For Quick Alerts
  ALLOW NOTIFICATIONS  
  For Daily Alerts

  ಮಗನ ಚಿತ್ರ ನೋಡಿ ಸೂಪರ್ ಸ್ಟಾರ್ ಕೃಷ್ಣ ಹೇಳಿದ್ದೇನು?

  |

  ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಚಿತ್ರ ಬಾಕ್ಸ್ ಆಫೀಸ್ ಧೂಳೆಬ್ಬಿಸಿ ಅದ್ಭುತ ಪ್ರದರ್ಶನ ಕಾಣುತ್ತಿದೆ. ಮಹೇಶ್ ಬಾಬು ವೃತ್ತಿ ಜೀವನದಲ್ಲಿ ಈ ಚಿತ್ರ ವಿಶೇಷ ಹಾಗು ಮೈಲಿಗಲ್ಲು ಎನ್ನಲಾಗುತ್ತಿದೆ.

  ರವಿ ಅನಿಲ್ ಪುಡಿ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಕನ್ನಡದ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದರು. ಹಿರಿಯ ನಟಿ ವಿಜಯಶಾಂತಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಹಾಗೂ ದಿಲ್ ರಾಜು ನಿರ್ಮಾಣ ಮಾಡಿದ್ದರು.

  ಮಹೇಶ್ ಬಾಬು ಮುಂದಿನ ಚಿತ್ರದಲ್ಲಿ 'ನ್ಯಾಷನಲ್ ಸ್ಟಾರ್'!ಮಹೇಶ್ ಬಾಬು ಮುಂದಿನ ಚಿತ್ರದಲ್ಲಿ 'ನ್ಯಾಷನಲ್ ಸ್ಟಾರ್'!

  ಇದೀಗ, ಈ ಚಿತ್ರವನ್ನ ಮಹೇಶ್ ಬಾಬು ಅವರ ತಂದೆ ಸೂಪರ್ ಸ್ಟಾರ್ ಕೃಷ್ಣ ನೋಡಿ ಮೆಚ್ಚಿಕೊಂಡಿದ್ದಾರೆ. ಬಳಿಕ ಚಿತ್ರದ ಬಗ್ಗೆ ಮಾತನಾಡಿರುವ ಕೃಷ್ಣ ''ಸರಿಲೇರು ನೀಕೆವ್ವರು ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ನಿರ್ದೇಶಕ ಮತ್ತು ನಿರ್ಮಾಪಕ ಅದಕ್ಕೆ ಬ್ಲಾಕ್ ಬಸ್ಟರ್ ಕಾ ಬಾಪ್ ಎಂದು ಪ್ರಚಾರ ಮಾಡುತ್ತಿರುವುದು ಖುಷಿ ಕೊಟ್ಟಿದೆ. ನನ್ನ ಪ್ರಕಾರ ಈ ಸಿನಿಮಾ ತುಂಬಾ ದಿನ ಪ್ರದರ್ಶನವಾಗಲಿದೆ. ನಿರ್ಮಾಪಕರು ಯಾವುದೇ ಅಂಜಿಕೆ ಇಲ್ಲದೆ ದುಡ್ಡು ಖರ್ಚು ಮಾಡಿ ಸಿನಿಮಾ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ನಿರ್ದೇಶಕರು ಸಿನಿಮಾ ಮಾಡಿದ್ದಾರೆ'' ಎಂದು ಸಂತಸ ಹಂಚಿಕೊಂಡಿದ್ದಾರೆ.

  ದೂರದ ಅಮೇರಿಕಾದಲ್ಲೂ ಮಹೇಶ್ ಬಾಬು ದಾಖಲೆ ಅಳಿಸಿ ಹಾಕಿದ ಅಲ್ಲು ಅರ್ಜುನ್.!ದೂರದ ಅಮೇರಿಕಾದಲ್ಲೂ ಮಹೇಶ್ ಬಾಬು ದಾಖಲೆ ಅಳಿಸಿ ಹಾಕಿದ ಅಲ್ಲು ಅರ್ಜುನ್.!

  ಕೃಷ್ಣ ಅವರ ಮೆಚ್ಚುಗೆಗೆ ಧನ್ಯವಾದ ತಿಳಿಸಿರುವ ಮಹೇಶ್ ಬಾಬು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

  ನೂರು ಕೋಟಿ ಗಳಿಸಿದ್ದ ಸಿನಿಮಾ ವಿದೇಶದಲ್ಲೂ ಕಮಾಲ್ ಮಾಡ್ತಿದೆ. ಈ ಮೂಲಕ ಭರತ್ ಅನೇ ನೇನು, ಮಹರ್ಷಿ ಹಾಗೂ ಸರಿಲೇರು ನೀಕೆವ್ವರು ಚಿತ್ರಗಳ ಹ್ಯಾಟ್ರಿಕ್ ಗೆಲುವು ಮಹೇಶ್ ಬಾಬು ಇಮೇಜ್ ಹೆಚ್ಚಿಸಿದೆ.

  English summary
  Superstar mahesh babu father Krishna Praised about Sarileru Neekevvaru movie for huge success.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X