For Quick Alerts
  ALLOW NOTIFICATIONS  
  For Daily Alerts

  'RRR' ಬಳಿಕ ಮತ್ತೊಂದು ಮಲ್ಟಿ ಸ್ಟಾರ್ ಸಿನಿಮಾಗೆ ರಾಜಮೌಳಿ ಸಜ್ಜು: ನಾಯಕರು ಇವರೆ

  |
  ಮತ್ತೊಂದು ಮಲ್ಟಿಸ್ಟಾರ್ ಚಿತ್ರಕ್ಕೆ ಸಜ್ಜಾದ ರಾಜಮೌಳಿ

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್ ನ ಇಬ್ಬರು ಸ್ಟಾರ್ ನಟರಾದ ರಾಮ್ ಚರಣ್ ಮತ್ತು ಜೂ.ಎನ್ ಟಿ ಅರ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಜಮೌಳಿಯ ಈ ಸಿನಿಮಾಗಾಗಿ ದಕ್ಷಿಣ ಭಾರತೀಯ ಚಿತ್ರರಂಗ ಮಾತ್ರವಲ್ಲದೆ ಇಡೀ ದೇಶವೆ ಕಾತರದಿಂದ ಕಾಯುತ್ತಿದೆ.

  ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಇದರ ನಡುವೆ ಈಗ ರಾಜಮೌಳಿ ಕಡೆಯಿಂದ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ. ಹೌದು, ಈ ಸಿನಿಮಾ ಮುಗಿಯುತ್ತಿದ್ದಂತೆ ಮೌಳಿ ಮತ್ತೊಂದು ಮಲ್ಟಿ ಸ್ಟಾರ್ ಸಿನಿಮಾ ಮಾಡುತ್ತಿದ್ದಾರಂತೆ. ಈಗಾಗಲೆ ಈ ಸಿನಿಮಾ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ.

  RRR ಚಿತ್ರಕ್ಕಾಗಿ ಅಜಯ್ ದೇವ್ಗನ್ ಸಂಭಾವನೆ ಬಗ್ಗೆ ಗೊತ್ತಾದರೆ ಖಂಡಿತ ಆಶ್ಚರ್ಯ ಪಡ್ತೀರಾ.!

  ಮಹೇಶ್-ಪ್ರಭಾಸ್ ಗೆ ರಾಜಮೌಳಿ ನಿರ್ದೇಶನ

  ಮಹೇಶ್-ಪ್ರಭಾಸ್ ಗೆ ರಾಜಮೌಳಿ ನಿರ್ದೇಶನ

  ರಾಜಮೌಳಿ ನಿರ್ದೇಶನ ಮಾಡುತ್ತಿರುವ ಮತ್ತಿಬ್ಬರು ಸ್ಟಾರ್ ನಟರು ಮತ್ಯಾರು ಅಲ್ಲ ಮಹೇಶ್ ಬಾಬು ಮತ್ತು ಪ್ರಭಾಸ್. ಈಗಾಲೆ ರಾಜಮೌಳಿ ಆರ್ ಆರ್ ಆರ್ ಸಿನಿಮಾ ನಂತರ ಮಹೇಶ್ ಬಾಬುಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಆದರೀಗ ಈ ಚಿತ್ರದಲ್ಲಿ ಪ್ರಭಾಸ್ ಕೂಡ ಇರಲಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ.

