For Quick Alerts
  ALLOW NOTIFICATIONS  
  For Daily Alerts

  ಸೀತಾ ರಾಮಮ್‌ಗೆ 50 ದಿನಗಳ ಸಂಭ್ರಮ; ಇಲ್ಲಿಯವರೆಗೆ ಚಿತ್ರ ಗಳಿಸಿದ್ದೆಷ್ಟು?

  |

  ದುಲ್ಕರ್ ಸಲ್ಮಾನ್ ಅಭಿನಯದ ಮೊದಲ ತೆಲುಗು ಸಿನಿಮಾ ಸೀತಾ ರಾಮಮ್ ಇಂದಿಗೆ ( ಸೆಪ್ಟೆಂಬರ್ 23 ) ಐವತ್ತು ದಿನಗಳನ್ನು ಪೂರೈಸಿದೆ. ಆಗಸ್ಟ್ 5ರಂದು ಬಿಡುಗಡೆಯಾಗಿದ್ದ ಈ ಚಿತ್ರ ಈ ವರ್ಷ ದೊಡ್ಡ ಮಟ್ಟದ ರೆಸ್ಪಾನ್ಸ್ ಪಡೆದುಕೊಂಡು ಚಿತ್ರದ ಕಂಟೆಂಟ್‌ನಿಂದ ಗೆದ್ದ ಸಿನಿಮಾ ಎನಿಸಿಕೊಂಡಿತು. ಚಿತ್ರದಲ್ಲಿ ಲೆಫ್ಟಿನೆಂಟ್ ಆಗಿ ದುಲ್ಕರ್ ಸಲ್ಮಾನ್ ಹಾಗೂ ದ್ವಿಪಾತ್ರದಲ್ಲಿ ಮೃನಾಲ್ ಠಾಕೂರ್ ಅಭಿನಯ ಪ್ರೇಕ್ಷಕರಲ್ಲಿ ಮ್ಯಾಜಿಕ್ ಮಾಡಿತ್ತು.

  ಹನು ರಾಘವಪುಡಿ ತಮ್ಮ ಫ್ಲೇವರ್‌ನಲ್ಲಿಯೇ ಸಿನಿಮಾ ನಿರ್ದೇಶಿಸಿ ಮತ್ತೊಮ್ಮೆ ಗೆಲುವು ಸಾಧಿಸಿದರು. ಇನ್ನು ಈ ಚಿತ್ರ ಬಿಡುಗಡೆಯಾಗುವ ಮುನ್ನ ಬಿಡುಗಡೆಯಾಗಿದ್ದ ತೆಲುಗು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದ್ದವು. ಎಷ್ಟೇ ಪ್ರಚಾರ ಮಾಡಿದರೂ, ಎಷ್ಟೇ ಬಿಲ್ಡಪ್ ಕೊಟ್ಟರೂ ಚಿತ್ರಗಳು ಚಿತ್ರಮಂದಿರದಲ್ಲಿ ನಿಲ್ಲುತ್ತಿರಲಿಲ್ಲ. ಆದರೆ ಲೈಗರ್ ಹೊರತುಪಡಿಸಿ ಆಗಸ್ಟ್ ತಿಂಗಳಿನಲ್ಲಿ ತೆರೆಕಂಡ ತೆಲುಗು ಚಿತ್ರಗಳು ಮಾತ್ರ ಅಬ್ಬರಿಸಿದವು.

  ಸೀತಾ ರಾಮಮ್ ಬಿಡುಗಡೆಗೊಂಡ ದಿನವೇ ಬಿಡುಗಡೆಗೊಂಡ ಕಲ್ಯಾಣ್ ರಾಮ್ ಅಭಿನಯದ ಬಿಂಬಿಸಾರ, ಒಂದು ವಾರದ ಬಳಿಕ ತೆರೆಕಂಡ ಕಾರ್ತಿಕೇಯ 2 ಬಾಕ್ಸ್ ಆಫೀಸ್‌ನಲ್ಲಿ ಮೆರೆದವು. ಚಿತ್ರ ಒಂದೊಳ್ಳೆ ಕಂಟೆಂಟ್ ಹೊಂದಿದ್ದರೆ ದೊಡ್ಡ ಸ್ಟಾರ್‌ಗಳಿರುವ ತಾರಾಗಣ ಹಾಗೂ ಬಿಗ್ ಬಜೆಟ್ ಅಗತ್ಯವಿಲ್ಲ ಎಂಬುದನ್ನು ನಿರೂಪಿಸಿದವು. ಈ ಪೈಕಿ ಬಿಂಬಿಸಾರ 70 ಕೋಟಿ ಕಲೆಕ್ಷನ್ ಮಾಡಿ ತನ್ನ ಓಟ ನಿಲ್ಲಿಸಿದರೆ, ಸೀತಾ ರಾಮಮ್ ಹಾಗೂ ಕಾರ್ತಿಕೇಯ 2 ನೂರು ಕೋಟಿ ಕ್ಲಬ್ ಸೇರಿದವು.

