For Quick Alerts
  ALLOW NOTIFICATIONS  
  For Daily Alerts

  ಸೈಮಾ 2022: ತೆಲುಗು ಬೆಸ್ಟ್ ನಟ, ಚಿತ್ರ, ನಟಿ, ನಿರ್ದೇಶಕ ಪ್ರಶಸ್ತಿ ಯಾರ ಪಾಲು? ಪುಷ್ಪ ತಂಡದ್ದೇ ಅಬ್ಬರ!

  |

  ಈ ಬಾರಿ ಬೆಂಗಳೂರಿನಲ್ಲಿ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ ( ಸೈಮಾ ) ಜರುಗುತ್ತಿದೆ. 2 ದಿನಗಳ ಕಾಲ ಆಯೋಜನೆಯಾಗಿರುವ ಈ ಪ್ರಶಸ್ತಿ ಪ್ರದಾನ ಸಮಾರಂಭದ ಮೊದಲನೇ ದಿನ ನಿನ್ನೆ ( ಸೆಪ್ಟೆಂಬರ್‌ 10 ) ಮುಕ್ತಾಯಗೊಂಡಿದೆ.

  19 ಭಿನ್ನ ವಿಭಿನ್ನ ಕೆಟಗರಿಗಳಲ್ಲಿ ಹಲವಾರು ಕಲಾವಿದರು ನಾಮನಿರ್ದೇಶನಗೊಂಡಿದ್ದು, ಮೊದಲ ದಿನ ಕನ್ನಡ ಹಾಗೂ ತೆಲುಗು ಚಿತ್ರರಂಗಗಳ ಕಾರ್ಯಕ್ರಮ ಜರುಗಿತು. ಈ ಪೈಕಿ ಕನ್ನಡದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪುನೀತ್ ರಾಜ್ ಕುಮಾರ್ ಪಾಲಾದರೆ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ರಾಬರ್ಟ್ ಚಿತ್ರ ನಿರ್ದೇಶಿಸಿದ್ದ ತರುಣ್ ಸುಧೀರ್ ಪಡೆದರು, ಅತ್ಯುತ್ತಮ ನಾಯಕಿಯರಾಗಿ ಆಶಿಕಾ ರಂಗನಾಥ್ ಮತ್ತು ಬಡವ ರಾಸ್ಕಲ್ ಚಿತ್ರಕ್ಕಾಗಿ ಅಮೃತಾ ಅಯ್ಯಂಗಾರ್ ಸ್ವೀಕರಿಸಿದರು ಹಾಗೂ ಅತ್ಯುತ್ತಮ ಚಿತ್ರವಾಗಿ ರಾಜ್ ಬಿ ಶೆಟ್ಟಿ ನಿರ್ದೇಶನದ ಗರುಡ ಗಮನ ವೃಷಭವಾಹನ ಹೊರಹೊಮ್ಮಿತು.

  ಕನ್ನಡದಲ್ಲಿ ಪ್ರಮುಖ ಪ್ರಶಸ್ತಿಗಳನ್ನು ಈ ಕಲಾವಿದರು ಬಾಚಿದರೆ ತೆಲುಗು ಪೈಕಿ ಹೆಚ್ಚು ಪ್ರಶಸ್ತಿಗಳನ್ನು ಪುಷ್ಪ ಚಿತ್ರತಂಡ ಬಾಚಿಕೊಂಡಿದೆ. ತೆಲುಗು ವಿಭಾಗದಲ್ಲಿ ಯಾವ ಕಲಾವಿದರಿಗೆ ಮತ್ತು ಯಾವ ಚಿತ್ರಗಳಿಗೆ ಪ್ರಶಸ್ತಿ ದೊರಕಿವೆ ಎಂಬುದರ ಕುರಿತ ಪಟ್ಟಿ ಮುಂದೆ ಇದೆ.

   ಪ್ರಶಸ್ತಿ ಗೆದ್ದವರ ಪಟ್ಟಿ

  ಪ್ರಶಸ್ತಿ ಗೆದ್ದವರ ಪಟ್ಟಿ

  ಅತ್ಯುತ್ತಮ ಚಿತ್ರ - ಪುಷ್ಪಾ

  ಅತ್ಯುತ್ತಮ ನಿರ್ದೇಶಕ - ಸುಕುಮಾರ್ (ಪುಷ್ಪಾ: ದಿ ರೈಸ್)

  ಅತ್ಯುತ್ತಮ ಛಾಯಾಗ್ರಾಹಕ - ಸಿ. ರಾಮ್ ಪ್ರಸಾದ್ (ಅಖಂಡ)

  ಅತ್ಯುತ್ತಮ ನಟ - ಅಲ್ಲು ಅರ್ಜುನ್ (ಪುಷ್ಪಾ: ದಿ ರೈಸ್)

  ಅತ್ಯುತ್ತಮ ನಟ (ಕ್ರಿಟಿಕ್ಸ್) - ಬಾಲಕೃಷ್ಣ

  ಅತ್ಯುತ್ತಮ ನಟಿ - ಸಾಯಿ ಪಲ್ಲವಿ ( ಶ್ಯಾಮ್ ಸಿಂಗಾ ರಾಯ್ )

