For Quick Alerts
  ALLOW NOTIFICATIONS  
  For Daily Alerts

  ಶ್ರುತಿ ಹಾಸನ್-ಅಕ್ಷರಾ ಜೊತೆ ರಾಣಾ ದಗ್ಗುಬಾಟಿ ಹೊಸ ಪ್ರಾಜೆಕ್ಟ್?

  |

  ದಕ್ಷಿಣ ಭಾರತದ ಖ್ಯಾತ ನಟಿ ಶ್ರುತಿ ಹಾಸನ್ ಹಾಗೂ ಸಹೋದರಿ ಅಕ್ಷರಾ ಹಾಸನ್ ಜೊತೆ ಸೇರಿ ರಾಣಾ ದಗ್ಗುಬಾಟಿ ಹೊಸ ಪ್ರಾಜೆಕ್ಟ್‌ ಕೈಗೆತ್ತಿಕೊಂಡಿದ್ದಾರೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಶ್ರುತಿ ಹಾಸನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋಗಳು.

  ಸೆಪ್ಟೆಂಬರ್ 16 ರಂದು ಇನ್ಸ್ಟಾಗ್ರಾಂನಲ್ಲಿ ಅಕ್ಷರಾ ಹಾಸನ್, ರಾಣಾ ದಗ್ಗುಬಾಟಿ ಹಾಗೂ ಶ್ರುತಿ ಹಾಸನ್ ಭೇಟಿ ಮಾಡಿದ್ದು, ಆ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಈ ಮೂವರು ಹೊಸ ಪ್ರಾಜೆಕ್ಟ್‌ಗೆ ಚಾಲನೆ ಕೊಟ್ಟಿರಬಹುದು ಎಂದು ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

  ಶಾರುಖ್ ಖಾನ್-ಅಟ್ಲೀ ಸಿನಿಮಾಗೆ ದಕ್ಷಿಣದ ಸ್ಟಾರ್ ನಟ ಎಂಟ್ರಿಶಾರುಖ್ ಖಾನ್-ಅಟ್ಲೀ ಸಿನಿಮಾಗೆ ದಕ್ಷಿಣದ ಸ್ಟಾರ್ ನಟ ಎಂಟ್ರಿ

  ಭೇಟಿ ಹಿಂದಿನ ಅಸಲಿ ಕಾರಣ ಬಹಿರಂಗಪಡಿಸದ ನಟಿ ''ಒಳ್ಳೆಯ ಜನರು, ಇಂದು ತುಂಬಾ ವಿಶೇಷವಾದ ದಿನ ಆಗಲು ಇವರು ಕಾರಣರಾದರು. ನಾನು ಯಾವಾಗಲೂ ಒಳ್ಳೆಯ ವ್ಯಕ್ತಿಯ ಸುತ್ತ ಇರ್ತೇನೆ'' ಎಂದು ಪೋಸ್ಟ್ ಹಾಕಿದ್ದಾರೆ. ಆದರೆ, ಸಿನಿಮಾ ಅಥವಾ ಬೇರೆ ಏನಾದರೂ ಪ್ರಾಜೆಕ್ಟ್ ಎಂದು ಸುಳಿವು ಸಹ ಕೊಟ್ಟಿಲ್ಲ. ಮುಂದೆ ಓದಿ...

  'ಸಲಾರ್' ಚಿತ್ರದಲ್ಲಿ ಶ್ರುತಿ ಹಾಸನ್

  'ಸಲಾರ್' ಚಿತ್ರದಲ್ಲಿ ಶ್ರುತಿ ಹಾಸನ್

  ಪವನ್ ಕಲ್ಯಾಣ್ ಜೊತೆ 'ವಕೀಲ್ ಸಾಬ್' ಚಿತ್ರದಲ್ಲಿ ಶ್ರುತಿ ಹಾಸನ್ ನಟಿಸಿದ್ದರು. ಕಳೆದ ವಾರವಷ್ಟೇ ತೆರೆಕಂಡಿರುವ ಲಾಭಂ ಚಿತ್ರದಲ್ಲಿ ವಿಜಯ್ ಸೇತುಪತಿ ಜೊತೆ ಕಾಣಿಸಿಕೊಂಡಿದ್ದರು. ಪ್ರಸ್ತುತ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ ಸಲಾರ್ ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಎರಡು ಹಂತದ ಶೂಟಿಂಗ್ ನಡೆದಿದ್ದು, ಹೈದರಾಬಾದ್‌ನಲ್ಲಿ ಮೂರನೇ ಶೆಡ್ಯೂಲ್ ಚಿತ್ರೀಕರಣ ನಡೆಯುತ್ತಿದೆ.

