For Quick Alerts
  ALLOW NOTIFICATIONS  
  For Daily Alerts

  ಪ್ರತಿಬಾರಿ ಅನುಷ್ಕಾ ಶೆಟ್ಟಿ ಕಾಲಿಗೆ ಬೀಳ್ತಾರಂತೆ ಪುರಿ ಜಗನ್ನಾಥ್, ರವಿತೇಜ

  |

  ದೊಡ್ಡವರು ಅದರಲ್ಲೂ ದೊಡ್ಡ ಸ್ಟಾರ್‌ಗಳು ತಮಗಿಂತ ಕಿರಿಯರಾದ ನಟಿಯ ಕಾಲಿಗೆ ಬೀಳುತ್ತಾರೆಂದರೆ ನಂಬಲು ಅಸಾಧ್ಯ ಎನಿಸಬಹುದು ಆದರೆ ಇದು ನಿಜ.

  ಹೌದು, ಕನ್ನಡತಿ, ತೆಲುಗಿನ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರಂತೆ ಮೂರು ದೊಡ್ಡ ಸ್ಟಾರ್‌ಗಳು. ಅದೂ ಪ್ರತಿಭಾರಿ ಭೇಟಿಯಾದಾಗಲೂ ಹೀಗೆ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರಂತೆ..

  ಕನ್ನಡತಿ ಅನುಷ್ಕಾ ಶೆಟ್ಟಿ ಬಗ್ಗೆ ಪುರಿ ಜಗನ್ನಾಥ್ ಹೇಳಿದ ಸತ್ಯಕನ್ನಡತಿ ಅನುಷ್ಕಾ ಶೆಟ್ಟಿ ಬಗ್ಗೆ ಪುರಿ ಜಗನ್ನಾಥ್ ಹೇಳಿದ ಸತ್ಯ

  ನಟಿ ಅನುಷ್ಕಾ ಶೆಟ್ಟಿ ಎದುರಾದಾಗೆಲ್ಲಾ ತೆಲುಗಿನ ಹಿರಿಯ ನಟ ರವಿತೇಜಾ, ಸ್ಟಾರ್ ಡೈರೆಕ್ಟರ್ ಪುರಿ ಜಗನ್ನಾಥ್ ಮತ್ತು ಖ್ಯಾತ ನಟಿ ಚಾರ್ಮಿ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರಂತೆ. ಹೀಗೆಂದು ಸ್ವತಃ ಪುರಿ ಜಗನ್ನಾಥ್ ಹೇಳಿದ್ದಾರೆ.

  ಕಾರ್ಯಕ್ರಮದಲ್ಲಿ ಸತ್ಯ ಬಿಚ್ಚಿಟ್ಟ ಪುರಿ ಜಗನ್ನಾಥ್

  ಕಾರ್ಯಕ್ರಮದಲ್ಲಿ ಸತ್ಯ ಬಿಚ್ಚಿಟ್ಟ ಪುರಿ ಜಗನ್ನಾಥ್

  ಅನುಷ್ಕಾ ಶೆಟ್ಟಿ ಅವರ ಹೊಸ ಸಿನಿಮಾ ನಿಷ್ಯಬ್ಧಂ ಕುರಿತ ಕಾರ್ಯಕ್ರಮವೊಂದರಲ್ಲಿ ಪುರಿ ಜಗನ್ನಾಥ್ ಹೀಗೆ ಹೇಳಿದ್ದು, 'ಅನುಮಾನವಿದ್ದರೆ ರವಿತೇಜಾ ಹಾಗೂ ಚಾರ್ಮಿಯನ್ನು ಬೇಕಾದರೆ ಕೇಳಿ' ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಅನುಷ್ಕಾ ಶೆಟ್ಟಿಯನ್ನು ರವಿತೇಜಾ, ಚಾರ್ಮಿ ಮತ್ತು ಪುರಿ ಜಗನ್ನಾಥ್ ಅಮ್ಮ ಎಂದೇ ಕರೆಯುತ್ತಾರಂತೆ.

  ಅನುಷ್ಕಾ ಶೆಟ್ಟಿ ಕಾಲಿಗೆ ಬೀಳುವುದು ಏಕೆ?

  ಅನುಷ್ಕಾ ಶೆಟ್ಟಿ ಕಾಲಿಗೆ ಬೀಳುವುದು ಏಕೆ?

  ತಾವೇಕೆ ಅನುಷ್ಕಾ ಶೆಟ್ಟಿ ಕಾಲಿಗೆ ಬೀಳುತ್ತೇವೆ ಎಂಬುದಕ್ಕೆ ಕಾರಣವನ್ನೂ ನೀಡಿರುವ ಪುರಿ ಜಗನ್ನಾಥ್, 'ಅನುಷ್ಕಾ ಶೆಟ್ಟಿ ಅಷ್ಟು ಒಳ್ಳೆಯ ವ್ಯಕ್ತಿಯನ್ನು ನಾನು ಕಂಡಿಲ್ಲ, ಆಕೆ ಬುದ್ದಿವಂತಿಕೆ ಮತ್ತು ಒಳ್ಳೆಯತನ ಸಮವಾಗಿ ಬೆರೆತ ವ್ಯಕ್ತಿ, ಅವರಲ್ಲಿನ ಒಳ್ಳೆಯ ಗುಣಗಳು ನಮಗೆ ಬರಲೆಂದು ನಾವು ಅವರ ಕಾಲಿಗೆ ಬೀಳುತ್ತೇವೆ' ಎಂದು ಪುರಿ ಜಗನ್ನಾಥ್ ಹೇಳಿದ್ದಾರೆ.

  ಸೂಪರ್ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಅನುಷ್ಕಾ ಶೆಟ್ಟಿ

  ಸೂಪರ್ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಅನುಷ್ಕಾ ಶೆಟ್ಟಿ

  ಅನುಷ್ಕಾ ಶೆಟ್ಟಿ ಮೊದಲಿಗೆ ತೆಲುಗಿನ 'ಸೂಪರ್' ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಪ್ರವೇಶಿಸಿದರು. ನಾಗಾರ್ಜುನ ನಾಯಕರಾಗಿದ್ದ ಈ ಚಿತ್ರವನ್ನು ಪುರಿ ಜಗನ್ನಾಥ್ ನಿರ್ದೇಶಿಸಿದ್ದರು. ಆ ಸಿನಿಮಾ ಬಿಡುಗಡೆ ಆಗಿ ಹದಿನೈದು ವರ್ಷವಾಗಿದೆ.

  ಕನ್ನಡತಿಯಾದರೂ ಒಂದೂ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ

  ಕನ್ನಡತಿಯಾದರೂ ಒಂದೂ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ

  ಅನುಷ್ಕಾ ಶೆಟ್ಟಿ ಸತತ ಹದಿನೈದು ವರ್ಷಗಳಿಂದ ಬಿಡುವಿಲ್ಲದ ನಟಿಯಾಗಿ ಗುರಿತಿಸಿಕೊಂಡು, ಹಲವು ನೆನಪಿನಲ್ಲಿ ಉಳಿಯುವ ಸಿನಿಮಾಗಳನ್ನು ನೀಡಿದ್ದಾರೆ. ಕನ್ನಡತಿಯಾಗಿರುವ ಅನುಷ್ಕಾ ಶೆಟ್ಟಿ ಒಂದೂ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲವೆಂಬುದು ವಿಶೇಷ.

  English summary
  Star actor Ravi Teja, Charmi and Puri Jagannadh took blessing of Anushka Sharma by touching her feet every time they meet her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X