twitter
    For Quick Alerts
    ALLOW NOTIFICATIONS  
    For Daily Alerts

    ನಟ ನಾನಿ ಸಿನಿಮಾಗಳಿಗೆ ಬಹಿಷ್ಕಾರ: ಚಿತ್ರಮಂದಿರ ಮಾಲೀಕರ ನಿರ್ಧಾರ

    |

    ತೆಲುಗಿನ ಸ್ಟಾರ್ ನಟರಲ್ಲಿ ಒಬ್ಬರು. ನಾನಿ ಸಿನಿಮಾಗಳಿಗೆ ಅದರದ್ದೇ ಆದ ಪ್ರೇಕ್ಷಕ ವರ್ಗ, ಅಭಿಮಾನಿಗಳು ಇದ್ದಾರೆ. ನಾನು ಪಕ್ಕಾ ಪೈಸಾ ವಸೂಲ್ ನಟನೆಂದೇ ತೆಲುಗು ಚಿತ್ರರಂಗದಲ್ಲಿ ಚಿರಪರಿಚಿತರು.

    ಆದರೆ ನಾನಿ ನಟಿಸಿರುವ ಸಿನಿಮಾಗಳು ಇನ್ನು ಮುಂದೆ ಆಂಧ್ರ, ತೆಲಂಗಾಣದ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವುದಿಲ್ಲ. ಚಿತ್ರಮಂದಿರಗಳ ಮಾಲೀಕರು ಇನ್ನು ಮುಂದೆ ತಾವು ನಟ ನಾನಿಯ ಸಿನಿಮಾಗಳನ್ನು ಪ್ರದರ್ಶನ ಮಾಡುವುದಿಲ್ಲ ಎಂದು ಸಾಮೂಹಿಕವಾಗಿ ಬಹಿಷ್ಕಾರ ಹಾಕಿದ್ದಾರೆ.

    ನಾನಿಯ ಒಂದು ಸಿನಿಮಾ ಈಗಾಗಲೇ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಇದೀಗ ನಾನಿ ನಟಿಸುವ ಹೊಸ ಸಿನಿಮಾ ಮತ್ತೆ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿರುವ ಕಾರಣ ಚಿತ್ರಮಂದಿರಗಳ ಮಾಲೀಕರು ನಾನಿ ಸಿನಿಮಾಗಳಿಗೆ ಬಹಿಷ್ಕಾರ ಹಾಕಿದ್ದಾರೆ.

    ಅಕ್ಟೋಬರ್ 10 ರ ವರೆಗೆ ಕಾದು ನೋಡಿ ಎಂದಿದ್ದೆವು: ಪ್ರದರ್ಶಕರು

    ಅಕ್ಟೋಬರ್ 10 ರ ವರೆಗೆ ಕಾದು ನೋಡಿ ಎಂದಿದ್ದೆವು: ಪ್ರದರ್ಶಕರು

    ಸಭೆ ನಡೆಸಿದ ತೆಲುಗು ರಾಜ್ಯಗಳ ಚಿತ್ರಮಂದಿರ ಮಾಲೀಕರು, 'ಅಕ್ಟೋಬರ್ 10ರ ವರೆಗೆ ಕಾದು ನೋಡಿ ಆ ವರೆಗೆ ಕೊರೊನಾ ಪರಿಸ್ಥಿತಿ ಸುಧಾರಿಸಿ ಚಿತ್ರಮಂದಿರಗಳು ತೆರೆಯಲಿಲ್ಲವೆಂದರೆ ನಿಮ್ಮ ಸಿನಿಮಾಗಳನ್ನು ಒಟಿಟಿಗೆ ನೀಡಲು ನಮ್ಮ ಅಭ್ಯಂತರವಿಲ್ಲ ಎಂದು ನಾವು ನಿರ್ಮಾಪಕರಿಗೆ ಪತ್ರ ಬರೆದಿದ್ದೆವು ಆದರೂ ಕೆಲ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಒಟಿಟಿಗೆ ನೀಡಿದ್ದಾರೆ. ನಾವು ದಶಕಗಳಿಂದ ನಿರ್ಮಾಪಕರಿಗೆ ಲಾಭ ಮಾಡಿಕೊಡುತ್ತಾ ಬಂದಿದ್ದೇವೆ ಆದರೆ ಕೆಲವು ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಒಟಿಟಿಗೆ ನೀಡಿದ್ದಾರೆ ಎಂದಿದ್ದಾರೆ ಚಿತ್ರಪ್ರದರ್ಶಕ ಸಂಘದ ಪ್ರಮುಖರೊಬ್ಬರು.

