For Quick Alerts
  ALLOW NOTIFICATIONS  
  For Daily Alerts

  ಆತ ಸಲಿಂಗಕಾಮಿ, ಆತನೊಂದಿಗೆ ಸಮಂತಾ ಸಂಬಂಧ ಹೊಂದಿಲ್ಲ: ಶ್ರೀರೆಡ್ಡಿ

  |

  ಈ ಮೊದಲೆಲ್ಲ ಸಮಂತಾ ಮೇಲೆ ಕೆಂಡ ಕಾರುತ್ತಿದ್ದ ನಟಿ ಶ್ರೀರೆಡ್ಡಿ ಅಚಾನಕ್ಕಾಗಿ ಸಮಂತಾ ಬಗ್ಗೆ ಮೃದು ಧೋರಣೆ ತಳೆದಿದ್ದಾರೆ.

  ನಾಗ ಚೈತನ್ಯ ಜೊತೆಗೆ ಸಮಂತಾ ವಿಚ್ಛೇಧನಕ್ಕೆ ಫ್ಯಾಷನ್ ಡಿಸೈನರ್ ಜೊತೆಗಿನ ಆತ್ಮೀಯ ಸಂಬಂಧವೇ ಕಾರಣ ಎಂದು ಕೆಲವು ಸುದ್ದಿಗಳು ವಾಹಿನಿಗಳಲ್ಲಿ ಹರಿದಾಡಿತ್ತು, ಈ ಸುದ್ದಿಗಳನ್ನು ಸಮಂತಾ ಹಾಗೂ ಫ್ಯಾಷನ್ ಡಿಸೈನರ್, ಸ್ಟೈಲಿಸ್ಟ್ ಪ್ರೀತಂ ಅಲ್ಲಗಳೆದಿದ್ದಾರೆ.

  ಇದೀಗ ಈ ಬಗ್ಗೆ ಮಾತನಾಡಿರುವ ನಟಿ ಶ್ರೀರೆಡ್ಡಿ ಸಮಂತಾ ಪರ ನಿಂತಿದ್ದಾರೆ. ಇಷ್ಟು ದಿನ ಸಮಂತಾ ಬಗ್ಗೆ ಕೆಟ್ಟ ಕಮೆಂಟ್‌ಗಳನ್ನು ತಮ್ಮ ಸಾಮಾಜಿಕ ಜಾಲತಾಣ ವಿಡಿಯೋಗಳಲ್ಲಿ ಮಾಡುತ್ತಿದ್ದ ಶ್ರೀರೆಡ್ಡಿ ಅಚಾನಕ್ಕಾಗಿ ಸಮಂತಾ ಅವರನ್ನು ಬಹುವಾಗಿ ಹೊಗಳಿದ್ದಾರೆ.

  ''ಸಮಂತಾ ಸಂಬಂಧ ಹೊಂದಿದ್ದರು ಎನ್ನಲಾಗುತ್ತಿರುವ ಸ್ಟೈಲಿಷ್ಟ್ ಪ್ರೀತಂ ನಿಜಕ್ಕೂ ಸಲಿಂಗಕಾಮಿ. ಹಾಗಾಗಿ ಸಮಂತಾ ಅವನೊಟ್ಟಿಗೆ ಸಂಬಂಧ ಹೊಂದಿರಲಾರರು. ಸಮಂತಾ-ನಾಗಚೈತನ್ಯ ವಿಚ್ಛೇಧನಕ್ಕೆ ಪ್ರೀತಂ ಕಾರಣ ಆಗಲು ಸಾಧ್ಯವಿಲ್ಲ'' ಎಂದ ಶ್ರೀರೆಡ್ಡಿ. ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇಧನದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ, ''ನೀವಿಬ್ಬರೂ ಒಂದಾಗಿರಬೇಕೆಂದು ನಾವು ಬಯಸಿದ್ದೆವು. ನೀವಿಬ್ಬರೂ ಹಲವು ಯುವ ಜೋಡಿಗಳಿಗೆ ಸ್ಪೂರ್ತಿಯಾಗಿದ್ದಿರಿ. ಏನಾದರೂ ಆಗಲಿ ನೀವು ಜೊತೆಗಿರಿ, ಇದು ನನ್ನ ಮನವಿ'' ಎಂದು ಶ್ರೀರೆಡ್ಡಿ ಹೇಳಿದ್ದಾರೆ.

