For Quick Alerts
  ALLOW NOTIFICATIONS  
  For Daily Alerts

  ಸಾಮಾಜಿಕ ಜಾಲತಾಣದಲ್ಲಿ ಅಕ್ಕಿನೇನಿ ಹೆಸರು ತೆಗೆದು ಹಾಕಿದ ಸಮಂತಾ

  By ಫಿಲ್ಮೀಬೀಟ್ ಡೆಸ್ಕ್‌
  |

  ಅಕ್ಕಿನೇನಿ ತೆಲುಗು ಸಿನಿಮಾ ರಂಗದಲ್ಲಿ ಮಾತ್ರವಲ್ಲ ಭಾರತೀಯ ಸಿನಿಮಾ ರಂಗದಲ್ಲೂ ಪರಿಚಿತ ಹೆಸರು. ಅಕ್ಕಿನೇನಿ ನಾಗೇಶ್ವರ ರಾವ್ ಭಾರತೀಯ ಸಿನಿಮಾಕ್ಕೆ ವಿಶೇಷವಾಗಿ ತೆಲುಗು ಸಿನಿಮಾಕ್ಕೆ ನೀಡಿರುವ ಕೊಡುಗೆ ಮರೆಯಲಾಗದ್ದು.

  ತೆಲುಗು ರಾಜ್ಯಗಳಲ್ಲಿ ಅಕ್ಕಿನೇನಿ ಕುಟುಂಬಕ್ಕೆ ಬಹಳ ಗೌರವ, ಆದರಗಳಿವೆ. ಇಂಥಹಾ ಗೌರವಾನ್ವಿತ ಕುಟುಂಬಕ್ಕೆ 2017ರಲ್ಲಿ ಸೊಸೆಯಾಗಿ ಬಂದರು ನಟಿ ಸಮಂತಾ. ಅಕ್ಕಿನೇನಿ ನಾಗೇಶ್ವರ ರಾವ್ ಮೊಮ್ಮಗ, ನಾಗಾರ್ಜುನ ಪುತ್ರ ನಾಗ ಚೈತನ್ಯ ಅನ್ನು ಸಮಂತಾ ವಿವಾಹವಾದರು.

  ಸಮಂತಾ ಹಾಗೂ ನಾಗಚೈತನ್ಯ ಒಟ್ಟಿಗೆ ಚೆನ್ನಾಗಿ ದಾಂಪತ್ಯ ಸಾಗಿಸುತ್ತಿದ್ದಾರೆ. ಸಮಂತಾ ಸಹ ಪತಿಯೊಂದಿಗೆ, ನಾಗಾರ್ಜುನ ಕುಟುಂಬದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸಮಂತಾ ಋತುಪ್ರಭು ಎಂದಿದ್ದ ಹೆಸರನ್ನು ಸಮಂತಾ ಅಕ್ಕಿನೇನಿ ಎಂದು ಬದಲಾಯಿಸಿಕೊಂಡಿದ್ದರು ಸಹ. ಆದರೆ ಇಂದೇಕೋ ಹಠಾತ್ತಲೇ ತಮ್ಮ ಹೆಸರಿನ ಮುಂದೆಯಿದ್ದ ಅಕ್ಕಿನೇನಿ ಯನ್ನು ತೆಗೆದು ಹಾಕಿದ್ದಾರೆ ಸಮಂತಾ.

  ಟ್ವಿಟ್ಟರ್ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಸಮಂತಾರ ಹೆಸರು ಸಮಂತಾ ಅಕ್ಕಿನೇನಿ ಎಂದಿತ್ತು. ಆದರೆ ಹಠಾತ್ತನೆ ಇಂದು ಹೆಸರು ಬದಲಾಯಿಸಿರುವ ಸಮಂತಾ, ಟ್ವಿಟ್ಟರ್‌ನಲ್ಲಿ ಕೇವಲ 'ಎಸ್' ಎಂದು ಮಾತ್ರವೇ ತಮ್ಮ ಹೆಸರನ್ನು ಉಳಿಸಿಕೊಂಡಿದ್ದಾರೆ. ಇನ್ನು ಇನ್‌ಸ್ಟಾಗ್ರಾಂನಲ್ಲಿ ಸಮಂತಾ ಋತುಪ್ರಭು ಎಂದಿದೆ. ಆದರೆ ಫೇಸ್‌ಬುಕ್‌ನಲ್ಲಿ ಮಾತ್ರ ಸಮಂತಾ ಅಕ್ಕಿನೇನಿ ಎಂಬ ಹೆಸರೇ ಇದೆ.

