For Quick Alerts
  ALLOW NOTIFICATIONS  
  For Daily Alerts

  ಗೆಳೆಯ ಪವನ್ ಕಲ್ಯಾಣ್ ಅಭಿಮಾನಿಗಳ ಮೇಲೆ ದೂರು ನೀಡಿದ ನಟ ಆಲಿ!

  |

  ತೆಲುಗು ಹಾಸ್ಯನಟ ಆಲಿ ಮತ್ತು ನಾಯಕ ನಟ ಪವನ್ ಕಲ್ಯಾಣ್ ಮಧ್ಯೆ ಇರುವ ಸ್ಸನೇಹ ತೆಲುಗು ಸಿನಿ ಅಭಿಮಾನಿಗಳಿಗೆ ಗೊತ್ತಿರುವುದೇ.

  Hulivana Gangadhar ,ಹಿರಿಯ ನಟ ಕೊರೊನದಿಂದ ಸಾವು | Filmibeat Kannada

  ಪವನ್ ಕಲ್ಯಾಣ್ ಅವರ ಮೊದಲ ಸಿನಿಮಾದಿಂದ ಹಿಡಿದು ಬಹುತೇಕ ಎಲ್ಲಾ ಸಿನಿಮಾಗಳಲ್ಲಿಯೂ ಆಲಿ ಪಾತ್ರ ಮಾಡಿದ್ದಾರೆ. ಪೂರ್ಣ ಪಾತ್ರ ಮಾಡಲು ಆಗದಿದ್ದ ಸಮಯದಲ್ಲಿ ಸಣ್ಣ ದೃಶ್ಯದಲ್ಲಾದರೂ ಕಾಣಿಸಿ ಮರೆಯಾಗಿದ್ದಾರೆ ಆಲಿ.

  ದಶಕಗಳ ಈ ಸ್ನೇಹ ಇತ್ತೀಚೆಗೆ ತುಸು ಹಳಸಿದೆ. ಅದರಲ್ಲಿಯೂ ಪವನ್ ಕಲ್ಯಾಣ್ ರಾಜಕೀಯಕ್ಕೆ ಬಂದ ನಂತರ ಇಬ್ಬರ ನಡುವೆ ದೊಡ್ಡ ಬಿರುಕು ಮೂಡಿದೆ. ಅದು ಈಗ ಪೊಲೀಸ್ ಠಾಣೆ ಮೆಟ್ಟಿಲೇರುವವರೆಗೂ ಬಂದಿದೆ.

  ಹಳಸಿದ ಆಲಿ-ಪವನ್ ಸ್ನೇಹ

  ಹಳಸಿದ ಆಲಿ-ಪವನ್ ಸ್ನೇಹ

  ನಟ ಆಲಿ ಬಗ್ಗೆ ಪವನ್ ಕಲ್ಯಾಣ್ ಅಭಿಮಾನಿಗಳು ಸಿಟ್ಟಾಗಿದ್ದು, ಆಲಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಕಮೆಂಟ್‌ಗಳು, ಪೋಸ್ಟ್‌ಗಳು ಪವನ್ ಕಲ್ಯಾಣ್ ಅಭಿಮಾನಿಗಳಿಂದ ಹೆಚ್ಚಾಗುತ್ತಿವೆ. ಇದರ ಬಗ್ಗೆ ನಟ ಆಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

  ದೂರು ದಾಖಲಿಸಿದ ನಟ ಆಲಿ

  ದೂರು ದಾಖಲಿಸಿದ ನಟ ಆಲಿ

  ನಟ ಆಲಿ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯವಾಗಿ ಪೋಸ್ಟ್ ಮಾಡಿದವರ, ಹಾಗೂ ತಮ್ಮ ಹೆಸರಲ್ಲಿ ನಕಲಿ ಖಾತೆ ತೆರೆದು ಪೋಸ್ಟ್ ಮಾಡುತ್ತಿರುವವರ ವಿರುದ್ಧ ದೂರು ದಾಖಲಿದ್ದಾರೆ. ಇದರ ಚಿತ್ರವನ್ನು ಸಹ ಅವರು ಹಂಚಿಕೊಂಡಿದ್ದಾರೆ.

  ನಕಲಿ ಖಾತೆಯಿಂದ ಪವನ್‌ ಕಲ್ಯಾಣ್‌ಗೆ ಶುಭಾಶಯ

  ನಕಲಿ ಖಾತೆಯಿಂದ ಪವನ್‌ ಕಲ್ಯಾಣ್‌ಗೆ ಶುಭಾಶಯ

  ಇತ್ತೀಚೆಗೆ ಆಲಿ ಅವರ ನಕಲಿ ಖಾತೆಯಿಂದ ಪವನ್ ಕಲ್ಯಾಣ್ ಅವರ ಹುಟ್ಟುಹಬ್ಬಕ್ಕೆ ಮುಂದಾಗಿ ಶುಭಾಶಯ ಪ್ರಕಟವಾಗಿತ್ತು. ಇದನ್ನು ಗಮನಿಸಿದ ಪವನ್ ಅಭಿಮಾನಿಗಳು ಗೆಳೆಯ ಕಷ್ಟದಲ್ಲಿದ್ದಾಗ ನೀವು ಜೊತೆಗೆ ನಿಲ್ಲವೆಂದು ಬೈಯಲು ಪ್ರಾರಂಭಿಸಿದ್ದರು. ಇದು ದೊಡ್ಡದಾಗಿ ಬೆಳೆದಾಗ ಆಲಿ ದೂರು ನೀಡಿದರು.

  ಆಲಿ ಬಗ್ಗೆ ಪವನ್ ಕಲ್ಯಾಣ್ ಮಾತುಗಳು

  ಆಲಿ ಬಗ್ಗೆ ಪವನ್ ಕಲ್ಯಾಣ್ ಮಾತುಗಳು

  ಪವನ್ ಕಲ್ಯಾಣ್ ಒಮ್ಮೆ ಕಷ್ಟದಲ್ಲಿದ್ದಾಗ ಗೆಳೆಯ ಜೊತೆಗೆ ನಿಲ್ಲಲಿಲ್ಲ. ನಾನು ಅವರಿಗೆ ಜೀವನ ನೀಡಿದೆ ಆದರೆ ಆತ ನನಗೆ ಮೋಸ ಮಾಡಿದ ಎಂದು ಆಲಿ ಹೆಸರು ಹೇಳದೆ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಆಲಿ, ಯಾರು ಯಾರಿಗೆ ಜೀವನ ನೀಡಿದರು ಎಂಬುದನ್ನು ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದ್ದರು. ಅಂದಿನಿಂದ ಪವನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು ಆಲಿ.

  English summary
  Actor Ali gave complaint for miss using his name on social media and some people threatening him on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X