Don't Miss!
- News
ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ: ಬಿಎಸ್ ಯಡಿಯೂರಪ್ಪ
- Sports
ನ್ಯೂಜಿಲೆಂಡ್ ವಿರುದ್ಧ ಗೆದ್ದು ಸರಣಿ ಸಮಬಲಗೊಳಿಸಿದರೂ ಅಚ್ಚರಿ ವ್ಯಕ್ತಪಡಿಸಿದ ನಾಯಕ ಹಾರ್ದಿಕ್ ಪಾಂಡ್ಯ
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಾಲಿವುಡ್ ಯಾವತ್ತಿದ್ದರೂ ಬಾಲಿವುಡ್, ಮಹೇಶ್ ಬಾಬು ಹೇಳಿಕೆಗೆ ಸುನೀಲ್ ಶೆಟ್ಟಿ ಟಾಂಗ್
ನಟ ಮಹೇಶ್ ಬಾಬು ಹೇಳಿಕೆ ಈಗ ಸೌತ್ ಹಾಗೂ ಬಾಲಿವುಡ್ ಕದನಕ್ಕೆ ಕಾರಣವಾಗಿದೆ. ಇತ್ತೀಚಿಗಷ್ಟೇ ಮಹೇಶ್ ಬಾಬು "ಬಾಲಿವುಡ್ ನನ್ನನ್ನು ಭರಿಸಲು ಸಾಧ್ಯವಿಲ್ಲ" ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ಬಾಲಿವುಡ್‌ನ ಹಲವು ನಟ ನಟಿಯರು ಅಸಮಾಧಾನ ಹೊರಹಾಕಿದ್ದರು.
ಬಾಲಿವುಡ್‌ನಲ್ಲಿ ಮಹೇಶ್ ಬಾಬು ಹೇಳಿಕೆ ವಿರುದ್ಧ ಅಸಮಾಧಾನ ಭುಗಿಲೆಳುತ್ತಿದ್ದಂತೆ ಮಹೇಶ್ ಬಾಬು ತಮ್ಮ ಹೇಳಿಕೆಯ ಬಗ್ಗೆ ಯೂಟರ್ನ್ ಹೊಡೆದಿದ್ದರು. "ನಾನು ಎಲ್ಲಾ ಭಾಷೆಯನ್ನು ಗೌರವಿಸ್ತೇನೆ, ಪ್ರೀತಿಸ್ತೇನೆ. ಎಲ್ಲಾ ಚಿತ್ರರಂಗದ ಮೇಲೂ ಅಪಾರ ಗೌರವವಿದೆ." ಎಂಬ ಹೇಳಿಕೆ ನೀಡುವ ಮೂಲಕ ಯೂಟರ್ನ್ ಹೊಡೆದಿದ್ದಾರೆ.
ಬಾಲಿವುಡ್‌ಗೆ
ನನ್ನನ್ನು
ನಿಭಾಯಿಸುವ
ಅರ್ಹತೆ
ಇಲ್ಲ:
ಮತ್ತೆ
ಟಾಂಗ್
ಕೊಟ್ಟ
ಮಹೇಶ್
ಬಾಬು
ಸದ್ಯ ಮಹೇಶ್ ಬಾಬು ಈ ಹೇಳಿಕೆ ವಿರುದ್ದ ಬಾಲಿವುಡ್‌ನ ಹಲವು ಮಂದಿ ಅಸಮಾಧಾನ ಹೊರಹಾಕಿದ್ದಾರೆ. ಈ ಹಿಂದಿನಿಂದಲೂ ಕೂಡ ಮಹೇಶ್ ಬಾಬು ಬಾಲಿವುಡ್‌ಗೆ ಹೋಗಲ್ಲ ಎಂಬ ಹೇಳಿಕೆಯನ್ನು ನೀಡುತ್ತಲೇ ಬಂದಿದ್ದರು. ಸದ್ಯ ಈಗ ನೀಡಿರುವ ಹೇಳಿಕೆ ಭಾರೀ ವೈರಲ್ ಆಗುತ್ತಿದ್ದು, ಬಾಲಿವುಡ್ ಹಲವರು ಮಹೇಶ್ ಬಾಬು ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ನಾನು
ಎಲ್ಲಾ
ಭಾಷೆಯನ್ನು
ಪ್ರೀತಿಸುತ್ತೇನೆ:
ಯೂಟರ್ನ್
ಹೊಡೆದ
