For Quick Alerts
  ALLOW NOTIFICATIONS  
  For Daily Alerts

  ಸಮಂತಾ-ಚೈತನ್ಯ ವಿಚ್ಛೇದನ; ನಟ ಸಿದ್ದಾರ್ಥ ಗೂಡಾರ್ಥದ ಟ್ವೀಟ್!

  By ರವೀಂದ್ರ ಕೊಟಕಿ
  |

  ಸಮಂತಾ ಹಾಗೂ ನಾಗ ಚೈತನ್ಯ ಇಬ್ಬರು ಅಧಿಕೃತವಾಗಿ ವಿವಾಹ ಬಂಧನದಿಂದ ಮುಕ್ತರಾಗುತ್ತಿರುವುದಾಗಿ ಶನಿವಾರದಂದು ಅಧಿಕೃತವಾಗಿ ಘೋಷಿಸಿದ್ದಾರೆ. ಸ್ಟಾರ್ ದಂಪತಿ ವಿವಾಹ ಬಂಧನ ಮುರಿಯಲು ಏನು ಕಾರಣ ಎಂಬುದರ ಬಗ್ಗೆ ಕುತೂಹಲ ಎಲ್ಲರಲ್ಲೂ ಇದೆ. ಈ ನಡುವೆ ಸಮಂತಾಗೆ ಭಾರಿ ಮೊತ್ತದ ಜೀವನಾಂಶ ಸಿಗಲಿದೆ ಎಂಬ ಸುದ್ದಿ ಹಬ್ಬಿತ್ತು.

  ಸುಮಾರು 200 ಕೋಟಿ ರುಗೂ ಅಧಿಕ ಮೊತ ಸಮಂತಾ ಕೈ ಸೇರಲಿದೆ ಎಂಬ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಎಚ್ಚೆತ್ತ ಸಮಂತಾ, ನನಗೆ ಯಾವ ಮೊತ್ತವೂ ಬೇಡ ಎನ್ನುವ ಮೂಲಕ ಎಲ್ಲರನ್ನು ಅಚ್ಚರಿಗೆ ದೂಡಿದ್ದಾರೆ. ಸಮಂತಾರ ಈ ನಿರ್ಣಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ಕೇಳಿ ಬರುತ್ತಿದೆ.

  ದಾಂಪತ್ಯ ಜೀವನ ಅಂತ್ಯಗೊಳಿಸಿದ ನಾಗ ಚೈತನ್ಯ-ಸಮಂತಾದಾಂಪತ್ಯ ಜೀವನ ಅಂತ್ಯಗೊಳಿಸಿದ ನಾಗ ಚೈತನ್ಯ-ಸಮಂತಾ

  ಈ ನಡುವೆ ಸಮಂತಾರ ಆಪ್ತ ಗೆಳೆಯ ಸಿದ್ದಾರ್ಥ ಮತ್ತೆ ಟ್ವಿಟ್ಟರಲ್ಲಿ ಸಕ್ರಿಯರಾಗಿದ್ದು, ವಂಚಕರು ಎಂದಿಗೂ ಏಳಿಗೆ ಹೊಂದಿಲ್ಲ...ಪರೋಕ್ಷವಾಗಿ ಸಮಂತಾಳನ್ನು ಟಾರ್ಗೆಟ್ ಮಾಡಿ ಟ್ವೀಟ್ ಮಾಡಿ, ಗಮನ ಸೆಳೆದಿದ್ದಾರೆ.

