For Quick Alerts
  ALLOW NOTIFICATIONS  
  For Daily Alerts

  ಸತತ ಸೆಕ್ಸ್‌ ಕೊರೊನಾ ವೈರಸ್ ಅನ್ನು ಕೊಲ್ಲುತ್ತೆ ಎಂದಳು ಈ ನಟಿ

  |

  ಕೊರೊನಾ ಭೀತಿ ಎಲ್ಲೆಡೆ ಭೀತಿ ನಿರ್ಮಿಸಿದೆ. ಕೊರೊನಾ ವೈರಸ್ ಇಂದ ಪಾರಾಗಲು ಇಡೀಯ ವಿಶ್ವವೇ ಔಷಧಗಳ ಹುಡುಕಾಟದಲ್ಲಿ ತೊಡಗಿದೆ. ಆದರೆ ಇದೇ ಸಮಯ ಬಳಸಿಕೊಂಡು ಕೆಲವರು ಸುಖಾ-ಸುಮ್ಮನೆ ಸುಳ್ಳು ಸುದ್ದಿಗಳನ್ನು ಹರಡುವುದರಲ್ಲಿ ತೊಡಗಿದ್ದಾರೆ.

  ಮಕ್ಕಳ ಬಗ್ಗೆ ಹೆಚ್ಚು ಕೇರ್ ತಗೊಳ್ಳಿ | Beatcorona | Srimurali | Indiafightscorona | Awareness

  ಈ ರೀತಿ ಸುಳ್ಳು ಸುದ್ದಿ ಹರಡುವುದರಲ್ಲಿ ಸೆಲೆಬ್ರಿಟಿಗಳು ಎನಿಸಿಕೊಂಡವರೂ ಸಹ ಸೇರಿಕೊಂಡಿರುವುದು ದುರಾದೃಷ್ಟ. ನಟನೆಗಿಂತಲೂ ವಿವಾದಗಳಿಂದಲೇ ಖ್ಯಾತವಾಗಿರುವ ತೆಲುಗಿನ ನಟಿಯೊಬ್ಬರು ಕೊರೊನಾ ವೈರಸ್ ಹೋಗಲಾಡಿಸಲು ಸೂತ್ರವೊಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ತೆಲುಗಿನ ವಿವಾದಾತ್ಮಕ ಸೆಲೆಬ್ರಿಟಿ ಶ್ರೀರೆಡ್ಡಿ, ಕೊರೊನಾ ವೈರಸ್ ಬರದಂತೆ ತಡೆಗಟ್ಟಲು ಹೊಸ ಐಡಿಯಾವನ್ನು ಕಂಡು ಹಿಡಿದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಜನರಿಂದ ಚೆನ್ನಾಗಿ ಬೈಸಿಕೊಂಡಿದ್ದಾರೆ.

  ಸತತ ಸೆಕ್ಸ್ ಮಾಡಿ ಎಂದ ಶ್ರೀರೆಡ್ಡಿ

  ಸತತ ಸೆಕ್ಸ್ ಮಾಡಿ ಎಂದ ಶ್ರೀರೆಡ್ಡಿ

  'ಸತತವಾಗಿ ಸೆಕ್ಸ್ ಮಾಡಿದರೆ ಕೊರೊನಾ ವೈರಸ್ ಬರುವುದಿಲ್ಲ, ಇದು ವೈಜ್ಞಾನಿಕವಾಗಿ ಸಾಬೀತಾಗಿದೆ'' ಎಂದು ಶ್ರೀರೆಡ್ಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಆದರೆ ಇದು ಸಂಪೂರ್ಣ ಸುಳ್ಳಾಗಿದೆ.