  ಅತ್ಯುತ್ತಮ ಪೋಷಕ ನಟ - ಜಗದೀಶ್ ಪ್ರತಾಪ್ ಬಂಡಾರಿ (ಪುಷ್ಪಾ: ದಿ ರೈಸ್)

  ಅತ್ಯುತ್ತಮ ಪೋಷಕ ನಟಿ - ವರಲಕ್ಷ್ಮಿ ಶರತ್‌ಕುಮಾರ್ (ಕ್ರಾಕ್)

  ಅತ್ಯುತ್ತಮ ಹಾಸ್ಯನಟ - ಸುದರ್ಶನ್ (ಏಕ್ ಮಿನಿ ಕಥಾ)

  ಅತ್ಯುತ್ತಮ ಉದಯೋನ್ಮುಖ ನಟ - ವೈಷ್ಣವ್ ತೇಜ್ (ಉಪ್ಪೇನಾ)

  ಅತ್ಯುತ್ತಮ ಉದಯೋನ್ಮುಖ ನಟಿ - ಕೃತಿ ಶೆಟ್ಟಿ (ಉಪ್ಪೇನಾ)

  ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ - ಬುಚ್ಚಿ ಬಾಬು (ಉಪ್ಪೇನಾ)

  ಅತ್ಯುತ್ತಮ ಉದಯೋನ್ಮುಖ ನಿರ್ಮಾಪಕ - ಸತೀಶ್ ವರ್ಮಾ (SV2 ಎಂಟರ್ಟೈನ್ಮೆಂಟ್) - ನಾಂದಿ

  ಅತ್ಯುತ್ತಮ ಸಂಗೀತ ನಿರ್ದೇಶಕ - ದೇವಿ ಶ್ರೀ ಪ್ರಸಾದ್ (ಪುಷ್ಪಾ: ದಿ ರೈಸ್)

  ಅತ್ಯುತ್ತಮ ಗೀತರಚನೆಕಾರ - ಚಂದ್ರಬೋಸ್ - ಪುಷ್ಪ: ದಿ ರೈಸ್‌ನ "ಶ್ರೀವಲ್ಲಿ" ಹಾಡಿಗಾಗಿ

  ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ - ರಾಮ್ ಮಿರಿಯಾಲ - ಜಾತಿ ರತ್ನಲು "ಚಿಟ್ಟಿ"

  ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ - ಗೀತಾ ಮಾಧುರಿ - ಅಖಂಡದ "ಜೈ ಬಾಲಯ್ಯ" ಹಾಡಿಗಾಗಿ

   6 ಪ್ರಶಸ್ತಿ ಬಾಚಿದ ಪುಷ್ಪ

  6 ಪ್ರಶಸ್ತಿ ಬಾಚಿದ ಪುಷ್ಪ

  ಈ ಬಾರಿಯ ಸೈಮಾ ಅವಾರ್ಡ್ಸ್ ತೆಲುಗು ವಿಭಾಗದಲ್ಲಿ ಪುಷ್ಪಾ ತಂಡ ಅಬ್ಬರಿಸಿದೆ. ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದ ಪುಷ್ಪ ಒಟ್ಟಾರೆಯಾಗಿ 6 ಪ್ರಶಸ್ತಿಗಳನ್ನು ಗೆದ್ದಿದೆ. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಸಂಗೀತ ನಿರ್ದೇಶಕ ಹಾಗೂ ಅತ್ಯುತ್ತಮ ಗೀತರಚನೆಕಾರ ಪ್ರಶಸ್ತಿಗಳನ್ನು ಪುಷ್ಪ ತಂಡ ಗೆದ್ದು ಬೀಗಿದೆ.

   ಉಪ್ಪೆನಾಗೂ ಒಳ್ಳೆಯ ಪ್ರಶಸ್ತಿಗಳು

  ಉಪ್ಪೆನಾಗೂ ಒಳ್ಳೆಯ ಪ್ರಶಸ್ತಿಗಳು

  ಇನ್ನು ನಿರ್ದೇಶಕ ಬುಚ್ಚಿಬಾಬು ಸನಾ ನಿರ್ದೇಶನದ ಉಪ್ಪೆನಾ ಚಿತ್ರ ಕೂಡ ಒಳ್ಳೆಯ ಪ್ರಶಸ್ತಿ ಗಳಿಕೆ ಮಾಡಿದೆ. ಅತ್ಯುತ್ತಮ ಉದಯೋನ್ಮುಖ ನಟ, ಅತ್ಯುತ್ತಮ ಉದಯೋನ್ಮುಖ ನಟಿ ಹಾಗೂ ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ ಈ 3 ಪ್ರಮುಖ ಪ್ರಶಸ್ತಿಗಳನ್ನು ಉಪ್ಪೆನಾ ಚಿತ್ರ ಪಡೆದುಕೊಂಡಿದೆ.

  English summary
  SIIMA 2022: Pushpa team bags 6 awards and Krithi Shetty wins best debutant award for Uppena

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X