For Quick Alerts
  ALLOW NOTIFICATIONS  
  For Daily Alerts

  ಕಾಜಲ್ ಅಗರ್ವಾಲ್ ಹುಟ್ಟುಹಬ್ಬ: 'ಮಗಧೀರ' ಸುಂದರಿಗೆ ವಿಶ್ ಮಾಡಿದ ಸೌತ್ ಸ್ಟಾರ್ಸ್

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಖ್ಯಾತಿಗಳಿಸಿದ ಉತ್ತರದ ಈ ಸುಂದರಿಯ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆಯೇ ಬರಿದುಬರುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೇ ಸಿನಿಮಾ ಗಣ್ಯರು ಸಹ ಪ್ರೀತಿಯ ವಿಶ್ ಮಾಡುತ್ತಿದ್ದಾರೆ.

  ಲಕ್ಷ್ಮೀ ಕಲ್ಯಾಣಂ ಸಿನಿಮಾ ಮೂಲಕ ತೆಲುಗು ಸಿನಿಮಾರಂಗಕ್ಕೆ ಕಾಲಿಟ್ಟ ನಟಿ ಕಾಜಲ್ ಬಳಿಕ ಸೌತ್ ಸೂಪರ್ ಸ್ಟಾರ್ ಆಗಿ ಖ್ಯಾತಿಗಳಿಸಿದರು. ಮಗಧೀರ ಸಿನಿಮಾ ಕಾಜಲ್ ಅಗರ್ವಾಲ್ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್ ನೀಡಿತು. ಈ ಸಿನಿಮಾ ಬಳಿಕ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ ಕಾಜಲ್, ತಮಿಳು ಮತ್ತು ತೆಲುಗಿನ ಸ್ಟಾರ್ ಕಲಾವಿದರ ಸಿನಿಮಾಗಳಲ್ಲಿ ಕಾಜಲ್ ಖಾಯಂ ಆಗಿದ್ದರು. ಮುಂದೆ ಓದಿ..

  ಹುಟ್ಟುಹಬ್ಬದ ಸಂಭ್ರಮದಲ್ಲಿ ಕಾಜಲ್

  ಹುಟ್ಟುಹಬ್ಬದ ಸಂಭ್ರಮದಲ್ಲಿ ಕಾಜಲ್

  ತಮಿಳು ಮತ್ತು ತೆಲುಗು ಸಿನಿಮಾರಂಗದಲ್ಲಿ ಖ್ಯಾತ ನಟಿಯಾಗಿ ಗುರುತಿಸಿಕೊಂಡಿರುವ ಕಾಜಲ್ ತರಹೇವಾರಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇಂದಿಗೂ ಬಹುಬೇಡಿಕೆಯ ನಟಿಯಾಗಿರುವ ಇಂದು (ಜೂನ್ 19) 36ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನಟಿ ಮಗಧೀರ ಸುಂದರಿಗೆ ದಕ್ಷಿಣದ ಕಲಾವಿದರು ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ.

  ಕಾಜಲ್ ಗೆ ವಿಶ್ ಮಾಡಿದ ಸಮಂತಾ

  ಕಾಜಲ್ ಗೆ ವಿಶ್ ಮಾಡಿದ ಸಮಂತಾ

  ಸಮಂತಾ, ರಾಕುಲ್ ಪ್ರೀತ್ ಸಿಂಗ್, ವಿಶಾಲ್, ಕೀರ್ತಿ ಸುರೇಶ್, ತಮನ್ನಾ ಭಾಟಿಯಾ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರಿದ್ದಾರೆ. ನಟಿ ಸಮಂತಾ ಕಾಜಲ್ ಅಗರ್ವಾಲ್ ಅವರ ಕಾಮನ್ ಡಿಪಿ ಬಿಡುಗಡೆ ಮಾಡಿ, "ನಿಮ್ಮ ಡಿಪಿ ಬಿಡುಗಡೆ ಮಾಡಲು ತುಂಬಾ ಸಂತೋಷವಾಗುತ್ತೆ. ನಾವು ಅನೇಕರಿಗೆ ಸ್ಫೂರ್ತಿ. ಸುಂದರವಾದ ವ್ಯಕ್ತಿತ್ವ, ಸ್ವಯಂ ಇಚ್ಚೆ ಮತ್ತು ತುಂಬಾ ಶಕ್ತಿವಂತರು ನೀವು. ಹುಟ್ಟುಹಬ್ಬದ ಶುಭಾಶಯಗಳು" ಎಂದು ಶುಭಾಶಯ ತಿಳಿಸಿದ್ದಾರೆ.