ಮಹೇಶ್
ಬಾಬು

ಮಹೇಶ್ ಹೇಳಿಕೆಗೆ ಮುಖೇಶ್ ಭಟ್ ಪ್ರತಿಕ್ರಿಯೆ
ಮಹೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಲಿವುಡ್ ಖ್ಯಾತ ನಿರ್ಮಾಪಕ ಮುಖೇಶ್ ಭಟ್, "ಮಹೇಶ್ ಬಾಬು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಮಹೇಶ್ ಬಾಬು ಅವರ ಪ್ರತಿಭೆಗೆ ಮೌಲ್ಯವಿದೆ. ಹೀಗಾಗಿ ಬಾಲಿವುಡ್ ಅವರ ನಿರೀಕ್ಷೆಗಳನ್ನು ಹೊಂದಿಸಲು ಸಾಧ್ಯವಾಗುವುದಿಲ್ಲ ಎಂದರೆ ತುಂಬಾ ಒಳ್ಳೆಯದು. ಅವರು ಮಾಡಿದ ಹೆಸರಿಗೆ ತಮ್ಮದೇ ಆದ ಮೌಲ್ಯವನ್ನು ಹೊಂದಿದ್ದಾರೆ. ಇವತ್ತು ಯಶಸ್ವಿ ನಟರಾಗಿ ಗುರುತಿಸಿಕೊಂಡಿದ್ದಾರೆ. ಅವರ ನಿರೀಕ್ಷೆಗಳಿಗೆ ಬಾಲಿವುಡ್ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಅದರಲ್ಲಿ ಯಾವುದೇ ತಪ್ಪಿಲ್ಲ. ನಾನು ಅವರಿಗೆ ಶುಭ ಹಾರೈಸುತ್ತೇನೆ."ಎಂದು ಸಂದರ್ಶವೊಂದರಲ್ಲಿ ಮುಖೇಶ್ ಭಟ್ ಹೇಳಿದ್ದಾರೆ.

ಮಹೇಶ್ ಬಾಬು ಹೇಳಿಕೆಗೆ ಸುನೀಶ್ ಶೆಟ್ಟಿ ತಿರುಗೇಟು
ಇನ್ನು ಮಹೇಶ್‌ವು ಬಾಬು ಹೇಳಿಕೆ ವಿರುದ್ದ ಗರಂ ಆಗಿರುವ ನಟ ಸುನೀಲ್ ಶೆಟ್ಟಿ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. "ತಂದೆ ಯಾವತ್ತಿದ್ದರೂ ತಂದೆಯೇ.. ಹಾಗೇ ಬಾಲಿವುಡ್ ಕೂಡ ಯಾವತ್ತಿದ್ದರೂ ಬಾಲಿವುಡ್. ಭಾರತೀಯ ಚಿತ್ರರಂಗವನ್ನು ನೀವು ಗುರುತಿಸಿದರೆ, ಅದರಲ್ಲಿ ಬಾಲಿವುಡ್ ಮೊದಲಿದೆ. ಅಲ್ಲಿರುವ ಬಾಲಿವುಡ್ ನಾಯಕರನ್ನೇ ಗುರುತಿಸುವುದು" ಎಂದು ಹೇಳಿದ್ದಾರೆ. ಅಲ್ಲದೆ "ನಾವು ಪ್ರೇಕ್ಷಕರನ್ನು ಮರೆತಿದ್ದೇವೆ. ನಾವು ನಮ್ಮ ಸಿನಿಮಾಗಳ ಮೇಲೆ ಕೆಲಸ ಮಾಡಬೇಕು. ಸಿನಿಮಾ ಆಗಲಿ, ಒಟಿಟಿ ಆಗಲಿ ಎಲ್ಲವೂ ಒಂದೇ. ಬಾಲಿವುಡ್ ಯಾವತ್ತಿದ್ದರೂ ಬಾಲಿವುಡ್. ಅದನ್ನು ಬೇರ್ಪಡಿಸಲು ಸಾಧ್ಯವಿಲ್ಲ." ಎಂದು ಮಹೇಶ್ ಬಾಬು ಹೇಳಿಕೆಗೆ ಖಡಕ್ ಆಗಿ ಸುನೀಲ್ ಶೆಟ್ಟಿ ಉತ್ತರಿಸಿದ್ದಾರೆ.

