For Quick Alerts
  ALLOW NOTIFICATIONS  
  For Daily Alerts

  ಹೈದರಾಬಾದ್ ನಲ್ಲಿ ಕಣ್ಣೀರು ಹಾಕಿದ ಶಾನ್ವಿ ಶ್ರೀವಸ್ತವ್

  |
  ಆಂಧ್ರ ನೆಲದಲ್ಲಿ ಕನ್ನಡಿಗರ ಬಗ್ಗೆ ಶಾನ್ವಿ ಹೇಳಿದ್ದೇನು ಗೊತ್ತಾ..? | ASN | RAKSHITH SHETTY | SHANVI

  ''ನನಗೆ ಅವಕಾಶಗಳೆ ಸಿಗಲಿಲ್ಲ. ಕೆಲಸವೇ ಇರಲಿಲ್ಲ. ಆಗ ನಾನು ಹೈದರಾಬಾದ್ ಗೆ ಬರುವುದನ್ನೆ ನಿಲ್ಲಿಸಿದ್ದೆ. ನನ್ನ ಬಗ್ಗೆ ಆತ್ಮವಿಶ್ವಾಸವೇ ಇಲ್ಲದಂತೆ ಆಗಿತ್ತು.'' ಎಂದು ನಟಿ ಶಾನ್ವಿ ಶ್ರೀವಸ್ತವ್ ಹೇಳಿದ್ದಾರೆ.

  'ಅವನೇ ಶ್ರೀಮನ್ನಾರಾಯಣ' ಸಿನಿಮಾದ ಪ್ರಚಾರ ಕಾರ್ಯಕ್ರಮ ನಡೆಯುತ್ತಿದೆ. ಸದ್ಯ ಹೈದರಾಬಾದ್ ನಲ್ಲಿ ಸಿನಿಮಾದ ಪ್ರಮೋಷನ್ ಕಾರ್ಯಕ್ರಮ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾನ್ವಿ ಶ್ರೀವಸ್ತವ್ ಕೂಡ ಭಾಗಿಯಾಗಿದ್ದರು.

  ರಕ್ಷಿತ್-ಶಾನ್ವಿ ನಡುವೆ ಏನೋ ನಡೀತಾ ಇದೆಯಂತೆ, ನಿಜಾನಾ..?ರಕ್ಷಿತ್-ಶಾನ್ವಿ ನಡುವೆ ಏನೋ ನಡೀತಾ ಇದೆಯಂತೆ, ನಿಜಾನಾ..?

  'ಅವನೇ ಶ್ರೀಮನ್ನಾರಾಯಣ' ತಂಡಕ್ಕೆ ತೆಲುಗು ಇಂಡಸ್ಟ್ರಿ ಹೊಸತು. ಆದರೆ, ಶಾನ್ವಿ ಶ್ರೀವಸ್ತವ್ ತಮ್ಮ ಕೆರಿಯರ್ ಶುರು ಮಾಡಿದ್ದೇ ಟಾಲಿವುಡ್ ನಲ್ಲಿ. 2012ರಲ್ಲಿ ಬಂದ 'ಲವ್ಲಿ' ಶಾನ್ವಿ ಮೊದಲ ಸಿನಿಮಾ. ಆನಂತರ ಮತ್ತೆರಡು ತೆಲುಗು ಸಿನಿಮಾ ಮಾಡಿದರು. ಆದರೆ, ಯಾವ ಸಿನಿಮಾವೂ ದೊಡ್ಡ ಹಿಟ್ ಆಗಲಿಲ್ಲ. ಇದರಿಂದ ಶಾನ್ವಿಗೆ ಅವಕಾಶಗಳ ಕೊರತೆ ಉಂಟಾಯಿತು.

  ಅವಕಾಶಗಳ ಕೊರತೆಯಿಂದ ಶಾನ್ವಿ ಬೇರಸಗೊಂಡಿದ್ದರು. ತಮ್ಮ ಮೇಲಿನ ಆತ್ಮವಿಶ್ವಾಸ ಕಳೆದುಕೊಂಡಿದ್ದರು. ಈ ಘಟನೆಗಳ ಬಗ್ಗೆ ಮಾತನಾಡುತ್ತಾ ಭಾವುಕವಾದರು.

  'ಹೈದರಾಬಾದ್'ಗೆ ಬರುವುದನ್ನೇ ಬಿಟ್ಟಿದೆ

  'ಹೈದರಾಬಾದ್'ಗೆ ಬರುವುದನ್ನೇ ಬಿಟ್ಟಿದೆ

  'ರೌಡಿ' ಸಿನಿಮಾದ ನಂತರ ಶಾನ್ವಿಗೆ ಒಂದುವರೆ ವರ್ಷ ಯಾವ ಸಿನಿಮಾದ ಅವಕಾಗಳು ಸಿಗಲಿಲ್ಲವಂತೆ. ಕೆಲಸವೇ ಇಲ್ಲದ ಹಾಗೆ ಆಗಿ ಹೋಗಿತ್ತಂತೆ. ಆಗ 'ಹೈದರಾಬಾದ್'ಗೆ ಹೊಗುವುದನ್ನೆ ಅವರು ಬಿಟ್ಟರು. ''ನನ್ನಲ್ಲಿ ಏನಾದರೂ ತಪ್ಪಾಗಿದ್ಯಾ. ನನಗೆ ಏನಾದರೂ ಕೊರತೆ ಇರಬಹುದು. ನಾನು ಚೆನ್ನಾಗಿ ನಟನೆ ಮಾಡಲು ಆಗುವುದಿಲ್ಲ. ನಾನು ಚೆನ್ನಾಗಿಲ್ಲ.'' ಹೀಗೆ ಯೋಚಿಸಲು ಶುರು ಮಾಡಿದರು.

