For Quick Alerts
  ALLOW NOTIFICATIONS  
  For Daily Alerts

  'ಬಾಷಾ' ಶೂಟಿಂಗ್ ಬಳಿಕ ರಜನಿ-ನಾನಾ ಪಾಟೇಕರ್ ನಡುವೆ ಮುಂಬೈನಲ್ಲಿ ನಡೆದಿದ್ದೇನು?

  |

  ಸೂಪರ್ ಸ್ಟಾರ್ ರಜನಿಕಾಂತ್ ಸ್ನೇಹಜೀವಿ. ಎಷ್ಟೇ ದೊಡ್ಡ ಸೂಪರ್ ಸ್ಟಾರ್ ಆದ್ರು ಎಲ್ಲರೊಂದಿಗೂ ಬಹಳ ಸರಳವಾಗಿ ನಡೆದುಕೊಳ್ಳುತ್ತಾರೆ. ರಜನಿಗೆ ಎಲ್ಲ ಇಂಡಸ್ಟ್ರಿಯಲ್ಲಿ ಕೆಲವು ಆಪ್ತ ಸ್ನೇಹಿತರು ಇರ್ತಾರೆ. ಹೀಗೆ, ಮುಂಬೈನಲ್ಲಿ ತಲೈವಾ ಬೆಸ್ಟ್ ಫ್ರೆಂಡ್ ನಾನಾ ಪಾಟೇಕರ್.

  ರಜನಿಕಾಂತ್ ಮತ್ತು ನಾನಾ ಪಾಟೇಕರ್ ನಡುವೆ ಎಷ್ಟು ಹತ್ತಿರ ಬಾಂಧವ್ಯ ಇದೆ ಅಂದ್ರೆ ''ಇಬ್ಬರು ಟ್ಯಾಕ್ಸಿಯೊಂದರಲ್ಲಿ ಕೂತು ರಾತ್ರಿಯಿಂದ ಬೆಳಗ್ಗೆವರೆಗೂ ಮುಂಬೈನಲ್ಲಿ ಸುತ್ತಾಡಿದರಂತೆ''. ಈ ಘಟನೆ ಹಿಂದೆಯೂ ರೋಚಕ ಕಥೆ ಇದೆ. ಈ ಕತೆಯನ್ನು ದಕ್ಷಿಣ ಭಾರತದ ಖ್ಯಾತ ಖಳ ನಟ ಸತ್ಯ ಪ್ರಕಾಶ್ ಇತ್ತೀಚಿನ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ....

  ಶಿವಣ್ಣನ ಸರಳತೆ ಕಣ್ಣಾರೆ ಕಂಡು ಅಚ್ಚರಿಯಾಗಿದ್ದ ಖಳನಟ ಸತ್ಯ ಪ್ರಕಾಶ್ಶಿವಣ್ಣನ ಸರಳತೆ ಕಣ್ಣಾರೆ ಕಂಡು ಅಚ್ಚರಿಯಾಗಿದ್ದ ಖಳನಟ ಸತ್ಯ ಪ್ರಕಾಶ್

  'ಬಾಷಾ' ಚಿತ್ರದ ಶೂಟಿಂಗ್

  'ಬಾಷಾ' ಚಿತ್ರದ ಶೂಟಿಂಗ್

  ''ಮುಂಬೈನಲ್ಲಿ ಬಾಷಾ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭ. ಶನಿವಾರ ಬೇಗ ಶೂಟಿಂಗ್ ಮುಗಿಸಿದ ರಜನಿಕಾಂತ್, ಫೈಟ್ ಮಾಸ್ಟರ್ ರಾಜ ಅವರನ್ನು ಕರೆದುಕೊಂಡು ಕಾರಿನಲ್ಲಿ ಹೋಗ್ತಾರೆ. ಹೌಸಿಂಗ್ ಬೋರ್ಡ್ ಅಪಾರ್ಟ್‌ಮೆಂಟ್ ಬಳಿ ಕಾರು ಇಳಿದ ರಜನಿ, ಆ ಕಾರನ್ನು ಕಳುಹಿಸಿ ಮನೆಯೊಂದಕ್ಕೆ ಹೋಗಿ ಡೋರ್ ಬೆಲ್ ಹೊಡೆದರು. ಹುಡುಗನೊಬ್ಬ ಬಾಗಿಲು ತೆಗೆದ. ''ನಾನಾ ಇದ್ದಾರಾ'' ಎಂದು ರಜನಿ ಕೇಳ್ತಾರೆ, ''ಹೌದು, ಸ್ನಾನ ಮಾಡ್ತಿದ್ದಾರೆ, ಬನ್ನಿ'' ಎಂದು ಒಳಗೆ ಕರೆದರು. ಪ್ಲಾಸ್ಟಿಕ್ ಚೇರ್ ಅಷ್ಟೇ ಇರೋದು ಆ ರೂಂಮಿನಲ್ಲಿ, ರಜನಿ ಮತ್ತು ರಾಜು ಮಾಸ್ಟರ್ ಇಬ್ಬರು ಕೂತಿದ್ದಾರೆ. ಅಲ್ಲಿವರೆಗೂ ರಾಜು ಮಾಸ್ಟರ್‌ಗೆ ಗೊತ್ತಿಲ್ಲ ಅದು ನಾನಾ ಪಾಟೇಕರ್ ಮನೆ ಅಂತ'' ಎಂದು ಸತ್ಯ ಪ್ರಕಾಶ್ ಘಟನೆಯೊಂದನ್ನು ವಿವರಿಸಿದರು.

