For Quick Alerts
  ALLOW NOTIFICATIONS  
  For Daily Alerts

  ಮತ್ತೆ ತೆಲುಗು ಸಿನಿಮಾ ಶೂಟಿಂಗ್‌ಗೆ ಮುಹೂರ್ತ ಫಿಕ್ಸ್: ಸಮಸ್ಯೆ ಪರಿಹಾರ ಆಯ್ತಾ?

  |

  ಕೋವಿಡ್ ಬಳಿಕ ಭಾರತೀಯ ಚಿತ್ರರಂಗದ ಪರಿಸ್ಥಿತಿ ಬದಲಾಗಿದೆ. ಜನರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಿಲ್ಲ ಅನ್ನೋ ಆರೋಪ ಕೇಳಿ ಬರುತ್ತಿದೆ. ಇದರಿಂದ ತೆಲುಗು ಚಿತ್ರರಂಗ ಕೂಡ ಹೊರತಾಗಿರಲಿಲ್ಲ. "ಕೋವಿಡ್ ಬಳಿಕ ಜನರು ಥಿಯೇಟರ್‌ಗೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದು, ನಮಗೆ ನಷ್ಟ ಆಗುತ್ತಿದೆ" ಎಂದು ನಿರ್ಮಾಪಕರು ತಮ್ಮ ಕಷ್ಟ ಹೊರ ಹಾಕಿದ್ದರು.

  ಇನ್ನೊಂದು ಕಡೆ ಸಿನಿಮಾ ಕಲೆಕ್ಷನ್ ಆಗುತ್ತಿಲ್ಲ. ಈ ಮಧ್ಯೆ ಸ್ಟಾರ್ ಹೀರೊಗಳು ಸಂಭಾವನೆಯನ್ನು ಹೆಚ್ಚು ಮಾಡಿಕೊಂಡಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಈ ಬೆನ್ನಲ್ಲೇ ಆಗಸ್ಟ್ 1 ರಿಂದ ತೆಲುಗು ಚಿತ್ರರಂಗ ಆಕ್ಟಿವ್ ನಿರ್ಮಾಪಕರು ಚಿತ್ರೀಕರಣವನ್ನು ನಿಲ್ಲಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆ.

  'NTR30' ಸಿನಿಮಾಗೆ ಸಾಯಿ ಪಲ್ಲವಿ ನಾಯಕಿ!'NTR30' ಸಿನಿಮಾಗೆ ಸಾಯಿ ಪಲ್ಲವಿ ನಾಯಕಿ!

  ಸಿನಿಮಾ ನಿರ್ಮಾಣದ ವೆಚ್ಚವನ್ನು ಕಡಿತಗೊಳಿಸುವುದು. ಸೂಪರ್‌ಸ್ಟಾರ್ ಸಂಭಾವನೆ ಸೇರಿದಂತೆ ಹತ್ತು ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಂಡ ಬಳಿಕ ಶೂಟಿಂಗ್ ಆರಂಭ ಮಾಡಲು ಮುಂದಾಗಿದ್ದರು. ಅದರಂತೆ ಮತ್ತೆ ಶೂಟಿಂಗ್ ಆರಂಭಿಸಲು ಮುಹೂರ್ತ ಫಿಕ್ಸ್ ಆಗಿದೆ ಎಂದು ಟಾಲಿವುಡ್‌ನಲ್ಲಿ ವರದಿಯಾಗಿದೆ.

  ನಿರ್ಮಾಪಕರ ಗೋಳು

  ನಿರ್ಮಾಪಕರ ಗೋಳು

  ಟಾಲಿವುಡ್ ನಿರ್ಮಾಪಕರು ಸಿನಿಮಾ ಶೂಟಿಂಗ್ ನಿಲ್ಲಿಸುವ ಮೂಲಕ ಸೂಪರ್‌ಸ್ಟಾರ್‌ಗಳಿಗೆ ಶಾಕ್ ಕೊಟ್ಟಿದ್ದರು. ಈ ವೇಳೆ ಹಲವು ವಿಷಯಗಳನ್ನು ಚರ್ಚೆ ಮಾಡಿದ್ದಾರೆ. ಓಟಿಟಿಗೆ ಸಿನಿಮಾಗಳನ್ನು ಬಿಡುಗಡ ಮಾಡುವ ಬಗ್ಗೆ, ಡಿಜಿಟಲ್ ಸರ್ವೀಸ್, ಪ್ರೊಡಕ್ಷನ್ ವೆಚ್ಚ, ಟಿಕೆಟ್ ದರ ಸೇರಿದಂತೆ ಹೀಗೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆದಿದೆ ಎನ್ನಲಾಗಿದೆ ಸುಮಾರು 15 ದಿನಗಳ ಕಾಲ ಚರ್ಚೆ ನಡೆದು ಪರಿಹಾರವನ್ನೂ ಕಂಡುಕೊಳ್ಳಲಾಗಿದೆ ಎನ್ನಲಾಗುತ್ತಿದೆ.