  'ಭಿಮ್ಲಾ ನಾಯಕ್' ಫಸ್ಟ್ ಲುಕ್

  'ಭಿಮ್ಲಾ ನಾಯಕ್' ಫಸ್ಟ್ ಲುಕ್

  ಹಿಂದಿಯಲ್ಲಿ 'ಹಾತಿ ಮೇರಾ ಸಾತಿ' ಹಾಗೂ ತೆಲುಗಿನಲ್ಲಿ ವಿರಾಟ ಪರ್ವಂ ಸಿನಿಮಾ ಬಿಡುಗಡೆಯಾಗಬೇಕಿದೆ. ಪವನ್ ಕಲ್ಯಾಣ್ ಜೊತೆ ಭಿಮ್ಲಾ ನಾಯಕ್ ಚಿತ್ರದಲ್ಲಿ ರಾಣಾ ದಗ್ಗುಬಾಟಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಇದು ಮಲಯಾಳಂನ ಹಿಟ್ ಚಿತ್ರದ 'ಅಯ್ಯಪ್ಪನುಂ ಕೋಶಿಯುಂ' ತೆಲುಗು ರಿಮೇಕ್. ಸೆಪ್ಟೆಂಬರ್ 20 ರಂದು ಭಿಮ್ಲಾ ನಾಯಕ್ ಚಿತ್ರದಲ್ಲಿ ರಾಣಾ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಲಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 12 ರಂದು ಈ ಚಿತ್ರ ತೆರೆಗೆ ಬರ್ತಿದೆ.

  ಹಾಸನ್ ಸರ್ ನೇಮ್ ನಿಂದ ನನಗೆ ಸುಲಭವಾಗಿ ಅವಕಾಶ ಸಿಕ್ಕಿತು: ನೆಪೋಟಿಸಂ ಬಗ್ಗೆ ಶ್ರುತಿ ಹಾಸನ್ ಮಾತುಹಾಸನ್ ಸರ್ ನೇಮ್ ನಿಂದ ನನಗೆ ಸುಲಭವಾಗಿ ಅವಕಾಶ ಸಿಕ್ಕಿತು: ನೆಪೋಟಿಸಂ ಬಗ್ಗೆ ಶ್ರುತಿ ಹಾಸನ್ ಮಾತು

  ಅಟ್ಲಿ-ಶಾರೂಖ್ ಚಿತ್ರದಲ್ಲಿ ರಾಣಾ

  ಅಟ್ಲಿ-ಶಾರೂಖ್ ಚಿತ್ರದಲ್ಲಿ ರಾಣಾ

  ಶಾರೂಖ್ ಖಾನ್ ಮತ್ತು ಅಟ್ಲಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ 'ಲಯನ್' ಚಿತ್ರದಲ್ಲಿ ರಾಣಾ ದಗ್ಗುಬಾಟಿ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಶಾರೂಖ್ ಖಾನ್‌ಗೆ ಈ ಚಿತ್ರದಲ್ಲಿ ನಯನತಾರಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

  ಶ್ರುತಿ ಹಾಸನ್ ಸಹೋದರಿ ಅಕ್ಷರಾ

  ಶ್ರುತಿ ಹಾಸನ್ ಸಹೋದರಿ ಅಕ್ಷರಾ

  2015ರಲ್ಲಿ ಶಮಿತಾಭ್ ಚಿತ್ರದೊಂದಿಗೆ ಸಿನಿಮಾ ಇಂಡಸ್ಟ್ರಿ ಪ್ರವೇಶಿಸಿದ ಅಕ್ಷರಾ ಹಾಸನ್ ಕೆಲವೇ ಚಿತ್ರಗಳಲ್ಲಿ ನಟಿಸಿದರು. ಅಜಿತ್ ಜೊತೆ ವಿವೇಗಂ ಸಿನಿಮಾ ಮಾಡಿದರು. ಪ್ರಸ್ತುತ, 'ಅಚ್ಚಂ ಮೇಡಂ ನಾನಂ ಪಾಯಿರ್ಪು' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಇನ್ನು ಬಿಡುಗಡೆಯಾಗಿಲ್ಲ.

  ರಾಣಾ-ಶ್ರುತಿ ಒಳ್ಳೆಯ ಸ್ನೇಹಿತರು

  ರಾಣಾ-ಶ್ರುತಿ ಒಳ್ಳೆಯ ಸ್ನೇಹಿತರು

  ರಾಣಾ ದಗ್ಗುಬಾಟಿ ಮತ್ತು ಶ್ರುತಿ ಹಾಸನ್ ಮೊದಲಿನಿಂದಲೂ ಒಳ್ಳೆಯ ಸ್ನೇಹಿತರು. ವಿದೇಶಿ ಹುಡುಗನ ಜೊತೆ ಶ್ರುತಿ ಹಾಸನ್ ಡೇಟಿಂಗ್ ಮಾಡ್ತಿದ್ದರು. ಇಬ್ಬರು ಮದುವೆಯಾಗ್ತಾರೆ ಎಂದು ಸುದ್ದಿಯಾಗಿತ್ತು. ಆ ನಂತರ ಇವರಿಬ್ಬರ ಲವ್ ಬ್ರೇಕ್ ಅಪ್ ಆಗಿದೆ ಎನ್ನುವುದು ಬಹಿರಂಗವಾಗಿದೆ.

  English summary
  Actress Shruti Haasan, her sister Akshara Haasan and Rana Daggubati joining hands together for new project?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X