For Quick Alerts
  ALLOW NOTIFICATIONS  
  For Daily Alerts

  ವಿವಾದ ಎಬ್ಬಿಸಿದ ಕವಿತೆ: ಕೈಮುಗಿದು ಕ್ಷಮೆ ಕೇಳಿದ ಖ್ಯಾತ ತೆಲುಗು ನಟ

  |

  ಸುಮಾರು 750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ತೆಲುಗಿನ ಖ್ಯಾತ ಪೋಷಕ ನಟ, ಬರಹಗಾರ, ಕವಿ ತನಿಕೆಲ್ಲ ಭರಣಿ ಸಾಮಾಜಿಕ ಜಾಲತಾಣದಲ್ಲಿ ಕ್ಷಮಾಪಣೆ ಕೇಳಿದ್ದಾರೆ. 'ಕೈಮುಗಿದು ಕ್ಷಮೆ ಕೇಳುವೆ ಕ್ಷಮಿಸಿಬಿಡಿ' ಎಂದು ಮನವಿ ಮಾಡಿದ್ದಾರೆ.

  ಆಗಿದ್ದಿಷ್ಟು, ಉತ್ತಮ ಕವಿಯೂ ಆಗಿರುವ ತನಿಕೆಲ್ಲ ಭರಣಿ ಸಾಮಾಜಿಕ ಜಾಲತಾಣದಲ್ಲಿ ಸ್ವರಚಿತ ಕವನಗಳನ್ನು ಪ್ರಕಟಿಸುತ್ತಿರುತ್ತಾರೆ. ಅವರ ಕವಿತೆಗಳಿಗೆ ಸಾಕಷ್ಟು ಸಂಖ್ಯೆಯ ಓದುಗರಿದ್ದಾರೆ. ಇತ್ತೀಚೆಗೆ ಅವರೇ ವಾಚಿಸಿದ್ದ 'ನಾನ್ನ ಎಂದುಕೊ ಎನಕಬಡ್ಡಾಡು' ಕವಿತೆ ಭಾರಿ ವೈರಲ್ ಆಗಿತ್ತು. ಕನ್ನಡಕ್ಕೂ ಅನುವಾದಗೊಂಡಿತ್ತು.

  'ಶಭಾಷ್‌ ರ ಶಂಕರ' ಹೆಸರಿನಲ್ಲಿ ದೇವರ ಕುರಿತು, ಅಧ್ಯಾತ್ಮ ಕುರಿತು ಕೆಲವು ಕವನಗಳನ್ನು ಹಂಚಿಕೊಂಡಿದ್ದರು ಭರಣಿ. ಅಂತೆಯೇ ಇತ್ತೀಚೆಗೆ ದೇವರನ್ನು ನಂಬದ ನಾಸ್ತಿಕರ ಬಗ್ಗೆ ಕವನ ಬರೆದು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದರು. ಕವನದಲ್ಲಿ ನಾಸ್ತಿಕರನ್ನು ಕತ್ತೆಗೆ ಹೋಲಿಸಿ, ನಿಂದಾತ್ಮಕ ಸಾಲುಗಳನ್ನು ಬರೆದಿದ್ದರು ಭರಣಿ. ಇದು ವಿವಾದಕ್ಕೆ ಕಾರಣವಾಗಿತ್ತು.

  ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

  ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

  ಭರಣಿ ಅವರ ಕವನದ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗಳಾಗಿ, ದೇವರನ್ನು ನಂಬದಿರುವುದು ವ್ಯಕ್ತಿಯ ಆಯ್ಕೆಗೆ ಬಿಟ್ಟ ವಿಚಾರ. ದೇವರನ್ನು ನಂಬದವರು ಎಂದರೆ ಅನಾಚಾರಿಗಳು ಎಂದರ್ಥವಲ್ಲ ಎಂದು ಕೆಲ ವಿಚಾರವಾದಿಗಳು ವಾದ ಮಂಡಿಸಿದ್ದರು. ಚರ್ಚೆಯು ವಿವಾದದ ಸ್ವರೂಪ ತಾಳಿದ್ದನ್ನು ಗಮನಿಸಿದ ಭರಣಿ ಸಾಮಾಜಿಕ ಜಾಲತಾಣದಲ್ಲಿ ಕ್ಷಮಾಪಣೆ ಕೋರಿದ್ದಾರೆ.

