For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿಯನ್ನು 'ತಾತ' ಎಂದ ನಟಿ: 'ಪ್ರಿನ್ಸ್' ಶೋಗೆ ಹೋಗಿದ್ದಕ್ಕೆ ಟ್ರೋಲ್

  |

  ರಾಜಕೀಯಕ್ಕೆ ಬ್ರೇಕ್ ಹಾಕಿ ಸಿನಿಮಾ ಇಂಡಸ್ಟ್ರಿಗೆ ಹಿಂತಿರುಗಿದ ಮೇಲೆ ಮೆಗಾಸ್ಟಾರ್ ಹವಾ ಟಾಲಿವುಡ್ನಲ್ಲಿ ಜೋರಾಗಿದೆ. ಸಿನಿಮಾಗಳು, ಕಾರ್ಯಕ್ರಮಗಳಿಗೆ ಹೋಗುವುದು ಹೆಚ್ಚಾಗಿದೆ. ಚಿರು ಅತಿಥಿಯಾಗಿ ಬಂದ್ರೆ ನಮ್ಮ ಸಿನಿಮಾ ಕಾರ್ಯಕ್ರಮಕ್ಕೆ ಪ್ರಚಾರ ಹೆಚ್ಚಾಗುತ್ತೆ ಎಂಬ ಟ್ರೆಂಡ್ ಶುರುವಾಗಿದೆ.

  ಇತ್ತೀಚಿಗಷ್ಟೆ ಮಹೇಶ್ ಬಾಬು ನಟನೆಯ ಸರಿಲೇರು ನೀಕೇವರು ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಚಿರಂಜೀವಿ ಅತಿಥಿಯಾಗಿ ಆಗಮಿಸಿದ್ದರು. ಈ ಶೋಗೆ ಮೆಗಾಸ್ಟಾರ್ ಮುಖ್ಯ ಅತಿಥಿಯಾಗಿ ಹೋಗಿದ್ದಕ್ಕೆ ತೆಲುಗಿನ ಯುವನಟಿಯೊಬ್ಬರು ಟ್ರೋಲ್ ಮಾಡುತ್ತಿದ್ದಾರೆ.

  ಅಯ್ಯಯ್ಯೋ.. ರಶ್ಮಿಕಾ ಮಂದಣ್ಣ ಹೆಸರನ್ನ ಚಿರಂಜೀವಿ ಹೀಗಾ ಕರೆಯೋದು.!?ಅಯ್ಯಯ್ಯೋ.. ರಶ್ಮಿಕಾ ಮಂದಣ್ಣ ಹೆಸರನ್ನ ಚಿರಂಜೀವಿ ಹೀಗಾ ಕರೆಯೋದು.!?

  ಚಿರಂಜೀವಿ ಅವರನ್ನು ತಾತ ಎಂದು ಸಂಬೋಧಿಸಿದ್ದಾರೆ. ಇದು ಮೆಗಾ ಅಭಿಮಾನಿಗಳನ್ನು ಕೆರಳಿಸಿದೆ. ಅಷ್ಟಕ್ಕೂ, ಆ ನಟಿ ಯಾರು? ಏನಂದ್ರು? ಮುಂದೆ ಓದಿ....

  ಚಿರಂಜೀವಿ ತಾತಗೆ ವಿಜಯಶಾಂತಿ ಅಂದ್ರೆ.....?

  ಚಿರಂಜೀವಿ ತಾತಗೆ ವಿಜಯಶಾಂತಿ ಅಂದ್ರೆ.....?

  ''ಚಿರಂಜೀವಿ ತಾತಗೆ ವಿಜಯಶಾಂತಿ ಅಂದ್ರೆ ಒಂಥರಾ ಪುಳಕ, ನನ್ನ ವಿಷಯದಲ್ಲಿ ಉರಿ ಕಮ್ಮಿ ಆಗಿಲ್ಲ'' ಎಂದು ವಿವಾದಾತ್ಮಕ ನಟಿ ಶ್ರೀರೆಡ್ಡಿ ಫೇಸ್ ಬುಕ್ನಲ್ಲಿ ಕಾಮೆಂಟ್ ಮಾಡಿದ್ದಾರೆ. ಇದು ಟಾಲಿವುಡ್ನಲ್ಲಿ ಚರ್ಚೆಗೆ ಕಾರಣವಾಗಿದೆ.

  ರಾತ್ರಿ ವೇಳೆ ಸಿನಿಮಾ ಆಫೀಸ್ ಗೆ ಹುಡುಗಿಯರು ಯಾಕೆ ಹೋಗ್ತಾರೆ? ನಿರ್ಮಾಪಕ ಹೇಳಿದ್ದೇನು?ರಾತ್ರಿ ವೇಳೆ ಸಿನಿಮಾ ಆಫೀಸ್ ಗೆ ಹುಡುಗಿಯರು ಯಾಕೆ ಹೋಗ್ತಾರೆ? ನಿರ್ಮಾಪಕ ಹೇಳಿದ್ದೇನು?

  ವಿಜಯಶಾಂತಿಗಾಗಿ ಚಿರು ತಾತ ಬಂದ್ರು!

