For Quick Alerts
  ALLOW NOTIFICATIONS  
  For Daily Alerts

  ಒಂದು ಹಾಡಿಗೆ ದೊಡ್ಡ ಸಂಭಾವನೆ ಪಡೆಯುತ್ತಿದ್ದಾರೆ ತಮನ್ನಾ

  |

  ಮಿಲ್ಕಿ ಬ್ಯೂಟಿ ಎಂದೇ ಖ್ಯಾತರಾಗಿರುವ ನಟಿ ತಮನ್ನಾ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿರುವ ಜೊತೆ-ಜೊತೆಗೆ ಸಿನಿಮಾಗಳಲ್ಲಿ ವಿಶೇಷ ಹಾಡುಗಳು ಹಾಗೂ ವೆಬ್ ಸರಣಿಗಳಲ್ಲಿ ಸಹ ನಟಿಸುತ್ತಿದ್ದಾರೆ.

  ಐಟಂ ಮಾದರಿಯ ಕೆಲವು ಹಾಡುಗಳಲ್ಲಿ ಈಗಾಗಲೇ ಕಾಣಿಸಿಕೊಂಡಿರುವ ನಟಿ ತಮನ್ನಾ ಇದೀಗ ತೆಲುಗು ಸಿನಿಮಾ 'ಗಣಿ' ಯಲ್ಲಿ ಸಹ ಇದೇ ಮಾದರಿಯ ಹಾಡಿಗೆ ಸೊಂಟ ಬಳುಕಿಸಲಿದ್ದಾರೆ. 'ಗಣಿ' ಸಿನಿಮಾದ ಹಾಡಿನಲ್ಲಿ ನರ್ತಿಸಲು ದೊಡ್ಡ ಮೊತ್ತದ ಸಂಭಾವನೆಯನ್ನು ನಟಿ ತಮನ್ನಾ ಪಡೆಯುತ್ತಿದ್ದಾರೆ.

  ಮೆಗಾಸ್ಟಾರ್ ಕುಟುಂಬದ ವರುಣ್ ತೇಜ್ ನಟಿಸಿರುವ 'ಗಣಿ' ಸಿನಿಮಾದಲ್ಲಿ ಕನ್ನಡದ ನಟ ಉಪೇಂದ್ರ ಸಹ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾದ ವಿಶೇಷ ಹಾಡಿನಲ್ಲಿ ತಮನ್ನಾ ನರ್ತಿಸಲಿದ್ದಾರೆ.

  ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತರುವ ತಮನ್ನಾ

  ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತರುವ ತಮನ್ನಾ

  'ಗಣಿ' ಸಿನಿಮಾದ ಹಾಡಿನಲ್ಲಿ ನರ್ತಿಸಲು ತಮನ್ನಾ ಬರೋಬ್ಬರಿ 75 ಲಕ್ಷ ರು. ಸಂಭಾವನೆ ಪಡೆಯುತ್ತಿದ್ದಾರೆ. ಈ ಹಾಡಿನ ಚಿತ್ರೀಕರಣವು ಐದು ದಿನ ನಡೆಯಲಿದ್ದು, ಐದು ದಿನಕ್ಕೆ 75 ಲಕ್ಷ ರುಪಾಯಿಯ ಚೆಕ್‌ ತಮನ್ನಾ ಪಾಲಾಗುತ್ತಿದೆ. ಈ ರೀತಿಯ ದೊಡ್ಡ ಸಂಭಾವನೆ ತಮನ್ನಾಗೆ ಹೊಸದೇನೂ ಅಲ್ಲ.