  ಅಕ್ಕಿನೇನಿ ಹೆಸರು ತೆಗೆದ ಸಮಂತಾ

  ಅಕ್ಕಿನೇನಿ ಹೆಸರು ತೆಗೆದ ಸಮಂತಾ

  ಸಮಂತಾ ಹಠಾತ್ತನೇ ತಮ್ಮ ಹೆಸರಿನ ಹಿಂದೆ ಇರುವ ಅಕ್ಕಿನೇನಿ ಹೆಸರು ತೆಗೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ನಾಗಚೈತನ್ಯ ಹಾಗೂ ಸಮಂತಾ ನಡುವೆ ಸಂಬಂಧ ಏನಾದರೂ ಬಿರುಕು ಬಿಟ್ಟಿದೆಯೇ ಎಂಬ ಅನುಮಾನವನ್ನು ಸಾಮಾಜಿಕ ಜಾಲತಾಣದಲ್ಲಿ ಕೆಲವರು ವ್ಯಕ್ತಪಡಿಸಿದ್ದಾರೆ. ಅಥವಾ ಸಮಂತಾ ಹಾಗೂ ನಾಗಾರ್ಜುನ ಕುಟುಂಬದ ನಡುವೆ ಏನಾದರೂ ಭಿನ್ನಾಭಿಪ್ರಾಯಗಳು ತಲೆದೂರಿದವೆ ಎಂಬ ಅನುಮಾನವೂ ವ್ಯಕ್ತವಾಗಿದೆ.

  ಯಾವುದೇ ಚಿತ್ರಗಳನ್ನು ಡಿಲೀಟ್ ಮಾಡಿಲ್ಲ

  ಯಾವುದೇ ಚಿತ್ರಗಳನ್ನು ಡಿಲೀಟ್ ಮಾಡಿಲ್ಲ

  ಹಾಗೆ ನೋಡಿದರೆ ಸಮಂತಾ ತಮ್ಮ ಇನ್‌ಸ್ಟಾಗ್ರಾಂ ಹಾಗೂ ಟ್ವಿಟ್ಟರ್‌ಗಳಲ್ಲಿ ಪತಿ ನಾಗಚೈತನ್ಯ ಜೊತೆಗೆ ಹಂಚಿಕೊಂಡಿದ್ದ ಚಿತ್ರಗಳನ್ನು ಡಿಲೀಟ್ ಮಾಡಿಲ್ಲ. ಆ ಎಲ್ಲ ಚಿತ್ರಗಳು ಹಾಗೆಯೇ ಇವೆ. ನಾಗಾರ್ಜುನ ಕುಟುಂಬದ ಜೊತೆಗೆ ತೆಗೆಸಿಕೊಂಡಿರುವ ಚಿತ್ರಗಳು ಸಹ ಹಾಗೆಯೇ ಇವೆ. ಒಂದೊಮ್ಮೆ ಸಂಬಂಧದಲ್ಲಿ ಬಿರುಕು ಮೂಡಿದ್ದಿದ್ದರೆ ಚಿತ್ರಗಳನ್ನು ಸಹ ಡಿಲೀಟ್ ಮಾಡುತ್ತಿರಲಿಲ್ಲವೇ? ಎಂದು ಒಂದಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.

