For Quick Alerts
  ALLOW NOTIFICATIONS  
  For Daily Alerts

  ನನ್ನ ಸಮಾಧಿಯ ಮೇಲೆ ಹೀಗೆ ಬರೆಯಿರಿ ಎಂದಿದ್ದರು ಎಸ್‌ಪಿ ಬಾಲಸುಬ್ರಹ್ಮಣ್ಯಂ

  |

  ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಇಂದು ನಿಧನ ಹೊಂದಿದ್ದಾರೆ. ಐವತ್ತು ವರ್ಷಗಳಿಂದ ಹಾಡುತ್ತಿದ್ದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಹಲವರನ್ನು ತಮ್ಮ ಗುರುಗಳೆಂದು ಭಾವಿಸಿದ್ದರು, ಪೂಜಿಸಿದ್ದರು. ಅದರಲ್ಲಿ ಬಾಲಮುರಳಿಕೃಷ್ಣ ಪ್ರಮುಖರು.

  ಖ್ಯಾತ ಸಂಗೀತಜ್ಞ ಬಾಲಮುರಳಿ ಕೃಷ್ಣ ಅವರನ್ನು ತಂದೆಯೆಂದೇ ಕರೆಯುತ್ತಿದ್ದರು ಎಸ್‌.ಬಿ.ಬಾಲಸುಬ್ರಹ್ಮಣ್ಯಂ. ಪಂಡಿತ ಬಾಲಮುರಳಿಕೃಷ್ಣ ಅವರೂ ಸಹ ಪುತ್ರವಾತ್ಸಲ್ಯದಿಂದಲೇ ಎಸ್‌.ಪಿ.ಬಿ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ.

  ಎಸ್‌ಪಿ ಬಾಲಸುಬ್ರಹ್ಮಣ್ಯಂ ಹಾಡಿದ ಮೊದಲ ಹಾಗೂ ಕೊನೆಯ ಕನ್ನಡ ಹಾಡುಗಳು ಇವು

  ಬಾಲಮುರಳಿಕೃಷ್ಣ ಅವರನ್ನು ದೇವರೆಂದೇ ನಂಬಿದ್ದರು ಎಸ್‌ಪಿಬಿ. ಹಲವು ಕಾರ್ಯಕ್ರಮಗಳಲ್ಲಿ ಬಾಲಮುರಳಿಕೃಷ್ಣ ಅವರ ಬಗ್ಗೆ ಆರಾಧನಾ ಭಾವದಲ್ಲಿ ಎಸ್‌ಪಿಬಿ ಮಾತನಾಡಿದ್ದಾರೆ. ಅಂಥಹಾ ಬಾಲಮುರಳಿ ಕೃಷ್ಣ ಅವರು ಎಸ್‌ಪಿಬಿ ಅವರನ್ನು ಒಮ್ಮೆ ಹೊಗಳಿದ್ದರಂತೆ, ಅವರ ಆ ಹೊಗಳಿಕೆಯನ್ನೇ ನನ್ನ ಸಮಾಧಿಯ ಮೇಲೆ ಬರೆಯಿರಿ ಎಂದಿದ್ದರು ಎಸ್‌ಪಿಬಿ.

  ರಿಯಾಲಿಟಿ ಶೋ ಗೆ ಅತಿಥಿಯಾಗಿ ಬಂದಿದ್ದ ಎಂ.ಬಾಲಮುರಳಿ ಕೃಷ್ಣ

  ರಿಯಾಲಿಟಿ ಶೋ ಗೆ ಅತಿಥಿಯಾಗಿ ಬಂದಿದ್ದ ಎಂ.ಬಾಲಮುರಳಿ ಕೃಷ್ಣ

  1998 ರ ಸಮಯದಲ್ಲಿ ಬಾಲಸುಬ್ರಹ್ಮಣ್ಯಂ ಅವರು 'ಪಾಡುತಾ ತೀಯಗಾ' ಎಂಬ ಹಾಡಿನ ರಿಯಾಲಿಟಿ ಶೋ ಮಾಡಿದ್ದರು. ಕಾರ್ಯಕ್ರಮದ ಫೈನಲ್‌ಗೆ ಪ್ರಶಸ್ತಿ ಕೊಡಲು ಪಂಡಿತ ಎಂ.ಬಾಲಮುರಳಿ ಕೃಷ್ಣ ಅವರನ್ನು ಆಹ್ವಾನಿಸಿದ್ದರು ಎಸ್‌ಪಿಬಿ.

