For Quick Alerts
  ALLOW NOTIFICATIONS  
  For Daily Alerts

  ಬಹುಕೋಟಿ ವೆಚ್ಚದ ಬಯೋಪಿಕ್‌ಗೆ ಬಾಲಕೃಷ್ಣ ಸಿದ್ಧತೆ: ಬೇಡ ಎಂದು ಹಠ ಹಿಡಿದ ಅಭಿಮಾನಿಗಳು!

  |

  ವಿಭಿನ್ನ ಮ್ಯಾನರಿಸಂ ಹಾಗೂ ಡೈಲಾಗ್ಸ್‌ನಿಂದ ಅಭಿಮಾನಿಗಳ ಮನಗೆದ್ದ ತೆಲುಗು ನಟ ಬಾಲಕೃಷ್ಣ. ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ಬಾಲಯ್ಯ ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಹಿಟ್ ಕೊಡ್ತಿದ್ದಾರೆ. ಇದೀಗ ಒಂದು ಪ್ರಯೋಗಾತ್ಮಕ ಚಿತ್ರದಲ್ಲಿ ಬಣ್ಣ ಹಚ್ಚಲು ನಟಸಿಂಹ ಸಿದ್ದತೆ ನಡೆಸಿದ್ದಾರೆ ಎನ್ನಲಾಗ್ತಿದೆ. ಆದರೆ ಇದು ಅಭಿಮಾನಿಗಳಿಗೆ ಆತಂಕ ತಂದಿದೆ.

  ಕಳೆದ ವರ್ಷ 'ಅಖಂಡ' ಸಿನಿಮಾ ಮೂಲಕ ಬಾಲಕೃಷ್ಣ ಬಾಕ್ಸಾಫೀಸ್ ಶೇಕ್ ಮಾಡಿದ್ದರು. ಇದೀಗ ಸಂಕ್ರಾಂತಿ ಸಂಭ್ರಮದಲ್ಲಿ 'ವೀರಸಿಂಹ ರೆಡ್ಡಿ' ಅವತಾರದಲ್ಲಿ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ಇದರ ಜೊತೆಗೆ 'ಅನ್‌ಸ್ಟಾಪಬಲ್ ಸೀಸನ್- 2' ಶೋ ನಿರೂಪಣೆ ಮಾಡಿ ಸದ್ದು ಮಾಡುತ್ತಿದ್ದಾರೆ. ಬಾಲಯ್ಯ ನಟನೆಯ 108ನೇ ಸಿನಿಮಾ ಸೆಟ್ಟೇರಿದೆ. ಅನಿಲ್ ರವಿಪೂಡಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಚಿತ್ರೀಕರಣ ಕೂಡ ಶುರುವಾಗಿದೆ.

  ಒಂಬತ್ತು ಕನ್ನಡ, 13 ತೆಲುಗು ಸಿನಿಮಾಗಳು ಇಂದು ಬಿಡುಗಡೆ: ಯಾವುವವು?ಒಂಬತ್ತು ಕನ್ನಡ, 13 ತೆಲುಗು ಸಿನಿಮಾಗಳು ಇಂದು ಬಿಡುಗಡೆ: ಯಾವುವವು?

  ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ಬಾಲಯ್ಯ, ರಾಮಾನುಜ ಚಾರ್ಯರ ಬಯೋಪಿಕ್‌ನಲ್ಲಿ ನಟಿಸಲು ಮನಸ್ಸು ಮಾಡಿದ್ದಾರಂತೆ. ಈ ಸುದ್ದಿ ಕೇಳಿ ಅಭಿಮಾನಿಗಳು ಒಂದು ಕ್ಷಣ ಶಾಕ್ ಆಗಿದ್ದಾರೆ. ಕರಿಯರ್ ಸಕ್ಸಸ್‌ಫುಲ್ ಆಗಿ ಇರುವಾಗ ಇಂತಹ ಎಕ್ಸ್‌ಪೆರಿಮೆಂಟ್ ಬೇಕಾ? ಆ ಪಾತ್ರ ಒಪ್ಪುತ್ತಾ? ಮಾಸ್ ಸಿನಿಮಾಗಳಲ್ಲಿ ನಿಮ್ಮನ್ನು ನೋಡಿ ಈಗ ಅಂತಹ ಪಾತ್ರದಲ್ಲಿ ನೋಡೊಕೆ ಸಾಧ್ಯಾನಾ? ಎಂದು ಚರ್ಚೆ ನಡೆಸುತ್ತಿದ್ದಾರೆ. ಬಾಲಯ್ಯ ಮಾತ್ರ ಖ್ಯಾತ ಸಂತ, ವಿದ್ವಾಂಸರು, ದಾರ್ಶನಿಕರು ಹಾಗೂ ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಕರಾದ ರಾಮಾನುಜ ಚಾರ್ಯರ ಪಾತ್ರದಲ್ಲಿ ನಟಿಸಲು ಉತ್ಸುಕರಾಗಿದ್ದಾರಂತೆ.

  ನಿರ್ಮಾಪಕ ಸಿ. ಕಲ್ಯಾಣ್ ಇಂತಾದೊಂದು ಸಿನಿಮಾ ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕೆ. ರಾಘವೇಂದ್ರ ರಾವ್ ಚಿತ್ರ ನಿರ್ದೇಶನ ಮಾಡಿದರೆ ಚೆನ್ನಾಗಿರುತ್ತದೆ ಎನ್ನುವ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ತಂದೆ ಎನ್‌ಟಿಆರ್ ಜೊತೆ ಬಾಲಯ್ಯ ಒಂದಷ್ಟುಷ್ಟು ಐತಿಹಾಸಿಕ, ಪೌರಾಣಿಕ ಚಿತ್ರಗಳಲ್ಲಿ ನಟಿಸಿದ್ದರು. ದಶಕದ ಹಿಂದೆ 'ಶ್ರೀ ರಾಮರಾಜ್ಯಂ' ಚಿತ್ರದಲ್ಲಿ ಶ್ರೀರಾಮನ ಪಾತ್ರ ಮಾಡಿದ್ದರು.

  Telugu Actor Balakrisha Soon give his nod to Swamy Ramanujacharya Biopic

  ಕೆಲವರು ರಾಮಾನುಜ ಚಾರ್ಯರ ಪಾತ್ರದಲ್ಲಿ ಬಾಲಯ್ಯ ಗೆಲ್ಲುತ್ತಾರೆ ಎನ್ನುತ್ತಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಇಂತಹ ರಿಸ್ಕ್ ಬೇಡ ಎಂದು ಹೇಳುತ್ತಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಘೋಷಣೆಯಾಗುವ ಸಾಧ್ಯತೆಯಿದೆ. ಇನ್ನು ಬಾಲಕೃಷ್ಣ ನಟನೆಯ 'ವೀರಸಿಂಹ ರೆಡ್ಡಿ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಕನ್ನಡ ನಟ ದುನಿಯಾ ವಿಜಯ್ ಕೂಡ ಈ ಚಿತ್ರದ ಪಾತ್ರವೊಂದಕ್ಕೆ ಬಣ್ಣ ಹಚ್ಚಿರುವುದು ವಿಶೇಷ.

  English summary
  Telugu Actor Balakrisha Soon give his nod to Swamy Ramanujacharya Biopic. Nandamuri Balakrishna and Anil Ravipudi’s NBK108 begins. Know more.
  Saturday, December 10, 2022, 6:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X