Just In
Don't Miss!
- Automobiles
ಇದೇ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿರುವ ಟಾಪ್ 5 ಕಾರುಗಳಿವು..
- Lifestyle
ಜ. 16ರಿಂದ ಭಾರತದಲ್ಲಿ ಕೋವಿಡ್ 19 ಲಸಿಕೆ: ಇದರ ಕುರಿತ ಪ್ರಮುಖ 10 ಮಾಹಿತಿ
- News
ಐತಿಹಾಸಿಕ ಕೊರೊನಾ ಲಸಿಕಾ ಅಭಿಯಾನಕ್ಕೆ ಮೋದಿ ಚಾಲನೆ
- Sports
ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ತಂದೆ ಹಿಮಾಂಶು ಪಾಂಡ್ಯ ನಿಧನ
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರಭಾಸ್ ಮುಂದಿನ ಮೂರು ಚಿತ್ರಗಳ ಬಜೆಟ್ 1000 ಕೋಟಿ!
ಬಾಹುಬಲಿ ಚಿತ್ರದ ನಂತರ ಪ್ರಭಾಸ್ ಇಮೇಜ್ ಸಂಪೂರ್ಣವಾಗಿ ಬದಲಾಯ್ತು. ತೆಲುಗು ಇಂಡಸ್ಟ್ರಿಗೆ ಮಾತ್ರ ಸೀಮಿತವಾಗಿದ್ದ ನಟ ಪ್ಯಾನ್ ಇಂಡಿಯಾ ಸ್ಟಾರ್ ಆದರು. ರಾಜಮೌಳಿಯ ಬಾಹುಬಲಿ ಸರಣಿ ಪ್ರಭಾಸ್ ವೃತ್ತಿ ಜೀವನದಲ್ಲಿ ಅತಿ ದೊಡ್ಡ ಬ್ರೇಕ್ ತಂದುಕೊಟ್ಟ ಚಿತ್ರ.
ಈ ಸಿನಿಮಾದ ಬಳಿಕ ಪ್ರಭಾಸ್ ಸಾಹೋ ಎಂಬ ಸಿನಿಮಾ ಮಾಡಿದರು. ಈ ಚಿತ್ರದ ಬಜೆಟ್ ಸುಮಾರು 350 ಕೋಟಿ. ಸಿನಿಮಾ ಅಷ್ಟಾಗಿ ಸಕ್ಸಸ್ ಆಗಿಲ್ಲವಾದರೂ ಹಾಕಿ ದುಡ್ಡು ವಾಪಸ್ ಬಂತು ಎಂದು ನಿಟ್ಟುಸಿರು ಬಿಟ್ಟಿದ್ದರು ನಿರ್ಮಾಪಕರು. ಇದೀಗ, ಪ್ರಭಾಸ್ ಸಿನಿಮಾಗಳ ಬಜೆಟ್ ಮತ್ತಷ್ಟು ಗಗನಕ್ಕೆ ಏರಿದೆ. ಮುಂದಿನ ಮೂರು ಚಿತ್ರಗಳ ಬಜೆಟ್ 1000 ಕೋಟಿ ದಾಟಿದೆ. ಯಾವ ಚಿತ್ರದ್ದು ಎಷ್ಟು ಕೋಟಿ?

ರಾಧೇ ಶ್ಯಾಮ್ ಬಿಡುಗಡೆ ಸಜ್ಜು
ರಾಧಕೃಷ್ಣ ಕುಮಾರ್ ನಿರ್ದೇಶನ ಮಾಡಿರುವ ರಾಧೇ ಶ್ಯಾಮ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಈ ಚಿತ್ರದಲ್ಲಿ ನಟಿಸಿದ್ದು, ಯುವಿ ಕ್ರಿಯೇಷನ್ಸ್ ಅಡಿ ನಿರ್ಮಾಣ ಮಾಡಲಾಗಿದೆ. ಇದುವರೆಗೂ ಈ ಚಿತ್ರದ ಬಜೆಟ್ ಕುರಿತು ಅಷ್ಟು ಸುದ್ದಿಯಾಗಿರಲಿಲ್ಲ. ಸದ್ಯದ ಮಾಹಿತಿ ಪ್ರಕಾರ, ರಾಧೇ ಶ್ಯಾಮ್ ಸಿನಿಮಾದ ಬಜೆಟ್ 250 ಕೋಟಿ.
ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಬಿಡುಗಡೆ ದಿನಾಂಕ ಬಹಿರಂಗ

ಆದಿಪುರುಷ್ ಬಜೆಟ್ ಎಷ್ಟು?
ಓಂ ರಾವತ್ ನಿರ್ದೇಶನದಲ್ಲಿ ತಯಾರಾಗಲಿರುವ ಮೆಗಾ ಸಿನಿಮಾ ಆದಿಪುರುಷ್. ರಾಮಾಯಣ ಆಧಾರಿತ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಪ್ರಭಾಸ್ ಮತ್ತು ಸೈಫ್ ಅಲಿ ಖಾನ್ ನಟಿಸುತ್ತಿದ್ದಾರೆ. ಸದ್ಯದ ವರದಿ ಪ್ರಕಾರ ಆದಿಪುರುಷ್ ಚಿತ್ರದ ಬಜೆಟ್ 450 ಕೋಟಿ.

ಪ್ರಭಾಸ್-ದೀಪಿಕಾ ಚಿತ್ರ
ನಾಗ್ ಅಶ್ವಿನ್ ನಿರ್ದೇಶನದಲ್ಲಿ ಮೂಡಿ ಬರಲಿರುವ ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ ಹಾಗೂ ಅಮಿತಾಭ್ ಬಚ್ಚನ್ ನಟಿಸಲಿದ್ದಾರೆ. ಸದ್ಯ ಪ್ರಿ-ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ಬಜೆಟ್ 300 ಕೋಟಿ ಎಂದು ಹೇಳಲಾಗಿದೆ.
ಪ್ರಭಾಸ್21, ಆದಿಪುರುಷ್ ಯಾವುದಾಗಲಿದೆ ಪ್ರಭಾಸ್ ಮುಂದಿನ ಸಿನಿಮಾ?

1000 ಕೋಟಿ ಬಜೆಟ್
ರಾಧೇ ಶ್ಯಾಮ್ ಸಿನಿಮಾ 2021ರ ಮೊದಲಾರ್ಧದಲ್ಲಿ ತೆರೆಕಾಣಲಿದೆ. ಆದಿ ಪುರುಷ್ ಸಿನಿಮಾ 2022 ಆಗಸ್ಟ್ 11 ರಂದು ಬಿಡುಗಡೆಯಾಗಲಿದೆ. ಈ ಎರಡು ಚಿತ್ರಗಳ ಬಳಿಕ ನಾಗ್ ಅಶ್ವಿನ್ ಪ್ರಾಜೆಕ್ಟ್ ಬರಲಿದೆ. ಈ ಮೂರು ಚಿತ್ರಗಳ ಒಟ್ಟು ಬಜೆಟ್ ಸರಿಯಾಗಿ 1000 ಕೋಟಿ ಆಗಿದೆ. (250+450+300=1000)