twitter
    For Quick Alerts
    ALLOW NOTIFICATIONS  
    For Daily Alerts

    ಸೈಮಾ 2022: ಇಬ್ಬರಿಗೆ ಯೂತ್ ಐಕಾನ್ ಪ್ರಶಸ್ತಿ; ಇವರೆಂಥ ಯೂತ್ ಐಕಾನ್ ಎಂದು ನಕ್ಕ ಫ್ಯಾನ್ಸ್!

    |

    ಸದ್ಯ ಬೆಂಗಳೂರಿನಲ್ಲಿ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ ( ಸೈಮಾ ) ಸಮಾರಂಭ ನಡೆಯುತ್ತಿದೆ. ಸೈಮಾ ಹತ್ತನೇ ವರ್ಷ ಪೂರೈಸಿರುವುದು ಈ ಬಾರಿಯ ವಿಶೇಷವಾಗಿದೆ. ಇನ್ನು ನಟ ಪುನೀತ್ ರಾಜ್ ಕುಮಾರ್ ಅವರಿಗೆ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಗೌರವ ಸಲ್ಲಿಸಲಾಗಿದ್ದು, ನಿನ್ನೆ ( ಸೆಪ್ಟೆಂಬರ್ 10 ) ಕನ್ನಡ ಮತ್ತು ತೆಲುಗು ಚಿತ್ರರಂಗದ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ.

    ಕನ್ನಡದ ಪೈಕಿ ಪುನೀತ್ ರಾಜ್ ಕುಮಾರ್ ಯುವರತ್ನ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ರಾಜ್ ಬಿ ಶೆಟ್ಟಿ ನಿರ್ದೇಶನದ ಗರುಡ ಗಮನ ವೃಷಭವಾಹನ ಚಿತ್ರ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು, ರಾಬರ್ಟ್ ಚಿತ್ರ ನಿರ್ದೇಶಿಸಿದ್ದ ತರುಣ್ ಸುಧೀರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದರು ಹಾಗೂ ಆಶಿಕಾ ರಂಗನಾಥ್ ಮತ್ತು ಅಮೃತಾ ಅಯ್ಯಂಗಾರ್ ಅತ್ಯುತ್ತಮ ನಟಿ ಪ್ರಶಸ್ತಿಗಳನ್ನು ಪಡೆದರು. ಇನ್ನು ತೆಲುಗು ಪೈಕಿ ಪುಷ್ಪ ಚಿತ್ರಕ್ಕಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ಶ್ಯಾಮ್ ಸಿಂಗ್ ರಾಯ್ ಸಿನಿಮಾಗಾಗಿ ಸಾಯಿ ಪಲ್ಲವಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು, ಪುಷ್ಪ ಚಿತ್ರ ನಿರ್ದೇಶಿಸಿದ್ದ ಸುಕುಮಾರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು ಹಾಗೂ ಪುಷ್ಪ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಯಿತು.

    ಪ್ರೇಕ್ಷಕರ ಊಹೆ ಸತ್ಯವಾಯ್ತು: ಆರ್ಯವರ್ಧನ್ ಪಾತ್ರದಲ್ಲಿ ಹರೀಶ್ ರಾಜ್! ಪ್ರೇಕ್ಷಕರ ಊಹೆ ಸತ್ಯವಾಯ್ತು: ಆರ್ಯವರ್ಧನ್ ಪಾತ್ರದಲ್ಲಿ ಹರೀಶ್ ರಾಜ್!

    ಹೀಗೆ ಈ ಕಾರ್ಯಕ್ರಮದ ವಿವಿಧ ಕೆಟಗರಿಗಳಲ್ಲಿ ವಿವಿಧ ಕಲಾವಿದರು ಪ್ರಶಸ್ತಿ ಪಡೆದು ಮಿಂಚಿದರೆ, ಕಳೆದ ಕೆಲ ವರ್ಷಗಳ ಕಾಲ ಇಲ್ಲದೇ ಇದ್ದ ಯೂತ್ ಐಕನ್ ಪ್ರಶಸ್ತಿಯನ್ನು ಈ ಬಾರಿ ಪುನರಾರಂಭಿಸಲಾಗಿದ್ದು, ಈ ಪ್ರಶಸ್ತಿಗೆ ಇಬ್ಬರು ಕಲಾವಿದರನ್ನು ಆರಿಸಿ ಗೌರವಿಸಲಾಗಿದೆ. ಆದರೆ ಈ ಬಾರಿಯ ಯೂತ್ ಐಕಾನ್ ಪ್ರಶಸ್ತಿಗೆ ಆಯ್ಕೆಯಾದ ಇಬ್ಬರು ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಾರೆ.

    ಇಬ್ಬರಿಗೆ ಯೂತ್ ಐಕಾನ್

    ಇಬ್ಬರಿಗೆ ಯೂತ್ ಐಕಾನ್

    ಈ ಬಾರಿಯ ಸೈಮಾ ಅವಾರ್ಡ್ಸ್‌ನಲ್ಲಿ ನಟ ವಿಜಯ್ ದೇವರಕೊಂಡ ಹಾಗೂ ನಟಿ ಪೂಜಾ ಹೆಗ್ಡೆ ಈ ಇಬ್ಬರಿಗೂ ಸಹ ಯೂತ್ ಐಕನ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ವಿಜಯ್ ದೇವರಕೊಂಡ ಪುರುಷ ಯೂತ್ ಐಕಾನ್ ಆದರೆ, ಪೂಜಾ ಹೆಗ್ಡೆ ಮಹಿಳಾ ಯೂತ್ ಐಕನ್ ಎಂಬ ಗೌರವವನ್ನು ಸ್ವೀಕರಿಸಿದರು.