  'ಜಾಗ್ವಾರ್' ಸಿನಿಮಾದ ಹಾಡಲ್ಲೂ ಕಾಣಿಸಿಕೊಂಡಿದ್ದ ತಮನ್ನಾ

  'ಜಾಗ್ವಾರ್' ಸಿನಿಮಾದ ಹಾಡಲ್ಲೂ ಕಾಣಿಸಿಕೊಂಡಿದ್ದ ತಮನ್ನಾ

  ನಟಿ ತಮನ್ನಾ, ಕನ್ನಡದ 'ಜಾಗ್ವಾರ್' ಸಿನಿಮಾದಲ್ಲಿಯೂ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು. ಆ ಸಿನಿಮಾದಲ್ಲಿ ನಿಖಿಲ್ ಕುಮಾರಸ್ವಾಮಿ ನಾಯಕರಾಗಿ ನಟಿಸಿದ್ದರು. ನಂತರ ಜೂ.ಎನ್‌ಟಿಆರ್ ನಟನೆಯ 'ಜೈ ಲವ-ಕುಶ' ಸಿನಿಮಾದಲ್ಲಿಯೂ ವಿಶೇಷ ಹಾಡಿನಲ್ಲಿ ನರ್ತಿಸಿದ್ದರು. ಆ ಹಾಡು ಸೂಪರ್ ಹಿಟ್ ಆಗಿತ್ತು. ಮಹೇಶ್ ಬಾಬು ನಟನೆಯ 'ಸರಿಲೇರು ನೀಕೆವ್ವರು' ಸಿನಿಮಾದಲ್ಲಿಯೂ ತಮನ್ನಾ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದರು.

  'ಗಣಿ' ಸಿನಿಮಾದಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ

  'ಗಣಿ' ಸಿನಿಮಾದಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ

  'ಗಣಿ' ಸಿನಿಮಾದಲ್ಲಿ ದೊಡ್ಡ ಪಾತ್ರವರ್ಗವೇ ಇದೆ, ವರುಣ್ ತೇಜ್, ಉಪೇಂದ್ರ ಜೊತೆಗೆ, ಬಾಲಿವುಡ್‌ನ ಸುನಿಲ್ ಶೆಟ್ಟಿ, ಜಗಪತಿ ಬಾಬು ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಟಿ ಸಾಯಿ ಮಂಜ್ರೇಕರ್ ಸಿನಿಮಾದ ನಾಯಕಿ. ಸಿನಿಮಾವನ್ನು ಕಿರಣ್ ಕೊರ್ರಪಾಟಿ ನಿರ್ದೇಶನ ಮಾಡಿದ್ದಾರೆ. ಸಿದ್ದು ಮಧು, ಅಲ್ಲು ಬಾಬಿ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾವು ಮುಂದಿನ ತಿಂಗಳಲ್ಲಿ ಬಿಡುಗಡೆ ಆಗಲಿದೆ.

  ಅಡುಗೆ ರಿಯಾಲಿಟಿ ಶೋ ನಿರೂಪಣೆ

  ಅಡುಗೆ ರಿಯಾಲಿಟಿ ಶೋ ನಿರೂಪಣೆ

  ತಮನ್ನಾ ಸಹ ಹಲವು ಸಿನಿಮಾಗಳಲ್ಲಿ ಹಾಗೂ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಮಾಸ್ಟರ್ ಶೆಫ್ ಕಾರ್ಯಕ್ರಮವನ್ನು ತಮನ್ನಾ ನಿರೂಪಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರ ನಟನೆಯ 'ನವೆಂಬರ್' ವೆಬ್ ಸರಣಿ ಬಿಡುಗಡೆ ಆಗಿದೆ. ಇದರ ಹೊರತಾಗಿ, 'ಮಾಸ್ಟ್ರೊ', 'ಕಾಟು ಕರುಪ್ಪು', 'ದಟ್ ಈಸ್ ಮಹಾಲಕ್ಷ್ಮಿ', 'ಎಫ್ 3', 'ಸೀಟಿಮಾರ್', 'ಭೊಲೆ ಚೂಡಿಯಾ' ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  English summary
  Actress Tamanna Bhatia acting in a special song in Telugu movie Ghani and receiving big remuneration for the song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X