For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು ವಿಗ್ ಧರಿಸುತ್ತಾರಾ? ಸೀಕ್ರೆಟ್ ಬಿಚ್ಚಿಟ್ಟ ಪರ್ಸನಲ್ ಮೇಕಪ್‌ಮ್ಯಾನ್!

  |

  ಹಾಲಿವುಡ್ ಹೀರೊಗಳನ್ನು ನೆನಪಿಸುವ ಸ್ಟೈಲಿಶ್ ನಟ ಮಹೇಶ್ ಬಾಬು. ವಯಸ್ಸು 40 ದಾಟಿದರೂ ಇವತ್ತಿಗೂ ಸಿಕ್ಕಾಪಟ್ಟೆ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಮಿಂಚುವ ಟಾಲಿವುಡ್ ಪ್ರಿನ್ಸ್‌ಗೆ ದೊಡ್ಡ ಅಭಿಮಾನಿ ಬಳಗ ಇದೆ.

  ಮಹೇಶ್ ಬಾಬು ಹೇರ್‌ಸ್ಟೈಲ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಾನೆ ಇರುತ್ತದೆ. ಎಲ್ಲಾ ಸಿನಿಮಾಗಳಲ್ಲೂ ಅವರು ಹೆಚ್ಚು ಕಮ್ಮಿ ಒಂದೇ ತರಹದ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಅವರು ವಿಗ್ ಧರಿಸುತ್ತಾರೆ ಎನ್ನುವ ಅನುಮಾನವನ್ನು ಕೆಲವರು ವ್ಯಕ್ತಪಡಿಸುತ್ತಾರೆ. ಇನ್ನು ಮಹೇಶ್ ಬಾಬು ತಂದೆ ಕೃಷ್ಣ ತಲೆ ಕೂದಲು ಉದುರಿ ಬಕ್ಕ ತಲೆ ಆಗಿ ವಿಗ್ ಧರಿಸುತ್ತಿದ್ದರು. ತಂದೆ ರೀತಿಯಲ್ಲೇ ಮಹೇಶ್ ಬಾಬು ತಲೆ ಕೂದಲು ಉದುರಿ ವಿಗ್ ಧರಿಸುತ್ತಾರೆ ಎನ್ನುವುದು ಕೆಲವರ ವಾದ.

  ಕೈ ಸನ್ನೆ.. ಕಣ್ಸನ್ನೆ.. ಸೂತಕದ ಮನೆಯಲ್ಲೂ ನರೇಶ್- ಪವಿತ್ರಾ ಲೋಕೇಶ್ ಡ್ರಾಮಾ: ಮಹೇಶ್‌ ಬಾಬುಗೂ ಮುಜುಗರ!ಕೈ ಸನ್ನೆ.. ಕಣ್ಸನ್ನೆ.. ಸೂತಕದ ಮನೆಯಲ್ಲೂ ನರೇಶ್- ಪವಿತ್ರಾ ಲೋಕೇಶ್ ಡ್ರಾಮಾ: ಮಹೇಶ್‌ ಬಾಬುಗೂ ಮುಜುಗರ!

  ಇನ್ನು ಮಹೇಶ್ ಬಾಬು ಬಕ್ಕ ತಲೆಯ ಫೋಟೊವೊಂದು ಬಹಳ ವರ್ಷಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇತ್ತೀಚೆಗೆ ನಟ ಸೂಪರ್ ಸ್ಟಾರ್ ಕೃಷ್ಣ ನಿಧನರಾಗಿದ್ದರು. ಸದ್ಯ ಅವರ ಪರ್ಸನಲ್ ಮೇಕಪ್‌ಮ್ಯಾನ್ ಚೆಬ್ರೋಲು ಮಾಧವ ರಾವ್, ನಟ ಕೃಷ್ಣ ಹಾಗೂ ಮಹೇಶ್‌ ಬಾಬು ಹೇರ್‌ಸ್ಟೈಲ್ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

  ನಟ ಕೃಷ್ಣ ವಿಗ್ ಧರಿಸುತ್ತಿದ್ದರು

  ನಟ ಕೃಷ್ಣ ವಿಗ್ ಧರಿಸುತ್ತಿದ್ದರು

  ಸೂಪರ್ ಸ್ಟಾರ್ ಕೃಷ್ಣ ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಿಂದಲೂ ಚೆಬ್ರೋಲು ಮಾಧವ ರಾವ್ ಅವರಿಗೆ ಜೊತೆಗಿದ್ದರು. ಕೃಷ್ಣ ನಟನೆಯ ಸಾಕಷ್ಟು ಸಿನಿಮಾಗಳಿಗೆ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. "ಕೃಷ್ಣ ಆರಂಭದಲ್ಲಿ ಒರಿಜಿನಲ್ ತಲೆ ಜುಟ್ಟಿನಿಂದಲೇ ನಟಿಸುತ್ತಿದ್ದಾರೆ. ಕೆಲವೊಮ್ಮೆ ವಿಗ್ ಧರಿಸಿದ ಕಾರಣ ಅವರ ತಲೆ ಕೂದಲು ಉದುರಲು ಆರಂಭವಾಗಿತ್ತು. ತೀರ ಕೂದಲು ತೆಳ್ಳಗಾದಾಗ ಬೇರೆ ವಿಧಿಯಿಲ್ಲದೇ ವಿಗ್ ಧರಿಸಲು ಆರಂಭಿಸಿದರು" ಎಂದು ಮಾಧವರಾವ್ ಹೇಳಿದ್ದಾರೆ.

