For Quick Alerts
  ALLOW NOTIFICATIONS  
  For Daily Alerts

  RRR ಸಿನಿಮಾ ವಿವಾದ: ರಾಜಮೌಳಿಗೆ ಬೆದರಿಕೆ ಹಾಕಿದ ಬಿಜೆಪಿ ಸಂಸದ

  |

  ದಕ್ಷಿಣ ಭಾರತದ ಬುಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಕೂಡ ಒಂದು. ರಾಜಮೌಳಿ ಸಿನಿಮಾ ಅಂದ್ಮೇಲೆ ನಿರೀಕ್ಷೆ, ಇತ್ತೀಚಿಗಷ್ಟೆ ಚಿತ್ರತಂಡ ಜೂ ಎನ್ ಟಿ ಆರ್ ಪಾತ್ರದ ಟೀಸರ್ ರಿಲೀಸ್ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.

  ಹೌದು, ಕರಾಜಮೌಳಿ ಆರ್ ಆರ್ ಆರ್ ಸಿನಿಮಾಗೆ ಇದೀಗ ಸಂಕಷ್ಟ ಎದುರಾಗಿದೆ. ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೊಮರಾಮ್ ಭೀಮ್ ಪಾತ್ರವನ್ನು ಜೂ ಎನ್ ಟಿ ಆರ್ ನಿಭಾಯಿಸುತ್ತಿದ್ದಾರೆ. ಆದರೆ ಆ ಪಾತ್ರವನ್ನು ತಪ್ಪಾಗಿ ಬಿಂಬಿಸಲಾಗಿದೆ ಎನ್ನುವುದು ಅನೇಕರ ಆರೋಪ. ಭೀಮ್ ಬುಡಕಟ್ಟು ಜನರ ನೆಲ, ಜಲಕ್ಕಾಗಿ ಹೋರಾಡಿದ್ದವರು. ಆದರೆ ಅವರನ್ನು ಮುಸ್ಲಿಂ ಪಾತ್ರದಲ್ಲಿ ತೋರಿಸಲಾಗಿದೆ ಎಂದು ಅನೇಕರು ಕಿಡಿ ಕಾರುತ್ತಿದ್ದಾರೆ.

  ಜೂ.ಎನ್‌ಟಿಆರ್ ಪಾತ್ರದ ಬಗ್ಗೆ ನಿಜ ಕೋಮರಂ ಭೀಮ್ ಮೊಮ್ಮಗನ ಆಕ್ಷೇಪ

  ಈ ಬಗ್ಗೆ ಸ್ವತಃ ಕೊಮರಾಮ್ ಭೀಮ್ ಮೊಮ್ಮಗ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಅದಿಲಾಬಾದ್ ಬುಡಕಟ್ಟು ಜನಾಂಗದವರು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ತೆಲಂಗಾಣ ಬೆಜೆಪಿ ಅಧ್ಯಕ್ಷ ಮತ್ತು ಸಂಸದ ಬಂಡಿ ಸಂಜಯ್ ಟೀಸರ್ ವಿರೋಧಿಸಿ ನಿರ್ದೇಶಕ ರಾಜಮೌಳಿಗೆ ಬೆದರಿಕೆ ಹಾಕಿದ್ದಾರೆ.

  ಈ ಬಗ್ಗೆ ಮಾತನಾಡಿರುವ ಬಂಡಿ ಸಂಜಯ್, 'ಜೂ. ಎನ್ ಟಿ ಆರ್ ಪಾತ್ರವನ್ನು ರಿವೀಲ್ ಮಾಡೋ ಟೀಸರ್ ನಲ್ಲಿ ಆದಿವಾಸಿ ವ್ಯಕ್ತಿಗೆ ಮುಸ್ಲಿಂ ವೇಷ ತೊಡಿಸಿದ್ದಾರೆ. ಧೈರ್ಯವಿದ್ದರೆ ಸಿನಿಮಾದಲ್ಲಿ ಮುಸ್ಲಿಂ ನವಾಬನಿಗೆ ಕೇಸರಿ ಬಣ್ಣದ ರುಮಾಲು ಸುತ್ತಿಕೊಳ್ಳಲು ಹೇಳಿ. ಸಿನಿಮಾದಿಂದ ಈ ದೃಶ್ಯ ತೆಗೆಯದಿದ್ದರೆ ರಾಜಮೌಳಿ ಭೀಕರ ಪರಿಣಾಮ ಎದುರಿಸಬೇಕಾಗುತ್ತೆ' ಎಂದು ಬೆದರಿಕೆ ಹಾಕಿದ್ದಾರೆ.

  ದೊಡ್ಡ ಹೃದಯವಂತ ಬಾಹುಬಲಿ ನಿರ್ದೇಶಕ ರಾಜಮೌಳಿ | filmibeat Kannada

  ದೊಡ್ಡ ಬಜೆಟ್ ನಲ್ಲಿ ತಯಾರಾಗುತ್ತಿರುವ ಈ ಸಿನಿಮಾಗೆ ಸಂಕಷ್ಟ ಎದುರಾಗಿರುವುದು ನಿರ್ದೇಶಕ ರಾಜಮೌಳಿಗೆ ದೊಡ್ಡ ತಲೆನೋವಾಗಿದೆ. ಅಂದ್ಹಾಗೆ ಸಿನಿಮಾದಲ್ಲಿ ರಾಮ್ ಚರಣ್, ಅಜಯ್ ದೇವಗನ್, ಅಲಿಯಾ ಭಟ್ ಸೇರಿದಂತೆ ದೊಡ್ಡ ತಾರಬಳಗವೆ ಇದೆ. ಈಗಾಗಲೇ ಸಾಕಷ್ಟು ಚಿತ್ರೀಕರಣ ಮಾಡಿ ಮುಗಿಸಲಾಗಿದೆ. ಈ ವಾರದಿಂದ ನಟಿ ಅಲಿಯಾ ಭಾಗದ ಚಿತ್ರೀಕರಣ ಪ್ರಾರಂಭವಾಗಲಿದೆ.

  English summary
  Telangana BJP Chief Bandi Sanjay threatens to Director SS rajamouli over his upcoming film RRR.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X