ಮಹೇಶ್ ಬಾಬು ನಂತರ ಅದೇ ಬ್ಯುಸಿನೆಸ್‌ಗೆ ಕೈ ಹಾಕಿದ ಅಲ್ಲು ಅರ್ಜುನ್: ಪಿಕ್ಚರ್ ತೋರಿಸ್ತಾರಂತೆ ಬನ್ನಿ!

ಟಾಲಿವುಡ್ ಸ್ಟಾರ್ಸ್ ಸಿನಿಮಾಗಳಲ್ಲಿ ನಟಿಸೋದು, ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಹೊಸ ಹೊಸ ಬ್ಯುಸಿನೆಸ್ ಆರಂಭಿಸುತ್ತಿದ್ದಾರೆ. ಇದೀಗ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮಲ್ಟಿಫ್ಲೆಕ್ಸ್ ಆರಂಭಿಸಿ ಸಿನಿಮಾ ಪ್ರದರ್ಶನ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ.

ಈಗಾಗಲೇ ಸೂಪರ್ ಸ್ಟಾರ್ ಮಹೇಶ್ ಬಾಬು AMB ಸಿನಿಮಾಸ್ ಆರಂಭಿಸಿದ್ದಾರೆ. ಕೊರೊನಾ ಹಾವಳಿಯ ನಡುವೆಯೇ ಹೈದರಾಬಾದ್‌ನಲ್ಲಿ ಟಾಲಿವುಡ್ ಪ್ರಿನ್ಸ್ ಮಲ್ಟಿಫ್ಲೆಕ್ಸ್ ಚೈನ್ ಶುರು ಮಾಡಿದ್ದರು. ಇತ್ತೀಚೆಗೆ ಮಹೇಶ್ ಬಾಬು ಹೋಟೆಲ್ ಉದ್ಯಮಕ್ಕೂ ಕಾಲಿಟ್ಟಿದ್ದಾರೆ. ಪತ್ನಿ ನಮ್ರತಾ ಹೆಸರಿನಲ್ಲಿ ಏಷಿಯನ್ ಸಂಸ್ಥೆ ಜೊತೆ ಸೇರಿ ಹೋಟೆಲ್ ಬ್ಯುಸಿನೆಸ್ ಆರಂಭಿಸಿದ್ದಾರೆ. ಇದೀಗ ಅಲ್ಲು ಅರ್ಜುನ್ ಹೊಸ ಮಲ್ಟಿಫ್ಲೆಕ್ಸ್ ಉದ್ಘಾಟನೆಗೆ ಸಿದ್ದತೆ ನಡೆಸಿದ್ದಾರೆ.

Telugu Actor Allu Arjun to start his multiplex chain AAA Cinemas

ಹೈದರಾಬಾದ್‌ನ ಅಮೀರ್‌ ಪೇಟೆಯಲ್ಲಿ ಸತ್ಯ ಥಿಯೇಟರ್ ಇತ್ತು. ಅದನ್ನು ಕಡೆಗಿ ಅಲ್ಲಿ ದೊಡ್ಡ ಮಾಲ್ ತಲೆ ಎತ್ತಿದೆ. ಈ ಮಾಲ್‌ನಲ್ಲಿ AAA ಸಿನಿಮಾಸ್ ಶುರುವಾಗುತ್ತಿದೆ. ಮಲ್ಟಿಫ್ಲೆಕ್ಸ್ ನಿರ್ಮಾಣದಲ್ಲಿ ಸದ್ದು ಮಾಡುತ್ತಿರುವ ಏಷಿಯನ್ ಸಿನಿಮಾಸ್ ಜೊತೆ ಅಲ್ಲು ಅರ್ಜುನ್ ಕೈ ಜೋಡಿಸಿದ್ದು, 'ಏಷಿಯನ್ ಅಲ್ಲು ಅರ್ಜುನ್ ಸಿನಿಮಾಸ್' ಕಾರ್ಯಾರಂಭವಾಗಲಿದೆ. ಈಗಾಗಲೇ ಮಾಲ್ ನಿರ್ಮಾಣವಾಗಿದ್ದು, ಮಲ್ಟಿಫ್ಲೆಕ್ಸ್ ಕೆಲಸಗಳು ನಡೀತಿದೆಯಂತೆ. 'ಅವತಾರ್- 2' ಸಿನಿಮಾ ಮೂಲಕ AAA ಸಿನಿಮಾಸ್ ಶುರುವಾಗಬಹುದು ಎನ್ನಲಾಗ್ತಿದೆ.

Telugu Actor Allu Arjun to start his multiplex chain AAA Cinemas

ಅಡ್ವಾನ್ಸ್ ಟೆಕ್ನಾಲಜಿ ಜೊತೆಗೆ ಅತ್ಯಾಧುನಿಕ ಮಾದರಿಯಲ್ಲಿ ಈ ಮಲ್ಟಿಫ್ಲೆಕ್ಸ್ ಬಹಳ ಅದ್ಭುತವಾಗಿ ನಿರ್ಮಾಣವಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸದ್ಯ ಅಲ್ಲು ಅರ್ಜುನ್ ಸುಕುಮಾರ್ ನಿರ್ದೇಶನದ 'ಪುಷ್ಪ'- 2 ಚಿತ್ರದಲ್ಲಿ ನಟಿಸುತ್ತಾರೆ. ಈ ಸರಣಿಯ ಮೊದಲ ಸಿನಿಮಾ ರಿಲೀಸ್ ಆಗಿ ವರ್ಷ ಕಳೆದಿದೆ. ಆದರೆ 2ನೇ ಸಿನಿಮಾ ಶೂಟಿಂಗ್ ತಡವಾಗುತ್ತಿದೆ.

More from Filmibeat

English summary
Telugu Actor Allu Arjun to start his multiplex chain AAA Cinemas. stylish star multiplex is getting Ready At Ameerpet Main Junction. AAA Cinemas grand opening shortly. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X