Don't Miss!
- Sports
IPL 2022: ಮುಕ್ತಾಯವಾದ ನಂತರ ತಂಡಗಳು ಮತ್ತು ಆಟಗಾರರಿಗೆ ಸಿಗಲಿರುವ ಪ್ರಶಸ್ತಿ ಮತ್ತು ಹಣವೆಷ್ಟು?
- News
ಪಠ್ಯ ಪುಸ್ತಕಗಳಲ್ಲಿ ರಾಜಕೀಯ ಸೇರಿಸಬೇಡಿ: ಸಲೀಂ ಅಹ್ಮದ್
- Finance
Masked ಆಧಾರ್ ಕಾರ್ಡ್ ಎಂದರೇನು? Download ಮಾಡುವುದು ಹೇಗೆ?
- Automobiles
ಭಾರತದಲ್ಲಿ ಸ್ಥಗಿತಗೊಂಡ ಜನಪ್ರಿಯ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು
- Technology
ಪ್ರಸ್ತುತ ನೀವು ಖರೀದಿಸಬಹುದಾದ ಮಧ್ಯಮ ಶ್ರೇಣಿಯ ಅತ್ಯುತ್ತಮ ಸ್ಮಾರ್ಟ್ಫೋನ್ಗಳು!
- Lifestyle
ಮೇ 29 ರಿಂದ ಜೂನ್ 4ರ ವಾರ ಭವಿಷ್ಯ: ಮಿಥುನ, ಸಿಂಹ, ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಜಾಗರೂಕರಾಗಿರಿ
- Education
BCWD Dolu And Nadaswara Music Training : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಂಕ್ರಾಂತಿ ವಿನ್ನರ್ ಆಗಿ ಹೊರಹೊಮ್ಮಿದ ಬಂಗಾರರಾಜು
ಕಳೆದ ವರ್ಷ ಟಾಲಿವುಡ್ ಇಡೀ ದೇಶದಲ್ಲಿ ಆದಾಯ ಗಳಿಕೆಯಲ್ಲಿ ಅಗ್ರಸ್ಥಾನವನ್ನು ಪಡೆದಿತ್ತು, ಈ ವರ್ಷದ ಆರಂಭದಲ್ಲಿ ಅದರ ನಾಗಾಲೋಟ ಮುಂದುವರೆದಿದೆ. ಕೊರೊನಾದ ಕಾರಣದಿಂದ ಭಾರತದ ಅತ್ಯಂತ ಬಹುತೇಕ ಚಿತ್ರಮಂದಿರಗಳು ಮುಚ್ಚಿದೆ ಮತ್ತೆ ಕೆಲವು ಪ್ರಾಂತ್ಯಗಳಲ್ಲಿ ಶೇಕಡ 50ರಷ್ಟು ಸೀಟುಗಳಿಗೆ ಅವಕಾಶ ನೀಡಲಾಗಿದೆ. ಸಂಕ್ರಾಂತಿ ಭಾರತೀಯರಿಗೆ ದೊಡ್ಡ ಹಬ್ಬ ಹೀಗಾಗಿ ಚಿತ್ರಮಂದಿರಗಳಲ್ಲಿ ದೊಡ್ಡ ಸ್ಟಾರ್‌ಗಳ ಚಿತ್ರಗಳ ಬಿಡುಗಡೆಗೆ ನಿರೀಕ್ಷೆ ಮಾಡಲಾಗಿತ್ತು. ಜನವರಿ ಏಳರಂದು 'ಆರ್ಆರ್‌ಆರ್ ' ಬಿಡುಗಡೆಯಾಗಬೇಕಿತ್ತು. ಜನವರಿ 14ರಂದು 'ರಾಧೇಶ್ಯಾಮ್' ಹಾಗೂ ತಮಿಳಿನ 'ವಲಿಮೈ'ಬಿಡುಗಡೆಯಾಗಬೇಕಾಗಿತ್ತು ಆದರೆ ಕೊರೊನಾದ ಕಾರಣದಿಂದ ಈ ಎಲ್ಲಾ ಚಿತ್ರಗಳು ಅನಿರ್ದಿಷ್ಟ ಕಾಲಕ್ಕೆ ಮುಂದೂಡಲಾಗಿದೆ. ಇದರ ಲಾಭವನ್ನು ಪಡೆಯಲು ಸಣ್ಣ ಚಿತ್ರಗಳು ಪೈಪೋಟಿಗೆ ಬಿದ್ದು ಸಂಕ್ರಾಂತಿ 14ರಂದು ಬಿಡುಗಡೆಗೊಳಿಸಿದ್ದಾರೆ. ತಮಿಳಿನಲ್ಲಿ ಆರು ಚಿತ್ರಗಳು ಮತ್ತು ತೆಲುಗಿನಲ್ಲಿ ಮೂರು ಚಿತ್ರಗಳು ಬಿಡುಗಡೆಯಾಗಿದೆ. ಇವುಗಳ ಪೈಕಿ ಅಕ್ಕಿನೇನಿ ನಾಗಾರ್ಜುನ ಮತ್ತು ನಾಗಚೈತನ್ಯ ಅಭಿನಯದ ಬಂಗಾರು ರಾಜು ಮಾತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ವರ್ಷದ ಮೊದಲ ಹಿಟ್ ಸಿನಿಮಾ
ಬಂಗಾರರಾಜು 14ನೇ ಜನವರಿ 2022 ರಂದು ಅಂತಹ ದೊಡ್ಡ ಪ್ರಚಾರವಿಲ್ಲದೆ ಬಿಡುಗಡೆಯಾಯಿತು. ಹಲವು ಪ್ರದೇಶಗಳಲ್ಲಿ ಕಳಪೆ ಮುಂಗಡ ಬುಕ್ಕಿಂಗ್‌ಗಳ ಹೊರತಾಗಿಯೂ, ಅಂದಾಜಿನ ಪ್ರಕಾರ ಚಿತ್ರವು ತನ್ನ ಮೊದಲ ದಿನದಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಬಂಗಾರರಾಜು ವರ್ಷದ ಮೊದಲ ಹಿಟ್ ಚಿತ್ರ ಅಂತ ಅನಿಸಿಕೊಳ್ಳಲು ಯಶಸ್ವಿಯಾಗಿದೆ. ಬಂಗಾರರಾಜು 2022 ರ ಸಂಕ್ರಾಂತಿಗೆ ಅಸಾಧಾರಣ ಕಲೆಕ್ಷನ್‌ಗಳಿಗೆ ತೆರೆದುಕೊಂಡ ಏಕೈಕ ಭಾರತೀಯ ಚಲನಚಿತ್ರವಾಗಿದೆ. ಇತ್ತೀಚಿನ COVID-19 ಪ್ರಕರಣಗಳ ಹೆಚ್ಚಳದಿಂದಾಗಿ, RRR ಮತ್ತು ತೆಲುಗಿನ ರಾಧೆ ಶ್ಯಾಮ್ ಮತ್ತು ತಮಿಳಿನ ವಲಿಮೈಯಂತಹ ಅನೇಕ ದೊಡ್ಡ ಚಿತ್ರಗಳನ್ನು ಮುಂದೂಡಲಾಗಿದೆ. ಇದರಿಂದಾಗಿ ಅನೇಕ ಮಧ್ಯಮ ಮತ್ತು ಕಡಿಮೆ-ಬಜೆಟ್ ಚಲನಚಿತ್ರಗಳು ಸಂಕ್ರಾಂತಿ 2022 ರೇಸ್‌ಗೆ ಪ್ರವೇಶಿಸಿದವು.
