For Quick Alerts
  ALLOW NOTIFICATIONS  
  For Daily Alerts

  ತೆಲುಗಿನ ಜನಪ್ರಿಯ ನಟ ಕೈಕಾಲ ಸತ್ಯನಾರಾಯಣ ಸ್ಥಿತಿ ಗಂಭೀರ

  |

  ತೆಲುಗು ಚಿತ್ರರಂಗದ ಜನಪ್ರಿಯ ನಟ ಕೈಕಾಲ ಸತ್ಯನಾರಾಯಣ ಆರೋಗ್ಯ ಸ್ಥಿತಿ ಗಂಭಿರವಾಗಿದೆ. ಅವರನ್ನು ಐಸಿಯುವಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

  ಅಕ್ಟೋಬರ್ 30 ರಂದು ಮನೆಯಲ್ಲಿ ಜಾರಿ ಬಿದ್ದಿದ್ದ ಕೈಕಾಲ ಸತ್ಯನಾರಾಯಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ಬಳಿಕ ಮನೆಗೆ ವಾಪಸ್ ಕರೆತರಲಾಗಿತ್ತು ಆಗಿನಿಂದಲೂ ಕೈಕಾಲ ಆರೋಗ್ಯ ಮೊದಲಿನಂತಿರಲಿಲ್ಲ. ಆ ನಂತರ ಶನಿವಾರ (ನವೆಂಬರ್ 20) ರಂದು ಅವರ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಅವರನ್ನು ಹೈದರಾಬಾದ್‌ನ ಪ್ರತಿಷ್ಟಿತ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯ್ತು.

  ಭಾನುವಾರವಂತೂ ಕೈಕಾಲರ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಕೈಕಾಲ ಅವರ ಸಂಬಂಧಿಗಳು, ಸ್ನೇಹಿತರೆಲ್ಲ ಆಸ್ಪತ್ರೆಗೆ ದೌಡಾಯಿಸಿ ಅವರನ್ನು ಕಾಣುತ್ತಿದ್ದಾರೆ. ಕೆಲವು ವರದಿಗಳ ಪ್ರಕಾರ ಕೈಕಾಲರು ನಿತ್ರಾಣರಾಗಿದ್ದಾರೆ ಅವರಿಗೆ ಮಾತನಾಡಲು ಸಹ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

  ಆದರೆ ನಟ ಚಿರಂಜೀವಿ ಮಾಡಿರುವ ಟ್ವೀಟ್‌ ಪ್ರಕಾರ ಕೈಕಾಲರದ ಆರೋಗ್ಯ ಚೇತರಿಕೆ ಹಂತದಲ್ಲಿದೆ. ''ನಾನು ಹಿರಿಯ ನಟ ಕೈಕಾಲ ಅವರಿಗೆ ಕರೆ ಮಾಡಿ ಮಾತನಾಡಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ಮನೆಗೆ ಬರಬೇಕು, ನೀವು ಮನೆಗೆ ಬಂದ ಸಂದರ್ಭವನ್ನು ನಾವೆಲ್ಲ ಖುಷಿಯಿಂದ ಸಂಭ್ರಮಿಸಬೇಕು ಎಂದೆ. ಅದಕ್ಕೆ ಗೆಲುವಿನ ಚಿಹ್ನೆ ತೋರಿಸಿದರು (ತಮ್ಸ್‌ಅಪ್) ಎಂದಿದ್ದಾರೆ ಎಂದಿದ್ದಾರೆ ಚಿರಂಜೀವಿ.

  ''ಕೈಕಾಲ ಸತ್ಯನಾರಾಯಣ ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ನಾನು ಆತಂಕಿತನಾದೆ. ಆದರೆ ಅವರಿಗೆ ಪ್ರಜ್ಞೆ ಬಂದಿದೆ ಎಂದು ಗೊತ್ತಾದ ಕೂಡಲೇ ಕೈಕಾಲರಿಗೆ ಚಿಕಿತ್ಸೆ ನೀಡುತ್ತಿರುವ ಡಾ.ಸುಬ್ಬಾರೆಡ್ಡಿ ಸಹಾಯದೊಂದಿಗೆ ಕೈಕಾಲ ಅವರೊಟ್ಟಿಗೆ ದೂರವಾಣಿ ಮೂಲಕ ಮಾತನಾಡಿದೆ. ಅವರಿಗೆ ಧೈರ್ಯ ತುಂಬುವ ಯತ್ನ ಮಾಡಿದೆ. ಅವರೊಂದಿಗೆ ಮಾತನಾಡಿದ ಬಳಿಕ ನನಗೂ ಆತ್ಮವಿಶ್ವಾಸ ಮೂಡಿದೆ. ಕೈಕಾಲ ಅವರು ಗುಣಮುಖರಾಗಿ ಬಂದೇ ಬರುತ್ತಾರೆ'' ಎಂದಿದ್ದಾರೆ ಚಿರಂಜೀವಿ.

  86 ವರ್ಷದ ಕೈಕಾಲ ಸತ್ಯನಾರಾಯಣ ತೆಲುಗು ಚಿತ್ರರಂಗದ ಮೇರು ನಟರಲ್ಲಿ ಒಬ್ಬರು. ಚಿತ್ರರಂಗದ ಏಳಿಗೆಯಲ್ಲಿ ದೊಡ್ಡ ಕೊಡುಗೆ ಕೈಕಾಲ ಅವರದಿದ್ದೆ. ಈ ವರೆಗೆ ಸುಮಾರು 800 ಸಿನಿಮಾಗಳಲ್ಲಿ ಕೈಕಾಲ ಸತ್ಯನಾರಾಯಣ ನಟಿಸಿದ್ದಾರೆ. ಎನ್‌ಟಿಆರ್, ನಾಗೇಶ್ವರ ರಾವ್ ಕಾಲದಲ್ಲಿ ನಟನಾಗಿ ಗುರುತಿಸಿಕೊಂಡ ಕೈಕಾಲ ಸತ್ಯನಾರಾಯಣ ಹಲವು ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. ಆ ನಂತರ ನೂರಾರು ಸಿನಿಮಾಗಳಲ್ಲಿ ಪೋಷಕ ಪಾತ್ರ, ದ್ವಿತೀಯ ನಾಯಕ ಹೀಗೆ ಹಲವು ಪಾತ್ರಗಳಲ್ಲಿ ನಟಿಸಿದ್ದಾರೆ. ರಾಜಕಾರಣಿಯೂ ಆಗಿದ್ದ ಕೈಕಾಲ ಸತ್ಯನಾರಾಯಣ ತೆಲುಗು ದೇಶಂ ಪಕ್ಷದಿಂದ 1996 ರಲ್ಲಿ ಮಚಿಲಿಪಟ್ಟಣಂ ಲೋಕಸಭಾ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಿ ಗೆದ್ದಿದ್ದರು.

  English summary
  Telugu famous actor Kaikala Sathyanarayana's health is in critical condition. Megastar Chiranjeevi said he talked with Kaikala through phone and he is getting better.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X