For Quick Alerts
  ALLOW NOTIFICATIONS  
  For Daily Alerts

  ಇನ್ಸ್ಟಾಗ್ರಾಂ ಟಾಪ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ವೆಂಕಟೇಶ್ ಪುತ್ರಿ, ಒಂದು ಪೋಸ್ಟ್‌ಗೆ ಪಡೆಯುವ ಹಣ ಎಷ್ಟು?

  |

  ಸೋಶಿಯಲ್ ಮೀಡಿಯಾ ಕೇವಲ ಮಾಹಿತಿ ಹಂಚಿಕೆ ಅಥವಾ ಮನರಂಜನೆ ಕಾರಣಕ್ಕಾಗಿ ಮಾತ್ರ ಬಳಕೆಯಾಗುತ್ತಿಲ್ಲ. ಇದೊಂದು ವ್ಯವಹಾರಿಕ ವೇದಿಕೆಯೂ ಹೌದು. ಸೋಶಿಯಲ್ ಮೀಡಿಯಾದಿಂದ ಅನೇಕರು ಹಣ ಸಂಪಾದನೆ ಮಾಡುವವರಿದ್ದಾರೆ. ಅದರಲ್ಲೂ ಖ್ಯಾತ ಸೆಲೆಬ್ರಿಟಿಗಳಿಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಪ್ರಮೋಷನ್ ಪೋಸ್ಟ್‌ನಿಂದ ದೊಡ್ಡ ಮಟ್ಟದ ಸಂಭಾವನೆಯೂ ಸಿಗುತ್ತದೆ.

  ಈ ಪೈಕಿ ಪುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ, ಕ್ರಿಕೆಟಿಗ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದು ಪ್ರಮೋಷನ್ ಪೋಸ್ಟ್ ಹಂಚಿಕೊಂಡರೆ ಕೋಟ್ಯಾಂತರ ರೂಪಾಯಿ ಪಡೆಯುತ್ತಾರೆ. ಇಂತವರ ಮಧ್ಯೆ ತೆಲುಗು ನಟ 'ವಿಕ್ಟರಿ' ವೆಂಕಟೇಶ್ ಪುತ್ರಿ ಆಶ್ರಿತಾ ದಗ್ಗುಬಾಟಿ ಅಚ್ಚರಿಯೆಂಬತೆ ಗಮನ ಸೆಳೆದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಒಂದು ಪ್ರಮೋಷನ್ ಪೋಸ್ಟ್ ಹಾಕಲು ವೆಂಕಟೇಶ್ ಪುತ್ರಿ ದೊಡ್ಡ ಮೊತ್ತವನ್ನೇ ಪಡೆಯುತ್ತಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ಮುಂದೆ ಓದಿ...

  ಇನ್‌ಸ್ಟಾಗ್ರಾಂನ ಒಂದು ಪೋಸ್ಟ್‌ಗೆ ಪ್ರಿಯಾಂಕಾ, ವಿರಾಟ್‌ ಕೊಹ್ಲಿಗೆ ಸಿಗುವ ಹಣವೆಷ್ಟು?ಇನ್‌ಸ್ಟಾಗ್ರಾಂನ ಒಂದು ಪೋಸ್ಟ್‌ಗೆ ಪ್ರಿಯಾಂಕಾ, ವಿರಾಟ್‌ ಕೊಹ್ಲಿಗೆ ಸಿಗುವ ಹಣವೆಷ್ಟು?

  ಮೊದಲ ಸ್ಥಾನದಲ್ಲಿ ಪುಟ್‌ಬಾಲ್ ಆಟಗಾರ

  ಮೊದಲ ಸ್ಥಾನದಲ್ಲಿ ಪುಟ್‌ಬಾಲ್ ಆಟಗಾರ

  ಹಾಪರ್ ಡಾಟ್ ಕಾಮ್ ಇತ್ತೀಚಿಗಷ್ಟೆ 2021ರ ಇನ್ಸ್ಟಾಗ್ರಾಮ್ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ವಿಶ್ವದ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅಗ್ರಸ್ಥಾನದಲ್ಲಿದ್ದಾರೆ. 29 ಕೋಟಿಗೂ ಅಧಿಕ ಹಿಂಬಾಲಕರನ್ನು ಹೊಂದಿರುವ ರೊನಾಲ್ಡೊ ಇನ್ಸ್ಟಾಗ್ರಾಂನಲ್ಲಿ ಹಾಕುವ ಒಂದು ಪೋಸ್ಟ್‌ಗೆ 11 ಕೋಟಿ ಹಣ ಪಡೆಯುತ್ತಾರಂತೆ.

