For Quick Alerts
  ALLOW NOTIFICATIONS  
  For Daily Alerts

  ಮೆಗಾಸ್ಟಾರ್ ಹುಟ್ಟುಹಬ್ಬಕ್ಕೆ ಶುಭಕೋರಿದ ಕನ್ನಡದ ಕಿಚ್ಚ-ಸುಮಲತಾ

  |

  ದೇಶಾದ್ಯಂತ ಗೌರಿ-ಗಣೇಶದ ಹಬ್ಬದ ಸಂಭ್ರಮ ಮನೆಮಾಡಿದೆ. ಆದರೆ, ತೆಲುಗು ಇಂಡಸ್ಟ್ರಿಯಲ್ಲಿ ಗಣೇಶನ ಉತ್ಸವದ ಜೊತೆ ಮೆಗಾಸ್ಟಾರ್ ಬರ್ತಡೇ ಸಂಭ್ರಮವೂ ಜೋರಾಗಿದೆ.

  ಬ್ರಹ್ಮ ಚಿತ್ರದಲ್ಲಿನ Upendra Pranitha ಮುಂಬೈನ ಕ್ಲಬ್‌ನಲ್ಲಿ ಹಾಡಿನ ಚಿತ್ರೀಕರಣ | Filmibeat Kannada

  ಇಂದು (ಆಗಸ್ಟ್ 22) ಟಾಲಿವುಡ್ ನಟ ಚಿರಂಜೀವಿ ಅವರ ಹುಟ್ಟುಹಬ್ಬ. ಈ ವಿಶೇಷವಾಗಿ ಚಿರು ಅವರು ಕಾಮನ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಟೀಸರ್ ಶೇರ್ ಮಾಡಿರುವ ಕನ್ನಡ ನಟ ಕಿಚ್ಚ ಸುದೀಪ್ ಮತ್ತು ಸುಮಲತಾ ತೆಲುಗು ದಿಗ್ಗಜನಿಗೆ ವಿಶ್ ಮಾಡಿದ್ದಾರೆ. ಮುಂದೆ ಓದಿ....

  ನೀವೊಬ್ಬ ಪರಿಪೂರ್ಣ ವ್ಯಕ್ತಿ

  ನೀವೊಬ್ಬ ಪರಿಪೂರ್ಣ ವ್ಯಕ್ತಿ

  'ಅದ್ಭುತ ಪ್ರದರ್ಶನಕಾರ, ಮೆಗಾ ಸ್ಟಾರ್ಡಮ್, ಸರಳ ವ್ಯಕ್ತಿತ್ವ, ಉತ್ತಮ ಕುಟುಂಬ ವ್ಯಕ್ತಿ ಮತ್ತು ಅದ್ಭುತ ಸ್ನೇಹಿತ ಮತ್ತು ಸಹೋದ್ಯೋಗಿ, ನೀವೊಬ್ಬ ಸಂಪೂರ್ಣ ವ್ಯಕ್ತಿ....ನಿಮಗೆ ಸದಾ ಆರೋಗ್ಯದಿಂದ ಹಾಗೂ ಸಂತೋಷದಿಂದ ಇರಲಿ ಎಂದು ಬಯಸುತ್ತೇನೆ'' ಎಂದು ಸುಮಲತಾ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.

  ಹ್ಯಾಪಿ ಬರ್ತಡೇ ಚಿರು

  ಹ್ಯಾಪಿ ಬರ್ತಡೇ ಚಿರು

  ಚಿರಂಜೀವಿ ಹುಟ್ಟುಹಬ್ಬಕ್ಕೆ ನಟ ಕಿಚ್ಚ ಸುದೀಪ್ ಸಹ ವಿಶ್ ಮಾಡಿದ್ದಾರೆ. ಮೆಗಾಸ್ಟಾರ್ ಬರ್ತಡೇ ವಿಶೇಷವಾಗಿ ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್ ಹಂಚಿಕೊಂಡಿರುವ ಸುದೀಪ್, 'ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಹಾರೈಸಿದ್ದಾರೆ. ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

  ಚಿರಂಜೀವಿ 'ಆಚಾರ್ಯ' ಸಿನಿಮಾದಲ್ಲಿ ನಟ ರಾಮ್ ಚರಣ್ ಪಾತ್ರಕ್ಕೆ ಕತ್ತರಿ

  'ಆಚಾರ್ಯ'ದಲ್ಲಿ ಚಿರು!

  'ಆಚಾರ್ಯ'ದಲ್ಲಿ ಚಿರು!

  ಸೈರಾ ನರಸಿಂಹ ರೆಡ್ಡಿ ಸಿನಿಮಾದ ಬಳಿಕ ಮೆಗಾಸ್ಟಾರ್ ಆಚಾರ್ಯ ಎಂಬ ಸಿನಿಮಾ ಮಾಡುತ್ತಿದ್ದಾರೆ. ಕೊರಟಲಾ ಶಿವ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ಕಾಜಲ್ ಅಗರ್‌ವಾಲ್ ಮತ್ತು ರಾಮ್ ಚರಣ್ ಸಹ ನಟಿಸುತ್ತಿದ್ದಾರೆ.

  ವೇದಾಲಂ ರೀಮೇಕ್ ಘೋಷಣೆ ಸಾಧ್ಯತೆ

  ವೇದಾಲಂ ರೀಮೇಕ್ ಘೋಷಣೆ ಸಾಧ್ಯತೆ

  ಆಚಾರ್ಯ ಸಿನಿಮಾ ಬಳಿಕ ಚಿರಂಜೀವಿ ತಮಿಳಿನ ವೇದಾಲಂ ರೀಮೇಕ್‌ನಲ್ಲಿ ನಟಿಸುವ ಸಾಧ್ಯತೆ ಹೆಚ್ಚಿದೆ. ಮೆಗಾಸ್ಟಾರ್ ಬರ್ತಡೇ ವಿಶೇಷವಾಗಿ ಇಂದು ಈ ಪ್ರಾಜೆಕ್ಟ್ ಕುರಿತು ಅಧಿಕೃತ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

  ತಲಾ ಅಜಿತ್ ಅಭಿನಯದ ಈ ಸೂಪರ್ ಹಿಟ್ ಸಿನಿಮಾದ ತೆಲುಗು ರಿಮೇಕ್ ನಲ್ಲಿ ಮೆಗಾಸ್ಟಾರ್

  English summary
  Kannada actor kiccha sudeep and MP-actress Sumalatha has wish to megastar chiranjeevi's Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X