    ವಿಜಯ್ ದೇವರಕೊಂಡಗೆ ಪ್ರಶಸ್ತಿ ಸಿಕ್ಕಿದ್ದಕ್ಕೆ ಮಿಶ್ರ ಪ್ರತಿಕ್ರಿಯೆ

    ವಿಜಯ್ ದೇವರಕೊಂಡಗೆ ಪ್ರಶಸ್ತಿ ಸಿಕ್ಕಿದ್ದಕ್ಕೆ ಮಿಶ್ರ ಪ್ರತಿಕ್ರಿಯೆ

    ಇತ್ತೀಚೆಗಷ್ಟೇ ಲೈಗರ್ ಸಿನಿಮಾ ಮೂಲಕ ದೊಡ್ಡ ಮಟ್ಟದ ಸೋಲನ್ನು ಅನುಭವಿಸಿರುವ ವಿಜಯ್ ದೇವರಕೊಂಡ ಈ ಬಾರಿಯ ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಯೂತ್ ಐಕಾನ್ ಪ್ರಶಸ್ತಿ ಸ್ವೀಕರಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಈತ ಯಾವುದೇ ಫ್ಯಾಮಿಲಿ ಬ್ಯಾಕ್‌ಗ್ರೌಂಡ್ ಇಲ್ಲದೆಯೇ ಯಶಸ್ವಿಯಾದ ಕಾರಣ ಈ ಅವಾರ್ಡ್ ನೀಡಿದ್ದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡರೆ, ಇನ್ನೂ ಕೆಲವರು ಈತನಿಂದ ಯುವಜನತೆ ಕಲಿಯುವುದಾದರೂ ಏನಿದೆ, ಇದೊಂದು ತಪ್ಪಾದ ಆಯ್ಕೆ ಎಂದು ಕಾಲೆಳೆದಿದ್ದಾರೆ.

    ಪೂಜಾ ಹೆಗ್ಡೆಗೆ ಯೂತ್ ಐಕಾನ್ ನೀಡಿದ್ದನ್ನು ಒಪ್ಪಲು ಯಾರೂ ತಯಾರಿಲ್ಲ!

    ಪೂಜಾ ಹೆಗ್ಡೆಗೆ ಯೂತ್ ಐಕಾನ್ ನೀಡಿದ್ದನ್ನು ಒಪ್ಪಲು ಯಾರೂ ತಯಾರಿಲ್ಲ!

    ಇನ್ನು ಪೂಜಾ ಹೆಗ್ಡೆಗೆ ಮಹಿಳಾ ಯೂತ್ ಐಕಾನ್ ಪ್ರಶಸ್ತಿ ನೀಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ವಿರೋಧ ವ್ಯಕ್ತವಾಗಿದೆ. ಈಕೆಗೆ ಸರಿಯಾಗಿ ನಟನೆಯೇ ಬರುವುದಿಲ್ಲ ಅಂಥದರಲ್ಲಿ ಈಕೆಗೆ ಇಷ್ಟು ದೊಡ್ಡ ಅವಾರ್ಡ್ ನೀಡುವ ಅಗತ್ಯವೇನಿತ್ತು, ಇದು ಕಾಮಿಡಿ ಆಗಿದೆ ಎಂದು ಕಾಮೆಂಟ್ ಮಾಡುವುದರ ಮೂಲಕ ನೆಟ್ಟಿಗರು ಇದು ತಪ್ಪಾದ ಆಯ್ಕೆ ಎಂದು ವಿರೋಧಿಸಿದ್ದಾರೆ.

    ಮೊದಲಿನಂತಿಲ್ಲ ಸೈಮಾ ಎಂದ ನೆಟ್ಟಿಗರು

    ಮೊದಲಿನಂತಿಲ್ಲ ಸೈಮಾ ಎಂದ ನೆಟ್ಟಿಗರು

    ಇನ್ನು ಈ ಇಬ್ಬರನ್ನು ಯೂತ್ ಐಕಾನ್ ಎಂದು ಆಯ್ಕೆ ಮಾಡಿರುವರಾದರೂ ಯಾರು, ಈ ಹಿಂದೆ ಒಳ್ಳೊಳ್ಳೆ ಕಲಾವಿದರಿಗೆ ನೀಡಲಾಗುತ್ತಿದ್ದ ಈ ದೊಡ್ಡ ಪ್ರಶಸ್ತಿಗೆ ಈಗ ಗೌರವವೇ ಇಲ್ಲದಂತಾಗಿದೆ ಎಂದು ಸಹ ಕೆಲ ನೆಟ್ಟಿಗರು ಕಾಮೆಂಟ್ ಮಾಡುವುದರ ಮೂಲಕ ಸೈಮಾ ಮೊದಲಿನಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ

    English summary
    SIIMA 2022: Netizens trolled SIIMA for giving youth icon awards to Vijay Deverakonda and Pooja Hegde. Take a look
    Sunday, September 11, 2022, 15:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X