For Quick Alerts
  ALLOW NOTIFICATIONS  
  For Daily Alerts

  'ಜರ್ಸಿ' ಸಿನಿಮಾದ ಈ ಒಂದು ದೃಶ್ಯ ಇಷ್ಟವಾಗಿಲ್ಲ ಎಂದ ನಟ ನಾನಿ

  |

  ತೆಲುಗು ಸ್ಟಾರ್ ನಟ ನಾನಿ ಕೊನೆಯದಾಗಿ ಜರ್ಸಿ ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಜರ್ಸಿ ಕಳೆದ ವರ್ಷ ಏಪ್ರಿಲ್ 19ರಂದು ತೆರೆಗೆ ಬಂದಿದೆ. ಕ್ರೀಡಾ ಆಧಾರಿತ ಚಿತ್ರವಾಗಿದ್ದು, ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ನಾನಿ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು.

  Sudeep might play villain against Mahesh Babu | Filmibeat Kannada

  ತಂದೆ ಮಗನ ಭಾವನಾತ್ಮಕ ಕಥೆ ಅಭಿಮಾನಿಗಳ ಹೃದಯಗೆದ್ದಿತ್ತು. ನಾನಿ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾನಿ ಪತ್ನಿಯ ಪಾತ್ರದಲ್ಲಿ ನಟಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಗೌತಮ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ವಿಮರ್ಶಾತ್ಮಕವಾಗಿ ಮೆಚ್ಚುಗೆ ವ್ಯಾಕ್ತವಾಗಿತ್ತು. ಆದರೆ ನಾನಿಗೆ ಚಿತ್ರದ ಈ ಒಂದು ದೃಶ್ಯ ಇಷ್ಟವಾಗಿಲ್ಲವಂತೆ. ಮುಂದೆ ಓದಿ...

  ತೆಲುಗು ನಟ ವೆಂಕಟೇಶ್, ನಾನಿ ಮನೆ ಮೇಲೆ ಐಟಿ ದಾಳಿತೆಲುಗು ನಟ ವೆಂಕಟೇಶ್, ನಾನಿ ಮನೆ ಮೇಲೆ ಐಟಿ ದಾಳಿ

  ಜರ್ಸಿಯ ಈ ದೃಶ್ಯ ಇಷ್ಟವಾಗಿಲ್ಲ

  ಜರ್ಸಿಯ ಈ ದೃಶ್ಯ ಇಷ್ಟವಾಗಿಲ್ಲ

  ಇತ್ತೀಚಿಗೆ ಚಿತ್ರದ ಬಗ್ಗೆ ಮಾತನಾಡಿದ ನಟ ನಾನಿ ಚಿತ್ರದ ಒಂದು ದೃಶ್ಯ ಇಷ್ಟವಾಗಿಲ್ಲ ಎಂದು ಹೇಳಿದ್ದಾರೆ. ಚಿತ್ರದಲ್ಲಿ ನಾನು ಹಣ ಕೇಳಲು ಸ್ನೇಹಿತನ ಮನೆಗೆ ಹೋಗುವ ದೃಶ್ಯವನ್ನು ನೆನಪಿಸಿಕೊಳ್ಳುತ್ತೇನೆ. ಅವನ ಪತ್ನಿಯನ್ನು ಭೇಟಿಯಾಗುತ್ತೇನೆ. ಆದರೆ ದೃಶ್ಯದಲ್ಲಿ ನನಗೆ ನನ್ನ ಎಕ್ಸಪ್ರೆಷನ್ ನನಗೆ ಇಷ್ಟವಾಗಿಲ್ಲ. ಕಮರ್ಶಿಲ್ ಸಿನಿಮಾದಂದೆ ಭಾಸವಾಯಿತು. ಆ ದೃಶ್ಯದಲ್ಲಿ ನಾನು ಸಂಪೂರ್ಣ ಅರ್ಜುನ್ ಆಗಿರಲ್ಲ ಎಂದು ಹೇಳಿದ್ದಾರೆ.

