For Quick Alerts
  ALLOW NOTIFICATIONS  
  For Daily Alerts

  ಯುವ ನಟ ಸುಧೀರ್ ವರ್ಮಾ ಆತ್ಮಹತ್ಯೆ: ಕಾರಣ ನಿಗೂಢ

  By ಫಿಲ್ಮಿಬೀಟ್ ಡೆಸ್ಕ್
  |

  ತೆಲುಗು ಚಿತ್ರರಂಗದ ಯುವ ನಟ ಸುಧೀರ್ ವರ್ಮಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ ಸುಮಾರು ನಲವತ್ತು ವರ್ಷ ವಯಸ್ಸಾಗಿತ್ತು.

  ಸುಧೀರ್ ವರ್ಮಾ ತೆಲುಗಿನ ಕೆಲವು ಸಿನಿಮಾ ಹಾಗೂ ವೆಬ್ ಸರಣಿಗಳಲ್ಲಿ ನಟಿಸಿದ್ದರು. ನಿನ್ನೆ ತಡರಾತ್ರಿ ವೈಜಾಗ್‌ನ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸುಧೀರ್ ವರ್ಮಾರ ನಿಧನಕ್ಕೆ ತೆಲುಗು ಚಿತ್ರರಂಗದ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.

  ಒಂದು ದಶಕಕ್ಕೂ ಹೆಚ್ಚು ಕಾಲ ತೆಲುಗಿನ ಆಯ್ದ ಸಿನಿಮಾಗಳಲ್ಲಿ ನಟಿಸಿದ್ದರು ಸುಧೀರ್ ವರ್ಮಾ. ಅವರ ಆತ್ಮಹತ್ಯೆಗೆ ಕಾರಣ ನಿಗೂಢವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  2013 ರಲ್ಲಿ ಬಿಡುಗಡೆ ಆಗಿದ್ದ 'ಸೆಕೆಂಡ್ ಹ್ಯಾಂಡ್' ಸಿನಿಮಾದಲ್ಲಿ ಸುಧೀರ್ ವರ್ಮಾ ನಟಿಸಿದ್ದರು. ಈ ಸಿನಿಮಾದ ನಟನೆಯಿಂದ ಚಿತ್ರರಂಗದಲ್ಲಿ ಗುರುತು ಸಂಪಾದಿಸಿದ ಸುಧೀರ್ ವರ್ಮಾ ಆ ನಂತರ ಕೆಲವು ಸಿನಿಮಾಗಳಲ್ಲಿ ನಾಯಕ ನಟನಾಗಿಯೂ ಕಾಣಿಸಿಕೊಂಡರು.

  2016 ರಲ್ಲಿ ಬಿಡುಗಡೆ ಆದ 'ಕುಂದನಪು ಬೊಮ್ಮ' ಸಿನಿಮಾದಲ್ಲಿ ನಾಯಕ ನಟನಾಗಿ ಸುಧೀರ್ ವರ್ಮಾ ನಟಿಸಿದ್ದರು. ಈ ಸಿನಿಮಾ ಹಿಟ್ ಆಗಿದ್ದಲ್ಲದೆ, ಸುಧೀರ್‌ಗೆ ಬೇಡಿಕೆಯನ್ನು ತಂದುಕೊಟ್ಟಿತು. 'ಲೈಫ್ ಈಸ್ ಬ್ಯೂಟಿಫುಲ್' ಸಿನಿಮಾದಲ್ಲಿ ನಟಿಸಿದ್ದ ಸುಧಾಕರ್ ಕೊಮಕುಲ ನಟಿಸಿದ್ದರು. ನಾಯಕಿಯಾಗಿ 'ಕಲರ್ ಫೋಟೊ' ಖ್ಯಾತಿಯ ಚಾಂದಿನಿ ಚೌಧರಿ ಇದ್ದರು.

  ಇದು ಮಾತ್ರವೇ ಅಲ್ಲದೆ, 'ಶೂಟೌಟ್ ಅಟ್ ಆಲೂರು' ಹೆಸರಿನ ವೆಬ್ ಸರಣಿಯಲ್ಲೂ ಸಹ ನಟಿಸಿದ್ದರು. ಈ ವೆಬ್ ಸರಣಿಯನ್ನು ಮೆಗಾಸ್ಟಾರ್ ಚಿರಂಜೀವಿ ಪುತ್ರಿ ನಿರ್ಮಾಣ ಮಾಡಿದ್ದರು.

  ಸುಧೀರ್ ವರ್ಮಾ ನಿಧನಕ್ಕೆ ಅವರ ಸಹನಟರು ಸೇರಿದಂತೆ ತೆಲುಗು ಚಿತ್ರರಂಗದ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ. ಸುಧೀರ್ ವರ್ಮಾ ಖಾಸಗಿ ಜೀವನದ ಸಮಸ್ಯೆಯಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.

  English summary
  Telugu actor Sudheer Varma is no more. Sudheer Varma acted in several Telugu movies.
  Monday, January 23, 2023, 17:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X