For Quick Alerts
  ALLOW NOTIFICATIONS  
  For Daily Alerts

  ತೆಲುಗು ಹಾಸ್ಯನಟ ಅಲಿ ಅವರ ತಾಯಿ ವಿಧಿವಶ

  |

  ತೆಲುಗು ಹಾಸ್ಯನಟ ಅಲಿ ಅವರ ತಾಯಿ ಜೈತುನ್ ಬೀಬಿ ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಬಹಳ ದಿನದ ಹಿಂದೆಯಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದ ಅಲಿ ತಾಯಿ, ರಾಜಮಂಡ್ರಿಯ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.

  ಅಲಿ ಅವರ ತಾಯಿ ನಿಧನಕ್ಕೆ ಟಾಲಿವುಡ್ ಇಂಡಸ್ಟ್ರಿ ಸಂತಾಪ ಸೂಚಿಸಿದೆ. ಸದ್ಯ ಚಿತ್ರದ ಶೂಟಿಂಗ್ ನಿಮಿತ್ತ ರಾಂಚಿಗೆ ತೆರಳಿರುವ ಅಲಿ, ಈ ಸುದ್ದಿ ಕೇಳಿ ವಾಪಸ್ ಆಗುತ್ತಿದ್ದಾರೆ. ಮತ್ತೊಂದೆಡೆ ರಾಜಮಂಡ್ರಿಯಿಂದ ಹೈದರಾಬಾದ್ ನಲ್ಲಿರುವ ಅಲಿ ಅವರ ಮನೆಗೆ ಜೈತುನ್ ಬೀಬಿ ಅವರ ಪಾರ್ಥಿವ ಶರೀರವನ್ನು ತರಲಾಗುತ್ತಿದೆ.

  ದಿಢೀರ್ ಅಂತ ಪಾತಳಕ್ಕೆ ಕುಸಿಯಿತು 'ಬ್ರಹ್ಮಾನಂದಂ' ಸಂಭಾವನೆ.!ದಿಢೀರ್ ಅಂತ ಪಾತಳಕ್ಕೆ ಕುಸಿಯಿತು 'ಬ್ರಹ್ಮಾನಂದಂ' ಸಂಭಾವನೆ.!

  ತಂದೆ-ತಾಯಿ ಅಂದ್ರೆ ಅಲಿ ಅವರಿಗೆ ಪಂಚಪ್ರಾಣ. ತಮ್ಮ ಬೆಳವಣಿಗೆ, ಯಶಸ್ಸಿಗೆ ಅವರೇ ಕಾರಣ ಎಂದು ಹಲವು ಸಲ ಅಲಿ ಹೇಳಿಕೊಂಡಿದ್ದಾರೆ. ಇಂದು ಸಂಜೆ ಹೈದರಾಬಾದ್ ನಲ್ಲಿ ಅಲಿ ಅವರ ತಾಯಿ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.

  ಅಲಿ ಅವರ ಸುಮಾರು 1000 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು, ಹಿಂದಿ, ಕನ್ನಡ ಸಿನಿಮಾಗಳಲ್ಲಿ ಅಲಿ ನಟಿಸಿದ್ದು, ಕನ್ನಡದಲ್ಲಿ ಸೂಪರ್ ಮತ್ತು ನಮೋ ಭೂತಾತ್ಮ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Telugu Comedian actor Ali's mother passed away on thursday morning december 19th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X