  ಪ್ರೀತಂನಿಂದ ವಿಚ್ಛೇದನ ಆಯಿತೆಂದು ಸುದ್ದಿ

  ಪ್ರೀತಂನಿಂದ ವಿಚ್ಛೇದನ ಆಯಿತೆಂದು ಸುದ್ದಿ

  ವಿಚ್ಛೇಧನದ ಬಳಿಕ ಸಮಂತಾ ಹಾಗೂ ಪ್ರೀತಂ ಆತ್ಮೀಯವಾಗಿರುವ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಸಮಂತಾ ಹಾಗೂ ಪ್ರೀತಂ ಪರಸ್ಪರ ಪ್ರೀತಿಸುತ್ತಿದ್ದಾರೆ ಇದೇ ಕಾರಣಕ್ಕೆ ಸಮಂತಾ, ನಾಗ ಚೈತನ್ಯರಿಂದ ವಿಚ್ಛೇದನ ಪಡೆದಿದ್ದಾರೆ ಎನ್ನಲಾಯಿತು. ಇದರಿಂದಾಗಿ ಸ್ಟೈಲಿಸ್ಟ್ ಪ್ರೀತಂ ಮೇಲೆ ಟ್ರೋಲ್ ದಾಳಿ ಸಹ ನಡೆಯಿತು.

  ಸಮಂತಾ ಅನ್ನು ಅಕ್ಕ ಎಂದು ಕರೆಯುತ್ತೇನೆ: ಪ್ರೀತಂ

  ಸಮಂತಾ ಅನ್ನು ಅಕ್ಕ ಎಂದು ಕರೆಯುತ್ತೇನೆ: ಪ್ರೀತಂ

  ''ನಾನು ಸಮಂತಾರನ್ನು ಜೀಜಿ ಎಂದು ಕರೆಯುತ್ತೇನೆ ಎಂಬುದು ಉದ್ಯಮದಲ್ಲಿರುವ ಹಲವರಿಗೆ ಗೊತ್ತಿದೆ. ಉತ್ತರ ಭಾರತೀಯ ಭಾಷೆಯಲ್ಲಿ ಜೀಜಿ ಎಂದರೆ ಅಕ್ಕ ಎಂದರ್ಥ. ಸಮಂತಾ ನನಗೆ ಸಹೋದರಿ ಸಮಾನರು'' ಎಂದಿದ್ದಾರೆ. ಹೀಗೆ ಗಾಳಿ ಸುದ್ದಿ ಹರಿದಾಡಿದಾಗ ನಾಗ ಚೈತನ್ಯ ಮನಸ್ಸು ಮಾಡಿದ್ದರೆ ಈ ಸುದ್ದಿಗಳು ಸುಳ್ಳು ಎಂದು ಹೇಳಿ ಗಾಳಿ ಸುದ್ದಿಗಳಿಗೆ ಅಂತ್ಯ ಹಾಡಬಹುದಿತ್ತು'' ಎಂದು ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.