  ಕಾಜಲ್ ಗೆ ನಟಿ ತಮನ್ನಾ ಶುಭಾಶಯ

  ಕಾಜಲ್ ಗೆ ನಟಿ ತಮನ್ನಾ ಶುಭಾಶಯ

  ಇನ್ನು ನಟಿ ತಮನ್ನಾ ಕೂಡ ಕಾಜಲ್ ಅವರ ಕಾಮನ್ ಡಿಪಿ ಶೇರ್ ಮಾಡಿ ವಿಶ್ ಮಾಡಿದ್ದಾರೆ. "ನೀವು ಅತ್ಯಂತ ಉದಾರ, ದಯೇ ಮತ್ತು ಅಸಾಧಾರಣ ವ್ಯಕ್ತಿ. ಅದ್ಭುತ ನಟಿ. ನಿಮ್ಮನ್ನು ಸ್ನೇಹಿತಳನ್ನಾಗಿ ಪಡೆಯಲು ನಾನು ತುಂಬಾ ಅದೃಷ್ಟವಂತೆ. ನಿಮಗೆ ಜನ್ಮ ದಿನದ ಶುಭಾಶಯಗಳು" ಎಂದು ವಿಶ್ ಮಾಡಿದ್ದಾರೆ.

  ಕೀರ್ತಿ ಸುರೇಶ್ ಪ್ರೀತಿಯ ಶುಭಾಶಯ

  ಕೀರ್ತಿ ಸುರೇಶ್ ಪ್ರೀತಿಯ ಶುಭಾಶಯ

  ನಟಿ ಕೀರ್ತಿ ಸುರೇಶ್ ಕೂಡ ವಿಶ್ ಮಾಡಿದ್ದಾರೆ. "ಈ ವರ್ಷ ಅದ್ಭುತವಾಗಿರಲಿ, ದೇವರು ಒಳ್ಳೆಯದು ಮಾಡಲಿ" ಎಂದು ಟ್ವೀಟ್ ಮಾಡಿದ್ದಾರೆ. ನಟ ವಿಶಾಲ್ ವಿಶ್ ಮಾಡಿ, "ತುಂಬಾ ಆತ್ಮೀಯ ಮತ್ತು ಸ್ವೀಟೆಸ್ಟ್ ಕೋ-ಸ್ಟಾರ್ ಮತ್ತು ಸ್ನೇಹಿತೆ. ಆರೋಗ್ಯ, ಐಶ್ವರ್ಯ, ಸಂತೋಷದಿಂದ ಇರಿ" ಎಂದು ಶುಭಕೋರಿದ್ದಾರೆ.

  Recommended Video

  Salaar ಗೆ ಬಿಗ್ ಆಫರ್ ಕೊಟ್ಟ Amazon Prime | Prabhas | Filmibeat Kannada
  ಕಾಜಲ್ ಬಳಿ ಇರುವ ಸಿನಿಮಾಗಳು

  ಕಾಜಲ್ ಬಳಿ ಇರುವ ಸಿನಿಮಾಗಳು

  ಸಿನಿಮಾ ವಿಚಾರಕ್ಕೆ ಬರುವುದಾದರೆ ಕಾಜಲ್ ಸದ್ಯ ಮೆಗಾಸ್ಟಾರ್ ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮೋಸಗಲ್ಲು ಸಿನಿಮಾದಲ್ಲೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಜೊತೆಗೆ ಒಟಿಟಿಯನ್ನೂ ಬ್ಯುಸಿಯಾಗಿದ್ದಾರೆ. ಮೊದಲ ಬಾರಿಗೆ ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಬಾಲಿವುಡ್ ನ ಕ್ವೀನ್ ಸಿನಿಮಾದ ರಿಮೇಕ್ ನಲ್ಲೂ ನಟಿಸಿದ್ದು, ಬಿಡುಗಡೆಗೆ ಕಾಯುತ್ತಿದ್ದಾರೆ. ಇದಲ್ಲದೆ ಕಮಲ್ ಹಾಸನ್ ನಟನೆಯ ಇಂಡಿಯನ್-2 ಸಿನಿಮಾದಲ್ಲೂ ಕಾಜಲ್ ನಾಕಿಯಾಗಿ ಕಾಣಿಸಿಕೊಂಡಿದ್ದಾರೆ.

  English summary
  Happy Birthday Kajal Aggaewal: South Celebs birthday wish to gorgeous Actress Kajal Agarwal.
  Saturday, June 19, 2021, 14:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X