For Quick Alerts
  ALLOW NOTIFICATIONS  
  For Daily Alerts

  ಹೊಸ ಸಾಹಸಕ್ಕೆ ಕೈ ಹಾಕಿದ ಮಿಲ್ಕಿ ಬ್ಯೂಟಿ ತಮನ್ನಾ

  |

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ತಮನ್ನಾ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಸೈರಾ ಚಿತ್ರದ ಮೂಲಕ ಅಭಿಮಾನಿಗಳ ಮನಗೆದ್ದಿದ್ದ ತಮನ್ನಾ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಬೆಳ್ಳೆ ಪರದೆ ಮೇಲೆ ಮಿಂಚುತ್ತಿದ್ದ ತಮನ್ನಾ ಈಗ ವೆಬ್ ಸರಣಿಗೆ ಎಂಟ್ರಿ ಕೊಟ್ಟಿದ್ದಾರೆ.

  ತಮನ್ನಾ ಮೊದಲ ಬಾರಿಗೆ ಡಿಜಿಟಲ್ ಲೋಕಕ್ಕೆ ಕಾಲಿಡುತ್ತಿದ್ದಾರೆ. ಹಾಟ್‌ಸ್ಟಾರ್ ನಲ್ಲಿ ಪ್ರಸಾರವಾಗುವ ವೆಬ್ ಸೀರಿಸ್ ನಲ್ಲಿ ತಮನ್ನಾ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ. ವಿಶೇಷ ಅಂದರೆ ಇದು ಮಹಿಳಾ ಪ್ರಧಾನ ವೆಬ್ ಸೀರಿಸ್. ಈ ಸೀರಿಸ್ ಗೆ ರಾಮ್ ಸುಭ್ರಮಣ್ಯಂ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  'ಕೆ ಜಿ ಎಫ್' ಬಗ್ಗೆ ನಟಿ ತಮನ್ನಾ ಹೀಗೆ ಹೇಳಿದ್ರು'ಕೆ ಜಿ ಎಫ್' ಬಗ್ಗೆ ನಟಿ ತಮನ್ನಾ ಹೀಗೆ ಹೇಳಿದ್ರು

  ಇದು ತಂದೆ ಮತ್ತು ಮಗಳ ಸಂಬಂಧದ ಸುತ್ತ ಸುತ್ತುವ ಕಥೆಯಾಗಿದೆಯಂತೆ. ಇತ್ತೀಚಿಗೆ ಖ್ಯಾತ ನಟಿಮಣಿಯರು ವೆಬ್ ಸೀರಿಸ್ ಕಡೆ ಮುಖ ಮಾಡುತ್ತಿದ್ದಾರೆ. ಈಗಾಗಲೆ ದಕ್ಷಿಣ ಭಾರತೀಯ ಚಿತ್ರರಂಗದಿಂದ ನಟಿ ಸಮಂತಾ, ಅಮಲಾ ಪೌಲ್ ಡಿಟಿಜಲ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಈಗ ಅವರ ಸಾಲಿಗೆ ನಟಿ ತಮನ್ನಾ ಕೂಡ ಸೇರಿಕೊಳ್ಳುತ್ತಿದ್ದಾರೆ.

  ತಮನ್ನಾ ಸದ್ಯ ತಮಿಳು ಮತ್ತು ತೆಲುಗು ಚಿತ್ರರಂಗ ಸೇರಿದಂತೆ ಹಿಂದಿ ಚಿತ್ರರಂಗದಲ್ಲೂ ಬ್ಯುಸಿಯಾಗಿದ್ದಾರೆ. ಮಹೇಶ್ ಬಾಬು ಮತ್ತು ರಶ್ಮಿಕಾ ಅಭಿನಯದ ಸರಿಲೇರು ನೀಕೆವ್ವರು ಚಿತ್ರದಲ್ಲಿ ಗೆಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಬಾಲಿವುಡ್ ನಲ್ಲಿ ಬೋಲೆ ಚುಡಿಯನ್ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಜೊತೆ ಅಭಿನಯಿಸುತ್ತಿದ್ದಾರೆ.

  Read more about: tamanna ತಮನ್ನಾ
  English summary
  South Indian actress Tamanna entered to web series. Tamanna Bhatia starrer, female-oriented web series.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X