  ಶೂಟಿಂಗ್ ಮಾಡಲು ನಿರ್ಮಾಪಕರ ನಿರ್ಧಾರ

  ಶೂಟಿಂಗ್ ಮಾಡಲು ನಿರ್ಮಾಪಕರ ನಿರ್ಧಾರ

  ಟಾಲಿವುಡ್‌ನಲ್ಲಿ ಸಿನಿಮಾಗಳಿಗೆ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದ್ದಂತೆ ನಿರ್ಮಾಪಕರು ಕೊಂಚ ಸಮಾಧಾನಗೊಂಡಿದ್ದಾರೆ. ಇದೆ ವೇಳೆ ಟಾಲಿವುಡ್ ನಿರ್ಮಾಪಕರು ಸಿನಿಮಾ ಮೇಕಿಂಗ್ ಬಗ್ಗೆ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಇಷ್ಟು ಮಾಡಿದ ಚರ್ಚೆಯಲ್ಲಿ ತೆಗೆದುಕೊಂಡ ನಿರ್ಧಾರವೇನು? ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಆದರೆ, ಇದೇ ಆಗಸ್ಟ್ 22ರಿಂದ ಯತಾಪ್ರಕಾರ, ತೆಲುಗು ಚಿತ್ರರಂಗದ ಚಿತ್ರೀಕರಣ ಆರಂಭ ಆಗಲಿದೆ ಎನ್ನಲಾಗಿದೆ.

  ಯಾವ್ಯಾವ ಸಿನಿಮಾ ಶೂಟಿಂಗ್ ಶುರು

  ಯಾವ್ಯಾವ ಸಿನಿಮಾ ಶೂಟಿಂಗ್ ಶುರು


  ಟಾಲಿವುಡ್ ವರದಿಗಳ ಪ್ರಕಾರ, ಆಗಸ್ಟ್ 22ರಿಂದ ದಿಗ್ಗಜರ ಸಿನಿಮಾಗಳ ಶೂಟಿಂಗ್ ಆರಂಭ ಆಗಲಿವೆ. ನಂದಮೂರಿ ಬಾಲಕೃಷ್ಣ ಅಭಿನಯದ 'ಎನ್‌ಬಿಕೆ 107' ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ. ಇದರ ಹಿಂದೆನೇ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಸಿನಿಮಾ ಸೆಟ್ಟೇರಲಿದೆ. ಜೊತೆಗೆ ತೆಲುಗು ಪವರ್‌ಸ್ಟಾರ್ ಪವನ್ ಕಲ್ಯಾಣ್ ಅವರ 'ವಿನೋದ್ಯಾ ಸೀತಂ' ಸಿನಿಮಾದ ರಿಮೇಕ್ ಶುರುವಾಗಲಿದೆ. ಹಾಗೇ ರವಿತೇಜಾ ಹಾಗೂ ನಾನಿ ಸಿನಿಮಾಗಳು ಕೂಡ ಶೂಟಿಂಗ್ ಆರಂಭ ಆಗಲಿವೆ.

  ನಿರ್ಮಾಪಕರಿಂದ ಮಾಹಿತಿ

  ನಿರ್ಮಾಪಕರಿಂದ ಮಾಹಿತಿ

  ಟಾಲಿವುಡ್ ನಿರ್ಮಾಪಕರು ಶೀಘ್ರದಲ್ಲಿಯೇ ಪ್ರೆಸ್ ಮೀಟ್ ಮಾಡಲಿದ್ದಾರೆ. ತೆಲುಗು ನಿರ್ಮಾಪಕ ದಿಲ್ ರಾಜು ಸೇರಿದಂತೆ ನಿರ್ಮಾಪಕರೆಲ್ಲರೂ ಸೇರಿ ಮಾಹಿತಿಯನ್ನು ನೀಡಲಿದ್ದಾರೆ ಎನ್ನಲಾಗುತ್ತಿದೆ. ಈ ಪ್ರೆಸ್ ಮೀಟ್‌ನಲ್ಲಿ ತಮಗೆ ಎದುರಾಗಿದ್ದ ಕಷ್ಟವೇನು? ಆ ಕಷ್ಪಕ್ಕೆ ಅವರು ಕಂಡುಕೊಂಡು ಪರಿಹಾರವೇನು? ಅನ್ನೋದನ್ನು ನಿರ್ಮಾಪಕರು ತಿಳಿಸಲಿದ್ದಾರೆ.

  English summary
  Telugu Film Industry Will Resume Shooting On August 22nd, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X