ತೆಲುಗು ಚಿತ್ರರಂಗದಿಂದ ಈ ಸಂಕ್ರಾಂತಿಗೆ ಮೂರು ಚಿತ್ರಗಳು ಬಿಡುಗಡೆಯಾಗಿವೆ, ಬಂಗಾರರಾಜುಗಿಂತ ಹೆಚ್ಚು ಪ್ರಚಾರ ಪಡೆದರೂ ರೌಡಿ ಬಾಯ್ಸ್ ಕಳಪೆ ಕಲೆಕ್ಷನ್‌ಗೆ ಮೊದಲ ದಿನ ಕಂಡಿದೆ. ಮೆಗಾ ಹೀರೋ ಕಲ್ಯಾಣ್ ದೇವ್, ಕನ್ನಡದ ರಚಿತಾ ರಾಮ್ ಅಭಿನಯದ 'ಸೂಪರ್ ಮಚ್ಚಿ' ಚಿತ್ರ ಇನ್ನಿಲ್ಲದಂತೆ ನೆಲಕಚ್ಚಿದೆ

ತಮಿಳು- ಮಲಯಾಳಂ ಚಿತ್ರಗಳು ನೆಲಕಚ್ಚಿದೆ
ಸಂಕ್ರಾಂತಿ ಸಮಯದಲ್ಲಿ ಬಿಡುಗಡೆಯಾಗಿರುವ ಇತರ ಭಾಷಾ ಚಿತ್ರಗಳಿಗೆ ಬಂದರೆ ಅಲ್ಲೂ ಕೂಡ ಎಲ್ಲಾ ಚಿತ್ರಗಳು ಮೊದಲ ದಿನ ಭಾರೀ ನಿರಾಶೆಯನ್ನೇ ಮೂಡಿಸಿವೆ. ತಮಿಳು ಚಿತ್ರರಂಗಕ್ಕೆ ಬರುವುದಾದರೆ, ಪ್ರಸ್ತುತ 6 ಚಿತ್ರಗಳು ಚಿತ್ರಮಂದಿರಗಳಲ್ಲಿವೆ. ಯಾವ ಚಿತ್ರವೂ ಹೇಳಿಕೊಳ್ಳುವಂತಹ ಗಳಿಕೆಯನ್ನು ಪಡೆದಿಲ್ಲ. ಇದೇ ಮಾದರಿಯು ಮಲಯಾಳಂ ಮತ್ತು ಇತರ ಭಾಷೆಗಳಲ್ಲಿಯೂ ಗೋಚರಿಸುತ್ತದೆ.

ಬಂಗಾರ ರಾಜು ಮೊದಲ ದಿನದ ಗಳಿಕೆ 8 ಕೋಟಿ
ಈ ಸಂಕ್ರಾಂತಿಯಂದು ಬಿಡುಗಡೆಗೊಂಡಿರುವ ಎಲ್ಲಾ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಹೆಣಗಾಡುತ್ತಿವೆ, ಆದರೆ ಯಾವುದೇ ದೊಡ್ಡ ನಿರೀಕ್ಷೆಗಳಿಲ್ಲದೆ ಬಿಡುಗಡೆಯಾಗಿರುವ ಅಕ್ಕಿನೇನಿ ನಾಗಾರ್ಜುನ ಮತ್ತು ನಾಗಚೈತನ್ಯ ಅಭಿನಯದ ಬಂಗಾರು ರಾಜು ಅದ್ಭುತ ಆರಂಭವನ್ನು ಹೊಂದಿದ್ದಾರೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಂದಾಜು 8 ಕೋಟಿ ಪಾಲನ್ನು ಸಂಗ್ರಹಿಸಿದೆ ಮತ್ತು ಮುಂದಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಸೂಚನೆಗಳನ್ನು ನೀಡಿದೆ. ಹೀಗಾಗಿ ಭಾರತ ಸಿನಿಮಾರಂಗದ 2022ರ ಮೊದಲ ಹಿಟ್ ಚಿತ್ರ ಎಂಬ ಹೆಗ್ಗಳಿಕೆ ತೆಲುಗಿನ ಬಂಗಾರರಾಜು ಪಾಲಾಗಿದೆ. 2016 ರಲ್ಲಿ ಬಿಡುಗಡೆಯಾದ 'ಸೋಗ್ಗಾಡೆ ಚಿನ್ನಿ ನಾಯನ' ಚಿತ್ರಕ್ಕೆ ಸೀಕ್ವೆಲ್ ಈ ಬಂಗಾರರಾಜು ಮೊದಲ ದಿನ 8 ಕೋಟಿ ಶೇರ್ ಮತ್ತು 12ಕೋಟಿ ಗ್ರಾ ಸ್ ಕಲೆಕ್ಟ್ ಮಾಡಿದೆ. ಚಿತ್ರವು ತನ್ನ ಎರಡನೇ ದಿನ ಅಂದರೆ ನಿನ್ನೆ ಶನಿವಾರ ಕೂಡ ಸುಮಾರು 8 ಕೋಟಿ ಗಳಿಕೆ ಕಂಡಿದೆ. ಭಾರತದಲ್ಲಿ ಓಮಿಕ್ರಾನ್‌ನ ಏರಿಕೆಯ ಮಧ್ಯ ಕೂಡ ಚಿತ್ರವೊಂದಕ್ಕೆ ಜನ ದೊಡ್ಡಮಟ್ಟದಲ್ಲಿ ಮುಗಿದು ಬಿದ್ದಿರುವುದು ಜನ ಈಗಲೂ ಸಿನಿಮಾಗಳನ್ನು ಚಿತ್ರಮಂದಿರದಲ್ಲೇ ನೋಡಲು ಇಚ್ಛಿಸುತ್ತಾರೆ ಎಂಬುದಕ್ಕೆ ನಿದರ್ಶನವಾಗಿದೆ.