  ರಜನಿ ನೋಡಿ ಖುಷಿಯಾದ ನಾನಾ

  ರಜನಿ ನೋಡಿ ಖುಷಿಯಾದ ನಾನಾ

  ''ಸ್ನಾನ ಮುಗಿಸಿ ಬಂದ ನಾನಾ ಪಾಟೇಕರ್, ರಜನಿ ಅವರನ್ನು ನೋಡುತ್ತಿದ್ದಂತೆ ಓಹ್......ಎಂದು ಕೂಗಾಡಿ ಓಡಿ ಬಂದು ತಬ್ಬಿಕೊಂಡರು. ರಜನಿ ಸಹ ನಾನಾ ಅವರನ್ನು ತಬ್ಬಿಕೊಂಡು ಸಂಭ್ರಮಿಸುತ್ತಿದ್ದಾರೆ. ನಾನಾ ಟವಲ್ ಸಹ ಬಿದ್ದು ಹೋಗಿದೆ, ಅದು ಸಹ ನೆನಪಿಲ್ಲದ ಸಂಭ್ರಮ ಅದು'' ಎಂದು ಹೇಳಿದ ಸತ್ಯ ಪ್ರಕಾಶ್ ''ನೋಡಿ ಸ್ನೇಹ ಅಂದ್ರೆ ಅದು, ಅವರಿಬ್ಬರು ಎಷ್ಟೇ ಸೂಪರ್ ಸ್ಟಾರ್ ಆಗಿದ್ದರು, ಎಷ್ಟು ಸರಳವಾಗಿದ್ದರು'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

  ಟ್ಯಾಕ್ಸಿ ಕರೆದು ಹೊರಟರು

  ಟ್ಯಾಕ್ಸಿ ಕರೆದು ಹೊರಟರು

  ''ರಾಜು ಮಾಸ್ಟರ್ ಪರಿಚಯ ಮಾಡ್ಕೊಂಡು ನಂತರ ರೂಂನಲ್ಲಿ ರಮ್ ಬಾಟಲ್ ತಗೊಂಡು ಮೂವರು ಟ್ಯಾಕ್ಸಿ ಬುಕ್ ಮಾಡಿದರು. ಮಧ್ಯಾಹ್ನ ಟ್ಯಾಕ್ಸಿ ಹತ್ತಿದ ಮೂವರು ಬೆಳಗ್ಗಿನ ಜಾವದ ವರೆಗೂ ಮುಂಬೈ ಸುತ್ತಾಡುತ್ತಿದ್ದಾರೆ. ಬಾಟಲ್ ಖಾಲಿ ಆದರೆ, ನಿಲ್ಲಿಸೋದು ಹೊಸ ಬಾಟಲ್ ತಗೊಳ್ಳೋದು. ಮಾತು, ಮಾತು, ಮಾತು ರಾತ್ರಿಯಲ್ಲಿ ಮಾತು. ಇದನ್ನು ನೋಡಿ ರಾಜು ಮಾಸ್ಟರ್ ''ಅಬ್ಬಾ,,,,,ಫ್ರೆಂಡ್ಸ್ ಅಂದ್ರೆ ಇದು'' ಅಂತ ಹೇಳಿದ್ದರಂತೆ.

  Abhishek Ambarish ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ಕೊಟ್ಟ ದುನಿಯಾ ಸೂರಿ | Bad Manners | Oneindia Kannada
  ಇದು ಸರಳತೆ ಹಾಗೂ ಸ್ನೇಹಕ್ಕೆ ಉದಾಹರಣೆ

  ಇದು ಸರಳತೆ ಹಾಗೂ ಸ್ನೇಹಕ್ಕೆ ಉದಾಹರಣೆ

  ''ಒಬ್ಬರು ಸೌತ್ ಇಂಡಸ್ಟ್ರಿಗೆ ಸೂಪರ್ ಸ್ಟಾರ್, ಇನ್ನೊಬ್ಬರು ಬಾಂಬೆ ಇಂಡಸ್ಟ್ರಿಯ ಖ್ಯಾತ ನಟ. ಆ ಇಬ್ಬರು ನಡುವಿನ ಸ್ನೇಹ. ಆ ಸರಳತೆಯ ಜೀವನ. ನಿಜಕ್ಕೂ ಗ್ರೇಟ್. ರಾಜು ಮಾಸ್ಟರ್‌ಗೆ ಆ ರಾತ್ರಿ ಎಲ್ಲೆಲ್ಲಿ ಸುತ್ತಾಡಿದರು ಅಂತಾನೇ ಗೊತ್ತಿಲ್ಲ'' ಎಂದು ಸತ್ಯ ಪ್ರಕಾಶ್ ಸಂದರ್ಶನದಲ್ಲಿ ಹೇಳಿದ್ದಾರೆ.

  English summary
  Telugu actor Sathya prakash reveals about super star rajinikanth and hindi actor nana patekar friendship and simplicity.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X