  2017ರಲ್ಲಿ ನಡೆದಿದ್ದ ಮದುವೆ

  2017ರಲ್ಲಿ ನಡೆದಿದ್ದ ಮದುವೆ

  ನಾಗಾರ್ಜುನ ಪುತ್ರ ನಾಗಚೈತನ್ಯ ಹಾಗೂ ಸಮಂತಾ ಪ್ರೀತಿಸಿ 2017ರ ಅಕ್ಟೋಬರ್ 7ರಂದು ವಿವಾಹವಾದರು. ಈ ಯುವಜೋಡಿಯ ಮದುವೆ ಬಹಳ ಅದ್ಧೂರಿಯಾಗಿ ನೆರವೇರಿತ್ತು. ತೆಲುಗು ಸಿನಿರಂಗದ ಹಲವು ದಿಗ್ಗಜರು ವಿವಾಹದಲ್ಲಿ ಪಾಲ್ಗೊಂಡಿದ್ದರು. ನಾಗಾರ್ಜುನ, ನಾಗಚೈತನ್ಯ, ಸಮಂತಾ ಎಲ್ಲರೂ ಹಾಡಿ ಕುಣಿದು ಸಂಭ್ರಮಿಸಿದ್ದರು.

  ಮದುವೆ ನಂತರವೂ ಏರುತ್ತಲೇ ಇದೆ ವೃತ್ತಿಯ ಗ್ರಾಫ್

  ಮದುವೆ ನಂತರವೂ ಏರುತ್ತಲೇ ಇದೆ ವೃತ್ತಿಯ ಗ್ರಾಫ್

  ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ ಸಮಂತಾ ತಮ್ಮ ವೃತ್ತಿ ಜೀವನದ ಗ್ರಾಫ್ ಮದುವೆಯ ನಂತರವೂ ಏರುತ್ತಲೇ ಸಾಗುತ್ತಿದೆ. ಹಲವು ಭಿನ್ನ ಮಾದರಿಯ ಸಿನಿಮಾಗಳಲ್ಲಿ, ವೆಬ್ ಸರಣಿಗಳಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ನಿರೂಪಣೆ, ಒಟಿಟಿಯಲ್ಲಿ ಟಾಕ್‌ ಶೋ ಹೀಗೆ ಹಲವು ವಿಭಾಗಗಳಲ್ಲಿ ತಮ್ಮನ್ನು ತೊಡಿಗಿಸಿಕೊಂಡಿದ್ದಾರೆ ಸಮಂತಾ. ಇದರ ಜೊತೆಗೆ ಚಿನ್ನದ ವ್ಯಾಪಾರದ ಉದ್ದಿಮೆಯನ್ನು ಸಹ ಸಮಂತಾ ಪ್ರಾರಂಭಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

  ಅಮೀರ್ ಖಾನ್ ಜೊತೆಗೆ ಸಿನಿಮಾ

  ಅಮೀರ್ ಖಾನ್ ಜೊತೆಗೆ ಸಿನಿಮಾ

  ಇನ್ನು ನಾಗಚೈತನ್ಯ ನಟಿಸಿರುವ ತೆಲುಗು ಸಿನಿಮಾ 'ಲವ್‌ಸ್ಟೋರಿ' ಇನ್ನಷ್ಟೆ ಬಿಡುಗಡೆ ಆಗಬೇಕಿದೆ. ಶೇಖರ್ ಕಮ್ಮುಲ ನಿರ್ದೇಶೀಸಿದರುವ ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿ. ನಾಗಚೈತನ್ಯ ಹಿಂದಿ ಸಿನಿಮಾಕ್ಕೆ ಸಹ ಪಾದಾರ್ಪಣೆ ಮಾಡಿದ್ದು ನಟ ಅಮೀರ್ ಖಾನ್ ಜೊತೆಗೆ ಲಾಲ್ ಸಿಂಗ್ ಛಡ್ಡಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಅವರದ್ದು ಅಮೀರ್ ಖಾನ್‌ರ ಗೆಳೆಯನ ಪಾತ್ರ. ಅದರ ಜೊತೆಗೆ ಇನ್ನೂ ಎರಡು ಸಿನಿಮಾಗಳಲ್ಲಿ ನಾಗ ಚೈತನ್ಯ ನಟಿಸುತ್ತಿದ್ದಾರೆ.

  English summary
  Actress Samantha removes Akkineni name from her social media accounts. Samantha did not delete any photos from her social media accounts.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X