  ಹಿಂದಿಯಲ್ಲಿ ರಿಮೇಕ್ ಆಗುತ್ತಿದೆ ಸಿನಿಮಾ

  ಹಿಂದಿಯಲ್ಲಿ ರಿಮೇಕ್ ಆಗುತ್ತಿದೆ ಸಿನಿಮಾ

  ಜರ್ಸಿ ಸಿನಿಮಾ ನಾನಿ ಈ ಹಿಂದೆ ಮಾಡಿದ ಸಿನಿಮಾಗಳಿಂದ ನಂಬರ್ 1 ಸ್ಥಾನದಲ್ಲಿದೆಯಂತೆ. ಚಿತ್ರದಲ್ಲಿ ನಾನಿ ಅರ್ಜುನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರಿಕೆಟರ್ ಆಗಿ ನಾನಿ ಮಿಂಚಿದ್ದಾರೆ. ತೆಲುಗಿನಲ್ಲಿ ಸೂಪರ್ ಹಿಟ್ ಆಗುತ್ತಿದ್ದಂತೆ ಈ ಸಿನಿಮಾ ಹಿಂದಿಗೂ ರಿಮೇಕ್ ಆಗುತ್ತಿದೆ.

  ಜೆರ್ಸಿ ರೀಮೇಕ್: ರಶ್ಮಿಕಾ ಇಲ್ಲ, ಆ ಜಾಗಕ್ಕೆ ಇನ್ನೊಬ್ಬ ನಟಿ ಎಂಟ್ರಿಜೆರ್ಸಿ ರೀಮೇಕ್: ರಶ್ಮಿಕಾ ಇಲ್ಲ, ಆ ಜಾಗಕ್ಕೆ ಇನ್ನೊಬ್ಬ ನಟಿ ಎಂಟ್ರಿ

  ಹಿಂದಿ ರಿಮೇಕ್ ನಲ್ಲಿ ಶಾಹಿದ್ ಕಪೂರ್

  ಹಿಂದಿ ರಿಮೇಕ್ ನಲ್ಲಿ ಶಾಹಿದ್ ಕಪೂರ್

  ಹಿಂದಿ ರಿಮೇಕ್ ನಲ್ಲಿ ಶಾಹಿದ್ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ತೆಲುಗಿನಲ್ಲಿ ಉತ್ತಮ ಮೆಚ್ಚುಗೆ ಪಡೆಯಿತು, ಆದರೆ ಹಣಗಳಿಸಲಿಲ್ಲ ಎನ್ನುವ ವದಂತಿ ಹರಿದಾಡುತ್ತಿತ್ತು. ಆದರೆ ಈ ಬಗ್ಗೆಯು ನಾನಿ ಸ್ಪಷ್ಟಪಡಿಸಿದ್ದಾರೆ. ಚಿತ್ರ ಉತ್ತಮ ಕಲೆಕ್ಷನ್ ಮಾಡಿರುವುದಾಗಿ ಹೇಳಿದ್ದಾರೆ.

  ನಾನಿ ಸಿನಿಮಾ

  ನಾನಿ ಸಿನಿಮಾ

  ಜರ್ಸಿ ಸಿನಿಮಾವನ್ನು ಚೀನಾದಲ್ಲಿ ದೊಡ್ಡ ಮಟ್ಟಕ್ಕೆ ರಿಲೀಸ ಮಾಡಲು ಪ್ಲಾನ್ ಮಾಡಲಾಗಿತ್ತು. ಕೊರೊನಾ ವೈರಸ್ ಹಾವಳಿಯ ಪರಿಣಾಮದಿಂದ ಪ್ಲಾನ್ ಮುಂದೂಡಲಾಗಿದೆ. ನಾನಿ ಸದ್ಯ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  English summary
  Telugu Actor Nani did not like one scene in his Jersey movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X