  ವಿಜಯಶಾಂತಿಗಾಗಿ ಚಿರು ತಾತ ಬಂದ್ರು!

  ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೇವರು' ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಚಿರಂಜೀವಿ ಅತಿಥಿಯಾಗಿ ಬಂದಿದ್ದರು. ಇದಾದ ಒಂದು ದಿನದ ಬಳಿಕ ಅಲ್ಲು ಅರ್ಜುನ್ ಅಭಿನಯದ 'ಅಲಾ ವೈಕುಂಠಪುರಂಲ್ಲೊ' ಚಿತ್ರ ಪ್ರಿ-ರಿಲೀಸ್ ಕಾರ್ಯಕ್ರಮವಿತ್ತು. ಚಿರಂಜೀವಿಗೆ ಅಲ್ಲು ಅರ್ಜುನ್ ಸಂಬಂಧಿ. ಅವರು ಸಿನಿಮಾ ಕಾರ್ಯಕ್ರಮಕ್ಕೆ ಹೋಗುವ ಬದಲು, ಮಹೇಶ್ ಬಾಬು ಶೋಗೆ ಚಿರಂಜೀವಿ ಬಂದಿದ್ದೇಕೆ ಎಂದು ಶ್ರೀರೆಡ್ಡಿ ಪ್ರಶ್ನಿಸಿದ್ದಾರೆ. 'ಸರಿಲೇರು ನೀಕೇವರು' ಶೋಗೆ ಚಿರಂಜೀವಿ ಬಂದಿದ್ದು ಮಹೇಶ್ ಬಾಬುಗಾಗಿ ಅಲ್ಲ, ವಿಜಯಶಾಂತಿಗೋಸ್ಕರ ಎಂದು ಶ್ರೀರೆಡ್ಡಿ ಪೋಸ್ಟ್ ಹಾಕಿದ್ದಾರೆ.

  ಈ ನಿರ್ದೇಶಕನ ಜೊತೆ ಡೇಟಿಂಗ್ ಮಾಡಬೇಕಂತೆ ಶ್ರೀರೆಡ್ಡಿಈ ನಿರ್ದೇಶಕನ ಜೊತೆ ಡೇಟಿಂಗ್ ಮಾಡಬೇಕಂತೆ ಶ್ರೀರೆಡ್ಡಿ

  ಚಿರು ಮೀಟ್ ವಿಜಯಶಾಂತಿ

  ಚಿರು ಮೀಟ್ ವಿಜಯಶಾಂತಿ

  ತೆಲುಗು ಇಂಡಸ್ಟ್ರಿಯಲ್ಲಿ ಮೆಗಾಸ್ಟಾರ್ ಚಿರಂಜೀವಿ ಮತ್ತು ವಿಜಯಶಾಂತಿ ಜೋಡಿ ಅದ್ಭುತ ಜೋಡಿಗಳಲ್ಲಿ ಒಂದು. 20ಕ್ಕೂ ಅಧಿಕ ಚಿತ್ರಗಳಲ್ಲಿ ಇವರಿಬ್ಬರು ಒಟ್ಟಿಗೆ ನಟಿಸಿದ್ದಾರೆ. ವಿಜಯಶಾಂತಿ ಜೊತೆ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಟ ಚಿರಂಜೀವಿ. ಇಬ್ಬರ ಮಧ್ಯೆ ಒಳ್ಳೆಯ ಸ್ನೇಹ ಸಂಬಂಧವೂ ಇತ್ತು. ಆದರೆ ಇಬ್ಬರು ರಾಜಕೀಯ ಪ್ರವೇಶ ಮಾಡಿದ ನಂತರ ಕೆಲವು ವಿಚಾರಗಳಲ್ಲಿ ವಿರೋಧಿಗಳಂತೆ ಬಂಬಿತವಾಗಿದ್ದರು.

  ಅಲ್ಲು ಅರ್ಜುನ್ ಟ್ರೋಲ್ ಮಾಡಿದ್ದ ನಟಿ

  ಅಲ್ಲು ಅರ್ಜುನ್ ಟ್ರೋಲ್ ಮಾಡಿದ್ದ ನಟಿ

  ಇತ್ತೀಚಿಗಷ್ಟೆ ಅಲ್ಲು ಅರ್ಜುನ್ ಅವರ ಹೇರ್ ಸ್ಟೈಲ್ ಬಗ್ಗೆ ಶ್ರೀರೆಡ್ಡಿ ಕಾಮೆಂಟ್ ಮಾಡಿದ್ದರು. ಅಲ್ಲು ಅರ್ಜುನ್ ಅವರು ಪ್ರತಿಯೊಂದು ಸಿನಿಮಾದಲ್ಲೂ ನಿಜವಾದ ಹೇರ್ ಹೊಂದಿರುತ್ತಾರಾ ಅಥವಾ ವಿಗ್ ಬಳಸುತ್ತಾರಾ ಎಂದು ಕಾಲೆಳೆದಿದ್ದರು.

  English summary
  One of the telugu actress called 'Thatha' to megastar Chiranjeevi. she also trolled to megahero.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X