For Quick Alerts
  ALLOW NOTIFICATIONS  
  For Daily Alerts

  ಶಿವ ನೋಡಲು ಬರುತ್ತಿದ್ದಾರೆ ಮೆಗಾ ಸ್ಟಾರ್ ಚಿರಂಜೀವಿ

  |

  ನಾಡಿದ್ದು (22-08-2012) ಬಿಡುಗಡೆಯಾಗಲಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಶಿವ' ಚಿತ್ರವನ್ನು ನೋಡಲು ತೆಲುಗು ಮೆಗಾ ಸ್ಟಾರ್ ಚಿರಂಜೀವಿ ಬರಲಿದ್ದಾರಂತೆ. ಈಗಾಗಲೇ 'ಶಿವ' ಚಿತ್ರದ ಬಗ್ಗೆ ಕರ್ನಾಟಕವನ್ನೂ ಮೀರಿ ಸಿನಿ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಮನೆಮಾಡಿದೆ. ಅಷ್ಟೇ ಅಲ್ಲ, ನೆರೆಭಾಷೆಗಳ ಚಿತ್ರರಂಗಗಳ ಘಟಾನುಘಟಿ ನಟರಿಗೂ ಕೂಡ ಈ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಮೂಡಿದೆ.

  ಅದಕ್ಕೆಲ್ಲಾ ಕಾರಣ, ಮೊದಲನೆಯದಾಗಿ ಕೆಪಿ ಶ್ರೀಕಾಂತ್ ಅವರು ಈ ಚಿತ್ರವನ್ನು ಶಿವಣ್ಣರ '101'ನೆಯ ಚಿತ್ರವೆಂಬ ಕಾರಣಕ್ಕೆ ಅತ್ಯಂತ ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಇನ್ನೊಂದು ವಿಶೇಷವೆಂದರೆ ಶಿವಣ್ಣ ಹಾಗೂ ನಿರ್ದೆಶಕ ಓಂ ಪ್ರಕಾಶ್ ರಾವ್ ಸಂಗಮದಲ್ಲಿ ಈ ಮೊದಲು ಮೂಡಿಬಂದಿದ್ದ 'ಎಕೆ 47' ಚಿತ್ರ ಸೂಪರ್ ಹಿಟ್ ದಾಖಲಿಸಿತ್ತು. ಅಷ್ಟೇ ಅಲ್ಲ, ಓಂ ಚಿತ್ರಗಳು ಇತ್ತೀಚಿಗೆ ನೆಲಕಚ್ಚಿದ್ದು ತೀರಾ ಕಡಿಮೆ. ಹೀಗಾಗಿ ಎಲ್ಲರಲ್ಲಿ ಸಹಜವಾಗಿಯೇ ಭಾರೀ ನಿರೀಕ್ಷೆ ಮೂಡಿದೆ.

  ಈ ಮೊದಲೇ ಹೇಳಿದಂತೆ, ನೆರೆರಾಜ್ಯದವರೂ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗಷ್ಟೇ 'ತಮಿಳು ಸ್ಟಾರ್ ವಿಜಯ್' ಶಿವಣ್ಣರ 'ಶಿವ' ಚಿತ್ರದ ಬಗ್ಗೆ ಮೆಚ್ಚಿ ಮಾತನಾಡಿ ಶುಭ ಕೋರಿದ್ದಾರೆ. ಇದರ ಬೆನ್ನಲ್ಲೇ ದಕ್ಷಿಣ ಭಾರತದ ಮತ್ತೊಬ್ಬ ಮಹಾನ್ ನಟ, ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿ 'ಶಿವ' ಚಿತ್ರದ ಬಗ್ಗೆ ಶಿವರಾಜ್ ಕುಮಾರ್ ಬಗ್ಗೆ ಮಾತನಾಡಿ ಶುಭ ಹಾರೈಸಿದ್ದಾರೆ. ಅಂದಹಾಗೆ, ಇಂದು (ಆಗಸ್ಟ್ 22) ಚಿರಂಜೀವಿ ಹುಟ್ಟುಹಬ್ಬ. ತಮ್ಮ ಹುಟ್ಟುಹಬ್ಬದ ದಿನದಂದೇ ಅವರು ಶಿವ ಬಗ್ಗೆ ಮಾತನಾಡಿರುವುದು ವಿಶೇಷ.

  ಮೆಗಾ ಸ್ಟಾರ್ ಚಿರಂಜೀವಿ " ನಾನು ಪ್ರೀತ್ಸೋ ಚಿತ್ರನಟರಲ್ಲಿ ಶಿವರಾಜ್ ಕುಮಾರ್ ಕೂಡ ಪ್ರಮುಖರು. 'ಶಿವ' ಅವರ 101ನೆ ಚಿತ್ರ. ಇದೇ ಶುಕ್ರವಾರ (24-08-2012) 'ಶಿವ' ಚಿತ್ರ ಬಿಡುಗಡೆಯಾಗುತ್ತಿದೆ. ಶಿವರಾಜ್ ಕುಮಾರ್ ಅವರ 'ಎಕೆ 47' ಮೆಘಾ ಹಿಟ್ ಚಿತ್ರವನ್ನು ಇಡೀ ಭಾರತ ಚಿತ್ರರಂಗ ಮೆಚ್ಚುಗೆಯಿಂದ ಅಪ್ಪಿಕೊಂಡಿತ್ತು. ಓಂ ಪ್ರಕಾಶ್ ರಾವ್ ಹಾಗೂ ಶಿವರಾಜ್ ಕುಮಾರ್ ಅದೇ ಜೋಡಿಯ ಮತ್ತೊಂದು ಚಿತ್ರ 'ಶಿವ'.

  ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಶಿವಣ್ಣನ 'ಶಿವ' ಆರ್ಭಟಿಸಲು ಸಜ್ಜಾಗಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಒಂದು ಚಿತ್ರ 200ಕ್ಕೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು. 'ಶಿವ' ಚಿತ್ರ ಮತ್ತೊಂದು ಮೆಘಾ ಹಿಟ್ ಚಿತ್ರವಾಗಲಿ ಎಂದು ಶುಭ ಹಾರೈಸುತ್ತೇನೆ. ನಾನೂ ಸಹ ಚಿತ್ರವನ್ನು ನೋಡಲು ಎಲ್ಲಾ ರಾಜ್ಯಗಳ ಪ್ರಮುಖ ಚಿತ್ರನಟರೊಂದಿಗೆ ಬರುತ್ತಿದ್ದೇನೆ..." ಎಂದಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Telugu Mega Star Chiranjeevi wished for Hat Trick Hero Shivarajkumar's Most Expected 101 fame movie Shiva. He told that he had watched Shivarajkumar's movie AK 47 and liked as everyone in India. Further he added that he will come to watch this Shiva movie with all famous Stars. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X