  ಪ್ರಿಯಾಂಕಾ ಚೋಪ್ರಾ-ಕೊಹ್ಲಿ

  ಪ್ರಿಯಾಂಕಾ ಚೋಪ್ರಾ-ಕೊಹ್ಲಿ

  ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದಕ್ಕೆ ಹೆಚ್ಚು ಹಣ ಪಡೆಯುವ ವಿಶ್ವದ ಟಾಪ್ 100 ಸೆಲೆಬ್ರಿಟಿಗಳ ಪೈಕಿ ಭಾರತದ ಪ್ರಿಯಾಂಕಾ ಚೋಪ್ರಾ ಮತ್ತು ವಿರಾಟ್ ಕೊಹ್ಲಿ ಅಗ್ರ 30ರಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಿಯಾಂಕಾ ಒಂದು ಪೋಸ್ಟ್‌ಗೆ 2 ಕೋಟಿ ಹಣ ಪಡೆದ್ರೆ, ಕೊಹ್ಲಿ ಒಂದು ಪೋಸ್ಟ್‌ಗೆ 5 ಕೋಟಿ ಪಡೆಯುತ್ತಾರೆ ಎಂದು ವರದಿಯಾಗಿದೆ.

  ವೆಂಕಟೇಶ್ ಪುತ್ರಿಗೆ ಸ್ಥಾನ

  ವೆಂಕಟೇಶ್ ಪುತ್ರಿಗೆ ಸ್ಥಾನ

  ತೆಲುಗು ನಟ ವೆಂಕಟೇಶ್ ಪುತ್ರಿ ಆಶ್ರಿತಾ ಸಹ ಈ ಜನರ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಸರ್ಪ್ರೈಸ್ ಆಗಿದೆ. ತೆಲುಗು ಮಾಧ್ಯಮಗಳ ವರದಿ ಪ್ರಕಾರ ಆಶ್ರಿತಾ ವೆಂಕಟೇಶ್ ಒಂದು ಪ್ರಮೋಷನ್ ಪೋಸ್ಟ್‌ಗೆ $ 400 (ಸುಮಾರು 31,000 ರೂ.) ಪಡೆಯುತ್ತಾರೆ ಎಂದು ಹೇಳಲಾಗಿದೆ.

  Rachita Ram Biography | ಬಿಂದಿಯಾ ರಾಮ್ ರಚಿತಾ ರಾಮ್ ಆದ ಕಥೆ | Rachita Ram real Life story | Filmibeat
  ಸೋಶಿಯಲ್ ಮೀಡಿಯಾದಲ್ಲಿ ಪ್ರಭಾವಿ

  ಸೋಶಿಯಲ್ ಮೀಡಿಯಾದಲ್ಲಿ ಪ್ರಭಾವಿ

  ಆಶ್ರಿತಾ ವೆಂಕಟೇಶ್ ಯೂಟ್ಯೂಬ್‌ನಲ್ಲಿ ''ಇನ್ಫಿನಿಟಿ ಪ್ಲ್ಯಾಟರ್'' ಎಂಬ ಸ್ವಂತ ಚಾನಲ್ ಹೊಂದಿದ್ದು, ಇನ್ಸ್ಟಾಗ್ರಾಂನಲ್ಲೂ ಹೆಚ್ಚು ಖ್ಯಾತಿ ಹೊಂದಿದ್ದಾರೆ. ವಿನಾಯಕ್ ರೆಡ್ಡಿ ಎನ್ನುವವರ ಜೊತೆ ಇತ್ತೀಚಿಗೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

  English summary
  Telugu Actor Venkatesh's Daughter Aashritha Daggubati Makes it to 2021 Instagram Rich List.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X