  ನಟ ಸಿದ್ಧಾರ್ಥ್ ಟ್ವಿಟರ್‌ನಲ್ಲಿ ಪೋಸ್ಟ್

  ನಟ ಸಿದ್ಧಾರ್ಥ್ ಟ್ವಿಟರ್‌ನಲ್ಲಿ ಪೋಸ್ಟ್

  ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ತಮ್ಮ ಬೇರ್ಪಡಿಕೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಇದು ಈಗ ಚರ್ಚೆಯ ವಿಷಯವಾಗಿದೆ. ಹಲವು ತಿಂಗಳುಗಳಿಂದ, ಸಮಂತಾ ಮತ್ತು ಚೈತನ್ಯ ಅವರ ವಿಚ್ಛೇದನ ಚರ್ಚೆಯ ವಿಷಯವಾಗಿದೆ. ಅವರ ಪ್ರತ್ಯೇಕತೆಯ ಘೋಷಣೆಯ ಕೆಲವು ಗಂಟೆಗಳ ನಂತರ, ನಟ ಸಿದ್ಧಾರ್ಥ್ ಟ್ವಿಟರ್‌ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ ಮತ್ತು ನೆಟಿಜನ್‌ಗಳು ಇದನ್ನು ಸಮಂತಾ ನಾಗಚೈತನ್ಯ ವಿಚ್ಛೇದನದೊಂದಿಗೆ ಲಿಂಕ್ ಮಾಡಿದ್ದಾರೆ. ತಮ್ಮ ಟ್ವೀಟ್ ನಲ್ಲಿ ಸಿದ್ಧಾರ್ಥ್ ಮೋಸಗಾರರ ಬಗ್ಗೆ ಮಾತನಾಡಿದ್ದಾರೆ.

  ಒಂದು ಕಾಲದ ಲವ್ ಬರ್ಡ್ಸ್

  ಒಂದು ಕಾಲದ ಲವ್ ಬರ್ಡ್ಸ್

  ಸಮಂತಾ-ನಾಗಚೈತನ್ಯ ವಿಚ್ಛೇದನ ಪಡೆಯುತ್ತಿರುವ ವಿಷಯ ಘೋಷಿಸುತ್ತಿದ್ದಂತೆ ಪರೋಕ್ಷವಾಗಿ ಟ್ವಿಟರ್ ಮೂಲಕ ಸಮಂತಾ ವಿರುದ್ಧ
  ಟ್ವೀಟ್ ಮಾಡಿ ಸಂಚಲನವನ್ನು ಉಂಟು ಮಾಡಿರುವ ಸಿದ್ದಾರ್ಥ್ ಒಂದು ಸಮಯದಲ್ಲಿ ಸಮಂತಾಳ ಆಪ್ತ ಸ್ನೇಹಿತ. ಇಬ್ಬರು ಪ್ರೀತಿಯಲ್ಲಿ ಮುಳುಗೆದ್ದವರೆ. ಇಬ್ಬರೂ ಜೊತೆಯಾಗಿ ಆಂಧ್ರಪ್ರದೇಶದ ಶ್ರೀಕಾಳಹಸ್ತಿಯಲ್ಲಿ ಮದುವೆಯ ಸಂಬಂಧ ಸರ್ಪದೋಷ ನಿವಾರಣ ಪೂಜೆ ಕೂಡ ಮಾಡಿದ್ದರು. ಆದರೆ ಈ ಸಂಬಂಧ ಮುಂದಕ್ಕೆ ಸಾಗಲಿಲ್ಲ.

  ಇಬ್ಬರ ನಡುವೆ ಅಂತರ ಬೆಳೆಯಿತು ಇದೇ ಸಮಯದಲ್ಲಿ. ಸಮಂತಾಳ ಜೀವನದಲ್ಲಿ ನಾಗಚೈತನ್ಯ ಎಂಟ್ರಿ ಕೊಟ್ಟ,ಸಮಂತಾ ಅಕ್ಕಿನೇನಿ ವಂಶದ ಸೊಸೆಯಾದವಳು. 4 ವರ್ಷ ಜೊತೆಯಾಗಿ ಬದುಕಿದ ಜೋಡಿ ಈಗ ಅಧಿಕೃತವಾಗಿ ದೂರವಾಗಿದೆ.

  ಸಿದ್ದಾರ್ಥ್ ಮಾಡಿದ ಟ್ವೀಟ್ ಏನು?

