂಡ ಜೊತೆಗೆ ತೆರೆಯ ಮೇಲೆ ರೊಮ್ಯಾನ್ಸ್ ಮಾಡಲಿದ್ದಾರೆ. ಈ ಹಿಂದೆ ಮಹಾನಟಿಯಲ್ಲಿ ಇವರ ಜೋಡಿಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಇವರು ರೊಮ್ಯಾಂಟಿಕ್ ಲವ್‌ ಕಹಾನಿಯ ಮೂಲಕ ಒಟ್ಟಿಗೆ ಬರುತ್ತಿದ್ದಾರೆ. ಹಾಗಾಗಿ ಸಮಂತಾ ಹಾಗೂ ವಿಜಯ್ ಪಾತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.

  ಸಮಂತಾಗೂ ಮೊದಲು ಕಿಯಾರಾ ಆಯ್ಕೆ!

  ಸಮಂತಾಗೂ ಮೊದಲು ಕಿಯಾರಾ ಆಯ್ಕೆ!

  ಸಮಂತಾಗಿಂತಲೂ ಮೊದಲು ಈ ಚಿತ್ರಕ್ಕೆ ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ಆಯ್ಕೆ ಆಗಿದ್ದರಂತೆ. ನಂತರ ಕಿಯಾರಾಳನ್ನು ಕೈ ಬಿಟ್ಟು ಸಮಂತಾ ಮೊರೆ ಹೋಗಿದೆಯಂತೆ ಸಿನಿಮಾ ತಂಡ. ಸದ್ಯ ಸಮಂತಾ ಅಭಿನಯದ ಮೂರು ಸಿನಿಮಾಗಳು ತೆರೆಗೆ ಬರಬೇಕಿದೆ. ಈ ನಡುವೆ ಸಮಂತಾ ಹೊಸ ಸಿನಿಮಾ ಪ್ರಕಟ ಆಗಿದೆ. ಈ ಚಿತ್ರದಲ್ಲಿ ಸಮಂತಾ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಸಿನಿಮಾದ ಲುಕ್ ರಿವೀಲ್ ಆದ ಬಳಿಕ ಗೊತ್ತಾಗಲಿದೆ.

  English summary
  Samantha And Vijay Devarakonda Upcomming Movie Is The New Version Mani Ratnam's Roja Film, Know More
  Monday, March 21, 2022, 16:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X