  ಮತ್ತೊಂದು ಸುಳ್ಳು ಸುದ್ದಿ ಹಬ್ಬಿಸಲಾಯ್ತು

  ಮತ್ತೊಂದು ಸುಳ್ಳು ಸುದ್ದಿ ಹಬ್ಬಿಸಲಾಯ್ತು

  ಪ್ರೀತಂ ಜೊತೆಗಿನ ಸಂಬಂಧದ ಬಗ್ಗೆ ಸುಳ್ಳು ಸುದ್ದಿ ತಣ್ಣಗಾಗುವ ಮುನ್ನವೇ, 'ಸಮಂತಾಗೆ ತಾಯಿ ಆಗುವುದು ಇಷ್ಟವಿರಲಿಲ್ಲ. ಎರಡು ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದರು. ಇದರಿಂದಲೇ ನಾಗ ಚೈತನ್ಯ-ಸಮಂತಾ ನಡುವೆ ವಿಚ್ಛೇಧನವಾಯಿತು'' ಎಂಬ ಮತ್ತೊಂದು ಗಾಳಿ ಸುದ್ದಿ ಹರಿಬಿಡಲಾಯಿತು. ಆದರೆ ಈ ಸುದ್ದಿಯ ಬಗ್ಗೆ ಮಾತನಾಡಿದ 'ಶಕುಂತಲಾ' ಸಿನಿಮಾದ ನಿರ್ಮಾಪಕಿ ನೀಲಿಮಾ, ''ಸಮಂತಾ ಮಕ್ಕಳು ಹೊಂದಲು ಬಯಸಿದ್ದರು. ನಾನು ಮಕ್ಕಳು ಹೊಂದುವವಳಿದ್ದೇನೆ, ಆಗಸ್ಟ್ ಅಥವಾ ಜುಲೈ ತಿಂಗಳ ಒಳಗಾಗಿ ಚಿತ್ರೀಕರಣ ಮುಗಿಸಿಕೊಡಿ ಎಂದು ನಮ್ಮನ್ನು ಕೇಳಿದ್ದರು'' ಎಂದು ನೀಲಿಮಾ ಹೇಳಿದ್ದಾರೆ.

  11 ವರ್ಷದ ಸಂಬಂಧಕ್ಕೆ ವಿದಾಯ

  11 ವರ್ಷದ ಸಂಬಂಧಕ್ಕೆ ವಿದಾಯ

  ನಾಗ ಚೈತನ್ಯ ಹಾಗೂ ಸಮಂತಾ 2017 ರಲ್ಲಿ ವಿವಾಹವಾದರು. ನಾಲ್ಕು ವರ್ಷಗಳ ಬಳಿಕ ದಾಂಪತ್ಯಕ್ಕೆ ಅಂತ್ಯ ಹಾಡಿದರು. ಮದುವೆ ಆಗುವ ಮುನ್ನ ಏಳು ವರ್ಷ ಇವರಿಬ್ಬರೂ ಪ್ರೀತಿಯಲ್ಲಿದ್ದರು. ಒಟ್ಟು 11 ವರ್ಷಗಳ ಸಂಬಂಧಕ್ಕೆ ವಿಚ್ಛೇಧನದ ಮೂಲಕ ಅಂತ್ಯ ಹಾಡಿದರು. ಇಬ್ಬರ ವಿಚ್ಛೇದನಕ್ಕೆ ನಿಖರ ಕಾರಣ ಈವರೆಗೆ ತಿಳಿದು ಬಂದಿಲ್ಲ. ನಾಗ ಚೈತನ್ಯ ಹಾಗೂ ಸಮಂತಾ ಈ ವರೆಗೆ ವಿಚ್ಛೇದನಕ್ಕೆ ಕಾರಣ ಏನು ಎಂಬ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ. ವಿಚ್ಛೇದನದ ಬಳಿಕ ಮರಳಿ ಸಿನಿಮಾಗಳ ಕಡೆಗೆ ಸಮಂತಾ ಗಮನಕೊಟ್ಟಿದ್ದು, ಸತತ ಎರಡು ಸಿನಿಮಾಗಳನ್ನು ಒಟ್ಟಿಗೆ ಘೋಷಿಸಲಿದ್ದಾರೆ.

  English summary
  Actress Sri Reddy talks about Samantha and Naga Chaithanya's divorce. She said stylist Preetham is a gay Samantha can not have relationship with him.
  Monday, October 18, 2021, 16:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X