For Quick Alerts
  ALLOW NOTIFICATIONS  
  For Daily Alerts

  ದಯನೀಯ ಸ್ಥಿತಿಯಲ್ಲಿ ಹಿರಿಯ ನಟಿ, ಬೇಕಿದೆ ನೆರವು

  |

  ನೂರಾರು ತೆಲುಗು ಸಿನಿಮಾಗಳಲ್ಲಿ ನಟಿಸಿರುವ ತೆಲುಗಿನ ಹಿರಿಯ ನಟಿ ಪಾವಲ ಶ್ಯಾಮಲ ಇಂದಿನ ಸ್ಥಿತಿ ದಯನೀಯವಾಗಿದೆ. ಆಕೆಗೆ ಆರ್ಥಿಕ ನೆರವು ಬೇಕಾಗಿದೆ. ನೆರವಿಗಾಗಿ ಅವರೇ ಮನವಿ ಮಾಡಿಕೊಂಡಿದ್ದಾರೆ.

  1986 ರಿಂದಲೂ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿರುವ ನಟಿ ಪಾವಲ ಶ್ಯಾಮಲಾ ಈವರೆಗೆ ಸುಮಾರು 250 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವಾರು ಸಿನಿಮಾಗಳಲ್ಲಿ ಹಾಸ್ಯ, ಪೋಷಕ ಪಾತ್ರಗಳಲ್ಲಿ ನಟಿಸಿರುವ ಪಾವಲ ಶ್ಯಾಮಲ. ಚಿರಂಜೀವಿ, ಪವನ್ ಕಲ್ಯಾಣ್, ಜೂ.ಎನ್‌ಟಿಆರ್, ಅಲ್ಲು ಅರ್ಜುನ್ ಇನ್ನೂ ಹಲವಾರು ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ.

  ಆದರೆ ಈಗ ವಯೋಸಹಜ ಸಮಸ್ಯೆಗಳಿಂದ ಸಮಸ್ಯೆಯಲ್ಲಿರುವ ಪಾವಲಾ ಶ್ಯಾಮಲಾಗೆ ಆರ್ಥಿಕ ನೆರವಿನ ಅಗತ್ಯವಿದೆ. ಪಾವಲಾ ಶ್ಯಾಮಲಾ ಪತಿ ಹಲವು ವರ್ಷಗಳ ಮೊದಲೇ ಅಪಘಾತವೊಂದರಲ್ಲಿ ತೀರಿಕೊಂಡಿದ್ದಾರೆ. ಶ್ಯಾಮಲಾರನ್ನು ನೋಡಿಕೊಳ್ಳುತ್ತಿದ್ದ ಮಗಳು ಸಹ ಮನೆಯಲ್ಲಿ ಬಿದ್ದು ಪೆಟ್ಟು ಮಾಡಿಕೊಂಡವರು ಇನ್ನೂ ಬೆಡ್‌ನಿಂದ ಮೇಲಕ್ಕೆದ್ದಿಲ್ಲ! ಹೀಗಾಗಿ ಶ್ಯಾಮಲಾ ಅವರನ್ನು ಯಾರೂ ನೋಡಿಕೊಳ್ಳುವವರು ಇಲ್ಲದವರಾಗಿದ್ದಾರೆ.

  ಕೊರೊನಾ ಸಮಯದಲ್ಲಂತೂ ತೀವ್ರ ಸಂಕಷ್ಟದಲ್ಲಿರುವ ಶ್ಯಾಮಲಾ ಮೂರು ತಿಂಗಳಿನಿಂದ ಮನೆ ಬಾಡಿಗೆ ಸಹ ಕಟ್ಟಿಲ್ಲ ಎಂದು ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

  ಕಳೆದ ವರ್ಷ ತೆಲಂಗಾಣ ಸರ್ಕಾರವು, ಪಾವಲ ಶ್ಯಾಮಲಾಗೆ ತಿಂಗಳಿಗೆ ಹತ್ತು ಸಾವಿರ ಮಾಸಾಶನ, ಒಂದು ಡಬಲ್ ಬೆಡ್‌ರೂಂ ಮನೆ ಕಟ್ಟಿಸಿಕೊಡುವುದಾಗಿ ಹೇಳಿತ್ತು. ಆದರೆ ಮನೆ ಪ್ರಾರಂಭ ಸಹ ಆಗಿಲ್ಲ. ಇನ್ನು ಮಾಸಾಶನ ಬರುವುದು ಇತ್ತೀಚೆಗೆ ನಿಂತಿದೆ ಎಂದಿದ್ದಾರೆ.

  Bigg Boss ವಾಟ್ಸಾಪ್ ಗ್ರೂಪ್ ನಲ್ಲಿ ಈ ಮೂವರಿಗೆ ಮಾತ್ರ ನೋ ಎಂಟ್ರಿ | Filmibeat Kannada

  ಕೆಲವು ದಿನಗಳ ಹಿಂದಷ್ಟೆ ಶ್ಯಾಮಲಾಗೆ ತೆಲುಗು ಬಿಗ್‌ಬಾಸ್ ಸ್ತರ್ಧಿ ಕರಾಟೆ ಕಲ್ಯಾಣಿ ಸಹಾಯ ಮಾಡಿದ್ದರು. ಆದರೆ ಅವರಿಗೆ ಹೆಚ್ಚಿನ ನೆರವು ಬೇಕಾಗಿದೆ. ಇಳಿ ವಯಸ್ಸಿನಲ್ಲಿ ಅದೂ ಕೊರೊನಾ ಸಮಯದಲ್ಲಿ ಅವರಿಗೆ ಆರ್ಥಿಕ ಸಹಾಯದ ಜೊತೆಗೆ ಕೇರ್‌ ಟೇಕರ್ ಒಬ್ಬರ ಅವಶ್ಯಕತೆ ಇದೆ.

  English summary
  Telugu movie industries senior actress Pavala Shyamala is in bad situation she need help. She said she did not paid rernt from last three months.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X