For Quick Alerts
  ALLOW NOTIFICATIONS  
  For Daily Alerts

  ಪತಿಯ ಹುಟ್ಟುಹಬ್ಬಕ್ಕೆ ಸಮಂತಾ ಹಾಕಿದ ಪೋಸ್ಟ್ ವೈರಲ್

  |

  ಟಾಲಿವುಡ್ ಸ್ಟಾರ್ ನಟ ನಾಗಚೈತನ್ಯ 33ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪತಿಯ ಹುಟ್ಟುಹಬ್ಬಕ್ಕೆ ಪತ್ನಿ ಸಮಂತಾ ಶುಭಕೋರಿದ್ದು, ಈ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  ''ಹುಟ್ಟುಹಬ್ಬದ ಶುಭಾಶಯಗಳು. ನೀ ಸಂತೋಷಕ್ಕಾಗಿ ನಾನು ಸದಾ ಪ್ರಾರ್ಥಿಸುತ್ತೇನೆ. ನಿನ್ನ ನೋಡುತ್ತಿದ್ದರೆ ಹೆಮ್ಮೆ ಎನಿಸುತ್ತದೆ. ದಿನ ದಿನಕ್ಕೆ ನೀನು ಬಹಳ ಎತ್ತರಕ್ಕೆ ಹೋಗ್ತಿದ್ದೀಯಾ. ನಿನಗೆ ನೀನೇ ಬೆಸ್ಟ್ ಎನಿಸಿಕೊಳ್ಳುತ್ತಿದ್ದಿ. ನಮ್ಮಿಬ್ಬರ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ ಎಂದು ನಾನು ನಂಬುತ್ತಿದ್ದೇನೆ. ಐ ಲವ್ ಯೂ ಡಾರ್ಲಿಂಗ್'' ಎಂದು ಸಮಂತಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ.

  'ಯಾವಾಗ ಮಗುವಿಗೆ ಜನ್ಮ ನೀಡ್ತೀರಿ?' ಈ ಸಲ ಸಮಂತಾ ಡೇಟ್ ಕೊಟ್ಟೆಬಿಟ್ರು!'ಯಾವಾಗ ಮಗುವಿಗೆ ಜನ್ಮ ನೀಡ್ತೀರಿ?' ಈ ಸಲ ಸಮಂತಾ ಡೇಟ್ ಕೊಟ್ಟೆಬಿಟ್ರು!

  ಸಮಂತಾ ಹಾಕಿದ ಈ ಪೋಸ್ಟ್ ಗೆ ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಪ್ರತಿಕ್ರಿಯಿಸಿದ್ದಾರೆ. ಹನ್ಸಿಕಾ, ರಕುಲ್, ಅಖಿಲ್, ನಂದಿನಿ, ಸ್ನೇಹಾ ದತ್ ಸೇರಿದಂತೆ ಹಲವರು ವಿಶ್ ಮಾಡಿದ್ದು, ಲೈಕ್ ಮಾಡಿದ್ದಾರೆ.

  ಅಕ್ಕಿನೇನಿ ಕುಟುಂಬದ ಅವಾರ್ಡ್ ಫಂಕ್ಷನ್ ಗೆ ಸಮಂತಾ ಚಕ್ಕರ್: ಕಾರಣ ಬಯಲು.!ಅಕ್ಕಿನೇನಿ ಕುಟುಂಬದ ಅವಾರ್ಡ್ ಫಂಕ್ಷನ್ ಗೆ ಸಮಂತಾ ಚಕ್ಕರ್: ಕಾರಣ ಬಯಲು.!

  ಸಮಂತಾ ಮತ್ತು ನಾಗಚೈತನ್ಯ ಜೋಡಿ ಟಾಲಿವುಡ್ ಇಂಡಸ್ಟ್ರಿಯ 'ಬ್ಯೂಟಿಫುಲ್ ಕಪಲ್' ಎಂದೇ ಕರೆಸಿಕೊಳ್ಳುತ್ತಾರೆ. ಗೌತಮ್ ಮೆನನ್ ನಿರ್ದೇಶನದ ಹೇ ಮಾಯೇ ಚೇಸವೆ ಸಿನಿಮಾದಲ್ಲಿ ಮೊದಲ ಸಲ ನಟಿಸಿದ ಸಮಂತಾ ಮತ್ತು ನಾಗ್, ಅಲ್ಲಿಂದಲೇ ಇವರಿಬ್ಬರ ಸ್ನೇಹ ಹುಟ್ಟಿಕೊಂಡಿತ್ತು.

  2017ರಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಗೋವಾದಲ್ಲಿ ಸ್ಯಾಮ್ ಮತ್ತು ನಾಗ್ ವಿವಾಹವಾಗಿದ್ದರು.

  English summary
  Telugu actress Samantha akkineni has wish to naga chaitanya birthday. samantha intsgram post went viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X