  ಐವತ್ತು ದಿನ ಪೂರೈಸಿದ ಸೀತಾ ರಾಮಮ್ ಶತಕ

  ಐವತ್ತು ದಿನ ಪೂರೈಸಿದ ಸೀತಾ ರಾಮಮ್ ಶತಕ

  ಇಂದು ಐವತ್ತು ದಿನಗಳನ್ನು ಚಿತ್ರಮಂದಿರದಲ್ಲಿ ಪೂರೈಸಿರುವ ಸೀತಾ ರಾಮಮ್ ಇಲ್ಲಿಯವರೆಗೂ 105 ಕೋಟಿ ಕಲೆಕ್ಷನ್ ಮಾಡಿದೆ. ಸದ್ಯ ಈ ಚಿತ್ರ ಓಟಿಟಿ ವೇದಿಕೆಯಾದ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗಿದ್ದರೂ ಸಹ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿರುವುದು ವಿಶೇಷವಾಗಿದೆ.

  ಅರ್ಧಶತಕ ಬಾರಿಸಿ ಡಬಲ್ ಖುಷಿ ಹಂಚಿಕೊಂಡ ದುಲ್ಕರ್

  ಅರ್ಧಶತಕ ಬಾರಿಸಿ ಡಬಲ್ ಖುಷಿ ಹಂಚಿಕೊಂಡ ದುಲ್ಕರ್

  ಇನ್ನು ಇಂದು ಸೀತಾ ರಾಮಮ್ ಮೂಲಕ ಅರ್ಧ ಶತಕ ಬಾರಿಸಿರುವ ಖುಷಿಯನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ದುಲ್ಕರ್ ಸಲ್ಮಾನ್ ಇದು ವಿಶೇಷ ದಿನ ಎಂದಿದ್ದಾರೆ. ಏಕೆಂದರೆ ಸೀತಾ ರಾಮಮ್ ಐವತ್ತು ದಿನಗಳನ್ನು ಪೂರೈಸಿರುವ ದಿನವೇ ತಮ್ಮ ಹೊಸ ಹಿಂದಿ ಚಿತ್ರ ಚುಪ್ ಬಿಡುಗಡೆಗೊಂಡಿದೆ. ಹೀಗಾಗಿ ದುಲ್ಕರ್ ಸಲ್ಮಾನ್ ಈ ದಿನ ಡಬಲ್ ಧಮಾಕದ ಖುಷಿಯಲ್ಲಿದ್ದಾರೆ.

  ಐವತ್ತನೇ ದಿನವೂ ಹೌಸ್‌ಫುಲ್

  ಐವತ್ತನೇ ದಿನವೂ ಹೌಸ್‌ಫುಲ್

  ಇನ್ನು ಸೀತಾ ರಾಮಮ್ ಐವತ್ತನೇ ದಿನವೂ ಸಹ ಹೌಸ್‌ಫುಲ್ ಪ್ರದರ್ಶವನ್ನು ಕಂಡಿದೆ. ಬೆಂಗಳೂರು, ಹೈದರಾಬಾದ್ ಹಾಗೂ ಚೆನ್ನೈ ರೀತಿಯ ದೊಡ್ಡ ನಗರಗಳಲ್ಲಿ ಚಿತ್ರ ಇನ್ನೂ ಪ್ರದರ್ಶನವಾಗ್ತಿದೆ. ಇನ್ನು ಇಂದು ರಾಷ್ಟ್ರೀಯ ಸಿನಿಮಾ ದಿನದ ಪ್ರಯುಕ್ತ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್‌ಗಳನ್ನು ವಿನಾಯಿತಿ ದರದಲ್ಲಿ ನೀಡಲಾಗುತ್ತಿದೆ. ಹೀಗಾಗಿ ಇಂದು ಚಿತ್ರ ಎಲ್ಲೆಡೆ ಜನಭರಿತ ಪ್ರದರ್ಶನ ಕಾಣುತ್ತಿದೆ.

  English summary
  Sita Ramam completes 50 days theatrical run and grossed 105 crores

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X