'ಬಾಲಿವುಡ್‌ಗೆ ನನ್ನನ್ನು ಭರಿಸುವ ಶಕ್ತಿಯಿಲ್ಲ'
ಟಾಲಿವುಡ್‌ನ ಸೂಪರ್ ಸ್ಟಾರ್ ಮಹೇಶ್ ಬಾಬುರನ್ನು ಬಾಲಿವುಡ್ ಪಾದಾರ್ಪಣೆ ಬಗ್ಗೆ ಕೇಳಿದಾಗ, ನಟ ಮಹೇಶ್ ಬಾಬು ಅಚ್ಚರಿಯ ಹೇಳಿಕೆ ನೀಡಿದ್ದರು. ಬಾಲಿವುಡ್‌ಗೆ ನನ್ನನ್ನು ಭರಿಸಲು ಸಾಧ್ಯವಿಲ್ಲ. ನನಗೆ ಹಿಂದಿಯಲ್ಲಿ ಸಾಕಷ್ಟು ಆಫರ್‌ಗಳು ಬಂದಿವೆ. ಆದರೆ ಅವರು ನನಗೆ ಸಾಕಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಹೀಗಾಗಿ ನನ್ನನ್ನು ಖರೀದಿಸಲು ಸಾಧ್ಯವಾಗದ ಉದ್ಯಮದಲ್ಲಿ ಕೆಲಸ ಮಾಡುತ್ತಾ ಸಮಯವನ್ನು ವ್ಯರ್ಥ ಮಾಡಲು ನಾನು ಬಯಸುವುದಿಲ್ಲ. ನನಗೆ ಇಲ್ಲಿ ಸಿಗುವ ಸ್ಟಾರ್ ಢಮ್ ಮತ್ತು ಗೌರವ ದೊಡ್ಡದಾಗಿದೆ. ಹಾಗಾಗಿ ನನ್ನ ಇಂಡಸ್ಟ್ರಿ ಬಿಟ್ಟು ಬೇರೆ ಇಂಡಸ್ಟ್ರಿಗೆ ಹೋಗುವ ಬಗ್ಗೆ ನಾನು ಯೋಚಿಸಿಲ್ಲ." ಎಂದು ಹೇಳಿದ್ದರು.

ತಮ್ಮ ಹೇಳಿಕೆಗೆ ವಿರುದ್ಧ ಯೂರ್ಟನ್ ಹೊಡೆದ ಮಹೇಶ್ ಬಾಬು
ಬುಧವಾರ ಮಹೇಶ್ ಬಾಬು ತಮ್ಮ ಹೇಳಿಕೆ ವಿರುದ್ಧ ಅಸಮಾಧಾನ ವ್ಯಕ್ತವಾದ ಹಿನ್ನಲೆ ತಾವು ನೀಡಿದ್ದ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. "ನಾನು ಎಲ್ಲಾ ಭಾಷೆಯನ್ನು ಗೌರವಿಸುತ್ತೇನೆ. ಪ್ರೀತಿಸುತ್ತೇನೆ. ಯಾವ ಭಾಷೆಯನ್ನು ತುಚ್ಚವಾಗಿ ಕಾಣುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ 'ಮೇಜೆರ್' ಸಿನಿಮಾದ ಚಿತ್ರತಂಡವೂ ಕೂಡ ಅಧಿಕೃತವಾಗಿ ಸ್ಪಷ್ಟನೆ ಪಡಿಸಿದೆ. ಎಲ್ಲಾ ಭಾಷೆಯ ಚಿತ್ರರಂಗಕ್ಕೂ ಗೌರವ ಕೊಡುತ್ತೇವೆ." ಎಂದು ಹೇಳಿದೆ. "ತೆಲುಗು ಚಿತ್ರರಂಗದಲ್ಲೇ ನಾನು ಚೆನ್ನಾಗಿ ಇದ್ದೇನೆ. ಇಲ್ಲಿಯೇ ಇರಲು ಇಷ್ಟ ಪಡುತ್ತೇನೆ ಎಂಬ ಅರ್ಥದಲ್ಲಿ ನಾನು ಆ ಹೇಳಿಕೆಯನ್ನು ನೀಡಿದ್ದೆ. ಆದರೆ ಈ ಹೇಳಿಕೆಯನ್ನು ಕೆಲ ಮಾಧ್ಯಮಗಳು ತಪ್ಪಾಗಿ ಬಿಂಬಿಸಿವೆ." ಎಂದು ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟಿಕರಣ ನೀಡಿದ್ದಾರೆ.
ಇತ್ತೀಚಿಗೆ ಬಾಲಿವುಡ್ ಹಾಗೂ ಸೌತ್ ಸಿನಿಮಾಗಳು ತೀವ್ರ ಪೈಪೋಟಿ ಎದ್ದಿದೆ. ಈಗಾಗಲೇ ಬಾಲಿವುಡ್‌ನ ಸ್ಟಾರ್ ನಟರ ಸಿನಿಮಾಗಳು ಸೌತ್ ಸಿನಿಮಾಗಳ ಆರ್ಭಟಕ್ಕೆ ಧೂಳೀಪಟವಾಗಿದೆ. ಹೀಗಾಗಿ ಬಾಲಿವುಡ್ ಸ್ಟಾರ್ಸ್ ಅಂಡ್ ಸೌತ್ ಸ್ಟಾರ್ಸ್ ನಡುವೆ ಒಂದು ರೀತಿ ಕೋಲ್ಡ್ ವಾರ್ ನಡೆಯುತ್ತಿದೆ . ಇದರ ನಡುವೆಯೇ ನಟ ಮಹೇಶ್ ಬಾಬು ಹೇಳಿಕೆ ಭಾರೀ ವಿವಾದ ಸೃಷ್ಟಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಚರ್ಚೆಗಳು ಪ್ರಾರಂಭವಾಗಿವೆ.