  ಪ್ರತಿ ದಿನ ಕಣ್ಣೀರು ಹಾಕುತ್ತಿದ್ದರು

  ಪ್ರತಿ ದಿನ ಕಣ್ಣೀರು ಹಾಕುತ್ತಿದ್ದರು

  ಶಾನ್ವಿ ತಮ್ಮ ಮೇಲಿನ ಆತ್ಮವಿಶ್ವಾಸ ಕಳೆದುಕೊಂಡರು. ತಮ್ಮ ಮೇಲೆ ತಾವೇ ಅನುಮಾನ ಪಟ್ಟರು. ಪ್ರತಿ ದಿನ ರಾತ್ರಿ ಇದನ್ನೆ ನೆನಪು ಮಾಡಿಕೊಂಡು ಅಳುತ್ತಿದ್ದರು. ಆದರೆ, ಇದೀಗ ಮತ್ತೆ ಅವರು ತೆಲುಗು ಇಂಡಸ್ಟ್ರಿಗೆ ಬಂದಿದ್ದಾರೆ. ಹೀಗಾಗಿ ತುಂಬ ಖುಷಿ ಆಗುತ್ತಿದೆ ಎಂದು ದುಃಖದ ನಂತರದ ಸಂತಸವನ್ನು ಶಾನ್ವಿ ಹಂಚಿಕೊಂಡಿದ್ದಾರೆ.

  ವಾರಣಾಸಿಯಿಂದ ಬಂದು, ಕನ್ನಡ ಕಲಿತು, ಡಬ್ ಮಾಡಿದ ಶಾನ್ವಿವಾರಣಾಸಿಯಿಂದ ಬಂದು, ಕನ್ನಡ ಕಲಿತು, ಡಬ್ ಮಾಡಿದ ಶಾನ್ವಿ

  ನನ್ನನ್ನು ರಿಜೆಕ್ಟ್ ಮಾಡಿದ್ದರು

  ನನ್ನನ್ನು ರಿಜೆಕ್ಟ್ ಮಾಡಿದ್ದರು

  ''ಕೆಲವು ಸಿನಿಮಾಗಳನ್ನು ನಾನು ಒಪ್ಪಿಕೊಳ್ಳಲಿಲ್ಲ. ಕೆಲವರು ನನ್ನನ್ನು ರಿಜೆಕ್ಟ್ ಮಾಡಿದರು. ಹೀಗೆ ಏನೇನೋ ಆಯ್ತು. ಆದರೆ, ಇಷ್ಟು ದಿನ ನನಗೆ ಏಕೆ ಅವಕಾಶಗಳು ಸಿಗಲಿಲ್ಲ ಎನ್ನುವುದು ಗೊತ್ತಾಗಿದೆ. ಎಲ್ಲದರ ಹಿಂದೆ ಒಂದು ಒಳ್ಳೆಯದು ಇರುತ್ತದೆ. ಇದೇ ಆ ಒಳ್ಳೆಯದು ಅವನೇ ಶ್ರೀಮನ್ನಾರಾಯಣ. ಇಂಡಸ್ಟ್ರಿ ಹಾಗೂ ಜನರಿಗಿಂತ ಇಲ್ಲಿನ ಮೀಡಿಯಾಗಳು ನನಗೆ ಎಂದಿಗೂ ಪ್ರೋತ್ಸಾಹ ನೀಡಿವೆ'' ಎಂದು ಧನ್ಯವಾದ ತಿಳಿಸಿದ್ದಾರೆ.

  ಭಾವುಕವಾದ ಶಾನ್ವಿ

  ಭಾವುಕವಾದ ಶಾನ್ವಿ

  ''ನನಗೆ ಮತ್ತೆ ಸಪೋರ್ಟ್ ನೀಡಿ. ನಾನು ನನ್ನನ್ನು ಸಾಬೀತು ಮಾಡಿಕೊಳ್ಳುತ್ತೇನೆ'' ಎಂದು ಹೇಳಿದ ಶಾನ್ವಿ ಹಳೆ ದಿನಗಳನ್ನು ನೆನೆದು ಕಣ್ಣೀರು ಹಾಕಿದರು. ಭಾವುಕವಾಗಿ ಮಾತನಾಡಿದ ಅವರು ''ಸ್ಯಾಂಡಲ್ ವುಡ್ ಎಂಬ ಸುಂದರ ಇಂಡಸ್ಟ್ರಿಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಸ್ಯಾಂಡಲ್ ವುಡ್ ಯಾವುದರಲ್ಲಿಯೂ ಕಡಿಮೆ ಇಲ್ಲ. ಅದನ್ನು ಈ ಸಿನಿಮಾ ತೋರಿಸುತ್ತಿದೆ'' ಎಂದರು.

  ಪತ್ರದ ಮೂಲಕ ಅಸಮಾಧಾನ ಹೊರ ಹಾಕಿದ ಶಾನ್ವಿ: 'ಗೀತಾ' ನಾಯಕಿಯ ಬೇಸರ ಯಾರ ಮೇಲೆ?ಪತ್ರದ ಮೂಲಕ ಅಸಮಾಧಾನ ಹೊರ ಹಾಕಿದ ಶಾನ್ವಿ: 'ಗೀತಾ' ನಾಯಕಿಯ ಬೇಸರ ಯಾರ ಮೇಲೆ?

  English summary
  Actress Shanvi Srivastava become emotional in hyderabad press meet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X