ತೆಲುಗಿನ ಬಂಪರ್ ಆಫರ್ ನಿರಾಕರಿಸಿದ ನಿರ್ದೇಶಕಿ ಸುಧಾ
ಈ ವರ್ಷ ಗಮನ ಸೆಳೆದ ಕೆಲವು ಸಿನಿಮಾಗಳ ಪೈಕಿ ತಮಿಳಿನ 'ಸೂರರೈ ಪೊಟ್ರು' ಸಹ ಒಂದು. ಈ ಸಿನಿಮಾ ಮೂಲಕ ನಿರ್ದೇಶಕಿ ಸುಧಾ ಕೊಂಗರಾ ಸಿನಿಮಾಸಕ್ತರ ಗಮನ ಸೆಳೆದಿದ್ದಾರೆ.
ಸೂರರೈ ಪೊಟ್ರು ನಂತರ ಸುಧಾ ಕೊಂಗರಾ ಕೆಲಸವನ್ನು ಸೂಕ್ಷ್ಮವಾಗಿ ಮತ್ತು ನಿರೀಕ್ಷೆಭರಿತ ದೃಷ್ಟಿಯಿಂದ ಗಮನಿಸಲಾಗುತ್ತಿದೆ. ಸೂರರೈ ಪೊಟ್ರು, ಸುಧಾ ಗೆ ಹೊಸದೇ ಒಂದು ಖ್ಯಾತಿ ತಂದುಕೊಟ್ಟಿದೆ. ಹಲವು ಸ್ಟಾರ್ ನಟರು ಸುಧಾ ಸಿನಿಮಾದಲ್ಲಿ ನಟಿಸಲು ಸಾಲು ನಿಂತಿದ್ದಾರೆ.
ತಮಿಳಿನಲ್ಲಿ ಈಗಾಗಲೇ ನಾಲ್ಕು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ ಸುಧಾ, ಅದರಲ್ಲಿ ಒಂದು ಅಂತಾಲಜಿ (ಕೆಲವು ನಿರ್ದೇಶಕರು ಸೇರಿ ಮಾಡುವ ಒಂದು ಸಿನಿಮಾ). ತೆಲುಗಿನಲ್ಲಿ ತಮ್ಮದೇ ಸಿನಿಮಾದ ರೀಮೇಕ್ ಅನ್ನು ನಿರ್ದೇಶಿಸಿದ್ದಾರೆ.

ಆಫರ್ ತಿರಸ್ಕರಿಸಿದ ಸುಧಾ ಕೊಂಗರಾ
ಇದೀಗ ತೆಲುಗಿನ ಸ್ಟಾರ್ ನಟನಿಗಾಗಿ ಸಿನಿಮಾ ಒಂದನ್ನು ಮಾಡಿಕೊಡುವಂತೆ ಸಿನಿಮಾ ಪ್ರೊಡಕ್ಷನ್ ಸಂಸ್ಥೆಯೊಂದು ಸುಧಾ ಅವರನ್ನು ಕೇಳಿತ್ತು. ಭಾರಿ ಸಂಭಾವನೆಯ ಆಮೀಷವನ್ನೂ ಒಡ್ಡಿತ್ತು, ಆದರೆ ಆಫರ್ ಅನ್ನು ತಿರಸ್ಕರಿಸಿದ್ದಾರೆ ಸುಧಾ ಕೊಂಗರಾ.

ಮೈತ್ರಿ ಮೂವೀಸ್ ನೀಡಿದ್ದ ಆಫರ್
ಶ್ರೀಮಂತುಡು, ರಂಗಸ್ಥಳಂ, ಜನತಾ ಗ್ಯಾರೇಜ್ ಅಂಥಹಾ ಸಿನಿಮಾಗಳನ್ನು ನೀಡಿರುವ ಮೈತ್ರಿ ಮೂವೀಸ್, ಸುಧಾ ಕೊಂಗರ ಅವರನ್ನು ತಮಗಾಗಿ ಸಿನಿಮಾ ನಿರ್ದೇಶಿಸುವಂತೆ ಕೇಳಿತ್ತು. ಸಿನಿಮಾದಲ್ಲಿ ಮಹೇಶ್ ಬಾಬು ಅವರನ್ನು ನಾಯಕರನ್ನಾಗಿ ಮಾಡುವಂತೆಯೂ ಕೇಳಲಾಗಿತ್ತು. ಆದರೆ ಅವರ ಆಫರ್ ನಿರಾಕರಿಸಿದ್ದಾರೆ ಸುಧಾ ಕೊಂಗರಾ.

'ನಾಯಕರ ಇಮೇಜಿಗೆ ಕತೆ ಹೊಸೆಯುವುದಿಲ್ಲ'
'ನನ್ನ ಕತೆಗಳಿಗೆ ಆಧರಿಸಿ ಸಿನಿಮಾದ ನಾಯಕರನ್ನು ಆಯ್ಕೆ ಮಾಡುತ್ತೇನೆಯೇ ವಿನಃ. ಸಿನಿಮಾದ ನಾಯಕರ ಇಮೇಜಿಗಾಗಿ ತಾವು ಕತೆ ಹೊಸೆಯುವುದಿಲ್ಲ ಎಂಬ ಗಟ್ಟಿ ಉತ್ತರವನ್ನೇ ಸುಧಾ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
Recommended Video

ಪಾವ ಕದೈಗಳ್ ಬಿಡುಗಡೆಗೆ ತಯಾರು
ಕೆಲವು ನಿರ್ದೇಶಕರ ಜೊತೆ ಸೇರಿ ಸುಧಾ ಕೊಂಗರ ನಿರ್ದೇಶಿಸಿರುವ ಮತ್ತೊಂದು ಅಂತಾಲಜಿ ಸಿನಿಮಾ, 'ಪಾವ ಕದೈಗಳ್' ಸಿನಿಮಾ ಡಿಸೆಂಬರ್ 18 ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ. ಇದನ್ನು ಹೊರತಾಗಿ, ಅಜಿತ್ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯೂ ಕೇಳಿಬರುತ್ತಿದೆ.


Click it and Unblock the Notifications











