For Quick Alerts
  ALLOW NOTIFICATIONS  
  For Daily Alerts

  Yashoda Trailer: ಸರೋಗಸಿ ಥ್ರಿಲ್ಲರ್ 'ಯಶೋದಾ': ಬಾಡಿಗೆ ತಾಯಿಯಾದ ಸಮಂತಾ!

  |

  ಸಮಂತಾ ರುತ್‌ ಪ್ರಭು ನಟನೆಯ 'ಯಶೋದಾ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ., ಸದ್ಯ ಟ್ರೈಲರ್ ರಿಲೀಸ್ ಮಾಡಿ ಚಿತ್ರದ ಪ್ರಮೋಷನ್‌ಗೆ ಚಾಲನೆ ನೀಡಲಾಗಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಈ ಸಸ್ಪೆನ್ಸ್‌ ಥ್ರಿಲ್ಲರ್ ಸಿನಿಮಾ ತೆರೆಗೆ ಬರ್ತಿದ್ದು, 5 ಭಾಷೆಗಳಲ್ಲಿ 5 ಜನ ಸೂಪರ್ ಸ್ಟಾರ್ಸ್ 'ಯಶೋದಾ' ಟ್ರೈಲರ್ ರಿಲೀಸ್ ಮಾಡಿದ್ದಾರೆ.

  ಶ್ರೀದೇವಿ ಮೂವೀಸ್ ಬ್ಯಾನರ್‌ನಲ್ಲಿ ಶಿವಲೆಂಕ ಶಿವ ಪ್ರಸಾದ್ 'ಯಶೋದ' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ 'ಯಶೋದಾ' ಕನ್ನಡ ವರ್ಷನ್ ಟ್ರೈಲರ್ ರಿಲೀಸ್ ಮಾಡಿದ್ದಾರೆ. "ನಿಮ್ಮೊಳಗೆ ಯಾವಾಗಾದರೂ ಎರಡು ಹೃದಯದ ಬಡಿತ ಕೇಳಿಸಿದೆಯಾ, ಮಗುವನ್ನು ಗರ್ಭದಲ್ಲಿ ಹೊತ್ತ ತಾಯಿಗೆ ಅದು ಕೇಳಿಸೋದು" ಎನ್ನು ಡೈಲಾಗ್ ಮೂಲಕ ಟ್ರೈಲರ್ ಶುರುವಾಗುತ್ತದೆ. ರೋಚಕವಾಗಿ ಸಾಗುವ ಟ್ರೈಲರ್ ಗಮನ ಸೆಳೀತಿದ್ದು, ಸಿನಿಮಾ ನೋಡಬೇಕು ಎನ್ನುವ ಕುತೂಹಲ ಮೂಡುವಂತೆ ಮಾಡುತ್ತದೆ.

  ಸಮಂತಾ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ? ಫೋಟೊಗಳು ಫುಲ್ ವೈರಲ್ಸಮಂತಾ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ? ಫೋಟೊಗಳು ಫುಲ್ ವೈರಲ್

  ಸಮಂತಾ ನಿಧಾನವಾಗಿ ಪ್ರಯೋಗಾತ್ಮಕ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಸಾಲು ಸಾಲು ಮಹಿಳಾ ಪ್ರಧಾನ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. 'ಓಹ್ ಬೇಬಿ' ನಂತರ 'ಯಶೋದಾ' ಚಿತ್ರದಲ್ಲಿ ಅಂತದ್ದೇ ಪ್ರಯತ್ನ ಮಾಡಿದ್ದಾರೆ. ಮುಂದೆ ಬರಲಿರುವ 'ಶಾಕುಂತಲಂ' ಚಿತ್ರ ಕೂಡ ಇದೇ ಕಾರಣಕ್ಕೆ ಕುತೂಹಲ ಮೂಡಿಸಿದೆ.

  ಸರೋಗಸಿ ಹಗರಣದ ಕಥೆ

  ಸರೋಗಸಿ ಹಗರಣದ ಕಥೆ

  ಭಾರತದಲ್ಲಿ ಕೆಲ ವರ್ಷಗಳಿಂದ ಸರೋಗಸಿ ವಿಧಾನದಲ್ಲಿ ಮಕ್ಕಳು ಪಡೆಯುವ ವಿಚಾರ ಭಾರೀ ಸದ್ದು ಮಾಡ್ತಿದೆ. ಸಾಕಷ್ಟು ಸೆಲೆಬ್ರೆಟಿಗಳು ಇದೇ ವಿಧಾನದಲ್ಲಿ ಮುದ್ದಾದ ಮಕ್ಕಳಿಗೆ ಅಪ್ಪ, ಅಮ್ಮ ಆಗಿದ್ದಾರೆ. ಇತ್ತೀಚೆಗೆ ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿ ಬಾಡಿಗೆ ತಾಯ್ತನ ವಿಧಾನದಲ್ಲಿ ಅವಳಿ ಮಕ್ಕಳನ್ನು ಪಡೆದಿದ್ದಾರೆ. 'ಯಶೋದಾ' ಚಿತ್ರದಲ್ಲೂ ಇದೇ ಸರೋಗಸಿ ವಿಚಾರದ ಬಗ್ಗೆ ಚರ್ಚಿಸಲಾಗಿದೆ. ದಿನದಿಂದ ದಿನಕ್ಕೆ ಇದು ಹೇಗೆ ದೊಡ್ಡ ಹಗರಣವಾಗಿದೆ ಎನ್ನುವ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ.