    'ಟಕ್ ಜಗದೀಶ್' ಒಟಿಟಿಯಲ್ಲಿ ಬಿಡುಗಡೆ

    'ಟಕ್ ಜಗದೀಶ್' ಒಟಿಟಿಯಲ್ಲಿ ಬಿಡುಗಡೆ

    ನಾನಿ ನಟಿಸಿರುವ ಹೊಸ ಸಿನಿಮಾ 'ಟಕ್ ಜಗದೀಶ್' ಸೆಪ್ಟೆಂಬರ್ 10ಕ್ಕೆ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಈ ಹಿಂದೆ ಕಾರ್ಯಕ್ರಮವೊಂದಲ್ಲಿ ಮಾತನಾಡಿದ್ದ ನಾನಿ, ''ಸಿನಿಮಾಗಳು ನಮ್ಮ ಸಂಸ್ಕೃತಿಯ ಭಾಗ ಅವುಗಳನ್ನು ಚಿತ್ರಮಂದಿರದಲ್ಲಿಯೇ ನೋಡಿ ಆನಂದಿಸಬೇಕು. ನಾನು ನನ್ನ ಈ ಹಿಂದಿನ ವಿ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಿ ತಪ್ಪು ಮಾಡಿದೆ'' ಎಂದಿದ್ದರು. ಆದರೆ ಈಗ ಮತ್ತೆ ತಮ್ಮ ಸಿನಿಮಾವನ್ನು ಅಮೆಜಾನ್‌ಗೆ ನೀಡಲು ಒಪ್ಪಿಗೆ ಸೂಚಿಸಿದ್ದಾರೆ.

    ನಾನಿ ಹೆದರು ಪುಕ್ಕಲ: ಪ್ರದರ್ಶಕ ಶ್ರೀಹರಿ

    ನಾನಿ ಹೆದರು ಪುಕ್ಕಲ: ಪ್ರದರ್ಶಕ ಶ್ರೀಹರಿ

    ಈ ಬಗ್ಗೆ ಮಾತನಾಡಿದ ಚಿತ್ರಮಂದಿರ ಮಾಲೀಕರ ಸಂಘದ ಪ್ರಮುಖ ಮುಖಂಡ ಶ್ರೀಹರಿ, ''ನಾನಿ ಹೆದರು ಪುಕ್ಕಲ. ಮಾತಿನ ಮೇಲೆ ನಿಲ್ಲದ ವ್ಯಕ್ತಿ. ಈ ಹಿಂದೆ ತಮ್ಮ ಸಿನಿಮಾವನ್ನು ಚಿತ್ರಮಂದಿರಗಳಿಗೆ ಕೊಡುತ್ತೀನಿ ಎಂದವರು ಈಗ ಒಟಿಟಿಗೆ ನೀಡುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದಿದ್ದಾರೆ. ಆತನಿಗೆ ತುಸುವಾದರೂ ಮಾನವೀಯತೆ ಇದ್ದರೆ ಈಗಲೂ ನಿರ್ಮಾಪಕರ ಬಳಿ ಮಾತನಾಡಿ ಸಿನಿಮಾವನ್ನು ಒಟಿಟಿಯಿಂದ ಹಿಂದೆ ಪಡೆಯಬೇಕು. ಆದರೆ ಅದು ಹಾಗೆ ಆಗುವುದಿಲ್ಲ ಕಾರಣ ನಾನಿ ಕೇವಲ ಸಿನಿಮಾದಲ್ಲಿ ಮಾತ್ರವೇ ನಾಯಕ, ನಿಜ ಜೀವನದಲ್ಲ'' ಎಂದಿದ್ದಾರೆ.

    'ಲವ್ ಸ್ಟೋರಿ' ನಿರ್ಮಾಪಕರಿಗೆ ಧನ್ಯವಾದ

    'ಲವ್ ಸ್ಟೋರಿ' ನಿರ್ಮಾಪಕರಿಗೆ ಧನ್ಯವಾದ

    ಇದೇ ಸಮಯದಲ್ಲಿ ಮತ್ತೊಂದು ತೆಲುಗು ಸಿನಿಮಾ 'ಲವ್ ಸ್ಟೋರಿ' ಬಗ್ಗೆ ಸಂತಸವನ್ನು ಪ್ರದರ್ಶಕರ ಸಂಘದ ಸದಸ್ಯರು ವ್ಯಕ್ತಪಡಿಸಿದ್ದಾರೆ. ಇಂಥಹಾ ಕಠಿಣ ಸಂದರ್ಭದಲ್ಲಿಯೂ 'ಲವ್ ಸ್ಟೋರಿ' ಸಿನಿಮಾವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡು ನಿರ್ಮಪಕರು ಸಿದ್ಧವಾಗಿದ್ದಾರೆ. ಆದರೆ ನಾನಿ, 'ಲವ್ ಸ್ಟೋರಿ' ಸಿನಿಮಾ ಬಿಡುಗಡೆ ಆಗುವ ದಿನವೇ ತಮ್ಮ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವ ಮೂಲಕ ಆ ಸಿನಿಮಾಕ್ಕೂ ತೊಂದರೆ ಕೊಡಲು ಮಂದಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 'ಲವ್ ಸ್ಟೋರಿ' ಸಿನಿಮಾದ ನಿರ್ಮಾಪಕ ಸುನಿಲ್ ನಾರಂಗಗೆ ಚಿತ್ರಪ್ರದರ್ಶಕರ ಕಡೆಯಿಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

    English summary
    Telugu state exhibitors decided to ban hero Nani's movies. They upset because Nani given his new movie 'Tuck Jagadish' to Ott.
    Sunday, August 22, 2021, 9:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X