  ಮಹೇಶ್ ಬಾಬು ಕೂಡ ವಿಗ್ ಬಳಸುತ್ತಾರೆ

  ಮಹೇಶ್ ಬಾಬು ಕೂಡ ವಿಗ್ ಬಳಸುತ್ತಾರೆ

  ಕೃಷ್ಣ ಪುತ್ರ ಮಹೇಶ್ ಬಾಬು ಕುರಿತು ಕೂಡ ಮಾಧವರಾವ್ ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ. "ಮಹೇಶ್ ಬಾಲನಟನಾಗಿ ನಟಿಸುವಾಗ ನಾನು ಆತನಿಗೆ ಮೇಕಪ್ ಹಾಕಿದ್ದೆ. ನಂತರ ನನ್ನ ಸೋದರಳಿಯ ಪಟ್ಟಾಭಿ ಮೇಕಪ್ ಹಾಕಲು ಆರಂಭಿಸಿದ. ಮಹೇಶ್ ಬಾಬು ಆರಂಭದಲ್ಲಿ ವಿಗ್ ಧರಿಸುತ್ತಿರಲಿಲ್ಲ.ಆದರೆ ಕೂದಲು ತೀರಾ ಉದುರಿ ತೆಳ್ಳಗಾದ ಮೇಲೆ ಸಾಕಷ್ಟು ಸಿನಿಮಾಗಳಲ್ಲಿ ವಿಗ್ ಧರಿಸಲು ಬಳಸಿದರು" ಎಂದಿದ್ದಾರೆ.

  ಮಹೇಶ್ ಬಾಬು ವಿಗ್ ಧರಿಸಲ್ಲ!

  ಮಹೇಶ್ ಬಾಬು ವಿಗ್ ಧರಿಸಲ್ಲ!

  ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ವಿಗ್ ಧರಿಸುತ್ತಾರೆ ಎನ್ನುವ ವಾದವನ್ನು ಅಭಿಮಾನಿಗಳು ಒಪ್ಪುವುದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೊಗಳು ಫೇಕ್ ಎನ್ನುವುದು ಅವರ ವಾದ. ಮಹೇಶ್ ಬಾಬು ಹೇರ್ ಟ್ರಾನ್ಸ್‌ಫ್ಲೆಂಟ್ ಮಾಡಿಸಿಕೊಂಡಿದ್ದಾರೆ. ಹಾಗಾಗಿ ಅದು ಒರಿಜಿನಲ್ ಜುಟ್ಟು ಎಂದು ಅಭಿಮಾನಿಗಳು ಹೇಳುತ್ತಾರೆ. ಕ್ಯೂ6 ಹೇರ್ ಪ್ಯಾಚ್ ಟೆಕ್ನಾಲಜಿ ಬಳಸಿ ಹೇರ್ ಟ್ರಾನ್ಸ್‌ಫ್ಲೆಂಟೇಷನ್ ಮಾಡಿಸಿಕೊಂಡಿದ್ದಾರೆ. ಹಾಗಾಗಿ ಒರಿಜಿನಲ್ ರೀತಿಯೇ ಇದೆ ಎನ್ನುತ್ತಾರೆ.

  ತ್ರಿವಿಕ್ರಮ್ ಚಿತ್ರದಲ್ಲಿ ಪ್ರಿನ್ಸ್ ನಟನೆ

  ತ್ರಿವಿಕ್ರಮ್ ಚಿತ್ರದಲ್ಲಿ ಪ್ರಿನ್ಸ್ ನಟನೆ

  ಸದ್ಯ ಮಹೇಶ್ ಬಾಬು ತಂದೆ ಅಗಲಿಕೆಯ ನೋವಿನಲ್ಲಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸಿನಿಮಾ ಚಿತ್ರೀಕರಣ ಮುಂದೂಡಲಾಗಿದೆ. ಈ ಚಿತ್ರವನ್ನು ಮುಂದಿನ ವರ್ಷ ಸಮ್ಮರ್‌ನಲ್ಲಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಇನ್ನು ರಾಜಮೌಳಿ ನಿರ್ದೇಶನದ ಪ್ಯಾನ್ ವರ್ಲ್ಡ್ ಚಿತ್ರಕ್ಕೂ ಸೂಪರ್ ಸ್ಟಾರ್ ಮಹೇಶ್ ಬಾಬು ಗ್ರೀನ್‌ ಸಿಗ್ನಲ್ ಕೊಟ್ಟಿದ್ದಾರೆ. ಈ ಸಿನಿಮಾ ಯಾವಾಗ ಸೆಟ್ಟೇರುತ್ತೋ ಗೊತ್ತಿಲ್ಲ.

  English summary
  Super Star Mahesh babu Hairstyle and wig secret revealed. make up artist Chebrolu Madhavrao said that initially he did not wear a wig, but as his hair started to fall out, he started wearing it.
  Thursday, November 24, 2022, 10:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X