  'ಬಾಹುಬಲಿ' ಚಿತ್ರದ ನಂತರ ಮತ್ತೆ ಒಂದಾದ ಪ್ರಭಾಸ್ ಮತ್ತು ರಾಜಮೌಳಿ

  ಮಹೇಶ್-ರಾಜಮೌಳಿ ಮೊದಲ ಸಿನಿಮಾ

  ಮಹೇಶ್-ರಾಜಮೌಳಿ ಮೊದಲ ಸಿನಿಮಾ

  ಈಗಾಗಲೆ ಪ್ರಭಾಸ್ ಜೊತೆ ರಾಜಮೌಳಿ ಸಿನಿಮಾ ಮಾಡಿದ್ದಾರೆ. ಮತ್ತೊಂದು ಮಲ್ಟಿ ಸ್ಟಾರ್ ಸಿನಿಮಾ ಮಾಡಿದರೆ ಮಹೇಶ್ ಬಾಬು ಜೊತೆ ರಾಜಮೌಳಿ ಮೊದಲ ಸಿನಿಮಾವಾಗಲಿದೆ. ಇಬ್ಬರು ಸ್ಟಾರ್ ನಟರೊಂದಿಗೆ ಸಿನಿಮಾ ಮಾಡುವುದು ಒಂದು ಸವಾಲಿನ ಕೆಲಸ. ಆದರೆ ರಾಜಮೌಳಿ ಬ್ಯಾಕ್ ಟು ಬ್ಯಾಕ್ ಮಲ್ಟಿ ಸ್ಟಾರ್ ಸಿನಿಮಾ ಮಾಡುತ್ತಿರುವುದು ಅಭಿಮಾನಿಗಳಿಗೆ ಸಂತಸದ ವಿಚಾರ.

  ನಿಜ ಆದರೆ ಅಭಿಮಾನಿಗಳಿಗೆ ದೊಡ್ಡ ಸಂಭ್ರಮ

  ನಿಜ ಆದರೆ ಅಭಿಮಾನಿಗಳಿಗೆ ದೊಡ್ಡ ಸಂಭ್ರಮ

  ಆರ್ ಆರ್ ಆರ್ ಸಿನಿಮಾ ಮಾಡಿ ಮುಗಿಸುವುದರೊಳಗೆ ಮತ್ತೊಂದು ಮಲ್ಟಿ ಸ್ಟಾರರ್ ಸಿನಿಮಾ ಮಾಡುತ್ತಿದ್ದಾರೆ ಎನ್ನುವುದು ಅಚ್ಚರಿ ಮೂಡಿಸಿದೆ. ಆದರೆ ಈ ಬಗ್ಗೆ ಮಹೇಶ್ ಬಾಬಾ ಆಗಲಿ ಅಥವಾ ಪ್ರಭಾಸ್ ಆಗಲಿ ಯಾವುದು ಸ್ಪಷ್ಟನೆ ನೀಡಿಲ್ಲ. ಒಂದು ವೇಳೆ ಈ ಸುದ್ದಿ ನಿಜವೇ ಆಗಿದ್ದರೆ ಅಭಿಮಾನಿಗಳಿಗೆ ದೊಡ್ಡ ಸಂಭ್ರಮವಾಗಲಿದೆ.

  ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಕೊಟ್ಟ ರಾಜಮೌಳಿ.!

  ಮಹೇಶ್-ಪ್ರಭಾಸ್ ಇಬ್ಬರು ಬ್ಯುಸಿ

  ಮಹೇಶ್-ಪ್ರಭಾಸ್ ಇಬ್ಬರು ಬ್ಯುಸಿ

  ಮಹೇಶ್ ಸರಿಲೇರು ನೀಕೆವ್ವರು ಸಿನಿಮಾ ಯಶಸ್ಸಿನಲ್ಲಿದ್ದಾರೆ. ಸದ್ಯ ಕೊಂಚ ಬ್ರೇಕ್ ಪಡೆದಿರುವ ಮಹೇಶ್ ವಂಶಿ ಪಡಿಪಲ್ಲಿ ನಿರ್ದೇಶನದ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಪ್ರಭಾಸ್ ಇನ್ನು ಹೆಸರಿಡದ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇವರಿಬ್ಬರ ಈ ಸಿನಿಮಾಗಳು ಮುಗಿದ ಬಳಿಕ ರಾಜಮೌಳಿ ಸಿನಿಮಾದಲ್ಲಿ ಪ್ರಭಾಸ್ ಮತ್ತು ಮಹೇಶ್ ಬಾಬು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

  English summary
  Telugu Director SS Rajamouli direct to another multi starrrer film with Mahesh Babu and Prabhas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X