ಬಂಗಾರು ರಾಜು ಫ್ಯಾಮಿಲಿ ಎಂಟರ್ಟೈನ್ಮೆಂಟ್
ಸಂಕ್ರಾಂತಿ ಹಬ್ಬವೆಂದರೆ ಅದೊಂದು ಸಡಗರ. ಆಂಧ್ರ ಮತ್ತು ತಮಿಳುನಾಡಿನಲ್ಲಿ ಅಳಿಯಂದರು ತಮ್ಮ ಕುಟುಂಬ ಸಮೇತರಾಗಿ ಮಾವನ ಮನೆಗೆ ಹೋಗುತ್ತಾರೆ. ಮಗಳು ಅಳಿಯ ಮೊಮ್ಮಕ್ಕಳ ಆಗಮನದಿಂದ ಪರಿವಾರದಲ್ಲಿ ಸಂತಸ ನೆಲೆ ಮಾಡುತ್ತದೆ. ಹೀಗಾಗಿ ಹಬ್ಬದ ಜೊತೆಗೊಂದು ಸಿನಿಮಾ ನೋಡುವುದು ಕೂಡ ಇಲ್ಲೆಲ್ಲ ಹೆಚ್ಚುಕಡಿಮೆ ಕಡ್ಡಾಯವಾಗಿದೆ. ಹಬ್ಬದ ಸಮಯದಲ್ಲಿ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರಗಳದ್ದೇ ಹವಾ. ಹೀಗಾಗಿಯೇ ಬಿಡುಗಡೆಯಾಗಿರುವ ಎಲ್ಲಾ ಚಿತ್ರಗಳ ಪೈಕಿ ಬಂಗಾರು ರಾಜು ಮಾತ್ರ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಆಗಿತ್ತು, ಜನ ಕೂಡ ಇದೇ ಕಾರಣದಿಂದಲೇ ಚಿತ್ರಮಂದಿರಗಳ ಕಡೆಗೆ ಮುಖ ಮಾಡಿದ್ದಾರೆ. ಬಂಗಾರರಾಜು ಈ ಸಂಕ್ರಾಂತಿಗೆ ಬಿಡುಗಡೆಯಾಗುತ್ತಿರುವ ಏಕೈಕ ದೊಡ್ಡ ಚಿತ್ರ. ನಾಗಾರ್ಜುನ, ನಾಗ ಚೈತನ್ಯ, ಕೃತಿ ಶೆಟ್ಟಿ ಮತ್ತು ರಮ್ಯಾ ಕೃಷ್ಣ ಒಳಗೊಂಡ ಟ್ರೇಲರ್ ಪೂರ್ಣ ಪ್ರಮಾಣದ ಫ್ಯಾಮಿಲಿ ಎಂಟರ್ಟೈನರ್ ಅಂತ ಮೊದಲೇ ಜನಕ್ಕೆ ಮನವರಿಕೆ ಮಾಡಿಕೊಟ್ಟಿದ್ದು ಚಿತ್ರಕ್ಕೆ ಈಗ ಅದು ಪ್ಲಸ್ ಪಾಯಿಂಟ್ ಆಗಿದೆ.