  ಕೈಮುಗಿದು ಕ್ಷಮೆ ಕೇಳುತ್ತಿದ್ದೇನೆ ಎಂದ ಭರಣಿ

  ಕೈಮುಗಿದು ಕ್ಷಮೆ ಕೇಳುತ್ತಿದ್ದೇನೆ ಎಂದ ಭರಣಿ

  ವಿಡಿಯೋ ಪ್ರಕಟಿಸಿರುವ ಭರಣಿ, 'ಕೆಲವು ದಿನಗಳಿಂದ ನಾನು ಫೇಸ್‌ಬುಕ್‌ನಲ್ಲಿ ಪ್ರಕಟಿಸುತ್ತಿರುವ 'ಶಭಾಷ್‌ ರ ಶಂಕರ' ಪದ್ಯಗಳಲ್ಲಿ ಒಂದು ಪದ್ಯದಲ್ಲಿನ ಕೆಲವು ಸಾಲುಗಳು ದುರಾದೃಷ್ಟವಶಾತ್ ಕೆಲವರ ಮನಸ್ಸನ್ನು ನೋಯಿಸಿವೆ. ಹಾಗಾಗಿ ನಾನು ಕೈಮುಗಿದು ಬೇಷರತ್ತು ಕ್ಷಮೆ ಕೇಳುತ್ತೇನೆ' ಎಂದಿದ್ದಾರೆ ಭರಣಿ.

  ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದೇನೆ: ಭರಣಿ

  ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದೇನೆ: ಭರಣಿ

  'ನನಗೆ ವಿಚಾರವಾದಿಗಳೆಂದರೆ, ಮಾನವತಾವಾದಿಗಳೆಂದರೆ ಬಹಳ ಗೌರವ. ನಾನು ಬರೆದ ಸಾಲುಗಳಿಗೆ ನಾನು ವಿವರಣೆ ನೀಡುವುದಿಲ್ಲ, ಹಾಗೆ ಮಾಡಿದಲ್ಲಿ 'ಡಿಫೆಂಡ್' ಮಾಡಿಕೊಂಡಂತಾಗುತ್ತದೆ. ನಾನು ಬರೆದ ಆ ಕವಿತೆಯನ್ನು ಸಹ ಫೇಸ್‌ಬುಕ್‌ನಿಂದ ಡಿಲೀಟ್ ಮಾಡಿದ್ದೀನಿ' ಎಂದಿದ್ದಾರೆ ಭರಣಿ.

  ಮತ್ತೆ ಲಾಕ್ ಡೌನ್ ಸೂಚನೆಯನ್ನ ಕೊಡ್ತಿದ್ದೀಯಾ ರಾಮಾಯಣ ಸೀರಿಯಲ್ | Filmibeat Kannada
  750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ

  750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ

  ಭರಣಿ ಅವರು ತೆಲುಗು ಚಿತ್ರರಂಗದ ಬಹು ಬೇಡಿಕೆಯ ಪೋಷಕ ನಟ. 1985 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ಭರಣಿ ಈವರೆಗೆ 750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವಾರು ಸಿನಿಮಾಗಳಿಗೆ ಸಂಭಾಷಣೆ, ಚಿತ್ರಕತೆ ಸಹ ಬರೆದಿರುವ ಭರಣಿ. ಎಸ್‌.ಪಿ.ಬಾಲಸುಬ್ರಹ್ಮಣ್ಯಂ-ಲಕ್ಷ್ಮಿ ನಟಿಸಿರುವ 'ಮಿಥುನಂ' ಸಿನಿಮಾವನ್ನು ನಿರ್ದೇಶನ ಸಹ ಮಾಡಿದ್ದಾರೆ.

  English summary
  Telugu actor Tanikella Bharani asks apology on social media. one of his poems created big debate in social media so he asks apology who ever hurt from his poem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X