  "ಹಿಂಸೆ ಕೊಟ್ಟ ಚೈತು.. ಅದಕ್ಕೆ ಡಿವೋರ್ಸ್": ಅತ್ತೆ ಬಳಿ ನೋವು ತೋಡಿಕೊಂಡ ಸಮಂತಾ?

  ಬಾಡಿಗೆ ತಾಯಿಯಾಗಿ ಸಮಂತಾ ನಟನೆ

  ಬಾಡಿಗೆ ತಾಯಿಯಾಗಿ ಸಮಂತಾ ನಟನೆ

  ಚಿತ್ರದಲ್ಲಿ ಬಡ ಯುವತಿಯಾಗಿರುವ 'ಯಶೋದಾ' ಹಣಕ್ಕಾಗಿ ಬೇರೆಯವರ ಮಗುವನ್ನು ಹೊತ್ತು ಹೆರಲು ಒಪ್ಪಿಕೊಳ್ಳುತ್ತಾಳೆ. ಅಂದರೆ ಸರೋಗಸಿ ಪದ್ದತಿಯಲ್ಲಿ ಮಗು ಹೆತ್ತು ಕೊಡಲು ಒಪ್ಪಿಕೊಳ್ಳುತ್ತಾಳೆ. ಈ ಹಾದಿಯಲ್ಲಿ ಆಕೆ ಏನೆಲ್ಲಾ ಸಮಸ್ಯೆಗೆ ಸಿಲುಕುತ್ತಾಳೆ, ಅದರಿಂದ ಹೊರಬರಲು ನಡೆಸುವ ಹೋರಾಟ ಎಂಥದ್ದು ಎನ್ನುವುದನ್ನು ಚಿತ್ರದಲ್ಲಿ ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ. ಸರೋಗಸಿ ರಾಕೆಟ್ ವಿರುದ್ಧ ಇನ್ನು ಭರ್ಜರಿ ಆಕ್ಷನ್ ಸೀಕ್ವೆನ್ಸ್‌ನಲ್ಲೂ ಸ್ಯಾಮ್ ಅಬ್ಬರಿಸಿದ್ದಾರೆ.

  ಕನ್ನಡ ವರ್ಷನ್‌ಗೆ ರಕ್ಷಿತ್ ಶೆಟ್ಟಿ ಬೆಂಬಲ

  ಕನ್ನಡ ವರ್ಷನ್‌ಗೆ ರಕ್ಷಿತ್ ಶೆಟ್ಟಿ ಬೆಂಬಲ

  ಹರಿ ಶಂಕರ್ ಹಾಗೂ ಹರೀಶ್ ನಾರಾಯಣ್ ಸೇರಿ 'ಯಶೋದಾ' ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಎಂ. ಸುಕುಮಾರ್ ಛಾಯಾಗ್ರಹಣ, ಮಣಿಶರ್ಮ ಸಂಗೀತ ಚಿತ್ರಕ್ಕಿದೆ. ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ಟ್ರೈಲರ್ ಲಾಂಚ್ ಮಾಡಿದ್ರೆ, ಬಾಲಿವುಡ್‌ನಲ್ಲಿ ವರುಣ್ ಧವನ್ ಶೇರ್ ಮಾಡಿದ್ದಾರೆ. ವಿಜಯ್ ದೇವರಕೊಂಡ ತೆಲುಗು ವರ್ಷನ್ ಹಾಗೂ ದುಲ್ಕರ್ ಸಲ್ಮಾನ್ ಮಲಯಾಳಂ ಟ್ರೈಲರ್ ರಿಲೀಸ್ ಮಾಡಿದ್ದಾರೆ. ಇನ್ನು ಸೂರ್ಯ ತಮಿಳು 'ಯಶೋದಾ' ಟ್ರೈಲರ್ ರಿಲೀಸ್ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ.

  'ಯಶೋದಾ' ಟ್ರೈಲರ್ ಸೂಪರ್ ಹಿಟ್

  'ಯಶೋದಾ' ಟ್ರೈಲರ್ ಸೂಪರ್ ಹಿಟ್

  ಮೊದಲ ನೋಟದಲ್ಲೇ 'ಯಶೋದಾ' ಟ್ರೈಲರ್ ಸಿನಿರಸಿಕರ ಗಮನ ಸೆಳೆದಿದೆ. ಸರೋಗಸಿ ಕಾನ್ಸೆಪ್ಟ್ ಚೆನ್ನಾಗಿದೆ. ಸಿನಿಮಾ ಡೈಲಾಗ್ಸ್ ಕುತೂಹಲ ಕೆರಳಿಸುವಂತಿದೆ. ಉನ್ನಿ ಮುಕುಂದನ್, ವರಲಕ್ಷ್ಮಿ ಶರತ್‌ಕುಮಾರ್, ರಾವು ರಮೇಶ್, ಮುರಳಿ ಶರ್ಮಾ, ಸಂಪತ್ ರಾಜ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸಿನಿಮಾ ಮೇಕಿಂಗ್ ಕೂಡ ಸೊಗಸಾಗಿದೆ. ನವೆಂಬರ್ 11ಕ್ಕೆ 'ಯಶೋದಾ' ಸಿನಿಮಾ ತೆರೆಗೆ ಬರಲಿದೆ.

  English summary
  Samantha Ruth Prabhu Starrer Yashoda Trailer Released. The story of ‘Yashoda’ seems to be centered on the surrogacy racket. In the trailer, Samantha is seen in the role of a pregnant woman. Know More.
  Thursday, October 27, 2022, 20:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X