For Quick Alerts
  ALLOW NOTIFICATIONS  
  For Daily Alerts

  ಅಸೆಂಬ್ಲಿ ಮುಂದೆ ನಗ್ನವಾಗಿ ನಿಂತ ನಾಯಕ ನಟ ಸಂಪೂರ್ಣೇಶ್‌ ಬಾಬು!

  |

  ತೆಲುಗಿನಲ್ಲಿ ಚಿರಂಜೀವಿ, ಬಾಲಕೃಷ್ಣ, ಪ್ರಭಾಸ್‌, ಪವನ್ ಕಲ್ಯಾಣ್ ಇನ್ನಿತರೆ ಸ್ಟಾರ್ ನಟರಿಗೆ ಇರುವಂತೆಯೇ ಸಂಪೂರ್ಣೇಶ್‌ ಬಾಬುಗೆ ಸಹ ತಮ್ಮದೇ ಆದ ಅಭಿಮಾನಿ ಬಳಗ ಇದೆ.

  ಮೇಲಿನ ಎಲ್ಲ ಸ್ಟಾರ್ ನಟರಿಗಿಂತಲೂ ಸಾಕಷ್ಟು ಭಿನ್ನ ಮತ್ತು ಯಶಸ್ವಿ ಸಹ ಬರ್ನಿಂಗ್ ಸ್ಟಾರ್ ಸಂಪೂರ್ಣೇಶ್ ಬಾಬು.

  ಈಗಾಗಲೇ ಬಿಡುಗಡೆ ಆಗಿರುವ ಸಿನಿಮಾಗಳ 'ಪ್ಯಾರೆಡಿ' ಸಿನಿಮಾ ಮಾಡುವ, ಸಾಮಾಜಿಕ, ರಾಜಕೀಯ ಸ್ಥಿತಿಯವನ್ನು ವ್ಯಂಗ್ಯ ಮಾಡುವ ಸಿನಿಮಾಗಳನ್ನಷ್ಟೆ ಸಂಪೂರ್ಣೇಶ್ ಬಾಬು ಮಾಡುತ್ತಾರೆ. ಇದೇ ಕಾರಣಕ್ಕೆ ಸಂಪೂರ್ಣೇಶ್ ಬಾಬುಗೆ ಸಾಕಷ್ಟು ಮಂದಿ ಅಭಿಮಾನಿಗಳಿದ್ದಾರೆ.

  ತಮ್ಮ ಸಿನಿಮಾಗಳಲ್ಲಿ ಇತರರನ್ನು ಗೇಲಿ ಮಾಡುವ ಜೊತೆಗೆ ತಮ್ಮನ್ನು ತಾವೂ ಗೇಲಿ ಮಾಡಿಕೊಳ್ಳುತ್ತಾರೆ. ಮುಖ್ಯವಾಗಿ ಹಿಟ್ ಸಿನಿಮಾಗಳ ಅತಿರಂಜಿತ ವಿಷಯಗಳನ್ನು ಚೆನ್ನಾಗಿ ಹೀಗಳೆಯುತ್ತಾರೆ.

  ಇದೀಗ 'ಕಾಲಿಫ್ಲವರ್' ಹೆಸರಿನ ಸಿನಿಮಾವನ್ನು ಘೋಷಿಸಿರುವ ಸಂಪೂರ್ಣೇಶ್ ಬಾಬು ಸಿನಿಮಾದ ಚಿತ್ರೀಕರಣವನ್ನು ಬಹುತೇಕ ಮುಗಿಸಿದ್ದಾರೆ. ಈ ಸಿನಿಮಾದ ಪೋಸ್ಟರ್‌ ಅನ್ನು ಇಂದಷ್ಟೆ ಬಿಡುಗಡೆ ಮಾಡಿದ್ದಾರೆ. ಈ ಪೋಸ್ಟರ್‌ ಭಾರಿ ವೈರಲ್ ಆಗುತ್ತಿದೆ. ಕಾರಣ ಪೋಸ್ಟರ್‌ನಲ್ಲಿ ನಗ್ನರಾಗಿ ನಿಂತಿದ್ದಾರೆ ಸಂಪೂರ್ಣೇಶ್‌ ಬಾಬು.

  ಚೆನ್ನಾಗಿ ಲಾಠಿ ಏಟು ತಿಂದಿರುವ ಸಂಪೂರ್ಣೇಶ್ ಬಾಬು ಅಸೆಂಬ್ಲಿ ಮುಂದೆ ನಗ್ನರಾಗಿ ನಿಂತಿದ್ದಾರೆ ಮಾನ ಮುಚ್ಚಿಕೊಳ್ಳಲು ಆ ಭಾಗಕ್ಕೆ ಕಾಲಿಫ್ಲವರ್ (ಹೂಕೋಸನ್ನು) ಅಡ್ಡ ಹಿಡಿದುಕೊಂಡಿದ್ದಾರೆ. ಹೀಗೆ ನಿಂತಿರುವ ಅವರ ವಿಡಿಯೋಗಳನ್ನು ತೆಗೆಯಲು ಮಾಧ್ಯಮದವರು ಮುಗಿಬಿದ್ದಿದ್ದಾರೆ. ಇದು ಪೋಸ್ಟರ್‌ನಲ್ಲಿ ಕಾಣುವ ಚಿತ್ರಣ. ಈ ಪೋಸ್ಟರ್ ಬಹಳ ವೈರಲ್ ಆಗಿದೆ. ಸಿನಿಮಾಕ್ಕೆ 'ಕಾಲಿಫ್ಲವರ್' ಎಂದು ಹೆಸರಿಟ್ಟಿರುವ ಸಂಪೂರ್ಣೇಶ್ ಬಾಬು, 'ಶೀಲೊ ರಕ್ಷತಿ ರಕ್ಷಿತಃ' ಎಂಬ ಟ್ಯಾಗ್‌ಲೈನ್ ಸಹ ನೀಡಿದ್ದಾರೆ.

  Kichcha Sudeep Biography | ಕಿಚ್ಚ ಸುದೀಪ್ ಜೀವನಚರಿತ್ರೆ | Sudeep Age, Movies, Family, Net Worth, Awards

  ಪೋಸ್ಟರ್ ನೋಡಿದವರು ಸಂಪೂರ್ಣೇಶ್ ಬಾಬು ಈ ಬಾರಿ ರಾಜಕೀಯದ ವಿಷಯವನ್ನು ಸಿನಿಮಾಕ್ಕೆ ಆರಿಸಿಕೊಂಡಿರಬೇಕು ಎಂದು ಚರ್ಚೆ ಮಾಡಲಾಗುತ್ತಿದೆ.

  English summary
  Sampurnesh Babu's new movie cauliflower's poster released. New poster getting viral for its uniqueness.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X