Just In
- 25 min ago
ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಯಶ್, ಸುದೀಪ್ ಸುಮಲತಾ; ಫೋಟೋ ವೈರಲ್
- 1 hr ago
ಸುದೀಪ್ ಗೆ ಸಿನಿಮಾ ನಿರ್ದೇಶನ ಮಾಡುವ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು? ಇಲ್ಲಿದೆ ಮಾಹಿತಿ
- 2 hrs ago
ಕಂಗನಾ ಮೇಲೆ ಕಥೆ ಕದ್ದ ಆರೋಪ; 72 ಗಂಟೆಯೊಳಗೆ ಉತ್ತರ ನೀಡಬೇಕೆಂದ ಲೇಖಕ
- 3 hrs ago
ಸೋನು ಸೂದ್ ಟೈಲರ್ ಶಾಪ್: ರಸ್ತೆ ಬದಿ ಕುಳಿತು ಬಟ್ಟೆ ಹೊಲಿಯುತ್ತಿರುವ ರಿಯಲ್ ಹೀರೋ
Don't Miss!
- News
ಪತ್ರ ಬರೆದಿಟ್ಟು ಅಭಿಮಾನಿ ಆತ್ಮಹತ್ಯೆ; ಅಂತ್ಯ ಸಂಸ್ಕಾರಕ್ಕೆ ಬಂದ ಎಚ್ಡಿಕೆ
- Sports
ಭಾರತ vs ಆಸ್ಟ್ರೇಲಿಯಾ: ಬ್ರಿಸ್ಬೇನ್ನಲ್ಲಿ ವಾಖಲೆಯ ಜೊತೆಯಾಟವಾಡಿದ ಶಾರ್ದೂಲ್- ಸುಂದರ್
- Finance
ಈ 6 ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ 1,13,018.94 ಕೋಟಿ ರು. ಹೆಚ್ಚಳ
- Automobiles
ಬೈಕ್ ಸವಾರರೇ ಎಚ್ಚರ: ರೇರ್ ವೀವ್ ಮಿರರ್ ಬಳಸದಿದ್ದರೂ ಬೀಳಲಿದೆ ದಂಡ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಟ ರಾಮ್ ಚರಣ್ ಗೆ ಕೊರೊನಾ ಪಾಸಿಟಿವ್: ಶೀಘ್ರ ಗುಣಮುಖರಾಗುವಂತೆ ಅಭಿಮಾನಿಗಳ ಹಾರೈಕೆ
ತೆಲುಗು ಸ್ಟಾರ್ ನಟ ರಾಮ್ ಚರಣ್ ಗೆ ಕೊರೊನಾ ಸೋಂಕು ತಗಲುಲಿರುವುದು ದೃಢಪಟ್ಟಿದೆ. ಈ ಬಗ್ಗೆ ರಾಮ್ ಚರಣ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ರಾಮ್ ಚರಣ್ ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ಹಾರೈಸುತ್ತಿದ್ದಾರೆ.
ಕೊರೊನಾ ಪಾಸಿಟಿವ್ ಎಂದು ವರದಿ ಬರುತ್ತಿದ್ದಂತೆ ರಾಮ್ ಚರಣ್ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ಇತ್ತೀಚಿಗಷ್ಟೆ ರಾಮ್ ಚರಣ್ ಕುಟುಂಬದ ಜೊತೆ ಕ್ರಿಸ್ಮಸ್ ಪಾರ್ಟಿ ಮಾಡಿ ಸಂಭ್ರಮಿಸಿದ್ದರು. ಇತ್ತೀಚಿಗೆ ಹಸೆಮಣೆ ಏರಿದ ನಿಹಾರಿಕಾ ದಂಪತಿ ಸೇರಿದಂತೆ ಇಡೀ ಮೇಗಾ ಕುಟುಂಬ ಪಾರ್ಟಿಯಲ್ಲಿ ಭಾಗಿಯಾಗಿದ್ದು ಸಖತ್ ಎಂಜಾಯ್ ಮಾಡಿದ್ದಾರೆ.
RRR: ಚಿತ್ರೀಕರಣಕ್ಕಿಂತಲೂ ವಿಎಫ್ಎಕ್ಸ್ ಗೆ ಹೆಚ್ಚು ಹಣ ಖರ್ಚು!
ಇದರ ಬೆನ್ನಲೇ ಈಗ ರಾಮ್ ಚರಣ್ ಗೆ ಕೊರೊನಾ ಪಾಸಿಟಿವ್ ಬಂದಿದ್ದು, ಕುಟುಂಬದ ಬಹುತೇಕ ಸದಸ್ಯರು ಕ್ವಾರಂಟೈನ್ ಆಗಲಿದ್ದಾರೆ. ಕೊರೊನಾ ಪಾಸಿಟಿವ್ ವರದಿ ಬಂದ ಬಳಿಕ ರಾಮ್ ಚರಣ್ ಸಾಮಾಜಿಕ ಜಾಲತಾಣದಲ್ಲಿ, 'ನನ್ನ ಜೊತೆ ಕಳೆದ ಒಂದು ವಾರದಿಂದ ಸಂಪರ್ಕದಲ್ಲಿದ್ದವರು ಪರೀಕ್ಷೆ ಮಾಡಿಸಿಕೊಳ್ಳಿ. ನನಗೆ ಕೊರೊನಾ ಪಾಸಿಟಿವ್ ಬಂದಿದೆ. ಯಾವುದೇ ಲಕ್ಷಣಗಳು ಇಲ್ಲ. ಮನೆಯಲ್ಲೇ ಕ್ವಾರಂಟೈನ್ ಆಗಿದ್ದೀನಿ. ಶೀಘ್ರದಲ್ಲೇ ಗುಣಮುಖ ಆಗಿ ಮತ್ತಷ್ಟು ಸ್ಟ್ರಾಂಗ್ ಆಗುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ರಾಮ್ ಚರಣ್ ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ರಾಮ್ ಚರಣ್ ಗೆ ಜೋಡಿಯಾಗಿ ಬಾಲಿವುಡ್ ನಟಿ ಅಲಿಯಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ ಅಲಿಯಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇನ್ನೂ ಜೂ.ಎನ್ ಟಿ ಆರ್ ಸಹ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದಾರೆ.
ಕಳೆದ ಕೆಲವು ದಿನಗಳ ರಾಮ್ ಚರಣ್ ತಂದೆ ಚಿರಂಜೀವಿ ಅವರಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿತ್ತು. ಈ ಬಗ್ಗೆ ಚಿರಂಜೀವಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ಬಳಿಕ ಮತ್ತೆ ಪರೀಕ್ಷೆಗೆ ಒಳಗಾದ ಚಿರಂಜೀವಿ, ಕೊರೊನಾ ವರದಿ ನೆಗೆಟಿವ್ ಬಂದಿತ್ತು. ಕೊರೊನಾ ಪರೀಕ್ಷೆ ವರದಿಯ ಎಡವಟ್ಟಿನಿಂದ ಪಾಸಿಟಿವ್ ಬಂದಿದೆ, ಕೊರೊನಾ ಇಲ್ಲ ಎಂದು ಚಿರಂಜೀವಿ ಬಹಿರಂಗ ಪಡಿಸಿದ್ದರು.