  ಬಾರದ ಊರಿಗೆ ಎಸ್ಪಿಬಿ: ಚೆನ್ನೈನಿಂದ ಬೆಂಗಳೂರಿಗೆ ಹಾಡಲು ಬಂದಾಗ ನಡೆದ ಘಟನೆ

  ಎಸ್‌ಪಿಬಿಯನ್ನು ಹೊಗಳಿದ್ದ ಎಂ.ಬಾಲಮುರಳಿ ಕೃಷ್ಣ

  ಎಸ್‌ಪಿಬಿಯನ್ನು ಹೊಗಳಿದ್ದ ಎಂ.ಬಾಲಮುರಳಿ ಕೃಷ್ಣ

  ಆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಎಂ.ಬಾಲಮುರಳಿ ಕೃಷ್ಣ, 'ಕೊಂಚ ಶ್ರಮಪಟ್ಟರೆ ಬಾಲಸುಬ್ರಹ್ಮಣ್ಯಂ ನನ್ನ ಹಾಗೆ ಹಾಡಿ ಬಿಡುತ್ತಾನೆ, ಆದರೆ ಎಷ್ಟೇ ಕಷ್ಟಪಟ್ಟರು ನಾನು ಅವನ ಹಾಗೆ ಹಾಡಲು ಸಾಧ್ಯವಿಲ್ಲ' ಎಂದು ಹೊಗಳಿದ್ದರಂತೆ. ಇದನ್ನು ಹಲವು ಕಾರ್ಯಕ್ರಮಗಳಲ್ಲಿ ಎಸ್‌ಪಿಬಿ ಹೇಳಿದ್ದಾರೆ.

  ನನ್ನ ಸಮಾಧಿಯ ಮೇಲೆ ಹೀಗೆ ಬರೆಯಿರಿ: ಎಸ್‌ಪಿಬಿ

  ನನ್ನ ಸಮಾಧಿಯ ಮೇಲೆ ಹೀಗೆ ಬರೆಯಿರಿ: ಎಸ್‌ಪಿಬಿ

  'ನನ್ನ ಸಮಾಧಿಯ ಮೇಲೆ ಏನಾದರು ಬರೆಯಬೇಕೆಂದರೆ, ಬಾಲಮುರಳಿ ಕೃಷ್ಣ ಅವರು ನನ್ನನ್ನು ಹೊಗಳಿದ್ದ ಆ ಮಾತನ್ನು ಬರೆಯಿರಿ. ಎಂ.ಬಾಲಮುರಳಿ ಕೃಷ್ಣ ಅಂಥಹಾ ದೊಡ್ಡ ವ್ಯಕ್ತಿಯಿಂದ ಹೀಗೆಂದು ಆಶೀರ್ವಾದ ಪಡೆದುಕೊಂಡಿದ್ದಾನೆ ಈತ, ಇದು ಈತನ ಜೀವನ ಸಾಧನೆ, ಎಂದು ನನ್ನ ಸಮಾಧಿಯ ಮೇಲೆ ಬರೆಯಿರಿ' ಎಂದಿದ್ದರು ಎಸ್‌ಪಿಬಿ.

  SP Balasubramanyam : ದೇಶ ಕಂಡ ಅದ್ಬುತ ಗಾಯಕ ಇನ್ನಿಲ್ಲ | Filmibeat Kannada
  2016 ರಲ್ಲಿ ಕೊನೆ ಉಸಿರೆಳೆದ ಎಂ.ಬಾಲಮುರಳಿ ಕೃಷ್ಣ

  2016 ರಲ್ಲಿ ಕೊನೆ ಉಸಿರೆಳೆದ ಎಂ.ಬಾಲಮುರಳಿ ಕೃಷ್ಣ

  ಎಸ್‌ಪಿಬಿ ಅವರು ಎಂ.ಬಾಲಮುರಳಿ ಕೃಷ್ಣ ಅವರನ್ನು ಋಷಿಯೆಂದು, ಕಮಲದ ಮೇಲೆ ಕೂರದ ಸರಸ್ವತಿ ಎಂದು, ಭೂಮಿಗೆ ಬಂದ ದೇವರೆಂದು ಕರೆಯುತ್ತಿದ್ದರು. ಬಾಲಮುರಳಿ ಕೃಷ್ಣ ಅವರು 2016 ರ ನವೆಂಬರ್ 22 ರಂದು ಚೆನ್ನೈ ನಲ್ಲಿ ಕೊನೆ ಉಸಿರೆಳೆದರು.

  ದಿಗ್ಗಜ ಗಾಯಕ ಎಸ್‌ಪಿ ಬಾಲಸುಬ್ರಮಣ್ಯಂ ಬಗ್ಗೆ ನೀವು ತಿಳಿಯಬೇಕಾದ ಆಸಕ್ತಿಕರ ಅಂಶಗಳು

  English summary
  Singer SP Balasubrahmanyam wanted these words to write on his grave. He said this long back.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X