  ಶ್ರೀರೆಡ್ಡಿ ಮಾತಿಗೆ ಯಾವುದೇ ಆಧಾರವಿಲ್ಲ

  ಶ್ರೀರೆಡ್ಡಿ ಮಾತಿಗೆ ಯಾವುದೇ ಆಧಾರವಿಲ್ಲ

  ಲೈಂಗಿಕತೆಯಿಂದ ಕೊರೊನಾ ವೈರಸ್ ದೂರ ಮಾಡಬಹುದು, ಅಥವಾ ಬರದಂತೆ ತಡೆಗಟ್ಟಬಹುದು ಎಂಬುದು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ. ಶ್ರೀರೆಡ್ಡಿ ಹೇಳಿರುವಂತೆ ಇದು ವೈಜ್ಞಾನಿಕವಾಗಿ ಸಾಬೀತು ಸಹ ಆಗಿಲ್ಲ.

  ನೆಟ್ಟಿಗರಿಂದ ಉಗಿಸಿಕೊಂಡ ಶ್ರೀರೆಡ್ಡಿ

  ನೆಟ್ಟಿಗರಿಂದ ಉಗಿಸಿಕೊಂಡ ಶ್ರೀರೆಡ್ಡಿ

  ತಮ್ಮ ಪೋಸ್ಟ್‌ನಿಂದ ನೆಟ್ಟಿಗರಿಂದ ಸರಿಯಾಗಿ ಉಗಿಸಿಕೊಂಡಿದ್ದಾರೆ ಶ್ರೀರೆಡ್ಡಿ. ಹಾಗೊಂದು ವೇಳೆ ಲೈಂಗಿಕತೆಯಿಂದ ಕೊರೊನಾ ವೈರಸ್ ಗುಣವಾಗುವುದಾದರೆ, ನೀವೇಕೆ ರೋಗಿಗಳೊಂದಿಗೆ ಸೆಕ್ಸ್‌ ಗೆ ಇಳಿಯಬಾರದು? ಎಂದು ಪ್ರಶ್ನೆ ಮಾಡಿದ್ದಾರೆ.

  ಶ್ರೀರೆಡ್ಡಿ ವಿರುದ್ಧ ದೂರು ದಾಖಲಿಸಿ: ಒತ್ತಾಯ

  ಶ್ರೀರೆಡ್ಡಿ ವಿರುದ್ಧ ದೂರು ದಾಖಲಿಸಿ: ಒತ್ತಾಯ

  ವಿಶ್ವವೇ ಕೊರೊನಾ ವೈರಸ್ ಬಗ್ಗೆ ಗಂಭೀರವಾಗಿರುವಾಗ ಈ ರೀತಿ ತಮಾಷೆಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಶ್ರೀರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿ ಎಂದು ಜನರು ಒತ್ತಾಯ ಮಾಡಿದ್ದಾರೆ. ಶ್ರೀರೆಡ್ಡಿ ವಿರುದ್ಧ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.

  ಅರೆಬೆತ್ತಲೆ ಪ್ರತಿಭಟನೆ ಮಾಡಿದ್ದ ಶ್ರೀರೆಡ್ಡಿ

  ಅರೆಬೆತ್ತಲೆ ಪ್ರತಿಭಟನೆ ಮಾಡಿದ್ದ ಶ್ರೀರೆಡ್ಡಿ

  ನಟಿ ಶ್ರೀರೆಡ್ಡಿ ವಿವಾದಗಳಿಂದಲೇ ಖ್ಯಾತರಾಗಿರುವವರು. ತಮ್ಮ ಮೇಲೆ ಲೈಂಗಿಕ ಶೋಷಣೆ ಮಾಡಲಾಗಿದೆ ಎಂದು ದೊಡ್ಡ-ದೊಡ್ಡ ನಟರುಗಳ ಹೆಸರುಗಳನ್ನು ಶ್ರೀರೆಡ್ಡಿ ಬಹಿರಂಗಗೊಳಿಸಿದ್ದರು. ಅಷ್ಟೆ ಅಲ್ಲದೆ ಬೆತ್ತಲೆ ಪ್ರತಿಭಟನೆಯನ್ನೂ ಅವರು ಮಾಡಿದ್ದರು.

  English summary
  Telugu actress Sri Reddy give advise to cure and prevent coronavirus. People demand to take action against her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X