  ಸಿದ್ಧಾರ್ಥ್ ಮತ್ತು ಸಮಂತಾ ರುತ್ ಪ್ರಭು ಒಂದು ಕಾಲದಲ್ಲಿ
  ಜೋಡಿಹಕ್ಕಿ ಆದ್ದರಿಂದ ಜನರು ಅದನ್ನು ವಿಚ್ಛೇದನಕ್ಕೆ ಲಿಂಕ್ ಮಾಡಿದ್ದಾರೆ. ಸಿದ್ದಾರ್ಥ್ ಅವರ ಟ್ವೀಟ್,

  ಶಾಲೆಯಲ್ಲಿ ಶಿಕ್ಷಕರಿಂದ ನಾನು ಕಲಿತ ಮೊದಲ ಪಾಠಗಳಲ್ಲಿ ಒಂದು ...

  ವಂಚಕರು ಎಂದಿಗೂ ಏಳಿಗೆ ಹೊಂದಿಲ್ಲ.

  "ನಿಮ್ಮದು ಏನು?"

  ಕೆರಳಿದ ಅಭಿಮಾನಿಗಳು

  ಕೆರಳಿದ ಅಭಿಮಾನಿಗಳು

  ಸಿದ್ದಾರ್ಥ್ ಅವರ ಟ್ವಿಟ್ ನೋಡಿದ ಸಮಂತಾ ಮತ್ತು ಚೈತನ್ಯ ಅವರ ಅಭಿಮಾನಿಗಳು ಸಿದ್ದಾರ್ಥ್ ಅನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇಬ್ಬರೂ ತಮ್ಮ ಬೇರ್ಪಡಿಕೆಯನ್ನು ಘೋಷಿಸಿದ ನಂತರ ಸಿದ್ದಾರ್ಥ್ ಅನ್ನು ಇಂತಹ ಸಂದೇಹ ಉಂಟುಮಾಡುವ ಟ್ವೀಟ್ ಮಾಡಿದ್ದಕ್ಕೆ ಅಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವು ನೆಟಿಜನ್‌ಗಳು ಆತನ ಸ್ವಂತ ವ್ಯವಹಾರಗಳನ್ನು ನೋಡಿಕೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ. ಇದು ನಿಜವಾಗಿಯೂ ಸ್ಯಾಮ್ ಮತ್ತು ಚೇತು ಅವರ ವಿಚ್ಛೇದನಕ್ಕೆ ಸಂಬಂಧಿಸಿದ್ದೇ ಎಂದು ಬಹಳಷ್ಟು ಜನರು ಆಶ್ಚರ್ಯ ಪಡುತ್ತಿದ್ದಾರೆ.

  ಸಿದ್ದಾರ್ಥ್ ನಿಮಗೆ ನಾಚಿಕೆ ಆಗಬೇಕೆಂದ ನೆಟಿಜನ್‌

  ಟ್ವಿಟರ್ ಬಳಕೆದಾರರೊಬ್ಬರು, "ನಾಚಿಕೆಯಾಗಬೇಕು .. ಈ ಕ್ಷಣದಲ್ಲಿ ಇದು ನಿಜವಾಗಿಯೂ ಅಗತ್ಯವಿದೆಯೇ .. ಕನ್ನಡಿಯ ಮುಂದೆ ನಿಂತು ನೀವು ಯಾವ ಮಟ್ಟಕ್ಕೆ ಇಳಿದಿದ್ದೀರಿ ಎಂದು ನಿಮ್ಮನ್ನು ಕೇಳಿಕೊಳ್ಳಿ ..."

  ಒಟ್ಟಲ್ಲಿ ಸಮಂತಾ-ನಾಗಚೈತನ್ಯ ವಿಚ್ಛೇದನ ದಿನಕಳೆದಂತೆ ಸೋಶಿಯಲ್ ಮೀಡಿಯಾಗಳಿಗೆ ಒಳ್ಳೆ ಆಹಾರವಾಗುವತ್ತ
  ಸಾಗಿದೆ.

  English summary
  After Samantha Ruth and Naga Chaitanya announced their separation on Saturday, actor Siddharth tweeted about 'Cheaters' never prospering.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X